ಇಸ್ರೇಲ್ ಇರಾನ್ ಯುದ್ಧದಲ್ಲಿ ಪ್ರಾಥಮಿಕ ಶಾಲೆ ಮೇಲೆ ಬಿದ್ದ ಮಿಸೈಲ್, 36 ಮಕ್ಕಳು ಮೃತ, ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿ ಆರಂಭಿಸಿದ್ದರೆ, ಇತ್ತ ಇರಾನ್ ಅಮೆರಿಕಾ ಸೇನಾ ನೆಲೆಗಳನ್ನು ಟಾರ್ಗೆಟ್ ಮಾಡಿ ಪ್ರತಿದಾಳಿ ನಡೆಸಿ ಮಧ್ಯ ಪ್ರಾಚ್ಯದೇಶಗಳನ್ನೇ ನಡುಗಿಸಿದೆ.
ಇರಾನ್ (ಫೆ.28) ಇರಾನ್ ಹಾಗೂ ಇಸ್ರೇಲ್ ಕದನ ತೀವ್ರಗೊಂಡಿದೆ. ಇತ್ತ ಅಮೆರಿಕ ಆರಂಭಿಸಿದ ಯುದ್ಧದಲ್ಲಿ ಇಸ್ರೇಲ್ ಕೂಡ ಸೇರಿಕೊಂಡಿದ್ದು ರಣಭೀಕರ ಪರಿಸ್ಥಿತಿಗೆ ಜಾರುತ್ತಿದೆ. ಇರಾನ್ ನಾಯಕ ಕಮಿನೇನಿ ನಿವಾಸ ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿದೆ. ನಿವಾಸ ಪಕ್ಕದಲ್ಲೇ ಸ್ಫೋಟಗಳು, ಮಿಸೈಲ್ ದಾಳಿ ನಡೆದಿದೆ. ಆದರೆ ಕಮಿನೇನಿ ದಾಳಿ ಸುಳಿವು ಅರಿತಿದ್ದ ಕಾರಣ ಟೆಹರಾನ್ ತೊರೆದು ರಹಸ್ಯ ಸ್ಥಳದಲ್ಲಿದ್ದಾರೆ. ಅಮೆರಿಕ ಬೆನ್ನಲ್ಲೇ ಇಸ್ರೇಲ್ ಮಿಸೈಲ್ ದಾಳಿ ನಡೆಸಿದೆ. ಈ ಪೈಕಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ಪ್ರಾಥಮಿಕ ಶಾಲೆಯೊಂದು ಧ್ವಂಸಗೊಂಡಿದೆ. ಈ ದಾಳಿಯಲ್ಲಿ 36 ಮಕ್ಕಳು ಮೃತಪಟ್ಟಿರುವುದಾಗಿ ಇರಾನ್ ಮಾಧ್ಯಮ ವರದಿ ಮಾಡಿದೆ
ಇರಾನ್‌ನ ಪ್ರಾಥಮಿಕ ಶಾಲೆ ಮೇಲೆ ಇಸ್ರೇಲ್ ಮಿಸೈಲ್ ಹಿಟ್ ಮಾಡಿದೆ. ಮಿಸೈಲ್ ದಾಳಿಯಾಗುತ್ತಿದ್ದಂತೆ ಶಾಲೆಯ ಕೆಲ ಭಾಗ ಧ್ವಂಸಗೊಂಡಿದೆ. ಈ ದಾಳಿಯಲ್ಲಿ ಮೃತಪಟ್ಟವರ ಮಾಹಿತಿ ಲಭ್ಯವಾಗಿಲ್ಲ. ಇರಾನ್‌ನಲ್ಲಿ ಕಳೆದೆರಡು ದಿನಗಳಿಂದ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಇದೇ ವೇಳೆ ದಾಳಿ ಸಂಭವ ಹೆಚ್ಚಿರುವ ಪ್ರದೇಶಗಳ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.ಈ ಪೈಕಿ ಶಾಲಾ ಮಕ್ಕಳಿರುವಾಗಲೇ ಇಸ್ರೇಲ್ ಮಿಸೈಲ್ ದಾಳಿಯಾಗಿದೆ. ಇದರ ಪರಿಣಾಮ 36 ಮಕ್ಕಳು ಮೃತಪಟ್ಟಿದ್ದಾರೆ.
ಅಮೆರಿಕ ಸೇನಾ ನೆಲೆಗಳ ಟಾರ್ಗೆಟ್
ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಗೆ ಕೆರಳಿ ಕೆಂಡವಾಗಿರುವ ಇರಾನ್, ಇದೀಗ ಪ್ರತಿಯಾಗಿ ಅಮೆರಿಕ ಮೇಲೆ ದಾಳಿ ಮಾಡುವುದು ಅಸಾಧ್ಯವಾಗಿದೆ. ಹೀಗಾಗಿ ಮದ್ಯಪ್ರಾಚ್ಯ ದೇಶಗಳಲ್ಲಿರುವ ಅಮೆರಿಕಾ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದೆ. ಅಬುದಾಬಿ, ಬಹ್ರೈನ್ ಸೇರಿದಂತೆ ಮದ್ಯ ಪ್ರಾಚ್ಯ ಹಾಗೂ ಮಧ್ಯ ಏಷ್ಯಾಗಳಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದೆ. ಅಮೆರಿಕದ ಹಲವು ಸೇನಾ ನೆಲೆಗಳನ್ನು ಧ್ವಂಸಗೊಳಿಸಿದೆ.
ಮಧ್ಯ ಏಷ್ಯದಲ್ಲಿ ಯುದ್ದದಿಂದ ಹಲವರು ಆತಂಕ ಎದುರಿಸುತ್ತಿದ್ದಾರೆ. ಮಧ್ಯ ಏಷ್ಯಾ ದೇಶಗಳಲ್ಲಿ ಅತೀ ಹೆಚ್ಚು ಭಾರತೀಯರು ನೆಲೆಸಿದ್ದಾರೆ. ಸದ್ಯ ಇರಾನ್ ದಾಳಿ ನಡೆಸಿದ ಅಮೆರಿಕಾ ಸೇನಾ ನೆಲೆಗಳ ಪಕ್ಕದಲ್ಲೇ ಹಲವು ಭಾರತೀಯರು ವಾಸಿಸುತ್ತಿದ್ದಾರೆ. ಜೀವನ ಕಟ್ಟುಕೊಂಡಿದ್ದಾರೆ. ಇರಾನ್ ಮಧ್ಯ ಏಷ್ಯಾಗಳ ಮೇಲೆ ನಡೆಸಿದ ದಾಳಿಗೆ ಯೂರೋಪಿಯನ್ ಯೂಿಯನ್ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ಭಾರತೀಯ ನಾಗರೀಕರಿಗೆ ಇರಾನ್, ಅಬುದಾಬಿ ಸೇರಿದಂತೆ ಹಲವು ದೇಶಗಳ ರಾಯಭಾರಿ ಕಚೇರಿಯಿಂದ ಮಹತ್ವದ ಸೂಚನೆ ನೀಡಲಾಗಿದೆ. ಸುಕ್ಷಿತಕ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.


