ಪ್ರಾಣಿಗಳೇ ಗುಣದಲಿ ಮೇಲು: ಭೂಕಂಪದ ವೇಳೆ ಸ್ನೇಹಿತನ ರಕ್ಷಿಸಿದ ಶ್ವಾನ, ವಿಡಿಯೋ
- ಶ್ವಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
- ತನ್ನ ಜೀವದ ಹಂಗು ತೊರೆದು ಗೆಳೆಯನ ರಕ್ಷಣೆ
- 2013 ರಲ್ಲಿ ನಡೆದ ಭೂಕಂಪನದ ವಿಡಿಯೋ ಈಗ ವೈರಲ್
ಸಾಮಾನ್ಯವಾಗಿ ಭೂಕಂಪ (Earth quake) ಸೇರಿದಂತೆ ಇತರ ಹವಾಮಾನ ವೈಪರೀತ್ಯವಾದಾಗ ಎಲ್ಲರೂ ಮೊದಲಿಗೆ ತಮ್ಮ ಜೀವ ಉಳಿಸಿಕೊಳ್ಳಲು ಓಡುವುದೇ ಹೆಚ್ಚು. ಆದರೆ ಇಲ್ಲೊಂದು ಶ್ವಾನ ತನ್ನ ಜೀವದ ಭಯವನ್ನು ತೊರೆದು ಹಿಂದೆ ಬಿದ್ದ ಸ್ನೇಹಿತನ (Friend) ರಕ್ಷಣೆಗೆ ಮುಂದಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ವಿಡಿಯೋದಲ್ಲಿ ಕಾಣಿಸುವಂತೆ ಒಮ್ಮೆಲೇ ಭೂಕಂಪನವಾಗಿದ್ದು, ಕಟ್ಟಡಗಳು ಅಲುಗಾಡಲು ಆರಂಭಿಸುತ್ತವೆ. ಬಿಲ್ಡಿಂಗ್ ಒಳಗೆ ಮೇಲಿಟ್ಟ ವಸ್ತುಗಳೆಲ್ಲಾ ಕೆಳಗೆ ಬೀಳುತ್ತಿದ್ದು, ಎಲ್ಲರೂ ಕಟ್ಟಡದಿಂದ ಹೊರಗೆ ಓಡಿ ಹೋಗಿ ಜೀವ ಉಳಿಸಿಕೊಳ್ಳಲು ನೋಡುತ್ತಾರೆ. ಈ ವೇಳೆ ಮನೆಯೊಳಗಿದ್ದ ಪುಟ್ಟ ಶ್ವಾನವೂ ಕೂಡ ಹೊರಗೋಡುತ್ತದೆ. ಆದರೆ ಹೊರಗೋಡಿದ ಕ್ಷಣದಲ್ಲೇ ಮತ್ತೆ ವಾಪಸ್ ಬಂದ ಈ ಶ್ವಾನ ಕ್ಷಣದಲ್ಲೇ ಮತ್ತೊಂದು ಶ್ವಾನದೊಂದಿಗೆ (Dog) ಮತ್ತೆ ಸುರಕ್ಷಿತ ಸ್ಥಳದತ್ತ ಓಡುತ್ತದೆ.
ಗುಂಡಿ ತೋಡಿ ಮಣ್ಣುಮುಚ್ಚಿ ಅಗಲಿದ ಮಿತ್ರನಿಗೆ ಅಂತಿಮ ವಿದಾಯ... ಶ್ವಾನಗಳ ವಿಡಿಯೋ ವೈರಲ್
ಅಂದರೆ ಭೂಕಂಪದ ವೇಳೆ ಹೊರಗೆ ಬಂದ ಶ್ವಾನಕ್ಕೆ ತನ್ನ ಗೆಳೆಯ ಒಳಗೆ ಬಾಕಿ ಆಗಿರುವುದು ನೆನಪಾಗುತ್ತದೆ. ಹೀಗಾಗಿ ಮತ್ತೆ ವಾಪಸ್ ಬರುವ ಅದು ಗೆಳೆಯನನ್ನು ಎಚ್ಚರಿಸಿ ಹೊರಗೆ ಕರೆದೊಯ್ಯುತ್ತದೆ. ಅಕ್ಟೋಬರ್ 15, 2013 ರ ಬೆಳಗ್ಗೆ ಸಂಭವಿಸಿದ ಭೂಕಂಪನವೊಂದರ ವಿಡಿಯೋ ಇದಾಗಿದ್ದು, ಈಗ ವೈರಲ್ ಆಗಿದೆ. 21 ಸೆಕೆಂಡ್‌ಗಳ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ದಫಿಜೆನ್ (@TheFigen) ಎಂಬುವವರು ಪೋಸ್ಟ್ ಮಾಡಿದ್ದು, ಲಕ್ಷಾಂತರ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ತನ್ನ ಜೀವದ ಹಂಗು ತೊರೆದು ಗೆಳೆಯನ ರಕ್ಷಣೆಗೆ ಮುಂದಾದ ಶ್ವಾನದ ಮುದ್ದಾದ ನಡೆಗೆ ಎಲ್ಲರ ಹೃದಯ ತುಂಬಿ ಬಂದಿದೆ.
ಅತ್ಯಂತ ಬುದ್ಧಿವಂತ ಹಾಗೂ ಸ್ವಾಮಿನಿಷ್ಠ ಪ್ರಾಣಿಗಳಾಗಿರುವ ಶ್ವಾನಗಳು ಮನುಷ್ಯನ ಅತ್ಯುತ್ತಮ ಸ್ನೇಹಿತರು. ಮನುಷ್ಯ ಹಾಗೂ ಶ್ವಾನದ ಸ್ನೇಹ ಮತ್ತೆ ಮತ್ತೆ ಸಾಬೀತಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕ್ಯಾನ್ಸರ್ ಪೀಡಿತ ಮಹಿಳೆಯೊಬ್ಬರು ಧೀರ್ಘಕಾಲದ ಬಳಿಕ ತನ್ನ ಶ್ವಾನವನ್ನು ಭೇಟಿಯಾದಾಗ ಅದು ಸ್ಪಂದಿಸಿದ ರೀತಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತುಂಬಾ ದಿನಗಳ ನಂತರ ತನ್ನ ಒಡತಿಯನ್ನು ನೋಡಿದ ಶ್ವಾನದ ಸಂತಸಕ್ಕೆ ಪಾರವೇ ಇಲ್ಲದಾಗಿತ್ತು. ತನ್ನ ಒಡತಿಯನ್ನು ನೋಡಿದ ಕೂಡಲೇ ಶ್ವಾನ ಆಕೆಯ ಮೇಲೆ ಹತ್ತಿ ಮುಖ ಕಿವಿ ಕೆನ್ನೆಯನ್ನೆಲ್ಲಾ ನಾಲಗೆಯಿಂದ ನೆಕ್ಕಿ ತನ್ನ ಪ್ರೀತಿಯನ್ನು ತೋರಿಸಿದೆ. ಈ ವಿಡಿಯೋ ನೋಡುಗರ ಹೃದಯ ತುಂಬಿ ಬರುವಂತೆ ಮಾಡುತ್ತಿದೆ.
ಪ್ರಾಣಿಗಳಿಲ್ಲದ ಜಗತ್ತು ಎಂದಿಗೂ ಅಪೂರ್ಣವೇ ಈ ಮಾತನ್ನು ಎಂದಿಗೂ ತಿರಸ್ಕರಿಸಲಾಗದು. ನೀವೇನಾದರೂ ಶ್ವಾನ ಅಥವಾ ಇತರ ಸಾಕುಪ್ರಾಣಿಗಳನ್ನು ಹೊಂದಿದ್ದರೆ ನಿಮಗೆ ಅವುಗಳ ಯಾವುದೇ ಷರತ್ತು ಇಲ್ಲದ ಸ್ವಾರ್ಥವಿಲ್ಲದ ಪ್ರೀತಿಯ ಅನುಭವ ಆಗಿರಬಹುದು. ಈ ಭಾವುಕ ವಿಡಿಯೋ ಪ್ರಾಣಿ ಪ್ರೀತಿಗೆ ಒಂದು ಅತ್ಯುತ್ತಮ ನಿದರ್ಶನವಾಗಿದೆ.
ತನ್ನ ಮರಿಗಳಿಗೆ ಆಹಾರ ನೀಡಿದ ಮಹಿಳೆಗೆ ಥ್ಯಾಂಕ್ಸ್ ಹೇಳಿದ ತಾಯಿ ಶ್ವಾನ
ಆಸ್ಪತ್ರೆಗೆ ದಾಖಲಾದ 40 ದಿನಗಳ ಬಳಿಕ ನರ್ಸ್ ಕ್ಯಾನ್ಸರ್ ಪೀಡಿತ ಮರಿಯಾ(Maria) ಅವರನ್ನು ವೀಲ್‌ಚೇರ್‌ನಲ್ಲಿ ಕೂರಿಸಿಕೊಂಡು ಈಗಾಗಲೇ ಆಸ್ಪತ್ರೆ ಮುಂದೆ ಆಕೆಗಾಗಿ ಕಾಯುತ್ತ ನಿಂತಿರುವ ಶ್ವಾನದ ಬಳಿ ಕರೆದುಕೊಂಡು ಬರುತ್ತಾರೆ. ಈ ವೇಳೆ ಅಮೊರಾ(Amora) ಹೆಸರಿನ ಶ್ವಾನ ಒಡತಿ ಮರಿಯಾಳತ್ತ ಬಂದು ಆಕೆಯನ್ನು ಮುದ್ದಾಡುತ್ತದೆ. ತನ್ನ ಖುಷಿಯನ್ನು ಕಂಟ್ರೋಲ್ ಮಾಡಲಾಗದ ಶ್ವಾನ ಆಕೆಯ ಮೇಲೇರಿ ಆಕೆಯ ಕೆನ್ನೆ, ಮೊಗ, ಕಿವಿಯನ್ನೆಲ್ಲಾ ಮೂಸಿ ನೆಕ್ಕಿ ಆಕೆಯನ್ನು ಪ್ರೀತಿ ಮಾಡುತ್ತದೆ. ಈ ವೇಳೆ ಶ್ವಾನದ ಪ್ರೀತಿಯನ್ನು ನೋಡಿ ಮರಿಯಾ ಕೂಡ ಬಿಕ್ಕಳಿಸುತ್ತಾರೆ. ಸಂತೋಷ ಹಾಗೂ ಭಾವುಕರಾಗುವ ಅವರು ಬಿಕ್ಕಳಿಸುತ್ತಾರೆ.