Asianet Suvarna News Asianet Suvarna News

Weapons Home Delivery: ಪಾಕಿಸ್ತಾನದಲ್ಲಿ ಪಿಝ್ಝಾ ರೀತಿ ಎಕೆ 47 ಬಂದೂಕು ಹೋಂ ಡೆಲಿವರಿ!

*ಪಾಕ್‌ನಲ್ಲಿ ಜನ ಶಸ್ತ್ರಾಸ್ತ್ರ ಹೊಂದಲು ಲೈಸನ್ಸೂ ಬೇಕಿಲ್ಲ!
*ಸಾಮಾಜಿಕ ಮಾಧ್ಯಮಗಳಲ್ಲಿ ಬಂದೂಕು ಸುಲಭ ಆಯ್ಕೆ 
*ಲವು ದಿನಗಳ ಬಳಿಕ ಕೊರಿಯರ್‌ನಲ್ಲಿ ಬಂದೂಕು ಮನೆ ಬಾಗಿಲಿಗೆ

E commerce guarantees Home delivery of AK47 and other weapons  across Pakistan mnj
Author
Bengaluru, First Published Jan 27, 2022, 8:40 AM IST

ಇಸ್ಲಾಮಾಬಾದ್‌ (ಜ. 27): ಪಾಕಿಸ್ತಾನದಲ್ಲಿ (Pakistan) ಬಂದೂಕುಗಳನ್ನು (Weapons) ಮನೆಗೇ ತರಿಸಿಕೊಳ್ಳುವುದು ಪಿಜ್ಜಾ ಆರ್ಡರ್‌ ಮಾಡಿದಷ್ಟೇ ಸಲೀಸು! ಹೌದು, ಆಶ್ಚರ‍್ಯವೆನಿಸಿದರೂ ಇದು ಸತ್ಯ. ಬಂದೂಕು ಸೇರಿದಂತೆ ಯಾವುದೇ ಶಸ್ತ್ರಾಸ್ತ್ರ ಬೇಕಿರುವ ವ್ಯಕ್ತಿಯೋರ್ವ ನಿಶ್ಚಿತ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಅದನ್ನು ಆಯ್ಕೆ ಮಾಡಬೇಕು. ಬಳಿಕ ಡೀಲರ್‌ಗೆ ಕರೆ ಮಾಡಿ ಬೆಲೆ ಸೇರಿದಂತೆ ಇನ್ನಿತರ ಅಂಶಗಳನ್ನು ಖಚಿತಪಡಿಸಬೇಕು. ಕೆಲವು ದಿನಗಳ ಬಳಿಕ ಕೊರಿಯರ್‌ನಲ್ಲಿ ಬಂದೂಕು ಮನೆ ಬಾಗಿಲಿಗೆ ಬರುತ್ತದೆ ಎಂದು ‘ಸಮಾ’ ಟೀವಿ ವರದಿ (Samaa TV) ಮಾಡಿದೆ. ಬಂದೂಕು ಅಥವಾ ಶಸ್ತ್ರಾಸ್ತ್ರ ಹೊಂದಲು ಯಾವುದೇ ಅಗತ್ಯವೂ ಇಲ್ಲ ಎನ್ನಲಾಗಿದೆ.

ಸಾಮಾನ್ಯವಾಗಿ ಅಕ್ರಮ ಶಸ್ತ್ರಾಸ್ತ್ರಗಳ ಮಾರಾಟ ದಂಧೆಕೋರರು ಗುಪ್ತವಾಗಿ ಇಂಥ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಆದರೆ ಪಾಕಿಸ್ತಾನದಲ್ಲಿ ವಾಟ್ಸಪ್‌ ಗ್ರೂಪ್‌ ಮತ್ತು ಫೇಸ್‌ಬುಕ್‌ ಪೇಜ್‌ಗಳ ಮೂಲಕ 9 ಎಂಎಂ ಪಿಸ್ತೂಲ್‌ನಿಂದ ಹಿಡಿದು ಎಕೆ47 ರೈಫಲ್‌ವರೆಗಿನ ಶಸ್ತ್ರಾಸ್ತ್ರಗಳನ್ನು ಖರೀದಿಸಬಹುದಾಗಿದೆ. ಇಂಥ ವೇದಿಕೆ ಬಳಸಿಕೊಂಡು 38,000 ರು.ಗೆ ಬಂದೂಕು ಖರೀದಿಸಿದ್ದೇನೆ. ಇದಕ್ಕಾಗಿ ಮುಂಗಡವಾಗಿ 10,000 ರು. ಮತ್ತು ಬಂದೂಕು ಬಂದ ಬಳಿಕ 28 ಸಾವಿರ ರು. ನೀಡಿದ್ದಾಗಿ ಹೆಸರು ಬಹಿರಂಗಪಡಿಸಲು ಇಚ್ಚಿಸದ ವ್ಯಕ್ತಿಯೋರ್ವ ಹೇಳಿದ್ದಾನೆ.

ಇದನ್ನೂ ಓದಿ: ಮೋದೀಜಿ ನಮಗೆ ಸಹಾಯ ಮಾಡಿ, ಅಳಲು ತೋಡಿಕೊಂಡ POK ವ್ಯಕ್ತಿ!

“ನಾನು ಈಸಿ ಪೈಸಾ ( Easy Paisa) ಮೂಲಕ ಮುಂಗಡವಾಗಿ Rs10,000 ಕಳುಹಿಸಿದ್ದೇನೆ ಮತ್ತು ಶಸ್ತ್ರಾಸ್ತ್ರವನ್ನು ಪರಿಶೀಲಿಸಿದ ನಂತರ ಉಳಿದ Rs28,000 ಪಾವತಿಸಲಾಗಿದೆ,” ಎಂದು ವ್ಯಕ್ತಿ  ತಿಳಿಸಿದ್ದಾನೆ. ಪಾಕಿಸ್ತಾನದಲ್ಲಿ ಎರಡು ಪ್ರತ್ಯೇಕ ನೆಟ್‌ವರ್ಕ್‌ಗಳಿದ್ದು ಮೊದಲನೆಯದು ಶಸ್ತ್ರಾಸ್ತ್ರಗಳ ವ್ಯಾಪಾರಿ, ಎರಡನೆಯದು ಅದನ್ನು ತಲುಪಿಸುವವರು. ಕರಾಚಿಯಲ್ಲಿ ಅತಿ ಅಗ್ಗದ ವಿತರಣೆ ಸೌಲಭ್ಯವಿದೆ. ಮಾರುವ ಮತ್ತು ವಿತರಿಸುವ ಶಸ್ತ್ರಾಸ್ತ್ರಗಳ ಪ್ರಕಾರಕ್ಕೆ ಯಾವುದೇ ಮಿತಿಯಿಲ್ಲ. 9 ಎಂಎಂ ಪಿಸ್ತೂಲ್‌ನಿಂದ ಎಕೆ 47 ವರೆಗೆ ಎಲ್ಲವೂ ಮಾರಾಟಕ್ಕೆ ಲಭ್ಯವಿದೆ. 

ಹೆದ್ದಾರಿ ಅಡವಿಟ್ಟು 17600 ಕೋಟಿ ರೂಪಾಯಿ ಸಾಲ ಪಡೆದ ಪಾಕ್‌!: ಸಾಲದ ಶೂಲಕ್ಕೆ ಸಿಲುಕಿ ಕಂಗೆಟ್ಟಿರುವ ನೆರೆಯ ಪಾಕಿಸ್ತಾನ (Pakistan) ಇದೀಗ ಇಸ್ಲಾಮಿಕ್‌ ಬಾಂಡ್‌(ಸುಕುಕ್‌)  (Sukuk bond )ಮೂಲಕ 1 ಬಿಲಿಯನ್‌ ಡಾಲರ್‌(ಪಾಕಿಸ್ತಾನದ ರು. ಪ್ರಕಾರ 17,600 ಕೋಟಿ ರು.) ಪಡೆದುಕೊಂಡಿದೆ. ತೀರಾ ಅಗತ್ಯವಿರುವ ಈ ಸಾಲಕ್ಕಾಗಿ ಅತಿಹೆಚ್ಚು 7.95 ಬಡ್ಡಿದರದ ಹೊರತಾಗಿಯೂ ಪಾಕಿಸ್ತಾನ ಸರ್ಕಾರವು ಲಾಹೋರ್‌-ಇಸ್ಲಾಮಾಬಾದ್‌ (Lahore-Islamabad Motorway)ಹೆದ್ದಾರಿಯ ಸ್ವಲ್ಪ ಭಾಗವನ್ನು ಅಡಮಾನವಿಟ್ಟಿದೆ. ಜತೆಗೆ ಇಸ್ಲಾಮಿಕ್‌ ಬಾಂಡ್‌ನಡಿ ಪಡೆದ ಸಾಲಕ್ಕೆ ಇಷ್ಟುಹೆಚ್ಚು ಪ್ರಮಾಣದ ಬಡ್ಡಿ ಪಾವತಿಯು ಪಾಕಿಸ್ತಾನದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: Anti India Propaganda ಭಾರತ ವಿರೋಧಿ ಚಟುವಟಿಕೆ, ಪಾಕ್ ಮೂಲದ 35 ಯೂಟ್ಯೂಬ್, ಟ್ವಿಟರ್, ಇನ್‌ಸ್ಟಾ ಖಾತೆ ಬ್ಲಾಕ್!

ಸೌದಿ ಅರೇಬಿಯಾದಿಂದ ಪಡೆಯಲಾಗಿದ್ದ 3 ಬಿಲಿಯನ್‌ ಡಾಲರ್‌(52,800 ಕೋಟಿ ರು.) ಪೈಕಿ 35200 ಕೋಟಿ ರು. ಅನ್ನು ಪಾಕಿಸ್ತಾನ ಈಗಾಗಲೇ ವೆಚ್ಚ ಮಾಡಿದೆ. ಈ ಹಿನ್ನೆಲೆಯಲ್ಲಿ ಜ.14ರ ವೇಳೆಗೆ ಪಾಕಿಸ್ತಾನದ ವಿದೇಶಾಂಗ ವಿನಿಮಯ ಮೀಸಲು 17 ಬಿಲಿಯನ್‌ ಡಾಲರ್‌ನಿಂದ ಕುಸಿತವಾಗಿದೆ. ಹೀಗಾಗಿ ತನ್ನ ವಿದೇಶಾಂಗ ವಿನಿಮಯ ಸಂಗ್ರಹದಲ್ಲಿ ಇನ್ನಷ್ಟುಕುಸಿತ ತಡೆಯಲು ಈ
ಸಾಲ ಪಡೆಯಲಾಗಿದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಪ್ರಸ್ತುತ ಪಾಕಿಸ್ತಾನದಲ್ಲಿ ಅಧಿಕಾರ ನಡೆಸುತ್ತಿರುವ ಪಿಟಿಐ (PTI), ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಪ್ರತಿ ಬಾರಿಯೂ ಸುಕುಕ್ ಬಾಂಡ್ ಗೆ ವಿರೋಧ ವ್ಯಕ್ತಪಡಿಸುತ್ತಿತ್ತು. ಸಾಲ ಪಡೆಯುವ ಸಲುವಾಗಿ ದೇಶದ ಆಸ್ತಿಗಳನ್ನು ಅಡಮಾನ ಇಡಲಾಗಿದೆ ಎಂದು ಹೇಳುತ್ತಿತ್ತು. ಆದರೆ, ಕಲೆದ 41 ತಿಂಗಳ ಪಿಟಿಐ ಅಧಿಕಾರದ ವೇಳೆ ಹಲವು ಬಾರಿ ಸುಕುಕ್ ಬಾಂಡ್ ಅನ್ನು ಬಿಡುಗಡೆ ಮಾಡುವ ಸಾರಾಂಶವನ್ನು ಸಂಸತ್ತಿನಲ್ಲಿ ಮಂಡಿಸಿದಾಗ ಹಾಲಿ ಇರುವ ವಿರೋಧ ಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ಇನ್ನು ಕಳೆದ ಏಪ್ರಿಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದ ಯುರೋ ಬಾಂಡ್ ನ ಅರ್ಧ ಪರ್ಸಂಟ್ ಹೆಚ್ಚಿನ ದರದಲ್ಲಿ ಸುಕುಕ್ ಬಾಂಡ್  ಬಿಡುಗಡೆ ಮಾಡಲಾಗಿದೆ.ಇಸ್ಲಾಮಿಕ್ ಸುಕುಕ್ ಮತ್ತು ಸಾಂಪ್ರದಾಯಿಕ ಯುರೋಬಾಂಡ್ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಇಸ್ಲಾಮಿಕ್ ಬಾಂಡ್ ಆಸ್ತಿ ಬೆಂಬಲಿತವಾಗಿರುತ್ತದೆ.

Follow Us:
Download App:
  • android
  • ios