ವಿದೇಶ ಪ್ರವಾಸದ ವೇಳೆ ಪತ್ರಕರ್ತರನ್ನು ಕರೆದುಕೊಂಡು ಹೋಗೋದು ಪ್ರಧಾನಿ ಕೆಲಸವಲ್ಲ ಎಂದಿದ್ದ ಮೋದಿ!
ದೇಶದ ಪ್ರಧಾನಿ ಅಧಿಕೃತ ವಿದೇಶ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ದೇಶದ ಅಗ್ರ ಪತ್ರಕರ್ತರನ್ನು ಕರೆದುಕೊಂಡು ಹೋಗುವುದು ಹಿಂದಿನೆಲ್ಲಾ ಪ್ರಧಾನಿಗಳ ವಾಡಿಕೆಯಾಗಿತ್ತು. ಆದರೆ, ಮೋದಿ ಪ್ರಧಾನಿ ಆದ ಬಳಿಕ ಈ ಸಂಪ್ರದಾಯವನ್ನು ಹೇಗೆ ಬ್ರೇಕ್ ಮಾಡಿದರು ಎನ್ನುವ ಬಗ್ಗೆ ಪ್ರಧಾನಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.
ನವದೆಹಲಿ (ನ.30): ಪ್ರಧಾನಿ ನರೇಂದ್ರ ಮೋದಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರು ಎಎನ್‌ಐ ಪಾಡ್‌ಕಾಸ್ಟ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ವಿದೇಶ ಪ್ರವಾಸಗಳಿಗೆ ಕರೆದೊಯ್ಯುವ 'ಸಂಪ್ರದಾಯ'ವನ್ನು ಪ್ರಧಾನಿ ನರೇಂದ್ರ ಮೋದಿ ಹೇಗೆ ಬ್ರೇಕ್ ಮಾಡಿದರು ಎನ್ನುವ ಬಗ್ಗೆ ವಿವರಿಸಿದ್ದಾರೆ. ಬುಧವಾರ (ನವೆಂಬರ್ 29) ನಡೆದ “ಎಎನ್‌ಐ ಪಾಡ್‌ಕ್ಯಾಸ್ಟ್ ವಿತ್ ಸ್ಮಿತಾ ಪ್ರಕಾಶ್” ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದಿದ್ದ ಮಿಶ್ರಾ ಅವರು ಈ ಬಗ್ಗೆ ಮಾತನಾಡಿದ್ದಾರೆ. ಮೋದಿ ಅವರು ಪ್ರಧಾನಿ ಆದ ಬಳಿಕ ಮೊದಲ ವಿದೇಶ ಪ್ರವಾಸದ ವೇಳೆ, ಹಿಂದಿನೆಲ್ಲಾ ಪ್ರಧಾನಮಂತ್ರಿಗಳಂತೆ ನಾನೂ ಕೂಡ ಕೆಲವು ಪತ್ರಕರ್ತರ ಹೆಸರಿನ ಪಟ್ಟಿಯನ್ನು ಇಟ್ಟುಕೊಂಡು ಅವರ ಬಳಿ ಹೋಗಿದ್ದೆ. ಇವರೆಲ್ಲರೂ ಪ್ರಧಾನಿ ಮೋದಿ ಜೊತೆ ವಿದೇಶ ಪ್ರವಾಸಕ್ಕೆ ಅಧಿಕೃತ ವಿಮಾನದಲ್ಲಿ ಪ್ರಯಾಣ ಬೆಳೆಸುವವರಾಗಿದ್ದರು. ಆ ಪಟ್ಟಿಯನ್ನೊಮ್ಮೆ ನೋಡಿ ಅವರು ಏನನ್ನೂ ಹೇಳದೆ ಸುಮ್ಮನಿದ್ದರು. ಅದಾದ 2-3 ಗಂಟೆಗಳ ಬಳಿಕ, ಈ ಪಟ್ಟಿಯನ್ನು ನೀವು ಕ್ಲಿಯರ್ ಮಾಡದೇ ಇದ್ದರೆ, ನಾವು ಹೊರಡುವುದು ಬಹಳ ತಡವಾಗಲಿದೆ ಎಂದು ಹೇಳಿದೆ. ಆ ವೇಳೆ ಮಾತನಾಡಿದ ಅವರು, ಹಾಗೇನಾದರೂ ನಾನು ನನ್ನೊಂದಿಗೆ ಯಾವುದೇ ಪತ್ರಕರ್ತರನ್ನು ಕರೆದುಕೊಂಡು ಹೋಗದೇ ಇದ್ದಲ್ಲಿ ಏನಾಗಲಿದೆ ಎಂದು ಪ್ರಶ್ನೆ ಮಾಡಿದ್ದರು' ಎಂದು ತಿಳಿಸಿದ್ದಾರೆ.
ಇದಕ್ಕೆ ನಾನು, ನೀವು ಹಾಗೆ ಮಾಡಿದರೆ ಮಾಧ್ಯಮದ ಜೊತೆ ಕೆಟ್ಟ ಸಂಬಂಧ ಹೊಂದಿದಂತಾಗುತ್ತದೆ ಎಂದೆ. ಯಾಕಾಗಿ ಹಾಗಾಗುತ್ತದೆ ಎಂದು ಅವರು ಮತ್ತೆ ಪ್ರಶ್ನೆ ಮಾಡಿದ್ದರು. ಮಾಧ್ಯಮದ ದೈತ್ಯ ಸಂಸ್ಥೆಗಳು, ಪ್ರವಾಸವನ್ನು ವರದಿ ಮಾಡಲು ಅವರ ಪ್ರತಿನಿಧಿಗಳನ್ನು ಅವರೇ ಕಳಿಸಿಕೊಡುತ್ತಾರೆ. ನಾವು ಅವರ ಫಂಡ್‌ನ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಅವರನ್ನು ನಮ್ಮ ವಿಮಾನದಲ್ಲಿಯೇ ಕರೆದುಕೊಂಡು ಹೋಗುವುದು ಅಗತ್ಯವಿಲ್ಲ. ಆಗ ನಾನು ಸಾಧ್ಯವಿಲ್ಲ ಸರ್ ಇದು ಸಮಸ್ಯೆಗೆ ಕಾರಣವಾಗಲಿದೆ ಎಂದೆ. ಇದಕ್ಕೆ ಅವರು, ಮತ್ತೆನೂ ಮಾಡಬೇಕಿ. ನಾನು ಹೇಳಿದ್ದನ್ನು ನೋಟ್ ಮಾಡಿಕೊಳ್ಳಿ. ಅಧಿಕೃತ ಪ್ರವಾಸದಲ್ಲಿ ಪ್ರಧಾನಿ ಜೊತೆ ಯಾವ ಪತ್ರಕರ್ತರು ಹೋಗೋದಿಲ್ಲ. ಅಷ್ಟೇ.' ಎಂದು ಬಿಟಟರು. ಇದು ಅವರು ನಿರ್ಧಾರವಾಗಿತ್ತು. ಹಾಗೇ ಅದೇ ಅಂತಿಮವಾಗಿತ್ತು ಎಂದು ನೃಪೇಂದ್ರ ಮಿಶ್ರಾ ಹೇಳಿದ್ದಾರೆ.
2014ರಲ್ಲಿ ಪ್ರಧಾನಿಯಾಗಿ ಭೂತಾನ್‌ಗೆ ತಮ್ಮ ಚೊಚ್ಚಲ ಭೇಟಿಯ ಸಂದರ್ಭದಲ್ಲಿ ದೂರದರ್ಶನದಂತಹ ರಾಜ್ಯ-ಸಂಯೋಜಿತ ಮಾಧ್ಯಮಗಳು ಮತ್ತು ಕೆಲವು ಸುದ್ದಿ ಸಂಸ್ಥೆಗಳಿಗೆ ಸೇರಿದ ಕೆಲವೇ ಪತ್ರಕರ್ತರನ್ನು ಮಾತ್ರ ಕರೆದುಕೊಂಡು ಹೋಗಲಾಗಿತ್ತು. ಅದಕ್ಕೂ ಮುನ್ನ ಇದ್ದ ಯುಪಿಎ ಸರ್ಕಾರದ ಅವಧಿಯಲ್ಲಿ ಮಾಧ್ಯಮದ ಪ್ರಮುಖ ಪತ್ರಕರ್ತರು ಪ್ರಧಾನಿಯವರ ಅಧಿಕೃತ ವಿಮಾನದಲ್ಲಿಯೇ ಪ್ರಯಾಣ ಮಾಡುತ್ತಿದ್ದರು.
ಸಿಒಪಿ-28 ಶೃಂಗಸಭೆ, ದುಬೈಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ!
ಪ್ರಧಾನಿ ನರೇಂದ್ರ ಮೋದಿ ಅವರ ಆರಂಭಿಕ ಕೆಲವು ಪ್ರವಾಸಗಳಲ್ಲಿ ಕೆಲವೇ ಕೆಲವು ಪತ್ರಕರ್ತರನ್ನು ಮಾತ್ರವೇ ಕರೆದುಕೊಂಡು ಹೋಗಲಾಗುತ್ತಿತ್ತು. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಾಧ್ಯಮದ 30ಕ್ಕೂ ಅಧಿಕ ಪತ್ರಕರ್ತರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವ ಸಂಪ್ರದಾಯದ ಬಗ್ಗೆ ಮೋದಿ ಒಂಚೂರು ಒಲವು ಹೊಂದಿರಲಿಲ್ಲ.
ನೀವು ಟ್ರಾಕ್ಟರ್ ಮಾಲೀಕರು, ನನ್ನ ಬಳಿ ಸೈಕಲ್ ಕೂಡ ಇಲ್ಲ; ಮೋದಿ ಮಾತಿಗೆ ನಕ್ಕು ನೀರಾದ ಗ್ರಾ.ಪಂ ಅಧ್ಯಕ್ಷೆ!