Asianet Suvarna News Asianet Suvarna News

ಮರಣೋತ್ತರ ಪರೀಕ್ಷೆ ಮಾಡಲು ಬಂದ ವೈದ್ಯೆಗೆ ಶಾಕ್... ಹೆದರಿ ಓಡಿದ ಡಾಕ್ಟರ್

ಮರಣೋತ್ತರ ಪರೀಕ್ಷೆಯ ಕೆಲಸವನ್ನೇ ಇಷ್ಟಪಟ್ಟು ವೃತ್ತಿಯಾಗಿಸಿಕೊಂಡಿದ್ದ ವೈದ್ಯೆಯೊಬ್ಬರು ಶವದ ತಪಾಸಣೆ ವೇಳೆ ಹೌಹಾರಿ ಶವಗಾರದಿಂದ ಎದ್ದು ಕಿರುಚಿಕೊಂಡು ಓಡಿ ಹೋದಂತಹ ಘಟನೆ ಅಮೆರಿಕಾದಲ್ಲಿ ನಡೆದಿದೆ. 

doctor screeams and run away after she found snake in dead body while doing Autopsy akb
Author
First Published Dec 7, 2022, 1:12 PM IST

ಅಮೆರಿಕಾ: ಮೃತಪಟ್ಟವರ ಕುಟುಂಬಕ್ಕೆ ಮರಣೋತ್ತರ ಪರೀಕ್ಷೆಯ ಬಗ್ಗೆ ಎಂತಹ ಸಂಕಟವಿರುತ್ತದೆಯೋ ಅದೇ ರೀತಿ ಅದನ್ನು ಮಾಡಲು ಹೊರಡುವ ವೈದ್ಯರಿಗೂ ಅಷ್ಟೇ ಸಂಕಟವಿರುತ್ತದೆ. ಅದಕ್ಕೆ ಕಾರಣ ಕೆಲವೊಮ್ಮೆ ಮೃತದೇಹಗಳಿಂದ ವಾಸನೆ ಹೊರಡಲು ಶುರುವಾಗಿರುತ್ತದೆ. ಕೆಲವೊಮ್ಮೆ ದೇಹ ಸಂಪೂರ್ಣ ಕೊಳೆತಿರುತ್ತದೆ. ಮೂಗಿಗೆ ಬಾಯಿಗೆ ಮಾಸ್ಕ್ ಹಾಕಿಕೊಂಡು ವೈದ್ಯರು ಮರಣೋತ್ತರ ಪರೀಕ್ಷೆ ಮಾಡುತ್ತಾರೆ. ಆದರೆ ಇದನ್ನೇ ವೃತ್ತಿಯಾಗಿಸಿಕೊಂಡವರಿಗೆ ಅದೇನು ದೊಡ್ಡ ವಿಷಯ ಎನಿಸದು. ಹಾಗೆಯೇ ಮರಣೋತ್ತರ ಪರೀಕ್ಷೆಯ ಕೆಲಸವನ್ನೇ ಇಷ್ಟಪಟ್ಟು ವೃತ್ತಿಯಾಗಿಸಿಕೊಂಡಿದ್ದ ವೈದ್ಯೆಯೊಬ್ಬರು ಶವದ ತಪಾಸಣೆ ವೇಳೆ ಹೌಹಾರಿ ಶವಗಾರದಿಂದ ಎದ್ದು ಕಿರುಚಿಕೊಂಡು ಓಡಿ ಹೋದಂತಹ ಘಟನೆ ಅಮೆರಿಕಾದಲ್ಲಿ ನಡೆದಿದೆ. 

ಅದಕ್ಕೆ ಕಾರಣವಾಗಿದ್ದು, ಒಂದು ಹಾವು, ಬಹುಶಃ ನೀವು ಹಾವೇನಾದರೂ ಶವಗಾರಕ್ಕೆ ಬಂತಾ ಎಂದು ಊಹಿಸಿದರೆ ನಿಮ್ಮ ಊಹೆ ತಪ್ಪು ಹಾವು ಇದ್ದಿದ್ದು ಮರಣೋತ್ತರ ಪರೀಕ್ಷೆಗಾಗಿ ಬಂದ ಮೃತದೇಹದ ಒಳಗೆ. ಇದನ್ನು ನೋಡಿ ವೈದ್ಯೆ ಜೆಸ್ಸಿಕಾ ಲೊಗಾನ್ (Jessika Logan) ಹೆದರಿ ಕಿರುಚುತ್ತಾ ಶವಗಾರದಿಂದ ಓಡಿ ಹೋಗಿದ್ದಾರೆ. ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 

ESI Hospital Mismanages Dead Bodies: ಶವಾಗಾರದಲ್ಲೇ 15 ತಿಂಗಳು ಕೊಳೆತ 2 ಕೋವಿಡ್‌ ಶವ!

ಈ ವಿಚಾರವನ್ನು ಲ್ಯಾಡ್‌ಬೈಬಲ್ (LADbible) ಜೊತೆ ಅವರೇ ಹೇಳಿಕೊಂಡಿದ್ದಾರೆ.ಮೂಲತ: ನಾನು ಶವಪರೀಕ್ಷೆ ತಂತ್ರಜ್ಞ (autopsy technician) ಆಗಬೇಕೆಂದು ಬಯಸಿಲ್ಲದಿದ್ದರೂ, ನಾನು ಆ ವೃತ್ತಿಗೆ ಇಳಿದ ಮೇಲೆ ಆ ಉದ್ಯೋಗವನ್ನು ಬಹಳ ಮೆಚ್ಚುಗೆಯಿಂದ ಮಾಡುತ್ತಿದೆ. ಏಕೆಂದರೆ ಪ್ರತಿಯೊಂದು ಪ್ರಕರಣವೂ ಒಂದಕ್ಕಿಂತ ಒಂದು ಭಿನ್ನವಾಗಿತ್ತು. ನನಗೇನು ಕಲಿಯುವುದಕ್ಕೆ ಸಿಗುತ್ತಿತ್ತು. ಆದರೆ ಅಂದು ಮಾತ್ರ ನಾ ಭಾರಿ ಗಾಬರಿಗೊಂಡಿದೆ ಎಂದು ಅವರು ಹೇಳಿದ್ದಾರೆ. ಶವದೊಳಗೆ ಹಾವು ಸಿಗುವುದಕ್ಕೂ ಮೊದಲು ಶವಪರೀಕ್ಷೆ ತಜ್ಞರು ದೇಹದೊಳಗೆ ಏನಿರಬಹುದು ಎಂಬ ಬಗ್ಗೆ ಊಹೆಯೂ ಮಾಡಿರಲಿಲ್ಲವಂತೆ. ಅದನ್ನು ನೋಡಿ ನಾ ಹುಚ್ಚಿಯಾದೆ ಎಂಬುದು ಸಣ್ಣ ಮಾತಾಗುತ್ತದೆ. ನಾನಂತೂ ಅಕ್ಷರಶಃ  ಕಿರುಚುತ್ತಾ ಕೋಣೆಯಿಂದ ಓಡಿ ಬಂದೆ ಎಂದು ಅವರು ಹೇಳಿಕೊಂಡಿದ್ದಾರೆ. 

Uttar Pradesh | 7 ತಾಸು ಫ್ರೀಜರ್‌ನಲ್ಲಿದ್ದು ಬದುಕಿದ ‘ಮೃತ’ ವ್ಯಕ್ತಿ!

ಆದರೆ ಮೃತದೇಹವೂ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ(decomposed cases) ಕಾರಣ ಆ ದೇಹದೊಳಗೆ ಇದ್ದ ಹಾವು ಹೆಚ್ಚು ಕಾಲ ಬದುಕುಳಿಯಲಿಲ್ಲ ಎಂದು ಅವರು ಹೇಳಿದ್ದಾರೆ. ಸಾಮಾನ್ಯವಾಗಿ ಈ ರೀತಿ ವಿಚಿತ್ರ ಪ್ರಕರಣಗಳ ಬಗ್ಗೆ ನನಗೆ ಆಸಕ್ತಿ ಇಲ್ಲ. ಏಕೆಂದರೆ ದೇಹ ಕೇವಲ ವಿಲಕ್ಷಣವಾಗಿರುವುದಿಲ್ಲ, ಅವುಗಳ ಜೊತೆ ಕೆಲವೊಮ್ಮೆ ಮಾಂಸ ತಿನ್ನುವ ಕೀಟಗಳು ಹುಳುಗಳು ಇರುತ್ತಿದ್ದವು. ಮೃತದೇಹಗಳು ಯಾವ ಸ್ಥಿತಿಯ ಮೇಲೆ ಇರುತ್ತವೆ ಎಂಬುದರ ಮೇಲೆ ಅವುಗಳ ಮೇಲೆ ಎಂತಹ ಕೀಟಗಳು ಇರುತ್ತವೆ ಎಂಬುದನ್ನು ನಿರೀಕ್ಷಿಸಬಹುದಿತ್ತು. ಒಂದು ವೇಳೆ ಮೃತದೇಹ ಒಣಗಿದ ಅಥವಾ ಸಹಜ ಸ್ಥಿತಿಯಲ್ಲಿ ಇದ್ದರೆ ಅಲ್ಲಿ ಅಷ್ಟೊಂದು ಕೀಟಗಳು ಇರುತ್ತಿರಲಿಲ್ಲ. ಆದರೆ ಬಿಸಿ ಹಾಗೂ ಎಲ್ಲೋ ಎಸೆದಂತಹ ಮೃತದೇಹಗಳಲ್ಲಿ ಹುಳುಗಳ ಚಟುವಟಿಕೆ ಹೆಚ್ಚಾಗಿರುತ್ತಿದ್ದರು.

ಆದರೆ ಕೆಲವು ವಿಚಿತ್ರ ಸಂದರ್ಭಗಳಲ್ಲಿ ದೇಹದ ಒಳಗೆ ಹಾಗೂ ಮೇಲ್ಭಾಗದಲ್ಲಿ ಹಾವುಗಳು (snakes) ಕಾಣಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷೆ ನಡೆಸುವವರಿಗೆ ಯಾವುದೇ ಬೇರೆ ಆಯ್ಕೆ ಇರುವುದಿಲ್ಲ. ಅವರು ತಮ್ಮ ಭಯವನ್ನೆಲ್ಲಾ ಬದಿಗಿಟ್ಟು, ಮೃತದೇಹದ ಜೊತೆ ಕೆಲಸ ಮಾಡಬೇಕಾಗುತ್ತದೆ. ಅವರ ಕೆಲಸದ ಸಂದರ್ಭಗಳಲ್ಲಿ ಈ ಅಸಹ್ಯಕರ ಘಟನೆಗಳು ಕೆಟ್ಟ ಕನಸಿನಂತೆ ಕಾಡಿದರೂ ಕೂಡ ಅವರ ಸ್ನೇಹಿತರು ಮಾತ್ರ ಇಂತಹ ಆಸಕ್ತಿಕರವಾದ ಭಯಾನಕ ವಿಚಾರಗಳ ಬಗ್ಗೆ ಕೇಳಲು ಸದಾ ಕುತೂಹಲಿಗಳಾಗಿರುತ್ತಿದ್ದರು ಎಂದು ಜೆಸ್ಸಿಕಾ ಹೇಳಿಕೊಂಡಿದ್ದಾರೆ. ತಪಾಸಣೆಯ (autopsy technician) ಈ ಕೆಲಸಕ್ಕೆ ಅಲ್ಲಿ ಭಾರಿ ಬೇಡಿಕೆಯಿದ್ದರೂ ಮುಂದೊಮ್ಮೆ ಈ ಕೆಲಸವನ್ನು ತಾನು ತೊರೆಯುವುದಾಗಿ ಜೆಸ್ಸಿಕಾ ಹೇಳಿಕೊಂಡಿದ್ದಾರೆ. 

ಭಾರತದಲ್ಲಿ ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆ ವೈದ್ಯರೇ ಮರಣೋತ್ತರ ಪರೀಕ್ಷೆಗಳನ್ನು ಮಾಡುತ್ತಾರೆ. ಆದರೆ ವಿದೇಶದಲ್ಲಿ ಮರಣೋತ್ತರ ಪರೀಕ್ಷೆಗೆಂದೇ ವಿಶೇಷ ತಜ್ಞರಿದ್ದಾರೆ. 

Follow Us:
Download App:
  • android
  • ios