ಗುಹವಾಟಿ(ಜೂ. 08)  ಭಾರತದಲ್ಲಿ ಮತ್ತೆ ಮತ್ತೆ ಇಂಥ ಘಟನೆಗಳು ನಡೆಯುತ್ತಲೇ ಇವೆ.  ಚಿರತೆಯನ್ನು ಕೊಂದು  ಅದರ ಹಲ್ಲುಗಳು ಮತ್ತು ಉಗುರುಗಳನ್ನು ಗುಹವಾಟಿಯ ಸ್ಥಳೀಯರು  ಕಿತ್ತಿದ್ದಾರೆ.

ಕೇರಳದಲ್ಲಿ ಗರ್ಭಿಣಿ ಆನೆಯನ್ನು ಪಟಾಕಿ ತಿನ್ನಿಸಿ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು.  ಹಿಮಾಚಲ ಪ್ರದೇಶದಲ್ಲಿ ಆಕಳಿಗೂ ಪಟಾಕಿ ತಿನ್ನಿಸಿದ್ದರು. ಮಹಾರಾಷ್ಟ್ರದಲ್ಲಿ ನಾಯಿಯನ್ನು ಬೈಕ್ ಹಿಂದೆ ಕಟ್ಟಿ ಎಳೆದಿದ್ದರು.

ಆನೆ ಸಾವನ್ನಪ್ಪಿದ್ದು ಇಡೀ ಮನುಕುಲವೇ ತಲೆತಗ್ಗಿಸುವಂತೆ ಮಾಡಿದ್ದರೆ, ಹಸುವನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿತ್ತು. ನಾಯಿ ಎಳೆದವರ ಮೇಲೆ ಕೇಸು ದಾಖಲಾಗಿದೆ.

ಪಾಪದ ಪ್ರಾಣಿಗಳ ಮೇಲೆ ಮೃಗೀಯ ವರ್ತನೆ, ನೊಂದು ಪ್ರಾಣ ಬಿಟ್ಟ ಆನೆ

ಒಬ್ಬ ಅಪ್ರಾಪ್ತನೂ ಸೇರಿದಂತೆ ಆರು ಜನರ ತಂಡ ಚಿರತೆಯನ್ನು ಸಾಯಿಸಿದೆ. ಚಿರತೆಯ ವಸಡು ಮತ್ತು ಉಗುರುಗಳನ್ನು ಕೀಳಲಾಗಿದೆ. ಫತಾಸಿಲ್ ಸಂರಕ್ಷಿತ ಅರಣ್ಯ ಪ್ರದೇಶದಿಂದ ಚಿರತೆ ತಪ್ಪಿಸಿಕೊಂಡು ಕತಾಭಾರಿ ಪಹಾರ್ ಪ್ರದೇಶದ ಹಳ್ಳಿಗೆ ಬಂದಿತ್ತು.  ಈ ವೇಳೆ ಚಿರತೆಯನ್ನು ಅಟ್ಟಿಸಿಕೊಂಡು ಹೋಗಿ ಹತ್ಯೆ ಮಾಡಿದ್ದಲ್ಲದೇ ಅದರ ಉಗುರುಗಳನ್ನು ಕೀಳಲಾಗಿದೆ.

ಚಿರತೆಯ ಸಾವಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಬಂಧಿಸಿದ್ದಾರೆ. 

ಇಂಗ್ಲಿಷ್ ನಲ್ಲಿಯೂ ಓದಿ