Asianet Suvarna News Asianet Suvarna News

ಕೋವಿಡ್ ಹೆಚ್ಚಳ ನಡುವೆ ಡೆಡ್ಲಿ ಮಾಬರ್ಗ್ ವೈರಸ್ ಪತ್ತೆ, ತಾಂಝಾನಿಯಾಗೆ ಪ್ರಯಾಣಕ್ಕೆ ನಿರ್ಬಂಧ!

ಮಾಬರ್ಗ್ ಅತ್ಯಂತ ಡೇಂಜರಸ್ ವೈರಸ್. ಈ ವೈರಸ್ ಅಂಟಿಕೊಂಡರೆ ಸಾವಿನ ಪ್ರಮಾಣ ಶೇ.90 ರಷ್ಟಿದೆ. ಇದು ಎಬೋಲಾ ವೈರಸ್‌ನ್ನು ಒಳಗೊಂಡಿದೆ. ಈ ಮಾರಕ ವೈರಸ್ ಇದೀಗ ತಾಂಜೇನಿಯಾದಲ್ಲಿ ಪತ್ತೆಯಾಗಿದೆ. 9 ಪ್ರಕರಣಗಳು ವರದಿಯಾದ ಬೆನ್ನಲ್ಲೇ ಅರಬ್ ಸೇರಿದಂತೆ ಹಲವು ರಾಷ್ಟ್ರಗಳು ತಾಂಝೇನಿಯಾ ಪ್ರಯಾಣಕ್ಕೆ ನಿರ್ಬಂಧ ವಿಧಿಸಿದೆ. 

Deadly Marburg virus reported in Tanzania UAE America issues guidelines for his citizens ckm
Author
First Published Apr 5, 2023, 5:22 PM IST

ಜಿನೆವಾ(ಏ.05): ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್ ಹೆಚ್ಚಳವಾಗುತ್ತಿದೆ. ಇದರ ಬೆನ್ನಲ್ಲೇ ಅತ್ಯಂತ ಡೇಂಜರಸ್ ವೈರಸ್ ಮಾಬರ್ಗ್ ಪತ್ತೆಯಾಗಿದೆ. ತಾಂಝೇನಿಯಾದಲ್ಲಿ 9 ಮಾಬರ್ಗ್ ವೈರಸ್ ಪ್ರಕರಣ ಬೆಳಕಿಗೆ ಬಂದಿದೆ. ಇದರಲ್ಲಿ ಐವರು ಮೃತಪಟ್ಟಿದ್ದಾರೆ. ಫೆಬ್ರವರಿಯಲ್ಲಿ ಮಾಬರ್ಗ್ ವೈರಸ್ ಪತ್ತೆಯಾಗಿತ್ತು. ಬಳಿಕ ತಾಂಜೇನಿಯಾದಲ್ಲಿ ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಲಾಗಿತ್ತು. ಇದೀಗ ನಿಧಾನವಾಗಿ ಮಾಬರ್ಗ್ ಪ್ರಕರಣ ಹೆಚ್ಚಾಗುತ್ತಿದೆ. ಒಂದು ಪ್ರಕರಣದಿಂದ ಆರಂಭಗೊಂಡ ಮಾಬರ್ಗ್ ಇದೀಗ 9ಕ್ಕೇರಿದೆ. ಈ ವೈರಸ್‌ನಲ್ಲಿ ಸಾವಿನ ಸಂಖ್ಯೆ ಶೇಕಡಾ 90 ರಷ್ಟಿದೆ. ಇದು ಎಬೋಲಾ ವೈರಸ್ ಒಳಗೊಂಡಿದೆ. ಹೀಗಾಗಿ ಜ್ವರ, ಶೀತದಿಂದ ಆರಂಭಗೊಳ್ಳುವ ಆರೋಗ್ಯ ಸ್ಥಿತಿಗತಿ, ಆಂತರಿಕ ರಕ್ತಸ್ರಾವ, ಅಂಗಾಗ ವೈಫಲ್ಯಗಳಿಂದ ವ್ಯಕ್ತಿ ಸಾವಿಗೀಡಾಗುವ ಸಾಧ್ಯತೆ ಹೆಚ್ಚಿದೆ. ವಿಶ್ವ ಆರೋಗ್ಯ ಸಂಸ್ಥೆ ಇಂದು ಎಲ್ಲಾ ದೇಶಗಳಿಗೆ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಯುನೈಟೆಡ್ ಅರಬ್ ಎಮಿರೇಟ್ಸ್, ಅಮೆರಿಕ ಸೇರಿದಂತೆ ಹಲವು ದೇಶಗಳು ತಾಂಝೇನಿಯಾ ಪ್ರಯಾಣಕ್ಕೆ ನಿರ್ಬಂಧ ವಿಧಿಸಿದೆ.

9 ಖಚಿತ ಪ್ರಕರಣಗಳ ಜೊತೆಗೆ ಇದೀಗ 20 ಪ್ರಕರಣಗಳಲ್ಲಿ ಮಾಬರ್ಗ್ ವೈರಸ್ ಗುಣಲಕ್ಷಣಗಳು ಕಾಣಿಸಿಕೊಂಡಿದೆ. ಹೀಗಾಗಿ ಇವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಈ ಎಲ್ಲಾ ಪ್ರಕರಣಗಳು ತಾಂಜೇನಿಯಾದಲ್ಲಿ ವರದಿಯಾಗಿದೆ. ಹೀಗಾಗಿ ಅತೀವ ಎಚ್ಚರಿಕೆ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಎಬೋಲಾ ರೀತಿ ಅತ್ಯಂತ ಅಪಾಯಕಾರಿ, ಸಾಂಕ್ರಾಮಿಕ ಮಾರ್ಬರ್ಗ್ ವೈರಸ್ ಪತ್ತೆ, ಘಾನಾದಲ್ಲಿ 2 ಸಾವು!

ಮಾಬರ್ಗ್ ವೈರಸ್ ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ ಜ್ವರ, ಶೀತ ಕಾಣಿಸಿಕೊಳ್ಳಲಿದೆ. ಇಷ್ಟೇ ಅಲ್ಲ ಈ ವೈರಸ್ ದೇಹದೊಳಗೆ ಅಂಗಾಗಳನ್ನು ವೈಫಲ್ಯ ಮಾಡಲಿದೆ. ಇದರ ಜೊತೆಗೆ ಆಂತರಿಕ ರಕ್ತ ಸ್ರಾವ ಹೆಚ್ಚಾಗಲಿದೆ. ಇದರಿಂದ ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಛೆ ಹೇಳಿದೆ. ಈ ವೈರಸ್ ಮನುಷ್ಯ ಹಾಗೂ ಪ್ರಾಣಿಗಳಲ್ಲೂ ಕಾಣಿಸಿಕೊಳ್ಳಲಿದೆ.

ಒಂದೆಡೆ ಕೋವಿಡ್ ಪ್ರಕರಣಗಳು ಹಲವು ದೇಶಗಳಲ್ಲಿ ಹೆಚ್ಚಳವಾಗಿದೆ. ಇದರ ನಡುವೆ ಮಾಬರ್ಗ್ ವೈರಸ್ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಅತ್ಯಂತ ಅಪಾಯಕಾರಿ ವೈರಸ್ ಇದಾಗಿದೆ. ಈಗಾಗಲೇ 9 ಖಚಿತ ಪ್ರಕರಣಗಳಲ್ಲಿ ಐವರು ಮೃತಪಟ್ಟಿರುವುದು ಈ ವೈರಸ್ ಅಪಾಯದ ಮಟ್ಟ ತೋರಿಸುತ್ತಿದೆ.

ಕೋವಿಡ್ ಹೆಚ್ಚಳದಿಂದ ಭಾರತದಲ್ಲಿ ಮಾರ್ಗಸೂಚಿ ಜಾರಿ, ಮತ್ತೆ ಬಂತು ಮಾಸ್ಕ್!

ಮಾಬರ್ಗ್ ವೈರಸ್ ಒಬ್ಬರಿಂದ ಒಬ್ಬರಿಗೆ ಸುಲಭವಾಗಿ ಹರಡುತ್ತದೆ. ಹೀಗಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದೆ. ಮಾಸ್ಕ್ ಧರಿಸುವುದು ಅತ್ಯಂತ ಉಪಯುಕ್ತವಾಗಿದೆ. ಕೋವಿಡ್ ಮಾರ್ಗಸೂಚಿ ಪಾಲಿಸುವ ಮೂಲಕ ಮಾಬರ್ಗ್ ವೈರಸ್‌ನಿಂದ ದೂರ ಉಳಿಯಬಹುದು. ಮಾಬರ್ಗ್ ವೈರಸ್ ಕುರಿತು ಜನರು ಎಚ್ಚರಿಕೆ ವಹಿಸಬೇಕು. ತಾಂಝೇನಿಯಾದಲ್ಲಿ ಇದೀಗ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ತಾಂಝೇನಿಯಾ ಪ್ರಯಾಣ ಮಾಡದಂತೆ ಆಯಾ ದೇಶಗಳು ತಮ್ಮ ತಮ್ಮ ನಾಗರೀಕರಿಗೆ ಮನವಿ ಮಾಡಿದೆ.
 

Follow Us:
Download App:
  • android
  • ios