ವುಹಾನ್(ಜೂ.09): ಗರ್ಭಿಣಿ ಆನೆ ಕೊಂದ ಪ್ರಕರಣ, ಹಸುವಿಗೆ ಸ್ಫೋಟಕ ನೀಡಿದ ಘಟನೆ, ಚಿರತೆಯನ್ನು ಬಡಿದು ದವಡೆ ಪುಡಿ ಮಾಡಿದ ಘಟನೆಗಳು ಇತ್ತೀಚೆಗೆ ಮನುಷ್ಯನ ಕ್ರೂರತೆಯನ್ನು ಸಾರಿ ಹೇಳಿತ್ತು. ಇದೀಗ ಮೂಕ ಪ್ರಾಣಿ, ಮನುಷ್ಯನ ಮೇಲ್ಲಿಟ್ಟಿರುವ ಪ್ರೀತಿ, ನಂಬಿಕೆ, ವಿಶ್ವಾಸ, ಅಕ್ಕರೆ ಎಷ್ಟಿದೆ ಅನ್ನೋದನ್ನು ಪದಗಳಲ್ಲಿ ಕಟ್ಟಿಕೊಡಲು ಅಸಾಧ್ಯ.  ನಿಯತ್ತಿನ ಪ್ರಾಣಿ ಎಂದೇ ಗುರುತಿಸಿಕೊಂಡಿರುವ ನಾಯಿ ಘಟನೆ ಮನಕಲುಕುವ ಘಟನೆ ನಿಮ್ಮ ಮನಸ್ಸನ್ನು ಕಾಡದೇ ಇರದು.

ಚಿರು ಚಿರಾಯು; ಕಣ್ಣೀರಿಟ್ಟ ನೆಚ್ಚಿನ ಶ್ವಾನ

ಇದು ಚೀನಾದ ವುಹಾನ್ ಸಮೀಪ ನಡೆದ ಘಟನೆ. ಇಲ್ಲಿನ ನಿವಾಸಿ ಕ್ಸು ಕೆಲಸದ ನಿಮಿತ್ತ  ಪ್ರತಿ ದಿನ ಯಾಂಗ್ಜೆ ಸೇತುವೆ ದಾಟಿ ಹೋಗುತ್ತಾನೆ. ಹೀಗೆ ಕಳೆದೊಂದು ವಾರದಿಂದ ಉದ್ಯೋಗಕ್ಕೆ ತೆರಳುವಾಗ ನಾಯಿಯೊಂದು ಯಾಂಗ್ಜೆ ಸೇತುವೆಯಲ್ಲಿ ಕುಳಿತು ನದಿಯನ್ನು ನೋಡುತ್ತಿದೆ. ಪ್ರತಿ ದಿನ ಅದೇ ಜಾಗದಲ್ಲಿ ನದಿಯನ್ನು ನೋಡುತ್ತಿತ್ತು. ಒಂದು ವಾರ ಗಮನಿಸಿದ ಕ್ಸು, ಕಾರಿನಿಂದ  ಇಳಿದ ನಾಯಿಗೆ ಆಹಾರ ನೀರು ನೀಡಿದ್ದಾನೆ. ಆದರೆ ನಾಯಿ ಒಂದು ತುತ್ತು ತಿಂದಿಲ್ಲ.

ಕೊರೋನಾ ಅಟ್ಟಹಾಸಕ್ಕೆ ನಲುಗಿದ ಮೂಕಪ್ರಾಣಿಗಳು: ಬೀದಿನಾಯಿಗಳಿಗೆ ಯುವಕನ ಅನ್ನದಾಸರೆ

ಇತ್ತ ವಿಡಿಯೋ ಮಾಡಿದ ಕ್ಸು, ಈ ನಾಯಿ ಕಳೆದೊಂದು ವಾರದಿಂದ ಇಲ್ಲಿ ಕಾಯುತ್ತಿದೆ. ಕಾರಣ ತಿಳಿದಿಲ್ಲ. ಆಹಾರ ನೀರು ಮುಟ್ಟುತ್ತಿಲ್ಲ. ಹೀಗಾಗಿ ನಾನು ಈ ನಾಯಿಯನ್ನು ದತ್ತು ತೆಗೆದುಕೊಳ್ಳುತ್ತಿದ್ದೇನೆ ಎಂದು ವಿಡಿಯೋ ಮಾಡಿ ತನ್ನ ಕಾರಿನಲ್ಲಿ ಮನೆಗೆ ಕರೆದೊಯ್ದಿದ್ದ. ಇತ್ತ ವಿಡಿಯೋ ಚೀನಾದಲ್ಲಿ ವೈರಲ್ ಆಗಿತ್ತು. ವಿಡಿಯೋ ಗಮನಿಸಿದ ಪೊಲೀಸರು ತಕ್ಷಣವೇ ಯಾಂಗ್ಜೆ ಸೇತುವೆ ಬಳಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇಷ್ಟೇ ಅಲ್ಲ ಸೇತುವೆ ಬಳಿ ಇಟ್ಟಿರುವ ಸಿಸಿಟಿವಿ ಕ್ಯಾಮರ ಪರಿಶೀಲಿಸಿದ್ದಾರೆ.

ಅಂದು ಆನೆ, ನಿನ್ನೆ ಹಸು, ಇವತ್ತು ಚಿರತೆ, ಪ್ರಾಣಿಹಿಂಸೆಯ ಪರಮಾವಧಿ

ಈ ವೇಳೆ ರಾತ್ರಿ ವೇಳೆ ವ್ಯಕ್ತಿಯೋರ್ವ ಸೇತುವೆಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದೃಶ್ಯ ಪೊಲೀಸರ ಕಣ್ಣಿಗೆ ಬಿದ್ದಿದೆ. ಸೂಕ್ತ ಬೆಳಕು ಇಲ್ಲದ ಕಾರಣ ದಶ್ಯದಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಮಾತ್ರ ಕಾಣಿಸುತ್ತಿದೆ. ಆತನ ಮುಖ ಕಾಣುತ್ತಿಲ್ಲ. ಇನ್ನು ಆತ್ಮಹತ್ಯೆ  ಕೆಲ ಹೊತ್ತಲ್ಲಿ ನಾಯಿಯೊಂದು ಸೇತುವೆ ಒಂದು ಬಿದಿಯಿಂದ ಇನ್ನೊಂದು ಬದಿಗೆ ತಿರುಗಾಡುತ್ತಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಸಿಸಿಟಿವಿ ದೃಶ್ಯದ ಮೂಲಕ ಮಾಲೀಕನಿಗಾಗಿ ನಾಯು ಕಳೆದೊಂದು ವಾರದಿಂದ ಸೇತುವೆ ಮೇಲೆ ಆಹಾರವಿಲ್ಲದೆ ಕಾಯುತ್ತಿದೆ ಎಂದು ಪೊಲೀಸರು ಮನಗಂಡಿದ್ದಾರೆ.

ಇತ್ತ ನಾಯಿಯನ್ನು ಮನೆಗೆ ಕರೆದೊಯ್ಯ ಕ್ಸು ಅದೆಷ್ಟೇ ಅಹಾರ ನೀಡಿದರೂ ನಾಯಿ ತಿನ್ನಲೇ ಇಲ್ಲ. ಸಂಜೆಯಾಗುತ್ತದ್ದಂತೆ ನಾಯಿ ಕ್ಸು ಮನೆಯಿಂದ ಕಾಣೆಯಾಗಿದೆ. ಬೇಸರಗೊಂಡ ಕ್ಸು ತಕ್ಷಣವೇ ಸೇತುವೆ ಬಳಿ ಬಂದು ಪರಿಶೀಲಿಸಿದ್ದಾನೆ. ಆದರೆ ನಾಯಿ ಅಲ್ಲಿ ಇರಲಿಲ್ಲ. ಕಾರಿನಲ್ಲಿ ಕರೆದೊಯ್ದ ಕಾರಣ ನಾಯಿಗೆ ದಾರಿ ತಿಳಿಯದಾಗಿದೆ. ಇದೀಗ ನಾಯಿ ನಾಪತ್ತೆಯಾಗಿದೆ. ಮತ್ತೆ ವಿಡಿಯೋ ಮೂಲಕ ಕ್ಸು, ಮನವಿ ಮಾಡಿದ್ದಾನೆ. ನಾಯಿ ಫೋಟೋ ವಿಡಿಯೋ ಹಾಕಿ, ಈ ನಾಯಿ ಎಲ್ಲೇ ಕಂಡರು ತಕ್ಷಣವೇ ನನಗೆ ಮಾಹಿತಿ ನೀಡಿ ಎಂದು ಬೇಡಿಕೊಂಡಿದ್ದಾನೆ.

ಮಾಲೀಕನಿಗಾಗಿ ಅನ್ನ ನೀರು ಬಿಟ್ಟು ಒಂದು ವಾರ ಸೇತುವ ಮೇಲೆ ಕಾದ ನಾಯಿ ಯಾವತ್ತೂ ಬೀದಿ ಬದಿಯಲ್ಲಿ ಇರಬಾರದು. ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. ದಯವಿಟ್ಟು ನಾಯಿ ಎಲ್ಲೆ ಕಂಡರೂ ಮಾಹಿತಿ ನೀಡಿ ಎಂದು ಬೇಡಿದ್ದಾನೆ. ಆದರೆ ಅತ್ತ ಮಾಲೀಕನಿಗಾಗಿ ಕಾದ ನಾಯಿಗೆ ಮಾಲೀಕ ಬರಲಿಲ್ಲ. ಇತ್ತ ಸೂರು ಇಲ್ಲದಾಯಿತು.