Asianet Suvarna News Asianet Suvarna News

ಗುಂಡಿ ತೋಡಿ ಮಣ್ಣುಮುಚ್ಚಿ ಅಗಲಿದ ಮಿತ್ರನಿಗೆ ಅಂತಿಮ ವಿದಾಯ... ಶ್ವಾನಗಳ ವಿಡಿಯೋ ವೈರಲ್‌

  • ಅಗಲಿದ ಮಿತ್ರನಿಗೆ ಅಂತಿಮ ವಿದಾಯ
  • ಶ್ವಾನಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌
  • ಗುಂಡಿ ತೋಡಿ ಮಣ್ಣು ಮುಚ್ಚಿ ಅಂತಿಮ ವಿದಾಯ
  • ಶ್ವಾನಗಳಿಂದಲೇ ಮೃತ ಶ್ವಾನದ ಅಂತ್ಯಸಂಸ್ಕಾರ
dogs bidding an emotional goodbye to their friend watch emotional video akb
Author
Bangalore, First Published Mar 3, 2022, 1:03 PM IST

ಸಾಮಾಜಿಕ ಜಾಲತಾಣದಲ್ಲಿ ಶ್ವಾನಗಳ ವಿಡಿಯೋವೊಂದು ವೈರಲ್ ಆಗಿದ್ದು, ಕಣ್ಣೀರು ತರಿಸುವಂತಿದೆ. ವಿಡಿಯೋದಲ್ಲಿ ಶ್ವಾನವೊಂದು ಮೃತಪಟ್ಟಿದ್ದು, ಉಳಿದ ನಾಯಿಗಳೆಲ್ಲ ಜೊತೆ ಸೇರಿ ಆ ಶ್ವಾನದ ಅಂತ್ಯಸಂಸ್ಕಾರ ಮಾಡುತ್ತಾರೆ. ಗುಂಡಿ ತೋಡುವ ಶ್ವಾನಗಳು(dog) ಅದರೊಳಗೆ ತಮ್ಮ ಮೃತಪಟ್ಟ ಸ್ನೇಹಿತನನ್ನು ಮಲಗಿಸಿ ಮಣ್ಣು ಮುಚ್ಚಿ ಅಗಲಿದ ಸ್ನೇಹಿತನಿಗೆ ಅಂತಿಮ ವಿದಾಯ ಹೇಳುತ್ತಾರೆ. ಈ ವಿಡಿಯೋ ನೋಡುಗರ ಕಣ್ಣಂಚಿನಲ್ಲಿ ನೀರು ಜಿನುಗುವಂತೆ ಮಾಡುತ್ತಿದೆ. ಹೌದು ಈ ವಿಡಿಯೋ ನೋಡಿದರೆ ಅಚ್ಚರಿಯ ಜೊತೆ ವಿಚಿತ್ರ ಎನಿಸದಿರದು. 

ಏಕೆಂದರೆ ಪ್ರಾಣಿಗಳು ಎಂದರೆ ಬಹುತೇಕರು ಬುದ್ಧಿ ಇಲ್ಲದ ಭಾವನೆಗಳಿಲ್ಲದ ಜೀವಿಗಳು ಎಂದು ಬಹುತೇಕ ಮಾನವರು ಭಾವಿಸುವುದುಂಟು. ಆದರೆ ಮನುಷ್ಯರ ಈ ಊಹೆಯನ್ನು ಅನೇಕ ಬಾರಿ ಪ್ರಾಣಿಗಳು ಸುಳ್ಳು ಮಾಡಿವೆ. ನಮಗೂ ಭಾವನೆಗಳಿವೆ. ನಮಗೂ ಗೌರವಯುತವಾಗಿ ಬದುಕಲು ಅವಕಾಶ ನೀಡಿ ಎಂದು ಹೇಳುವಂತಿರುತ್ತವೆ ಪ್ರಾಣಿಗಳ ವರ್ತನೆಗಳು. ಅದರಲ್ಲೂ ಶ್ವಾನಗಳು ಮನುಷ್ಯನ ಆತ್ಮೀಯ ಸ್ನೇಹಿತ ಎಂದರೆ ತಪ್ಪಾಗಲಾರದು. ತನಗೆ ಒಂದು ತುತ್ತು ಊಟ ಕೊಟ್ಟವನ ಎಂದೂ ಮರೆಯದ ಈ ಶ್ವಾನಗಳು ಸ್ವಾಮಿನಿಷ್ಠೆಗೆ ಹೆಸರುವಾಸಿ. ಶ್ವಾನಗಳು ಮನುಷ್ಯನ ರಕ್ಷಿಸಿದಂತಹ ಹಲವು ಘಟನೆಗಳನ್ನು ನೀವು ಈಗಾಗಲೇ ನೋಡಿರಬಹುದು. ಆದರೆ ಇಲ್ಲಿ ಕಾಣಿಸುವ ವಿಡಿಯೋದಲ್ಲಿ ಶ್ವಾನಗಳು ತಮ್ಮ ಮೃತ ಗೆಳೆಯನಿಗೆ ಮನುಷ್ಯರೂ ಮಾಡುವಂತೆಯೇ ಅಂತಿಮ ಸಂಸ್ಕಾರವನ್ನು ನಡೆಸಿದ್ದು, ಇದನ್ನು ನೋಡಿದ ಜನ ಇವುಗಳೇನು ಪ್ರಾಣಿಗಳೋ ಅಥವಾ ಪ್ರಾಣಿವೇಷದಲ್ಲಿರುವ ಮನುಷ್ಯರೋ ಎಂದು ಗೊಂದಲಕ್ಕೊಳಗಾಗುತ್ತಿದ್ದಾರೆ.


ಐಎಎಸ್ ಅಧಿಕಾರಿ (IAS officer)  ಅವನೀಶ್ ಶರನ್( Awanish Sharan) ಅವರು ಈ ವಿಡಿಯೋವನ್ನು ಫೆಬ್ರವರಿ 28ರಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, 'ಇವುಗಳು ಪ್ರಾಣಿಗಳೋ ಹೇಗೆ' ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ವಿಡಿಯೋವನ್ನು 1 ಲಕ್ಷದ 64 ಸಾವಿರ ಮಂದಿ ವೀಕ್ಷಿಸಿದ್ದಾರೆ. 45 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಆರಕ್ಕಿಂತ ಹೆಚ್ಚಿರುವ ಶ್ವಾನಗಳು ತಮ್ಮ ಮೃತ ಸ್ನೇಹಿತನನ್ನು ಮಣ್ಣು ಮಾಡುತ್ತಿದ್ದಾರೆ. ಜೊತೆಯಾಗಿ ಕೈಗಳಿಂದ ಗುಂಡಿ ತೋಡುವ ಈ ಶ್ವಾನಗಳು ಅದರಲ್ಲಿ ಮೃತ ಶ್ವಾನವನ್ನು ಮಲಗಿಸಿ ಮಣ್ಣು ಮುಚ್ಚುತ್ತಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ.

ಅಮ್ಮನ ಸಾವಿನ ನಂತರ ವೃದ್ಧ ಅಪ್ಪನಿಗೆ ನಾಯಿ ಗಿಫ್ಟ್ ನೀಡಿದ ಮಕ್ಕಳು... ಒಂಟಿ ಬದುಕಿಗೆ ಜಂಟಿಯಾದ ಶ್ವಾನ
 

ಶ್ವಾನಗಳು ಮನುಷ್ಯನ ಬೆಸ್ಟ್ ಫ್ರೆಂಡ್‌ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇಂಗ್ಲೆಂಡ್‌ನ ನ್ಯೂ ಹಂಪ್‌ಶೈರ್‌ನಲ್ಲಿ ನಾಯಿಯೊಂದು ತನ್ನ ಮಾಲೀಕ ಅಪಾಯದಲ್ಲಿರುವುದನ್ನು ತಿಳಿದು ಆ ಸ್ಥಳಕ್ಕೆ ಧಾವಿಸಿ ಆತನ ಜೀವ ಉಳಿಸಿದ ಘಟನೆ ಕೆಲದಿನಗಳ ಹಿಂದೆ ನಡೆದಿತ್ತು. ಟಿನ್ಸ್‌ಲಿ (Tinsley) ಹೆಸರಿನ ಜರ್ಮನ್‌ ಶೆಫರ್ಡ್ ನಾಯಿ ಹೀಗೆ ಮಾಲೀಕನ ರಕ್ಷಣೆಗೆ ಧಾವಿಸಿ ಬಂದ ಶ್ವಾನ. ಈ ಶ್ವಾನದ ಮಾಲೀಕ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾಗಿ ಪಲ್ಟಿ ಹೊಡೆದಿತ್ತು. ಪರಿಣಾಮ ಮಾಲೀಕ ಅಪಾಯಕ್ಕೊಳಗಾಗಿದ್ದಾರೆ. ಕಾರು ಹಾಗೂ ಟ್ರಕ್‌ನಲ್ಲಿದ್ದವರಿಗೂ ಈ ಅಪಘಾತದಲ್ಲಿ ಗಾಯಗಳಾಗಿತ್ತು. ಆದರೆ ಶ್ವಾನ ಟಿನ್ಸ್‌ಲಿ ನೆರವಿನಿಂದ ಅವರು ಶೀಘ್ರದಲ್ಲೇ ವೈದ್ಯಕೀಯ ಸಹಾಯ ಪಡೆಯುವಂತಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಚಿರತೆಯನ್ನೇ ಹೆದರಿಸಿ ಓಡಿಸಿದ ನಾಯಿ... ವಿಡಿಯೋ ಸಖತ್ ವೈರಲ್
 

ಇತ್ತೀಚೆಗೆ ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯ ಲೋರ್ಮಿಯಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿತ್ತು. ಇಲ್ಲಿ ನವಜಾತ ಹೆಣ್ಣು ಶಿಶುವನ್ನು ಜನ್ಮ ಕೊಟ್ಟ ತಾಯಿಯೇ ಬೀದಿಗೆಸೆದಿದ್ದಳು. ಆದರೆ ಕಂದನ ಕಂಡ ನಾಯಿಗಳು ಸುತ್ತಲೂ ನಿಂತು ರಕ್ಷಣೆ ನೀಡಿದ್ದವು. ಕೆಲ ಸಮಯದ ಬಳಿಕ ಈ ವಿಚಾರ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳ ನಡುವೆ ಇದ್ದರೂ ಈ ಮುಗ್ಧ ನವಜಾತ ಶಿಶು ಸಂಪೂರ್ಣವಾಗಿ ಆರೋಗ್ಯಕರ ಮತ್ತು ಸುರಕ್ಷಿತವಾಗಿತ್ತು. 
 

Follow Us:
Download App:
  • android
  • ios