Asianet Suvarna News Asianet Suvarna News

ಆರ್ಥಿಕ ದಿವಾಳಿತನ ತಪ್ಪಿಸಲು ತೆರಿಗೆ ದ್ವಿಗುಣಗೊಳಿಸಿದ ಪಾಕಿಸ್ತಾನದ ಹೊಸ ಬಜೆಟ್‌

ಪಾಕಿಸ್ತಾನದ ಶೆಹಬಾಜ್‌ ಷರೀಫ್‌ ಸರ್ಕಾರವು 2022-23 ರ ಹೊಸ ಬಜೆಟ್ ಅನ್ನು ಶುಕ್ರವಾರ  ಘೋಷಣೆ ಮಾಡಿದೆ. ಈ ಬಜೆಟ್ ಗೆ ವ್ಯಾಪಕ ಟೀಕೆಗಳು  ಕೂಡ ವ್ಯಕ್ತವಾಗಿದೆ.

Pakistan  Shehbaz Sharif government  presented the new budget gow
Author
Bengaluru, First Published Jun 11, 2022, 12:34 PM IST

ವರದಿ: ನಟರಾಜ್ ದರ್ಬಾರೆ

ಇಸ್ಲಮಾಬಾದ್ (ಜೂ.11): ಹಲವು ಸಮಸ್ಯೆಗಳ ಬೆನ್ನಲ್ಲೇ ಪಾಕಿಸ್ತಾನದ ಶೆಹಬಾಜ್‌ ಷರೀಫ್‌ ಸರ್ಕಾರವು 2022-23 ರ ಹೊಸ ಬಜೆಟ್ ಅನ್ನು ಶುಕ್ರವಾರ  ಘೋಷಣೆ ಮಾಡಿದೆ. ಹೊಸ ಬಜೆಟ್‌ ಮಂಡಿಸಿದ ನಂತರ ಪಾಕಿಸ್ತಾನದಲ್ಲಿ ಪೆಟ್ರೋಲ್‌, ಮೊಬೈಲ್‌ ಫೋನ್ ಗಳು, ಸಿಗರೇಟ್‌ಗಳ ದರ ಗಗನಕ್ಕೇರಿದ್ದು, ಈ ವಿಚಾರವಾಗಿ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬಜೆಟ್ ಮತ್ತು ಬೆಲೆ ಏರಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಮೇಲ್ವರ್ಗದ ಜನರಿಗೆ ತೆರಿಗೆ ವಿಧಿಸುವ ಗುರಿಯನ್ನು ಹೊಂದಿದ ಹೊಸ ಬಜೆಟ್ ನಲ್ಲಿ, 1600 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಎಂಜಿನ್‌ ಸಾಮರ್ಥ್ಯ ಹೊಂದಿದ ಕಾರುಗಳ ಮೇಲಿನ ತೆರಿಗೆಯನ್ನು ಸರ್ಕಾರ ದ್ವಿಗುಣಗೊಳಿಸಿದೆ. ಇದರಲ್ಲಿ ಕ್ರೀಡಾ ವಿಭಾಗದ ಮತ್ತು ಕೆಲವು ಸೆಡಾನ್‌ ಬಳಕೆಯ ವಾಹನಗಳು ಸೇರ್ಪಡೆಯಾಗಿವೆ.

ಆರ್ಥಿಕ ಬೆಳವಣಿಗೆಗೆ ನಮ್ಮ ಸರ್ಕಾರ ಆದ್ಯತೆ ನೀಡಿದೆ. ಆರ್ಥಿಕ ಅಭಿವೃದ್ಧಿಯನ್ನು ಅಚ್ಚುಕಟ್ಟಾಗಿ ಬಲಪಡಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಪಾಕ್ ಪ್ರಧಾನಿ ಶೆಹಬಾಜ್‌ ತಮ್ಮ ಸರಕಾರ ಬಜೆಟ್ ಅನ್ನು ಸಮರ್ಥಿಸಿಕೊಂಡಿದ್ದಾರೆ.

Idgah Maidan ಯಾರ ಸ್ವತ್ತು? ತಾರಕ್ಕೇರಿದ ಮಾಲಿಕತ್ವ ವಿವಾದ

 

ಪಾಕಿಸ್ತಾನದ ಕೇಂದ್ರ ಹಣಕಾಸು ಮತ್ತು ಕಂದಾಯ ಸಚಿವ ಮಿಫ್ತಾ ಇಸ್ಮಾಯಿಲ್ ಅವರು 2022-23 ರ ಆರ್ಥಿಕ ವರ್ಷಕ್ಕೆ ಬಜೆಟ್ ಅನ್ನು ಮಂಡಿಸಿದರು. ಒಟ್ಟು 9,502 ಶತಕೋಟಿ ಗಾತ್ರದ ಬಜೆಟ್ ಮಂಡಿಸಿದ್ದು, ಇದರಲ್ಲಿ 1,523 ಶತಕೋಟಿ ರೂಪಾಯಿಯನ್ನು ರಕ್ಷಣಾ ವಿಭಾಗಕ್ಕೆ ಮೀಸಲಿರಿಸಲಾಗಿದೆ.

 ವರದಿಗಳ ಪ್ರಕಾರ, ವಿದ್ಯುತ್ ಸಬ್ಸಿಡಿಗಳ ಹಂಚಿಕೆಯನ್ನು ಕಡಿಮೆಗೊಳಿಸಿರುವುದರಿಂದ ರಾಷ್ಟ್ರೀಯ ಸರಾಸರಿ ವಿದ್ಯುತ್ ದರಗಳು 20% ಕ್ಕಿಂತ ಹೆಚ್ಚಾಗುತ್ತವೆ.  750 ಶತಕೋಟಿ ರೂಪಾಯಿಗಳ ಪೆಟ್ರೋಲಿಯಂ ಲೆವಿಯನ್ನು ಸರ್ಕಾರವು ಹೇಳಿರುವುದರಿಂದ ಇಂಧನ ಬೆಲೆ ಮತ್ತೆ ಗಗನಕ್ಕೇರಲಿದೆ. ಇದು  FY22ಕ್ಕೆ ಹೋಲಿಸಿದರೆ 135 ಶತಕೋಟಿ ರೂಪಾಯಿಗಳ ಪರಿಷ್ಕೃತ ಹಂಚಿಕೆಗಿಂತ ಐದು ಪಟ್ಟು ಹೆಚ್ಚು ಎಂದು ಡಾನ್ ವರದಿ ಮಾಡಿದೆ. ಬಜೆಟ್ ನಿಬಂಧನೆಗಳನ್ನು ಅನುಸರಿಸಿ ಮೊಬೈಲ್ ಫೋನ್‌ಗಳು ಮತ್ತು ಸಿಗರೇಟ್‌ಗಳು ಸಹ ದುಬಾರಿಯಾಗಲಿವೆ.

Nupur Sharma ಹೇಳಿಕೆಗೆ ಮುಸ್ಲಿಂ ಸಮುದಾಯ ಪ್ರತಿಭಟನೆ, ಕರ್ನಾಟಕದಲ್ಲಿ ಹೈಅಲರ್ಟ್

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಈ ಬಜೆಟ್ ಬಗ್ಗೆ ಪಾಕ್ ಸರಕಾರವನ್ನು ಜರಿದಿದ್ದಾರೆ.  'ಜನವಿರೋಧಿ' ಮತ್ತು 'ವ್ಯವಹಾರ-ವಿರೋಧಿ'  ಬಜೆಟ್ ಮಂಡಿಸಲಾಗಿದೆ. ಇದು ತಮ್ಮ ಅವಧಿಯಲ್ಲಿ ಮಾಡಿದ ಎಲ್ಲಾ 'ಪ್ರಗತಿಪರ ತೆರಿಗೆ ಸುಧಾರಣೆಗಳನ್ನು' ಸ್ಥಗಿತಗೊಳಿಸಿದೆ ಎಂದು ಆರೋಪಿಸಿದ್ದಾರೆ.

 "ಬಜೆಟ್ ಹಣದುಬ್ಬರ (11.5%) ಮತ್ತು ಆರ್ಥಿಕ ಬೆಳವಣಿಗೆ (5%) ಮೇಲಿನ ಅವಾಸ್ತವಿಕ ಊಹೆಗಳನ್ನು ಆಧರಿಸಿದೆ. ಇಂದಿನ 24% ರ SPI ಹಣದುಬ್ಬರವು 25/30% ರ ನಡುವೆ ಇರುತ್ತದೆ,  ಈ ರೀತಿ ಮಾಡುವುದರಿಂದ ಒಂದೆಡೆ ಸಾಮಾನ್ಯ ಜನರ ಜೀವನದ ಮೇಲೆ ಪ್ರಬಲವಾದ ಹೊಡೆತ ಬೀಳಲಿದೆ. ಮತ್ತೊಂದೆಡೆ ಹೆಚ್ಚಿನ ಬಡ್ಡಿದರಗಳಿಂದ ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸಲಾಗಿದೆ. ನಮ್ಮ ಎಲ್ಲಾ ಪ್ರಗತಿಪರ ತೆರಿಗೆ ಸುಧಾರಣೆಗಳು ಮತ್ತು ಬಡವರ ಪರವಾಗಿರುವ ಯೋಜನೆಗಳಾದ ಸೆಹತ್ ಕಾರ್ಡ್, ಕಮ್ಯಾಬ್ ಪಾಕಿಸ್ತಾನವನ್ನು ಸ್ಥಗಿತಗೊಳಿಸಲಾಗುತ್ತಿದೆ.  ಇದು ಕಲ್ಪನೆಯಿಲ್ಲದ, ಪುರಾಣ ಪಾಕಿಸ್ತಾನದ ಬಜೆಟ್ ರಾಷ್ಟ್ರಕ್ಕೆ ಹೆಚ್ಚಿನ ಹೊರೆ ಮತ್ತು ಕಷ್ಟವನ್ನು ಸೃಷ್ಟಿಸುತ್ತಿದೆ ಎಂದು ಇಮ್ರಾನ್ ಖಾನ್ ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.

Follow Us:
Download App:
  • android
  • ios