Asianet Suvarna News Asianet Suvarna News

ಸಿಕ್ಕಾಪಟ್ಟೆ ಸ್ಮೋಕಿಂಗ್‌, ವ್ಯಕ್ತಿಯ ಗಂಟಲಲ್ಲಿ ಬೆಳೆಯಿತು ಕೂದಲು!


ಈ ವ್ಯಕ್ತಿ 10ನೇ ವರ್ಷದವನಾಗಿದ್ದಾಗ  ಟ್ರಾಕಿಯೊಟೊಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ಈ ಸಮಯದಲ್ಲಿ ಆತನ ಕಿವಿಯಿಂದ ಚರ್ಮವನ್ನು ತೆಗೆದು ಕಾರ್ಟಿಲೆಜ್ ಕಸಿ  ಮಾಡಿ ಸ್ಥಿರಗೊಳಿಸಲಾಗಿತ್ತು. ಈಗ ಅದೇ ಸ್ಥಳದಲ್ಲಿ ಕೂದಲು ಬೆಳೆಯುತ್ತಿದೆ.
 

due to heavy smoking 52 Year Old Man developed hair in throat san
Author
First Published Jun 27, 2024, 2:30 PM IST

ನವದೆಹಲಿ (ಜೂ.27): ವೈದ್ಯಲೋಕದಲ್ಲಿ ಸಾಮಾನ್ಯವಾಗಿ ಅಚ್ಚರಿಯ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಅಮೇರಿಕನ್ ಜರ್ನಲ್ ಆಫ್ ಕೇಸ್ ರಿಪೋರ್ಟ್ಸ್‌ನಲ್ಲಿ ಕಳೆದ ವಾರ ಮತ್ತೊಂದು ವಿಲಕ್ಷಣ ಪ್ರಕರಣವನ್ನು ವರದಿ ಮಾಡಿದೆ. ಇದರಲ್ಲಿ 52 ವರ್ಷದ ವ್ಯಕ್ತಿಯೊಬ್ಬ ಸುದೀರ್ಘ ವರ್ಷಗಳ ಕಾಲ ಧೂಮಪಾನ ಮಾಡುತ್ತಿದ್ದ ಕಾರಣಕ್ಕೆ ಈತನ ಗಂಟಲಿನ ಒಳಗೆ ಕೂದಲು ಬೆಳೆದಿತ್ತು. ಸಾಕಷ್ಟು ಚಿಕಿತ್ಸೆ ಹಾಗೂ ಪರೀಕ್ಷೆಯ ಬಳಿಕ ದೀರ್ಘಾವಧಿಯ ತಂಬಾಕು ಬಳಕೆಯಿಂದ ಉಂಟಾಗಬಹುದಾದ ವಿಲಕ್ಷಣ ಹಾಗೂ ಅಪಾಯಕಾರಿ ಸಮಸ್ಯೆ ಎಂದು ವೈದ್ಯರು ಹೇಳಿದ್ದಾರೆ. ಹೆಸರು ಹೇಳಲು ಇಚ್ಛಿಸದ ವ್ಯಕ್ತಿ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ. ದಿನಕ್ಕೆ ಒಂದು ಪ್ಯಾಕ್‌ ಸಿಗರೇಟ್‌ ಸೇದುತ್ತಿದ್ದ ವ್ಯಕ್ತಿಗೆ 2007ರಲ್ಲಿ ಮೊದಲ ಬಾರಿಗೆ ತಮ್ಮ ಸಮಸ್ಯೆಗೆ ವೈದ್ಯಕೀಯ ಸಹಾಯದ ಮೊರೆ ಹೋಗಿದ್ದರು. ತಮ್ಮ ಧ್ವನಿ ಗಟ್ಟಿಯಾಗಿದೆ, ಉಸಿರಾಟಕ್ಕೆ ತೊಂದರೆ ಆಗುತ್ತಿದೆ, ನಿರಂತರವಾಗಿ ಕೆಮ್ಮು ಬರುತ್ತಿದೆ ಎಂದು ವೈದ್ಯರ ಬಳಿ ಹೋಗಿದ್ದರು.

ಈ ವೇಳೆ ವೈದ್ಯರು ಬ್ರಾಂಕೋಸ್ಕೋಪಿ ನಡೆಸಿದ್ದಾರೆ. ಇದರಲ್ಲಿ ಗಂಟಲಲ್ಲಿ ಉರಿಯೂತ ಹಾಗೂ ಅಪರೂಪ ಎನ್ನುವಂತೆ ಹಲವು ಕೂದಲುಗಳನ್ನೂ ಅವರು ಕಂಡಿದ್ದಾರೆ. ಬಾಲ್ಯದಲ್ಲಿ ಈ ವ್ಯಕ್ತಿ ನದಿಯಲ್ಲಿ ಮುಳುಗಿದ್ದ ಬಳಿಕ ಆತನಿಗೆ ಗಂಟಲಿನ ಆಪರೇಷನ್‌ ನಡೆಸಲಾಗಿತ್ತು. ಅದೇ ಸ್ಥಳದಲ್ಲಿ ಕೆಲವು ಕೂದಲುಗಳು ಬೆಳೆದಿದ್ದನ್ನು ವೈದ್ಯರು ಗಮನಿಸಿದ್ದಾರೆ.  ಈ ವ್ಯಕ್ತಿ 10ನೇ ವರ್ಷದವನಾಗಿದ್ದಾಗ  ಟ್ರಾಕಿಯೊಟೊಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ಈ ಸಮಯದಲ್ಲಿ ಆತನ ಕಿವಿಯಿಂದ ಚರ್ಮವನ್ನು ತೆಗೆದು ಕಾರ್ಟಿಲೆಜ್ ಕಸಿ  ಮಾಡಿ ಸ್ಥಿರಗೊಳಿಸಲಾಗಿತ್ತು. ಈಗ ಅದೇ ಸ್ಥಳದಲ್ಲಿ ಕೂದಲು ಬೆಳೆಯುತ್ತಿದೆ.

ಎಂಡೋಟ್ರಾಶಿಯಲ್ ಕೂದಲಿನ ಬೆಳವಣಿಗೆಯನ್ನು ವೈದ್ಯರು ಪತ್ತೆ ಮಾಡಿದ್ದಾರೆ. ಗಂಟಲಿನಲ್ಲಿ ಕೂದಲು ಬೆಳೆಯುವ ಘಟನೆ ದಾಖಲಾಗಿರುವುದು ಹಿಂದೆ ಒಮ್ಮೆ ಮಾತ್ರ. ತೀರಾ ಅಪರೂಪಕ್ಕೆ ಆಗುವ ಘಟನೆ ಇದು ಎಂದು ತಿಳಿಸಿದ್ದಾರೆ. ಅದಲ್ಲದೆ, ಎಲ್ಲಿಯೂ ಇಂಥ ಕೇಸ್‌ಗಳ ಬಗ್ಗೆ ಡಾಕ್ಯುಮೆಂಟ್‌ ಕೂಡ ಇಲ್ಲ.  ಸಾಮಾನ್ಯವಾಗಿ ಆರರಿಂದ ಒಂಬತ್ತು ಸಂಖ್ಯೆಯಲ್ಲಿ ಮತ್ತು ಸುಮಾರು 2 ಇಂಚು ಉದ್ದ ಇರುವ ಕೂದಲುಗಳು ಅವನ ಧ್ವನಿ ಪೆಟ್ಟಿಗೆಯ ಮೂಲಕ ಮತ್ತು ಅವನ ಬಾಯಿಯೊಳಗೆ ಬೆಳೆದಿದ್ದವು ಎಂದು ವೈದ್ಯರು ಹೇಳಿದ್ದರು. ಕಳೆದ 14 ವರ್ಷಗಳಿಂದ  ಅವರು ವಾರ್ಷಿಕವಾಗಿ ಆಸ್ಪತ್ರೆಗೆ ಇದೇ ವಿಚಾರವಾಗಿ ಭೇಟಿ ನೀಡುತ್ತಿದ್ದರು ಎಂದಿದ್ದಾರೆ.

ಅಪಘಾತದ ವೇಳೆ ಕಣ್ಣಿನೊಳಗೆ ನುಗ್ಗಿದ ಬೈಕ್‌ನ ಬ್ರೇಕ್ ಹ್ಯಾಂಡಲ್ ಹೊರತೆಗೆದ ವೈದ್ಯರು

ಕೂದಲು ಕೀಳುವುದರಿಂದ ತಾತ್ಕಾಲಿಕ ಉಪಶಮನ ಮತ್ತು ಬ್ಯಾಕ್ಟೀರಿಯಾ ಆವರಿಸಿದ ಕಿರುಚೀಲಗಳಿಗೆ ಆ್ಯಂಟಿಬಯೋಟಿಕ್ ಚಿಕಿತ್ಸೆ ನೀಡಿದರೂ, ಕೂದಲುಗಳು ನಿರಂತರವಾಗಿ ಬೆಳೆಯುತ್ತಲೇ ಇವೆ. ಆದರೆ, 2022ರಿಂದ ವ್ಯಕ್ತಿಯ ಸ್ಥಿತಿಯಲ್ಲಿ ದೊಡ್ಡ ಮಟ್ಟದ ಸುಧಾರಣೆಯಾಗಿದೆ. ಧೂಮಪಾನ ತ್ಯಜಿಸಿದ ಬೆನ್ನಲ್ಲಿಯೇ ವ್ಯಕ್ತೊಯ ಪರಿಸ್ಥಿತಿ ಉತ್ತಮವಾಗಿದೆ. ಇದು ಎಂಡೋಸ್ಕೋಪಿಕ್ ಆರ್ಗಾನ್ ಪ್ಲಾಸ್ಮಾ ಹೆಪ್ಪುಗಟ್ಟುವಿಕೆಯನ್ನು ನಿರ್ವಹಿಸಲು ವೈದ್ಯರಿಗೆ ಅವಕಾಶ ಮಾಡಿಕೊಟ್ಟಿತು, ಇದು ಕೂದಲು ಬೆಳೆಯುವ ಮೂಲವನ್ನು ಸುಡುವ ವಿಧಾನವಾಗಿದೆ. 2023ರಲ್ಲಿ ಎರಡನೇ ಚಿಕಿತ್ಸೆಯು ಕೂದಲಿನ ಬೆಳವಣಿಗೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿತು.

ವಿದೇಶ ಪ್ರವಾಸದ ವೇಳೆ ಪತ್ರಕರ್ತರನ್ನು ಕರೆದುಕೊಂಡು ಹೋಗೋದು ಪ್ರಧಾನಿ ಕೆಲಸವಲ್ಲ ಎಂದಿದ್ದ ಮೋದಿ!

Latest Videos
Follow Us:
Download App:
  • android
  • ios