* ಪಾಕಿಸ್ತಾನದಲ್ಲಿ ಹಣದುಬ್ಬರದಿಂದ ಜನರು ಕಂಗಾಲು* ಮಾಸಿಕ ಖರ್ಚು ನಿಭಾಯಿಸಲು ಪರದಾಡುವ ಸ್ಥಿತಿ ನಿರ್ಮಾಣ* ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಟಾಂಗ್ ಕೊಟ್ಟ ರಾಯಭಾರ ಕಚೇರಿ

ಇಸ್ಲಮಾಬಾದ್(ಡಿ.03): ಪಾಕಿಸ್ತಾನದಲ್ಲಿ ಹಣದುಬ್ಬರವು (Inflamation In Pakistan) ವೇಗವಾಗಿ ಹೆಚ್ಚುತ್ತಿದೆ ಮತ್ತು ಸಾಮಾನ್ಯ ಜನರು ಆತಂಕಕ್ಕೊಳಗಾಗಿದ್ದಾರೆ. ಮಾಸಿಕ ಖರ್ಚು ನಿಭಾಯಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪಾಕಿಸ್ತಾನ ಸರ್ಕಾರದ (Pakistan Govt) ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹಣದುಬ್ಬರದಿಂದಾಗಿ, ಪಾಕಿಸ್ತಾನಿ ನಾಗರಿಕರು ತಮ್ಮ ಪ್ರಧಾನಿ ಇಮ್ರಾನ್ ಖಾನ್ (Pakistan Prime Minister Imran Khan) ಮೇಲೆ ತುಂಬಾ ಕೋಪಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ದೇಶವನ್ನು ನಡೆಸಲು ಸರ್ಕಾರದ ಬಳಿ ಹಣವಿಲ್ಲ ಎಂದು ಹೇಳಿದ್ದರು. ಈ ವಿಚಾರದಲ್ಲಿ ಪಾಕಿಸ್ತಾನ ಸರ್ಕಾರ ತನ್ನ ದೇಶ ಮತ್ತು ವಿದೇಶಗಳಲ್ಲೂ ನಗೆಪಾಟಲಿಗೀಡಾಗಬೇಕಿದೆ. ಇತ್ತೀಚೆಗಷ್ಟೇ ಸೆರ್ಬಿಯಾದಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಯ (Pakistan Embassy Serbia) ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಣದುಬ್ಬರ ಮತ್ತು ಮೂರು ತಿಂಗಳಿನಿಂದ ಸಂಬಳ ನೀಡದಿರುವ ಬಗ್ಗೆ ಟ್ವೀಟ್ ಮಾಡಲಾಗಿದ್ದು, ಪಾಕಿಸ್ತಾನವು ಆಘಾತಕ್ಕೊಳಗಾಗಿದೆ. ಈ ಟ್ವೀಟ್‌ನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನೂ ಟ್ಯಾಗ್ ಮಾಡಲಾಗಿದೆ. ಈ ಟ್ವೀಟ್ ಕೆಳಗೆ ಮತ್ತೊಂದು ಟ್ವೀಟ್ ಮಾಡಲಾಗಿದ್ದು, ಇದಕ್ಕಿಂತ ಬೇರೆ ಆಯ್ಕೆ ಇರಲಿಲ್ಲ ಎಂದು ಬರೆಯಲಾಗಿದೆ.

ಹೌದು ಇಮ್ರಾನ್ ಖಾನ್ (Imran Khan) ಲೇವಡಿ ಮಾಡಿರುವ Rap ಸಾಂಗ್ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಇದನ್ನು ಸೆರ್ಬಿಯಾದಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯ ಟ್ವಿಟರ್ ಹ್ಯಾಂಡಲ್‌ನೊಂದಿಗೆ ಹಂಚಿಕೊಳ್ಳಲಾಗಿದೆ. ಇದರಲ್ಲಿ, ರಾಪರ್ (Raper) ಹಣದುಬ್ಬರಕ್ಕೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ಅವರಿಗೆ ಟಾಂಗ್ ನೀಡಲಾಗಿದೆ. ಅಲ್ಲದೇ ಇಮ್ರಾನ್‌ ಖಾನ್‌ರವರೇ ಹಿಂದಿನ ಎಲ್ಲಾ ಹಣದುಬ್ಬರ ದಾಖಲೆಗಳನ್ನು ಮುರಿದಿರುವ ನೀವು, ಕಳೆದ 3 ತಿಂಗಳಿಂದ ಸಂಬಳ ಪಡೆಯದೆ ನಿಮಗಾಗಿ ಕೆಲಸ ಮಾಡುತ್ತಿರುವ ನಾವು ಇನ್ನೆಷ್ಟು ಸಮಯ ಸುಮ್ಮನಿದ್ದು ಕೆಲಸ ಮಾಡುತ್ತೇವೆಂದು ನಿರೀಕ್ಷಿಸುತ್ತೀರಿ? ಶುಲ್ಕ ಕಟ್ಟದ ಕಾರಣ ನಮ್ಮ ಮಕ್ಕಳನ್ನು ಶಾಲೆಯಿಂದ ಹೊರ ಹಾಕಲಾಗಿದೆ. ಇದುವೆಯಾ #NayaPakistan ಎಂದು ಪ್ರಶ್ನಿಸಲಾಗಿದೆ.

Scroll to load tweet…

ಪಾಕಿಸ್ತಾನದ ಮೇಲಿನ ವಿದೇಶಿ ಸಾಲ ನಿರಂತರವಾಗಿ ಹೆಚ್ಚುತ್ತಿದ್ದು, ದಿನನಿತ್ಯದ ಖರ್ಚನ್ನು ಭರಿಸಲು ಸಾಧ್ಯವಾಗುತ್ತಿಲ್ಲ.ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವ ಆರೋಪ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ವಿಶ್ವದಲ್ಲಿ ಒಳ್ಳೆಯ ಇಮೇಜ್ ಇಲ್ಲ. ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್‌ನ ಗ್ರೇ ಲಿಸ್ಟ್‌ನಲ್ಲಿ ಪಾಕಿಸ್ತಾನ ಇದೆ. ಭಾರತದ ಮೋಸ್ಟ್ ವಾಂಟೆಡ್ ಹಫೀಜ್ ಸಯೀದ್ (ಮತ್ತು ಮಸೂದ್ ಅಜರ್) ಮತ್ತು ಅವರ ನೇತೃತ್ವದ ಗುಂಪುಗಳಂತಹ ಗೊತ್ತುಪಡಿಸಿದ ಭಯೋತ್ಪಾದಕರ ವಿರುದ್ಧ ವಿಶ್ವಸಂಸ್ಥೆ (ಯುಎನ್) ತೆಗೆದುಕೊಂಡ ಕ್ರಮವನ್ನು ತಿಳಿಸಬೇಕಾಗಿದೆ ಎಂದು ಭಯೋತ್ಪಾದನೆಗೆ ಹಣಕಾಸು ಒದಗಿಸುವ ವಿರುದ್ಧದ ಜಾಗತಿಕ ಸಂಸ್ಥೆ ಹೇಳಿದೆ.