ಎಬೋಲಾ ರೀತಿ ಅತ್ಯಂತ ಅಪಾಯಕಾರಿ, ಸಾಂಕ್ರಾಮಿಕ ಮಾರ್ಬರ್ಗ್ ವೈರಸ್ ಪತ್ತೆ, ಘಾನಾದಲ್ಲಿ 2 ಸಾವು!
- ಅತ್ಯಂತ ಅಪಾಯಕಾರಿ ವೈರಸ್ ಮಾರ್ಬರ್ಗ್ ಘಾನಾದಲ್ಲಿ ಪತ್ತೆ
- ವೈರಸ್ ಖಚಿತವಾದ ಬೆನ್ನಲ್ಲೇ ಇಬ್ಬರು ಸೋಂಕಿತರು ಸಾವು
- ಎಬೋಲಾ ರೀತಿಯ ವೈರಸ್, ಅತೀ ವೇಗವಾಗಿ ಹರಡುವ ಸಾಮರ್ಥ್ಯ

ನವದೆಹಲಿ(ಜು.18): ಕೊರೋನಾ, ಓಮಿಕ್ರಾನ್, ಮಂಕಿಪಾಕ್ಸ್ ಸೇರಿದಂತೆ ಒಂದರ ಮೇಲೊಂದರಂತೆ ವೈರಸ್ ಪತ್ತೆಯಾಗಿ ಜನರ ಬದುಕನ್ನೇ ನಾಶ ಮಾಡುತ್ತಿದೆ. ಇದೀಗ ಎಲ್ಲಾ ಅಡೆತಡೆಗಳ ನಿವಾರಣೆಯಾಗುತ್ತಿರುವ ಬೆನ್ನಲ್ಲೇ ಘಾನಾ ದೇಶದಲ್ಲಿ ಅತ್ಯಂತ ಅಪಾಯಕಾರಿ ಹಾಗೂ ಅತೀ ವೇಗವಾಗಿ ಹರಡಬಲ್ಲ ಸಾಂಕ್ರಾಮಿಕ ವೈರಸ್ ಮಾರ್ಬರ್ಗ್ ಪತ್ತೆಯಾಗಿದೆ. ಕಳೆದ ತಿಂಗಳ ಆರಂಭದಲ್ಲಿ ಇಬ್ಬರಲ್ಲಿ ಈ ವೈರಸ್ ಪತ್ತೆಯಾಗಿತ್ತು. ತೀವ್ರ ಅನಾರೋಗ್ಯದ ಕಾರಣ ಆಸ್ಪತ್ರೆ ದಾಖಲಾದ ಇಬ್ಬರ ಮಾದರಿಯನ್ನು ಪರೀಕ್ಷೆ ಮಾಡಲಾಗಿತ್ತು. ಈ ವೇಳೆ ಇಬ್ಬರಲ್ಲೂ ಮಾರ್ಬಗ್ ವೈರಸ್ ಪತ್ತೆಯಾಗಿರುವುದು ಖಚಿತಗೊಂಡಿತ್ತು. ಮಾರ್ಬಗ್ ವೈರಸ್ ಪತ್ತೆಯಾದ ಕೆಲವೇ ವಾರಗಳಲ್ಲಿ ಇಬ್ಬರು ಸೋಂಕಿತರ ಆರೋಗ್ಯ ಕ್ಷೀಣಿಸಿದೆ. ಇದೀಗ ಇಬ್ಬರು ಮಾರ್ಬರ್ಗ್ ಸೋಂಕಿತರು ಬಲಿಯಾಗಿದ್ದಾರೆ. ಜುಲೈ 10 ರಂದು ಇಬ್ಬರು ಸೋಂಕಿತರಲ್ಲಿ ಕಾಣಿಸಿಕೊಂಡಿರುವುದು ಅಪಾಯಕಾರಿ ಮಾರ್ಬರ್ಗ್ ವೈರಸ್ ಅನ್ನೋದು ಖಚಿತವಾಗಿದೆ. ಸೆನೆಗಲ್ ಪ್ರಯೋಗಾಲಯ ಮಾರ್ಬರ್ಗ್ ವೈರಸ್ ಪತ್ತೆಯನ್ನು ಖಚಿತಪಡಿಸಿತ್ತು. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ. ಎರಡು ಪ್ರಕರಣ ಪತ್ತೆಯಾದ ಕೆಲವೇ ದಿನಗಳಲ್ಲಿ ಸೋಂಕಿತರು ಸಾವನ್ನಪ್ಪಿದ್ದಾರೆ. ಹೀಗಾಗಿ ಘಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ವೈರಸ್ ಪತ್ತೆಯಾದ ಬೆನ್ನಲ್ಲೇ ಘಾನಾ ಹೆಲ್ತ್ ಸರ್ವೀಸ್ ಅಲರ್ಟ್ ಆಗಿದೆ. ಮಾರ್ಬರ್ಗ್ ಹರಡದಂತೆ ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಇಬ್ಬರು ಮಾರ್ಬರ್ಗ್ ಸೋಂಕಿತರು ಮೊದಲ ಹಾಗೂ ಎರಡನೇ ಹಂತದ ಸಂಪರ್ಕಿತರನ್ನು ಈಗಾಗಲೇ ಐಸೋಲೇಶನ್‌ಗೆ ಒಳಪಡಿಸಲಾಗಿದೆ. ಸೋಂಕಿತರ ಸಂಪರ್ಕಿತರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ. ಯಾರಲ್ಲೂ ಮಾರ್ಬರ್ಗ್ ವೈರಸ್ ಪತ್ತೆಯಾಗಿಲ್ಲ. ದೇಶದಲ್ಲಿ ಎರಡನೇ ಪ್ರಕರಣ ಮಾತ್ರ ಇದುವರೆಗೆ ಪತ್ತೆಯಾಗಿದೆ ಎಂದು ಘಾನಾ ಹೆಲ್ತ್ ಸರ್ವೀಸ್ ಹೇಳಿದೆ.
Monkey Pox in Kerala ಕೇರಳದಲ್ಲಿ 2ನೇ ಮಂಕಿಪಾಕ್ಸ್ ಪ್ರಕರಣ ಪತ್ತೆ!
ಮಾರ್ಬರ್ಗ್ ವೈರಸ್ ಮೊದಲು ಪಶ್ಚಿಮ ಆಫ್ರಿಕಾದ ಜಿನಿಯಲ್ಲಿ ಪತ್ತೆಯಾಗಿತ್ತು. ಕಳೆದ ವರ್ಷ ಜಿನಿಯಲ್ಲಿ ಮೊದಲ ಮಾರ್ಬರ್ಗ್ ಕೇಸ್ ಪತ್ತೆಯಾಗಿತ್ತು. ಆದರೆ ಜಿನಿಯಲ್ಲಿ ಆತಂಕ ಸೃಷ್ಟಿಸಿದ ಮಾರ್ಬರ್ಗ್ ಬಳಿಕ ನಾಪತ್ತೆಯಾಗಿತ್ತು. ಇದಾದ ಬಳಿಕ ಇದೀಗ ಘಾನಾದಲ್ಲಿ ಎರಡು ಕೇಸ್ ಪತ್ತೆಯಾಗಿದೆ. ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಯನ್ನು ಪಾಲಿಸಲಾಗುತ್ತದೆ ಎಂದು ಘಾನಾ ಹೆಲ್ತ್ ಸರ್ವೀಸ್ ಹೇಳಿದೆ.
ಮಾರ್ಬರ್ಗ್ ವೈರಸ್ ಅತ್ಯಂತ ಅಪಾಯಕಾರಿ ವೈರಸ್ ಎಂದು ಗುರುತಿಸಲಾಗಿದೆ. ಎಬೋಲಾ ರೀತಿಯ ವೈರಸ್ ಇದಾಗಿದೆ. ಹೀಗಾಗಿ ಈ ವೈರಸ್ ಅಪಾಯಕಾರಿ ಎ ಕೆಟಗರಿಯಲ್ಲಿಡಲಾಗಿದೆ. ಈ ರೋಗ ಕಾಣಿಸಿಕೊಂಡವರಲ್ಲಿ ತೀವ್ರ ಜ್ವರ, ತಲೆನೋವು, ಚರ್ಮದ ತುರಿಕೆ, ತಲೆನೋವು, ವಾಂತಿ, ಭೇದಿ, ರಕ್ತಸ್ರಾವ, ಲಿವರ್ ಸಮಸ್ಯೆ, ಬಹು ಅಂಗಾಗ ವೈಫಲ್ಯ, ನಿರ್ಜಲೀಕರ ಸೇರಿದಂತೆ ಕೆಲ ಲಕ್ಷಣಗಳನ್ನು ಕಾಣಿಸಿಕೊಳ್ಳಲಿದೆ. ಇದು ಎಬೋಲಾ ರೀತಿಯ ರೋಗವಾಗಿದೆ. ಆದರೂ ವೈರಸ್‌ನಲ್ಲಿ ಕೆಲ ಬದಲಾವಣೆಗಳಿವೆ.
ಭಾರತದಲ್ಲಿ ಓಮಿಕ್ರಾನ್ ಹೊಸ ರೂಪಾಂತರಿ ವೈರಸ್ ಭೀತಿ, ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ BA.2.75 ಪತ್ತೆ!
ಇದು ಬಾವಲಿಗಳಿಂದಲೂ ಹರಡುತ್ತದೆ. ಮನುಷ್ಯನ ದೇಹದಲ್ಲಿ ಕಾಣಿಸಿಕೊಂಡರೆ ಸುಲಭವಾಗಿ ಇತರರಿಗೆ ಹರಡಲಿದೆ. ಕೊರೋನಾ ಹಾಗೂ ರೂಪಾಂತರಿ ತಳಿಗಳು ಹರಡುವ ವೇಗಕ್ಕಿಂತ ಮಾರ್ಬರ್ಗ್ ವೈರಸ್ ಹರಡುವಿಕೆ ವೇಗ ಹೆಚ್ಚಾಗಿದೆ. ಅತೀ ವೇಗವಾಗಿ ಆರೋಗ್ಯ ಕ್ಷೀಣಿಸಿ ಮಾರಕವಾಗುವ ಸಾಧ್ಯತೆ ಈ ವೈರಸ್‌ಗಿದೆ.