Asianet Suvarna News Asianet Suvarna News

ಸ್ವಮೂತ್ರ ಸೇವನೆಯೇ ಈತನ ಚಿರಯೌನದ ಗುಟ್ಟಂತೆ!

  • ಮೂತ್ರ ಸೇವನೆಯೇ ಸೌಂದರ್ಯದ ಗುಟ್ಟು ಎಂದ ಯುವಕ
  • ಮೂತ್ರ ಸೇವನೆಯಿಂದ ಮರಳಿದ ಯೌವನ
  • ಚರ್ಮದ ಆರೈಕೆಗೂ ಮೂತ್ರವೇ ಮದ್ದು
     
drinking your own urine is the secret to health and eternal youth akb
Author
Bangalore, First Published Apr 29, 2022, 3:37 PM IST | Last Updated Apr 29, 2022, 3:37 PM IST

ಸ್ವಮೂತ್ರವನ್ನು ಕುಡಿಯುವುದರಿಂದ ಚಿರ ಯುವಕರಂತೆ ಇರಬಹುದು. ಈ ಪ್ರಯೋಗ ಮಾಡಿದ್ದರಿಂದ ತಾನು ಹತ್ತು ವರ್ಷ ಚಿಕ್ಕವನಂತೆ ಕಾಣುತ್ತೇನೆ ಎಂದು 34 ವರ್ಷದ ಹ್ಯಾರಿ ಮಟಾಡೀನ್ ಎಂಬಾತ ಹೇಳಿಕೆ ನೀಡಿದ್ದು, ಆತನ ಈ ವಿಚಿತ್ರ ಹೇಳಿಕೆಗೆ ಜನ ವ್ಯಾಕ್ ಅಂತಿದ್ದಾರೆ. ನಿಮ್ಮ ಸ್ವಂತ ಮೂತ್ರವನ್ನು ಕುಡಿಯುವುದು ಆರೋಗ್ಯ ಮತ್ತು ಶಾಶ್ವತ ಯೌವನಕ್ಕೆ ಕಾರಣವಾಗಲಿದೆ ಎಂದು ಆತ ಹೇಳಿದ್ದಾನೆ. 34 ವರ್ಷದ ಹ್ಯಾರಿ ಮಟಾಡೀನ್ (Harry Matadeen) 2016 ರಿಂದ ತನ್ನದೇ ಮೂತ್ರವನ್ನು ಕುಡಿಯುತ್ತಿದ್ದಾನಂತೆ ಮತ್ತು ಅಂದಿನಿಂದ ಆತ ಸಾಮಾಜಿಕ ಆತಂಕದ ಸಮಸ್ಯೆಗಳು ಸೇರಿದಂತೆ ಮಾನಸಿಕ ಆರೋಗ್ಯದ ಹೋರಾಟಗಳಿಂದ ಗುಣಮುಖನಾಗಿದ್ದೇನೆ ಎಂದು ಹೇಳಿದ್ದಾನೆ.

ಮೂತ್ರ ಕುಡಿಯಲು ಪ್ರಾರಂಭಿಸಿದಂದಿನಿಂದ ನನಗೆ ನನ್ನ ಆರೋಗ್ಯ ಸಮಸ್ಯೆಗಳು (Health Problem) ಸಂಪೂರ್ಣ ಕಣ್ಮರೆಯಾಯ್ತು. ಇದು ನನ್ನ ಮೆದುಳನ್ನು ಜಾಗೃತಗೊಳಿಸಿತ್ತು. ನನ್ನನ್ನು ಖಿನ್ನತೆಯಿಂದ ದೂರ ಮಾಡಿತು ಎಂದು  ಹ್ಯಾಂಪ್‌ಶೈರ್‌ನ (Hampshire) ಹ್ಯಾರಿ ಹೇಳಿದ್ದಾರೆ.  ನಾನು ಶಾಂತಿ ಎಂದರೇನು ಹಾಗೂ ಶಾಂತ ಮನಸ್ಥಿತಿಯ (Peace of Mind) ಹೊಸ ಅರ್ಥವನ್ನು ಅನುಭವಿಸಿದೆ. ಅಲ್ಲದೇ ನಾನಿದನು ಉಚಿತವಾಗಿ ಪಡೆಯಬಹುದು ಮತ್ತು ಇದರಿಂದ ನಾನು ಸಂತೋಷದಿಂದಿರುವೆ ಎಂದು ಹ್ಯಾರಿ ಹೇಳಿದ್ದಾರೆ.

ಬಿಯರ್ ಕುಡಿಯೋದ್ರಿಂದ ಮೂತ್ರಪಿಂಡದ ಕಲ್ಲಿನ ಸಮಸ್ಯೆ ಕಡಿಮೆಯಾಗುತ್ತಾ ?

ಹ್ಯಾರಿ ತನ್ನ ಮೂತ್ರವು  ಸೂಪರ್ ಕ್ಲೀನ್ ಆಗಿದ್ದು, ತಾನೀಗ ಪ್ರತಿದಿನ 200ml ಮೂತ್ರವನ್ನು ಕುಡಿಯುತ್ತೇನೆ ಒಂದು ತಿಂಗಳಿಗಿಂತಲೂ ಹಳೆಯ ಮೂತ್ರವೂ ನನ್ನ ಬಳಿ ಇದೆ ಎಂದು ಆತ ಹೇಳಿದ್ದಾನೆ. ತಾಜಾ ಮೂತ್ರವು ನೀವು ಊಹಿಸಿದಷ್ಟು ಕೆಟ್ಟದ್ದಾಗಿಲ್ಲ. ಆದರೆ ಹಳೆಯ ಮೂತ್ರವು ಯಾವಾಗಲೂ ವಾಸನೆಯಿಂದ ಕೂಡಿರುತ್ತದೆ ಮತ್ತು ರುಚಿಯು ಸಂಸ್ಕರಿಸಿದಂತಿರುತ್ತದೆ ಎಂದು ಹ್ಯಾರಿ ಹೇಳಿದ್ದಾರೆ.

ನನ್ನ ಹಳೆಯದಾದ ಮೂತ್ರದ ವಾಸನೆ ಮತ್ತು ರುಚಿಯನ್ನು ನಾನು ನಿಜವಾಗಿಯೂ ಇಷ್ಟಪಡುತ್ತೇನೆ. ಏಕೆಂದರೆ ನಾನು ಅದನ್ನು ನನ್ನ ದೇಹಕ್ಕೆ (Body) ತೆಗೆದುಕೊಂಡ ನಂತರ ಅದು ನನಗೆ ಒಳ್ಳೆಯ ಪ್ರಯೋಜನಗಳನ್ನು ಮತ್ತು ಸಂತೋಷವನ್ನು ನೀಡಿದೆ. ಇದರ ಪ್ರಯೋಜನಗಳ ಹೊರತಾಗಿಯೂ ಮೂತ್ರ ಕುಡಿಯುತ್ತಿರುವ ಹ್ಯಾರಿಯ ಕ್ರಮಕ್ಕೆ ಆತನ ಕುಟುಂಬ ಸದಸ್ಯರು ವಿರೋಧ ವ್ಯಕ್ತಪಡಿಸಿದರಂತೆ. ನನ್ನ ಕುಟುಂಬವು (Family)  ಎಂದಿಗೂ ಮೂತ್ರ ಕುಡಿಯುವುದನ್ನು ಅನುಮೋದಿಸಲಿಲ್ಲ ಮತ್ತು ನನ್ನ ಕುಟುಂಬ ಮೊದಲಿನಿಂದಲೂ ಇದು ಅಸಹ್ಯಕರವೆಂದು ಭಾವಿಸಿದೆ. ಇದೇ ಕಾರಣಕ್ಕೆ ನನ್ನ ಸಹೋದರಿ ನನ್ನೊಂದಿಗೆ ಮಾತನಾಡುವುದಿಲ್ಲ ಎಂದು ಹ್ಯಾರಿ ಹೇಳಿದ್ದಾನೆ. 

ಬಾಯಾರಿಕೆ ನೀಗಿಸಲು ಮೂತ್ರ ಕುಡಿದೆವು: ರೋಪ್‌ ವೇನಲ್ಲಿ ಸಿಲುಕಿದವರ ಕರಾಳ ಅನುಭವ
 

ನನ್ನ ಅನುಭವವನ್ನು ಹೇಳಿದ ನಂತರ ನಾನು ನನ್ನ ಸ್ನೇಹಿತರಿಗೂ ಮೂತ್ರ (Urine) ಸೇವಿಸುವಂತೆ ಸಲಹೆ ನೀಡಿದ್ದೇನೆ ಅಲ್ಲದೇ ಅವರೆಲ್ಲರೂ ತಮ್ಮ ಹಳೆಯ ಮೂತ್ರವನ್ನು ಸೇವಿಸುತ್ತಿದ್ದಾರೆ. ಒಂದು ವೇಳೆ ಅವರು ಸ್ವ ಮೂತ್ರ ಸೇವನೆ ಮಾಡದೇ ಇದ್ದಲ್ಲಿ ನಾನು ಅವರೊಂದಿಗೆ ಸ್ನೇಹ ಇಟ್ಟುಕೊಳ್ಳುವುದಿಲ್ಲ ಎಂದು ಹ್ಯಾರಿ ಹೇಳಿದ್ದಾನೆ. ಹ್ಯಾರಿ ಕೇವಲ ಮೂತ್ರವನ್ನು ಕುಡಿಯುವುದಲ್ಲದೇ ಅದನ್ನು ಚರ್ಮದ ಆರೈಕೆಗೂ ಬಳಸುತ್ತಾನೆ. ಮೂತ್ರವನ್ನು ಮುಖದ ಮೇಲೆಯೂ ಲೇಪನ ಮಾಡಿದ್ದರಿಂದ ಈತ ಪ್ರಾಯದಲ್ಲಿ ಹಲವು ವರ್ಷಗಳಷ್ಟು ಚಿಕ್ಕವನಂತೆ ಕಂಡಿದ್ದೇನೆ ಎಂದು ಆತ ಹೇಳಿದ್ದಾನೆ.

ಮೂತ್ರದ ಬಳಕೆಯಿಂದ ನನ್ನ ವಯಸ್ಸು ಕಡಿಮೆಯಾದಂತೆ ಕಾಣುತ್ತಿದೆ. ಹಳೆಯ ಮೂತ್ರವನ್ನು ಕುಡಿಯುವುದರಿಂದ ನನ್ನ ಯೌವನ ಮರುಕಳಿಸಿದೆ. ಅಲ್ಲದೇ ಅದನ್ನು ಮುಖದ ಮೇಲೆ ಲೇಪಿಸಿದ್ದರಿಂದ ನನ್ನ ಚರ್ಮವು ಮೃದುವಾಗಿ ಹೊಳೆಯುತ್ತಿದೆ. ಹಳೆಯ ಮೂತ್ರವೂ ಚರ್ಮಕ್ಕೆ ಉತ್ತಮ ಆಹಾರವಾಗಿದೆ ಎಂದು ಅವರು ಹೇಳಿದ್ದಾರೆ. ನಾನು ನನ್ನ ಚರ್ಮಕ್ಕೆ ಮೂತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಪೂರಕ ಆರೈಕೆಗಳನ್ನು ಮಾಡುತ್ತಿಲ್ಲ ಎಂದು ಹ್ಯಾರಿ ಹೇಳಿದ್ದಾನೆ. 

ಕೆಲವೊಮ್ಮೆ ನಾನು ಮೂತ್ರಾಲಯದಲ್ಲಿರುವಾಗ ಮತ್ತು ಯಾರೂ ನೋಡದಿರುವಾಗ ನಾನು ನನ್ನ ಕೈಯಲ್ಲಿ ಹಿಡಿದು ಮೂತ್ರವನ್ನು ಮುಖದ ಮೇಲೆ ಎರಚುತ್ತೇನೆ  ಮತ್ತು ಅದನ್ನು ಮುಖದ ತುಂಬ ಉಜ್ಜುತ್ತೇನೆ. ಈ ಮೂತ್ರ ಚಿಕಿತ್ಸೆಯು ನನ್ನ ಜೀವನವನ್ನು ಬದಲಾಯಿಸಿದೆ. ಮೂತ್ರವು ಸುಮಾರು 90% ನೀರನ್ನು ಹೊಂದಿರುವ ತ್ಯಾಜ್ಯ ಉತ್ಪನ್ನವಾಗಿದೆ. ಉಳಿದವು ಅಮೋನಿಯಾ ಮತ್ತು ಲವಣಗಳು, ಕೆಲವು ಬ್ಯಾಕ್ಟೀರಿಯಾಗಳು ಮತ್ತು ಇತರ ತ್ಯಾಜ್ಯ ಉತ್ಪನ್ನಗಳನ್ನು ಹೊಂದಿದೆ.
 

Latest Videos
Follow Us:
Download App:
  • android
  • ios