ತನ್ನ ಮರಿಗಳಿಗೆ ಆಹಾರ ನೀಡಿದ ಮಹಿಳೆಗೆ ಥ್ಯಾಂಕ್ಸ್ ಹೇಳಿದ ತಾಯಿ ಶ್ವಾನ
- ನಾಯಿ ಮರಿಗಳಿಗೆ ಆಹಾರ ನೀಡಿದ ಮಹಿಳೆ
- ಮಹಿಳೆ ಹಿಂದೆ ಮುಂದೆ ಸುತ್ತಾಡಿ ಧನ್ಯವಾದ ಹೇಳಿದ ತಾಯಿ
- ಭಾವುಕಗೊಳಿಸುವ ವಿಡಿಯೋ ವೈರಲ್
ತನ್ನ ಮರಿಗಳಿಗೆ ಆಹಾರ ನೀಡಿದ ಮಹಿಳೆಗೆ ತಾಯಿ ಶ್ವಾನವೊಂದು ಹಿಂದೆ ಮುಂದೆ ಸುಳಿದಾಡಿ ಧನ್ಯವಾದ ಸಲ್ಲಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶ್ವಾನಗಳು ಮನುಷ್ಯನ ಉತ್ತಮ ಸ್ನೇಹಿತರು. ಒಂದು ತುತ್ತು ಆಹಾರ ನೀಡಿದರು ಸರಿ ಜೀವನಪೂರ್ತಿ ನೆನಪಿಟ್ಟುಕೊಳ್ಳುವ ಈ ಶ್ವಾನಗಳು ಸ್ವಾಮಿನಿಷ್ಠೆಗೆ ಬಹಳ ಹೆಸರುವಾಸಿ. ಶ್ವಾನಗಳು ಮನುಷ್ಯರೊಂದಿಗೆ ಮಕ್ಕಳೊಂದಿಗೆ ಆಟವಾಡುವ ಮುದ್ದಾಡುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೀವು ಈಗಾಗಲೇ ನೋಡಿರಬಹುದು. ಇದು ಕೂಡ ಅಂತಹದ್ದೇ ವಿಡಿಯೋವಾಗಿದ್ದು, ಇದರಲ್ಲಿ ಆಹಾರ ನೀಡಿದ ಮಹಿಳೆಗೆ ಶ್ವಾನ ಕೃತಜ್ಞತೆ ಹೇಳುತ್ತಿದೆ.
ಈ ವಿಡಿಯೋವನ್ನು ನಾಲ್ಕು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಅಲ್ಲದೇ ತಾಯಿ ಶ್ವಾನದ ಈ ಕೃತಜ್ಞತೆ ತುಂಬಿದ ನೋಟಕ್ಕೆ ಜನ ಫಿದಾ ಆಗಿದ್ದಾರೆ. ಯೋಧ ಫಾರೆವರ್ (Yoda4ever) ಎಂಬ ಟ್ವಿಟ್ಟರ್ ಪೇಜ್‌ನಿಂದ ಮಾರ್ಚ್ 8ರಂದು ಈ ವಿಡಿಯೋ ಪೋಸ್ಟ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ನಾಯಿ ಮರಿಗಳಿಗೆ ಆಹಾರ ನೀಡುತ್ತಿದ್ದಾರೆ. ಇದನ್ನು ನೋಡಿದ ತಾಯಿ ಶ್ವಾನ ಮಹಿಳೆಯ ಹಿಂದೆ ಮುಂದೆ ಸುತ್ತಾಡಿ ತನ್ನ ಬಾಲವನ್ನು ಅಲ್ಲಾಡಿಸುತ್ತಾ ದೇಹವನ್ನು ಬಾಗಿಸಿ ಕೃತಜ್ಞತೆ ಸಲ್ಲಿಸುತ್ತದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಪ್ರೀತಿ ತುಂಬಿದ ಇಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ.
ಪ್ರಾಣಿಗಳು ಎಂದರೆ ಬಹುತೇಕರು ಬುದ್ಧಿ ಇಲ್ಲದ ಭಾವನೆಗಳಿಲ್ಲದ ಜೀವಿಗಳು ಎಂದು ಬಹುತೇಕ ಮಾನವರು ಭಾವಿಸುವುದುಂಟು. ಆದರೆ ಮನುಷ್ಯರ ಈ ಊಹೆಯನ್ನು ಅನೇಕ ಬಾರಿ ಪ್ರಾಣಿಗಳು ಸುಳ್ಳು ಮಾಡಿವೆ. ನಮಗೂ ಭಾವನೆಗಳಿವೆ. ನಮಗೂ ಗೌರವಯುತವಾಗಿ ಬದುಕಲು ಅವಕಾಶ ನೀಡಿ ಎಂದು ಹೇಳುವಂತಿರುತ್ತವೆ ಪ್ರಾಣಿಗಳ ವರ್ತನೆಗಳು. ಅದರಲ್ಲೂ ಶ್ವಾನಗಳು ಮನುಷ್ಯನ ಆತ್ಮೀಯ ಸ್ನೇಹಿತ ಎಂದರೆ ತಪ್ಪಾಗಲಾರದು. ತನಗೆ ಒಂದು ತುತ್ತು ಊಟ ಕೊಟ್ಟವನ ಎಂದೂ ಮರೆಯದ ಈ ಶ್ವಾನಗಳು ಸ್ವಾಮಿನಿಷ್ಠೆಗೆ ಹೆಸರುವಾಸಿ. ಶ್ವಾನಗಳು ಮನುಷ್ಯನ ರಕ್ಷಿಸಿದಂತಹ ಹಲವು ಘಟನೆಗಳನ್ನು ನೀವು ಈಗಾಗಲೇ ನೋಡಿರಬಹುದು. ಕೆಲದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ ಶ್ವಾನಗಳು ತಮ್ಮ ಮೃತ ಗೆಳೆಯನಿಗೆ ಮನುಷ್ಯರೂ ಮಾಡುವಂತೆಯೇ ಅಂತಿಮ ಸಂಸ್ಕಾರವನ್ನು ನಡೆಸಿದ್ದು, ಇದನ್ನು ನೋಡಿದ ಜನ ಇವುಗಳೇನು ಪ್ರಾಣಿಗಳೋ ಅಥವಾ ಪ್ರಾಣಿವೇಷದಲ್ಲಿರುವ ಮನುಷ್ಯರೋ ಎಂದು ಗೊಂದಲಕ್ಕೊಳಗಾಗುತ್ತಿದ್ದಾರೆ.
ಮರಳಿ ಸಿಕ್ಕ ಬೀದಿ ನಾಯಿಗೆ ರಾಜಮರ್ಯಾದೆ... ಆರತಿ ಎತ್ತಿ ಸ್ವಾಗತಿಸಿದ ಜನ
ಐಎಎಸ್ ಅಧಿಕಾರಿ (IAS officer) ಅವನೀಶ್ ಶರನ್( Awanish Sharan) ಅವರು ಈ ವಿಡಿಯೋವನ್ನು ಫೆಬ್ರವರಿ 28ರಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, 'ಇವುಗಳು ಪ್ರಾಣಿಗಳೋ ಹೇಗೆ' ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ವಿಡಿಯೋವನ್ನು 1 ಲಕ್ಷದ 64 ಸಾವಿರ ಮಂದಿ ವೀಕ್ಷಿಸಿದ್ದಾರೆ. 45 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಆರಕ್ಕಿಂತ ಹೆಚ್ಚಿರುವ ಶ್ವಾನಗಳು ತಮ್ಮ ಮೃತ ಸ್ನೇಹಿತನನ್ನು ಮಣ್ಣು ಮಾಡುತ್ತಿದ್ದಾರೆ. ಜೊತೆಯಾಗಿ ಕೈಗಳಿಂದ ಗುಂಡಿ ತೋಡುವ ಈ ಶ್ವಾನಗಳು ಅದರಲ್ಲಿ ಮೃತ ಶ್ವಾನವನ್ನು ಮಲಗಿಸಿ ಮಣ್ಣು ಮುಚ್ಚುತ್ತಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ.
ಗುಂಡಿ ತೋಡಿ ಮಣ್ಣುಮುಚ್ಚಿ ಅಗಲಿದ ಮಿತ್ರನಿಗೆ ಅಂತಿಮ ವಿದಾಯ... ಶ್ವಾನಗಳ ವಿಡಿಯೋ ವೈರಲ್
ಶ್ವಾನಗಳು ಮನುಷ್ಯನ ಬೆಸ್ಟ್ ಫ್ರೆಂಡ್ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇಂಗ್ಲೆಂಡ್‌ನ ನ್ಯೂ ಹಂಪ್‌ಶೈರ್‌ನಲ್ಲಿ ನಾಯಿಯೊಂದು ತನ್ನ ಮಾಲೀಕ ಅಪಾಯದಲ್ಲಿರುವುದನ್ನು ತಿಳಿದು ಆ ಸ್ಥಳಕ್ಕೆ ಧಾವಿಸಿ ಆತನ ಜೀವ ಉಳಿಸಿದ ಘಟನೆ ಕೆಲದಿನಗಳ ಹಿಂದೆ ನಡೆದಿತ್ತು.