Asianet Suvarna News Asianet Suvarna News

ಹವಾಮಾನ ಬದಲಾವಣೆಯಿಂದಾದ ಹಾನಿಗೆ ಪರಿಹಾರ: ಅಭಿವೃದ್ಧಿಶೀಲ ರಾಷ್ಟ್ರಗಳ ದಶಕಗಳ ಬೇಡಿಕೆ ಈಡೇರಿಕೆ

ಜಾಗತಿಕ ಹವಾಮಾನ ಬದಲಾವಣೆಯಿಂದ ಅಪಾರ ಹೊಡೆತಕ್ಕೆ ತುತ್ತಾಗಿರುವ ವಿಶ್ವದ ಬಡ ದೇಶಗಳಿಗೆ ನಷ್ಟಭರ್ತಿ ಪರಿಹಾರ ನೀಡುವ ಕುರಿತು ವಿಶ್ವದ ಶ್ರೀಮಂತ ದೇಶಗಳು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿವೆ. ಇದರಿಂದಾಗಿ ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ದಶಕಗಳ ಬೇಡಿಕೆಯೊಂದು ಈಡೇರಿದಂತಾಗಿದೆ.

decades of demand by developing countries Fulfilld Compensation for poor countries from rich countries for climate change akb
Author
First Published Nov 21, 2022, 6:56 AM IST

ಶಮ್‌ರ್‍ ಎಲ್‌ ಶೇಖ್‌: ಜಾಗತಿಕ ಹವಾಮಾನ ಬದಲಾವಣೆಯಿಂದ ಅಪಾರ ಹೊಡೆತಕ್ಕೆ ತುತ್ತಾಗಿರುವ ವಿಶ್ವದ ಬಡ ದೇಶಗಳಿಗೆ ನಷ್ಟಭರ್ತಿ ಪರಿಹಾರ ನೀಡುವ ಕುರಿತು ವಿಶ್ವದ ಶ್ರೀಮಂತ ದೇಶಗಳು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿವೆ. ಇದರಿಂದಾಗಿ ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ದಶಕಗಳ ಬೇಡಿಕೆಯೊಂದು ಈಡೇರಿದಂತಾಗಿದೆ. ಭಾರತ, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳ ಮಹತ್ವದ ಒತ್ತಾಯಕ್ಕೆ ಒಪ್ಪಿಗೆ ದೊರೆತಂತಾಗಿದೆ.

ಹವಾಮಾನ ಬದಲಾವಣೆಯಿಂದಾದ (climate change) ನಷ್ಟ ಹಾಗೂ ಹಾನಿಗೆ ಪರಿಹಾರ ತುಂಬಿಕೊಡಲು ನಿಧಿ ಸ್ಥಾಪನೆಯ ನಿರ್ಧಾರವನ್ನು ಈಜಿಪ್ಟ್‌ನ (Egypt) ಪ್ರವಾಸಿ ನಗರಿಯಲ್ಲಿ ಭಾನುವಾರ ನಸುಕಿನ ಜಾವದವರೆಗೂ ನಡೆದ ಹವಾಮಾನ ಬದಲಾವಣೆ ಕುರಿತ ಶೃಂಗದಲ್ಲಿ ತೆಗೆದುಕೊಳ್ಳಲಾಗಿದೆ. ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿರುವ ವಾಯುಮಾಲಿನ್ಯಕ್ಕೆ ಅಲ್ಪ ಕೊಡುಗೆ ನೀಡಿದ್ದರೂ ಪ್ರವಾಹ (flood), ಬರಗಾಲ (drought), ಉಷ್ಣಗಾಳಿ (heat wave), ಕ್ಷಾಮ ಹಾಗೂ ಚಂಡಮಾರುತದಂತಹ ವಿಕೋಪಗಳಿಗೆ ತುತ್ತಾಗುತ್ತಿರುವ ದೇಶಗಳಿಗೆ ನಷ್ಟಭರ್ತಿಗೆ ಪರಿಹಾರ ನೀಡುವ ಕ್ರಮ ಇದಾಗಿದೆ. ಇಂತಹದ್ದೊಂದು ನಿಧಿ ಸ್ಥಾಪನೆಗಾಗಿ 30 ವರ್ಷಗಳಿಂದ ಹೋರಾಟ ನಡೆಯುತ್ತಿತ್ತು ಎಂದು ವಿವಿಧ ದೇಶಗಳು ಹೇಳಿಕೊಂಡಿವೆ.

World Sexual Health Day: ಹವಾಮಾನ ಬದಲಾವಣೆಗೂ ಮಹಿಳೆಯರ ಲೈಂಗಿಕ ಆರೋಗ್ಯಕ್ಕೂ ಇದೆ ನಂಟು!

ಹವಾಮಾನ ವಿಕೋಪಗಳಿಂದ (climate disasters) ತಮ್ಮ ಮನೆಗಳನ್ನು ಕಳೆದುಕೊಂಡ ಬಡ ಕುಟುಂಬಗಳಿಗೆ, ಜಮೀನು ಹಾನಿಗೀಡಾದ ರೈತರಿಗೆ, ದ್ವೀಪಗಳನ್ನು ತೊರೆದ ಜನರಿಗೆ ಈ ನಿಧಿಯಿಂದ ಅನುಕೂಲವಾಗಲಿದೆ ಎಂದು ಅಂತಾರಾಷ್ಟ್ರೀಯ ತಜ್ಞರು ವಿಶ್ಲೇಷಿಸಿದ್ದಾರೆ. ಹವಾಮಾನ ನಿಧಿ ಹೆಸರಿನಲ್ಲಿ 8 ಲಕ್ಷ ಕೋಟಿ ರು. ವೆಚ್ಚ ಮಾಡಲು 2009ರಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ಪ್ರತಿಜ್ಞೆ ಮಾಡಿದ್ದವು. ಬಡದೇಶಗಳು ಹಸಿರು ಇಂಧನ (green energy) ಅಭಿವೃದ್ಧಿಪಡಿಸಲು ನೆರವಾಗುವ ಉದ್ದೇಶದಿಂದ ಘೋಷಣೆ ಮಾಡಲಾಗಿತ್ತು. ಆದರೆ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂಬುದು ಗಮನಾರ್ಹ.

ಇದೀಗ ನಷ್ಟಭರ್ತಿ ನಿಧಿಯನ್ನು ಸ್ಥಾಪಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕೆ ಅಭಿವೃದ್ಧಿ ಹೊಂದಿದ ದೇಶಗಳು ಆರಂಭಿಕ ಹಂತದಲ್ಲಿ ಹಣ ನೀಡಲಿವೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಂತಹ ಖಾಸಗಿ ಹಾಗೂ ಸಾರ್ವಜನಿಕ ಮೂಲಗಳಿಂದಲೂ ದೇಣಿಗೆ ಸಂಗ್ರಹ ಮಾಡಲಾಗುತ್ತದೆ ಎಂದು ಒಪ್ಪಂದದಲ್ಲಿ ನಮೂದಿಸಲಾಗಿದೆ. ವಿಶೇಷ ಎಂದರೆ, ಚೀನಾದಂತಹ (China) ಅಭಿವೃದ್ಧಿಶೀಲ ರಾಷ್ಟ್ರಗಳು ಈ ನಿಧಿಗೆ ದೇಣಿಗೆ ಕೊಡಬೇಕಿಲ್ಲ. ಈ ಬಗ್ಗೆ ಅಭಿವೃದ್ಧಿ ಹೊಂದಿದ ದೇಶಗಳ ತಕರಾರಿದೆ. ಚೀನಾದಂತಹ ಬೃಹತ್‌ ಪ್ರಮಾಣದ ಮಾಲಿನ್ಯಕಾರಕ ದೇಶಗಳು ನಿಧಿಗೆ ದೇಣಿಗೆ ನೀಡುವುದರಿಂದ ಸದ್ಯ ಹೊರಗಿವೆ. ಮುಂಬರುವ ವರ್ಷಗಳಲ್ಲಿ ಅವನ್ನೂ ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಚರ್ಚೆ ನಡೆಯಲಿದೆ ಎಂದು ತಿಳಿಸಿವೆ.

Asianet News Samvad: ಹವಾಮಾನ ಬದಲಾವಣೆಯ ಬಗ್ಗೆ ಕೇಂದ್ರ ಸರ್ಕಾರದ ಮಾಜಿ ಕಾರ್ಯದರ್ಶಿ ಮಾತು

ಸಮಿತಿ: ಈ ನಿಧಿ ಸ್ಥಾಪನೆ ಕುರಿತ ಮುಂದಿನ ಹೆಜ್ಜೆ ಇಡಲು 24 ದೇಶಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಯು, ನಿಧಿಯ ಸ್ವರೂಪ ಹೇಗಿರಬೇಕು, ನಿಧಿಗೆ ಯಾರಾರ‍ಯರು ಹಣ ನೀಡಬೇಕು ಮತ್ತು ನೆರವು ಯಾರಾರ‍ಯರಿಗೆ ನೀಡಬೇಕು ಎಂಬುದರ ಬಗ್ಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿವೆ.


ಹವಾಮಾನ ಬದಲಾವಣೆ ಪ್ರೇರಿತ ವಿಪತ್ತಿನಿಂದ ಉಂಟಾದ ನಷ್ಟ ಹಾಗೂ ಹಾನಿಗೆ ಪರಿಹಾರ ಹುಡುಕಲು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗ ಒಪ್ಪಂದ ಮಾಡಿಕೊಂಡಿರುವುದು ಐತಿಹಾಸಿಕ. ಇದಕ್ಕಾಗಿ ವಿಶ್ವ ಬಹಳ ದಿನಗಳ ಕಾಲ ಕಾದಿತ್ತು. ಹಸಿರುಮನೆ ಅನಿಲಗಳ ಕಡಿತ ಹೆಸರಿನಲ್ಲಿ ರೈತರ ಮೇಲೆ ಜಾಗತಿಕ ಸಮುದಾಯ ಹೊರೆ ಹೊರಿಸಬಾರದು ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ಹೇಳಿದ್ದಾರೆ. 

Follow Us:
Download App:
  • android
  • ios