- Home
- News
- World News
- ಗಾಯದ ನಡುವೆಯೇ ಘರ್ಜಿಸಿದ ಮೊಜ್ತಾಬಾ ಖಮೇನಿ; ಸೇನಾ ನೆಲೆ ಮುಚ್ಚದಿದ್ರೆ ಅಮೆರಿಕಕ್ಕೆ ಉಳಿಗಾಲವಿಲ್ಲ ಎಂದ ಇರಾನ್ ನಾಯಕ!
ಗಾಯದ ನಡುವೆಯೇ ಘರ್ಜಿಸಿದ ಮೊಜ್ತಾಬಾ ಖಮೇನಿ; ಸೇನಾ ನೆಲೆ ಮುಚ್ಚದಿದ್ರೆ ಅಮೆರಿಕಕ್ಕೆ ಉಳಿಗಾಲವಿಲ್ಲ ಎಂದ ಇರಾನ್ ನಾಯಕ!
ಇರಾನ್‌ನ ನೂತನ ಸರ್ವೋಚ್ಚ ನಾಯಕ ಆಯತೊಲ್ಲಾ ಮೊಜ್ತಾಬಾ ಖಮೇನಿ, ಮಧ್ಯಪ್ರಾಚ್ಯದಲ್ಲಿರುವ ಎಲ್ಲಾ ಅಮೆರಿಕದ ಮಿಲಿಟರಿ ನೆಲೆಗಳನ್ನು ಮುಚ್ಚುವಂತೆ ಇಲ್ಲದಿದ್ದರೆ ಭೀಕರ ದಾಳಿ ನಡೆಸುವುದಾಗಿ ಎಚ್ಚರಿಸಿದ್ದಾರೆ. ತಂದೆಯ ಸಾವಿಗೆ ಕಾರಣವಾದ ವೈಮಾನಿಕ ದಾಳಿಯಲ್ಲಿ ಇವರು ಗಾಯಗೊಂಡಿದ್ದರು.

ಅಮೆರಿಕಕ್ಕೆ ನೇರ ಎಚ್ಚರಿಕೆ
ಇರಾನ್‌ನ ನೂತನ ಸರ್ವೋಚ್ಚ ನಾಯಕ ಆಯತೊಲ್ಲಾ ಮೊಜ್ತಾಬಾ ಖಮೇನಿ ಗುರುವಾರ ತಮ್ಮ ಮೊದಲ ಸಾರ್ವಜನಿಕ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಸಂಘರ್ಷದ ಕುರಿತು ಟೆಹ್ರಾನ್‌ನ ಕಠಿಣ ನಿಲುವನ್ನು ಅವರು ಈ ಮೂಲಕ ಸ್ಪಷ್ಟಪಡಿಸಿದ್ದಾರೆ.
ಸೇನಾ ನೆಲೆಗಳನ್ನು ಮಚ್ಚುವಂತೆ ವಾರ್ನಿಂಗ್
"ಮಧ್ಯಪ್ರಾಚ್ಯದಲ್ಲಿರುವ ಎಲ್ಲಾ ಅಮೆರಿಕದ ಮಿಲಿಟರಿ ನೆಲೆಗಳನ್ನು ತಕ್ಷಣವೇ ಮುಚ್ಚಬೇಕು. ಇಲ್ಲದಿದ್ದರೆ ಅವುಗಳ ಮೇಲೆ ಭೀಕರ ದಾಳಿ ನಡೆಸಲಾಗುವುದು," ಎಂದು ಮೊಜ್ತಾಬಾ ಖಮೇನಿ ಅಧಿಕಾರ ವಹಿಸಿಕೊಂಡ ನಂತರದ ತಮ್ಮ ಮೊದಲ ಅಧಿಕೃತ ಹೇಳಿಕೆಯಲ್ಲಿ ಗುಡುಗಿದ್ದಾರೆ. ನೆರೆಯ ದೇಶದ ಸ್ನೇಹದ ಮೇಲೆ ನಂಬಿಕೆ ಇದೆ, ಆದ್ರೆ ಹಾರ್ಮುಜ್ ಜಲಸಂಧಿ ಸದ್ಯಕ್ಕೆ ಸಂಪೂರ್ಣವಾಗಿ ಮುಚ್ಚಲಾಗುವುದು ಎಂದು ತಿಳಿಸಿದ್ದಾರೆ.
ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ನಾಯಕ
ಕಳೆದ ಭಾನುವಾರ ಇರಾನ್‌ನ ಸರ್ವೋಚ್ಚ ನಾಯಕನಾಗಿ ನೇಮಕಗೊಂಡ ನಂತರ ಮೊಜ್ತಾಬಾ ಖಮೇನಿ ಅವರು ಇಲ್ಲಿಯವರೆಗೆ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅವರ ಈ ಮೊದಲ ಸಂದೇಶವನ್ನು ಇರಾನ್ ಸರ್ಕಾರಿ ದೂರದರ್ಶನದಲ್ಲಿ ಓದಿ ಪ್ರಸಾರ ಮಾಡಲಾಗಿದೆ.
ಅಟ್ಯಾಕ್‌ನಲ್ಲಿ ಗಾಯಗೊಂಡಿದ್ದ ಮೊಜ್ತಾಬಾ
ಸಿಎನ್‌ಎನ್ (CNN) ವರದಿಯ ಪ್ರಕಾರ, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಮೊದಲ ದಿನದ ವೈಮಾನಿಕ ದಾಳಿಯಲ್ಲಿ ಮೊಜ್ತಾಬಾ ಖಮೇನಿ ಅವರ ಕಾಲಿನ ಮೂಳೆ ಮುರಿದಿದ್ದು, ಕೆಲವು ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಕ್ಯಾಮೆರಾ ಮುಂದೆ ಬರುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ತಂದೆಯ ಸಾವಿನ ವೇಳೆ ಗಾಯ
ಸೈಪ್ರಸ್‌ಗೆ ಇರಾನ್ ರಾಯಭಾರಿಯಾಗಿರುವ ಅಲಿರೆಜಾ ಸಲಾರಿಯನ್ ಅವರು ಗಾರ್ಡಿಯನ್ ಪತ್ರಿಕೆಗೆ ಮಾಹಿತಿ ನೀಡಿದ್ದು, ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಮತ್ತು ಅವರ ಕುಟುಂಬದ ಐವರು ಸದಸ್ಯರನ್ನು ಬಲಿಪಡೆದ ಅದೇ ವೈಮಾನಿಕ ದಾಳಿಯಲ್ಲಿ ಮೊಜ್ತಾಬಾ ಕೂಡ ಗಾಯಗೊಂಡಿದ್ದರು ಎಂದು ದೃಢಪಡಿಸಿದ್ದಾರೆ.
ರೆಕಾರ್ಡೆಡ್ ಸಂದೇಶದ ಮೂಲಕ ವಾರ್ನಿಂಗ್
ಮೊಜ್ತಾಬಾ ಖಮೇನಿ ಅವರ ರೆಕಾರ್ಡ್ ಮಾಡಲಾದ ಹೇಳಿಕೆಯನ್ನು ದೇಶದಾದ್ಯಂತ ಬಿತ್ತರಿಸಲಾಗಿದ್ದು, "ಅಮೆರಿಕದ ಮಿಲಿಟರಿ ನೆಲೆಗಳು ಕಾರ್ಯಾಚರಣೆ ಮುಂದುವರಿಸಿದರೆ ಅವುಗಳನ್ನು ನಾಶಪಡಿಸಲಾಗುವುದು" ಎಂಬ ಕಠಿಣ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

