ಮೋಖಾ ಚಂಡಮಾರುತಕ್ಕೆ ಮ್ಯಾನ್ಮಾರ್‌ ತತ್ತರ: 80 ಕ್ಕೂ ಹೆಚ್ಚು ಸಾವು, ನೂರಾರು ಮಂದಿ ನಾಪತ್ತೆ

ಮೋಖಾ ಚಂಡಮಾರುತ ಭಾನುವಾರ ಸಾಯಂಕಾಲ ಮ್ಯಾನ್ಮಾರ್‌ನ ತೀರಕ್ಕೆ ಅಪ್ಪಳಿಸಿತ್ತು. ಗಂಟೆಗೆ ಸುಮಾರು 209 ಕಿ.ಮೀ. ವೇಗದಲ್ಲಿ ಬೀಸುತ್ತಿದ್ದ ಚಂಡಮಾರುತ ತೀರ ಪ್ರದೇಶದಾದ್ಯಂತ ಅಪಾರ ಹಾನಿ ಉಂಟು ಮಾಡಿದೆ.

cyclone mocha rampage continues in myanmar more than 80 killed ash

ಬ್ಯಾಂಕಾಕ್‌ (ಮೇ 17, 2023): ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೋಖಾ ಚಂಡಮಾರುತದ ಅಬ್ಬರಕ್ಕೆ ಮ್ಯಾನ್ಮಾರ್‌ ತತ್ತರಿಸಿದ್ದು, ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಈವರೆಗೆ ಕನಿಷ್ಠ 81 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದ್ದು, ನೂರಾರು ಮಂದಿ ಕಾಣೆಯಾಗಿರುವ ಶಂಕೆ ವ್ಯಕ್ತಪಡಿಸಿಲಾಗಿದೆ. ಚಂಡಮಾರುತದ ರಭಸಕ್ಕೆ 11,532 ಮನೆಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಮೋಖಾ ಚಂಡಮಾರುತ ಭಾನುವಾರ ಸಾಯಂಕಾಲ ಮ್ಯಾನ್ಮಾರ್‌ನ ತೀರಕ್ಕೆ ಅಪ್ಪಳಿಸಿತ್ತು. ಗಂಟೆಗೆ ಸುಮಾರು 209 ಕಿ.ಮೀ. ವೇಗದಲ್ಲಿ ಬೀಸುತ್ತಿದ್ದ ಚಂಡಮಾರುತ ತೀರ ಪ್ರದೇಶದಾದ್ಯಂತ ಅಪಾರ ಹಾನಿ ಉಂಟು ಮಾಡಿದೆ. 73 ಧಾರ್ಮಿಕ ಕಟ್ಟಡಗಳು, 47 ಮಾಂಟೆಸರಿಗಳು, 163 ಶಾಲಾ ಕಟ್ಟಡಗಳು, 29 ಆಸ್ಪತ್ರೆಗಳು, 112 ಸರ್ಕಾರಿ ಕಟ್ಟಡಗಳು ಹಾಗೂ 11,532 ಮನೆಗಳು ಹಾನಿಗೊಳಗಾಗಿವೆ. 81 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಕಾಣೆಯಾಗಿದ್ದಾರೆ. ಇವರಲ್ಲಿ ಬಹುತೇಕರು ಮೃತಪಟ್ಟಿರಬಹುದು ಎಂದು ಹೇಳಲಾಗಿದೆ.

ಇದನ್ನು ಓದಿ: Cyclone Mocha: ರಾಜ್ಯದಲ್ಲಿ ವಾಡಿಕೆ ಮುಂಗಾರು, ರೈತರಿಗೆ ಸರ್ಕಾರದ ಶುಭಸುದ್ದಿ!

ಮೋಖಾ ಚಂಡಮಾರುತ ಮತ್ತು ಮ್ಯಾನ್ಮಾರ್‌ನಲ್ಲಿ ಅದರ ವಿನಾಶ
ಸೈಕ್ಲೋನ್ ಮೋಖಾದಿಂದ ಉಂಟಾದ ವಿನಾಶದ ವಿವರಗಳನ್ನು ಹಂಚಿಕೊಳ್ಳುವಾಗ, ಸಿಟ್ವೆ ಸಮೀಪದ ಬು ಮಾ ಗ್ರಾಮದ ಮುಖ್ಯಸ್ಥ ಕಾರ್ಲೋ, "ನೂರಕ್ಕೂ ಹೆಚ್ಚು ಜನರು ನಾಪತ್ತೆಯಾಗಿರುವುದರಿಂದ ಹೆಚ್ಚಿನ ಸಾವುಗಳು ಸಂಭವಿಸುತ್ತವೆ" ಎಂದು ಹೇಳಿದ್ದಾರೆ. ಮೋಖಾ ಭಾನುವಾರದಂದು ಗಂಟೆಗೆ 195 ಕಿಲೋಮೀಟರ್ (120 ಮೈಲುಗಳು) ವೇಗದ ಗಾಳಿಯೊಂದಿಗೆ ಭೂಮಿಗೆ ಇಳಿದಿದ್ದು, ವಿದ್ಯುತ್ ಕಂಬಗಳನ್ನು ಉರುಳಿಸಿದೆ ಮತ್ತು ಮರದ ಮೀನುಗಾರಿಕೆ ದೋಣಿಗಳನ್ನು ಛಿದ್ರಗೊಳಿಸಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

ಸ್ಥಳೀಯ ಸುದ್ದಿ ವರದಿಯ ಪ್ರಕಾರ, ಸಿಟ್ವೆ ಬಳಿ ಸ್ಥಳಾಂತರಗೊಂಡ ರೋಹಿಂಗ್ಯಾಗಳಿಗಾಗಿ ದಪಾಯಿಂಗ್ ಶಿಬಿರದಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ಇದಲ್ಲದೆ, ಶಿಬಿರ ಸಂಪರ್ಕ ಕಡಿತಗೊಂಡಿದೆ ಮತ್ತು ಸರಬರಾಜು ಕೊರತೆಯಿದೆ ಎಂದೂ ಕಾರ್ಲೋ ಹೇಳಿದ್ದಾರೆ. "ಸೇತುವೆಗಳು ಮುರಿದುಹೋಗಿರುವುದರಿಂದ ಜನರು ನಮ್ಮ ಶಿಬಿರಕ್ಕೆ ಬರಲು ಸಾಧ್ಯವಿಲ್ಲ. ನಮಗೆ ಸಹಾಯ ಬೇಕು" ಎಂದು ಅವರು ಇತ್ತೀಚಿನ ಅಪ್ಡೇಟ್ಸ್‌ಗಳನ್ನು ಹಂಚಿಕೊಳ್ಳುವಾಗ ಹೇಳಿದರು.

ಇದನ್ನೂ ಓದಿ: ಅಮೆರಿಕಕ್ಕೆ ಬಾಂಬ್‌ ಸೈಕ್ಲೋನ್‌ ಭೀತಿ: ಮೈನಸ್‌ 40 ಡಿಗ್ರಿವರೆಗೂ ಕುಸಿದ ತಾಪಮಾನ; ಎಲ್ಲ 51 ರಾಜ್ಯಗಳಿಗೂ ಎಫೆಕ್ಟ್..!

ಸ್ಥಳೀಯ ಮುಖಂಡರು ಮತ್ತು ಅಧಿಕಾರಿಗಳ ಪ್ರಕಾರ, ಓನ್ ತಾವ್ ಛೇ ಗ್ರಾಮದಲ್ಲಿ ಒಬ್ಬರು ಮತ್ತು ಓನ್ ತಾವ್ ಗಿಯಲ್ಲಿ ಆರು ಜನರು ಸಾವಿಗೀಡಾಗಿದ್ದಾರೆ. ಈ ಮಧ್ಯೆ, ರಾಜ್ಯ ಮಾಧ್ಯಮವು ಸೋಮವಾರ ಐದು ಸಾವುಗಳನ್ನು ವರದಿ ಮಾಡಿದೆ ಮತ್ತು ಅದರ ವಿವರಗಳನ್ನು ಹಂಚಿಕೊಂಡಿಲ್ಲ. 

ಮೋಖಾ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಈ ಪ್ರದೇಶವನ್ನು ಅಪ್ಪಳಿಸಿದ ಅತ್ಯಂತ ಶಕ್ತಿಶಾಲಿ ಚಂಡಮಾರುತವಾಗಿದ್ದು, ಹಳ್ಳಿಗಳನ್ನು ನಾಶ ಮಾಡಿದ್ದು, ಮರಗಗಳು ಉರುಳಿಹೋಗಿವೆ ಮತ್ತು ರಾಖೈನ್ ರಾಜ್ಯ ಬಹುತೇಕ ಸಂಪರ್ಕ ಕಡಿತವಾಗಿದೆ. ಪ್ರಬಲ ಚಂಡಮಾರುತದ ನಂತರ ಪಶ್ಚಿಮ ಮ್ಯಾನ್ಮಾರ್‌ನ ಕರಾವಳಿಯಲ್ಲಿ 3.6 ಮೀಟರ್ (12 ಅಡಿ) ಆಳದ ಸಮುದ್ರದ ನೀರಿನಿಂದ ಸುಮಾರು 1000 ಜನರು ಸಿಕ್ಕಿಬಿದ್ದಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಬಲವಾದ ಗಾಳಿಯಿಂದಾಗಿ, ಸುಮಾರು 20,000 ಜನರಲ್ಲಿ 700 ಕ್ಕೂ ಹೆಚ್ಚು ಜನರು ಸಿಟ್ವೆ ಟೌನ್‌ಶಿಪ್‌ನ ಎತ್ತರದ ಪ್ರದೇಶಗಳಲ್ಲಿ ಮೊನ್ಯಾಸ್ಟರೀಸ್‌, ಪಗೋಡ ಮತ್ತು ಶಾಲೆಗಳಂತಹ ಗಟ್ಟಿಮುಟ್ಟಾದ ಕಟ್ಟಡಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರು ಜನತೆಯನ್ನು ನಡುಗಿಸುತ್ತಿರುವ Cyclone Mandous ಹೆಸರು ಬಂದಿದ್ದೇಗೆ..? ಅರ್ಥ ಏನು ನೋಡಿ..

ರಕ್ಷಣಾ ಕಾರ್ಯಾಚರಣೆ:
ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್‌ನಲ್ಲಿ ಚಂಡಮಾರುತದ ಅಬ್ಬರ ಕಡಿಮೆಯಾಗಿದ್ದು, ತುರ್ತು ನಿರ್ವಹಣಾ ಪಡೆಗಳು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ. ಈಗಾಗಲೇ ಸಿಕ್ಕಿರುವ ಮೃತದೇಹಗಳನ್ನು ಸಂಸ್ಕಾರ ಮಾಡಲಾಗಿದ್ದು, ಕಾಣೆಯಾದವರಿಗಾಗಿ ಅವಶೇಷಗಳ ಅಡಿ ಹುಡುಕಾಟ ನಡೆಸಲಾಗುತ್ತಿದೆ. ಬಾಂಗ್ಲಾದೇಶದಲ್ಲಿ 70 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಬಾಂಗ್ಲಾದೇಶಕ್ಕೆ ಒಂದು ದಿನ ಮೊದಲೇ Sitrang Cyclone ದಾಳಿ: 35 ಬಲಿ; ಭಾರತಕ್ಕೆ ಅಪಾಯವಿಲ್ಲ

Latest Videos
Follow Us:
Download App:
  • android
  • ios