Asianet Suvarna News Asianet Suvarna News

ಬೆಂಗಳೂರು ಜನತೆಯನ್ನು ನಡುಗಿಸುತ್ತಿರುವ Cyclone Mandous ಹೆಸರು ಬಂದಿದ್ದೇಗೆ..? ಅರ್ಥ ಏನು ನೋಡಿ..

ಕಳೆದ 121 ವರ್ಷಗಳಲ್ಲಿ (1891-2021), 12 ಚಂಡಮಾರುತಗಳು ಚೆನ್ನೈ ಮತ್ತು ಪುದುಚೆರ್ರಿ ನಡುವೆ ಕರಾವಳಿಯನ್ನು ದಾಟಿವೆ. ಈ ವರ್ಷದ ಡಿಸೆಂಬರ್‌ 9 ರಂದು ಅಪ್ಪಳಿಸಿದ ಮಾಂಡೌಸ್ ಚಂಡಮಾರುತವು ಈ ಪ್ರದೇಶದಲ್ಲಿ ಅಪ್ಪಳಿಸಿದ 13 ನೆಯದು ಎಂದೂ ತಿಳಿದುಬಂದಿದೆ.

what is the meaning of mandous and who named the cyclone which made landfall in tamilnadu ash
Author
First Published Dec 10, 2022, 1:25 PM IST

ಕರ್ನಾಟಕ (Karnataka), ತಮಿಳುನಾಡು (Tamil Nadu) ಸೇರಿ ಕೆಲ ರಾಜ್ಯಗಳಿಗೆ ಮ್ಯಾಂಡೌಸ್‌ ಚಂಡಮಾರುತ (Mandous Cyclone) ಅಪ್ಪಳಿಸಿದೆ. ಮಾಂಡೌಸ್ ಚಂಡಮಾರುತವು ತೀವ್ರ ಚಂಡಮಾರುತವಾಗಿ ಮಾರ್ಪಾಡಾಗಿದ್ದು, ಶುಕ್ರವಾರ ರಾತ್ರಿ ತಮಿಳುನಾಡಿನ ಮಹಾಬಲಿಪುರಂ (Mahabalipuram) ಅಥವಾ ಮಾಮಲ್ಲಪುರಂ ಅನ್ನು ಅಪ್ಪಳಿಸಿದೆ (Landfall). ಚಂಡಮಾರುತದ ತೀವ್ರತೆಯಿಂದಾಗಿ ಗಂಟೆಗೆ 85 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದು ಎಂದು ಅಂದಾಜಿಸಲಾಗಿದೆ. ಈ ಚಂಡಮಾರುತ ರಾಜ್ಯದ ಮೇಲೂ ಪರಿಣಾಮ ಬೀರಿದ್ದು, ರಾಜ್ಯ ರಾಜಧಾನಿ ಬೆಂಗಳೂರು (Bengaluru) ಶುಕ್ರವಾರ ತೀವ್ರ ಚಳಿಗೆ ಅಕ್ಷರಶಃ ನಡುಗಿತು. ಅಲ್ಲದೆ, ನಿನ್ನೆ ರಾತ್ರಿ ಹಾಗೂ ಇಂದು ಬೆಳಗ್ಗೆ ತುಂತುರು ಮಳೆ ಬೀಳುತ್ತಲೇ ಇತ್ತು. ಬಂಗಾಳಕೊಲ್ಲಿಯಲ್ಲಿನ ಚಂಡಮಾರುತದ ಪ್ರಭಾವ ರಾಜಧಾನಿಯ ಹವಾಮಾನದ ಮೇಲಾಗಿದ್ದು, ಇನ್ನೂ 2 - 3 ದಿನ ತೀವ್ರ ಚಳಿ ಇರಲಿದೆ ಎನ್ನಲಾಗಿದೆ. 

ಕಳೆದ 121 ವರ್ಷಗಳಲ್ಲಿ (1891-2021), 12 ಚಂಡಮಾರುತಗಳು ಚೆನ್ನೈ ಮತ್ತು ಪುದುಚೆರ್ರಿ ನಡುವೆ ಕರಾವಳಿಯನ್ನು ದಾಟಿವೆ. ಈ ವರ್ಷದ ಡಿಸೆಂಬರ್‌ 9 ರಂದು ಅಪ್ಪಳಿಸಿದ ಮಾಂಡೌಸ್ ಚಂಡಮಾರುತವು ಈ ಪ್ರದೇಶದಲ್ಲಿ ಅಪ್ಪಳಿಸಿದ 13 ನೆಯದು ಎಂದೂ ತಿಳಿದುಬಂದಿದೆ. ಪ್ರತಿಕೂಲ ಹವಾಮಾನದಿಂದಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಶುಕ್ರವಾರದಿಂದ ವಿವಿಧ ದೇಶೀಯ ಮತ್ತು ಅಂತರರಾಷ್ಟ್ರೀಯ ಸ್ಥಳಗಳಿಗೆ 15 ವಿಮಾನಗಳನ್ನು ರದ್ದುಗೊಳಿಸಲಾಗಿತ್ತು. ಹಾಗೆ, 27 ವಿಮಾನಗಳ ಸಂಚಾರ ವಿಳಂಬವಾಗಿದೆ ಎಂದೂ ತಿಳಿದುಬಂದಿದೆ. 

ಇದನ್ನು ಓದಿ: ಚಂಡಮಾರುತ ಎಫೆಕ್ಟ್: ಚಳಿಗೆ ಬೆಂಗಳೂರು ಗಡ, ಗಡ

ಇನ್ನು, ಈ ಚಂಡಮಾರುತಕ್ಕೆ ಮ್ಯಾಂಡೌಸ್‌ ಎಂದು ಹೆಸರು (Name) ಬಂದಿದ್ದೇಗೆ..? ಈ ಹೆಸರು ಕೊಟ್ಟಿದ್ದು ಯಾರು..? ಇದರ ಅರ್ಥ ಏನು ಅಂತ ತಲೆ ಕಡಿಸ್ಕೊತಿದ್ದೀರಾ..? ಇಲ್ಲಿದೆ ನೋಡಿ.. 
ದಕ್ಷಿಣ ಭಾರತದ ರಾಜ್ಯಗಳನ್ನು ಕಾಡುತ್ತಿರುವ ಈ ಚಂಡಮಾರುತಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (United Arab Emirates) (ಯುಎಇ) ಹೆಸರು ನೀಡಿದೆ. ವಿಶ್ವ ಹವಾಮಾನ ಸಂಸ್ಥೆಯ (WMO) ಸದಸ್ಯನಾಗಿರುವ ಯುಎಇ 2020 ರಲ್ಲಿ ಈ ಹೆಸರು ನೀಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಟ್ವಿಟ್ಟರ್‌ನಲ್ಲಿ ಲಿಸ್ಟ್‌ ಅನ್ನು ಪೋಸ್ಟ್ ಮಾಡಿದೆ.

ಹಾಗೆ, ಮ್ಯಾಂಡೌಸ್‌ ಅನ್ನೋ ಪದಕ್ಕೆ ಅರೇಬಿಕ್ ಭಾಷೆಯಲ್ಲಿ, 'ನಿಧಿ ಪೆಟ್ಟಿಗೆ' (Treasure Box) ಎಂದರ್ಥ ಮತ್ತು ಇದನ್ನು 'ಮ್ಯಾನ್-ಡೌಸ್' ಎಂದು ಉಚ್ಚರಿಸಲಾಗುತ್ತದೆ ಎಂದೂ ತಿಳಿದುಬಂದಿದೆ. ಇದು ನಿಧಾನವಾಗಿ ಚಲಿಸುವ ಚಂಡಮಾರುತವಾಗಿದ್ದು ಸಾಕಷ್ಟು ತೇವಾಂಶವನ್ನು ಹೀರಿಕೊಳ್ಳುತ್ತದೆ. ಹಾಗೆ, ಈ ಚಂಡಮಾರುತವು ಗಾಳಿಯ ವೇಗದ ರೂಪದಲ್ಲಿ ಬಲವನ್ನು ಪಡೆಯುತ್ತದೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: Chikkaballapura : ಮಾಂಡಸ್‌ ಚಂಡಮಾರುತಕ್ಕೆ ತತ್ತರಿಸಿದ ಜಿಲ್ಲೆಯ ಜನತೆ

ಪ್ರಪಂಚದಾದ್ಯಂತದ ಚಂಡಮಾರುತಗಳನ್ನು ಆಯಾ ವಿಶೇಷ ಪ್ರಾದೇಶಿಕ ಹವಾಮಾನ ಕೇಂದ್ರಗಳು ಮತ್ತು ಉಷ್ಣವಲಯದ ಚಂಡಮಾರುತ ಎಚ್ಚರಿಕೆ ಕೇಂದ್ರಗಳಿಂದ ಹೆಸರಿಸಲಾಗಿದೆ. IMD ಸೇರಿದಂತೆ 6 ಪ್ರಾದೇಶಿಕ ಕೇಂದ್ರಗಳು ಮತ್ತು 5 ಉಷ್ಣವಲಯದ ಎಚ್ಚರಿಕೆ ಕೇಂದ್ರಗಳಿವೆ.

ಮ್ಯಾಂಡೌಸ್‌ ಚಂಡಮಾರುತ ತನ್ನ ತೀವ್ರತೆಯನ್ನು ಕಾಯ್ದುಕೊಳ್ಳುತ್ತಿರುವುದರಿಂದ ತಮಿಳುನಾಡಿನ ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಚೆಂಗಲ್ಪಟ್ಟು, ವಿಲ್ಲುಪುರಂ ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. 

ಇದನ್ನು ಓದಿ: Cyclone : ರಾಜ್ಯಕ್ಕೆ 'ಮ್ಯಾಂಡೌಸ್' ಚಂಡಮಾರುತ ಆಗಮನ: ಮುಂದಿನ 5 ದಿನ ಮಳೆ

ಅಲ್ಲದೆ, ಪುದುಚೆರ್ರಿ ಬಂದರಿನಲ್ಲಿ ಐದನೇ ಸಂಖ್ಯೆಯ ಚಂಡಮಾರುತದ ಎಚ್ಚರಿಕೆ ಸಂಕೇತ ಧ್ವಜವನ್ನು ಹಾರಿಸಲಾಗಿದೆ ಮತ್ತು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮನವಿಯನ್ನೂ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಇದರ ಜತೆಗೆ, ತಮಿಳುನಾಡಿನ ಚೆನ್ನೈ, ಕಾಂಚೀಪುರಂ ಮತ್ತು ತಿರುವಳ್ಳೂರು ಸೇರಿದಂತೆ ರಾಜ್ಯದ ಸುಮಾರು 15  ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ರಜೆ ಘೋಷಿಸಲಾಗಿದೆ ಎಂದೂ ವರದಿಯಾಗಿದೆ. 

ಇದನ್ನೂ ಓದಿ: ಬಾಂಗ್ಲಾದೇಶಕ್ಕೆ ಒಂದು ದಿನ ಮೊದಲೇ Sitrang Cyclone ದಾಳಿ: 35 ಬಲಿ; ಭಾರತಕ್ಕೆ ಅಪಾಯವಿಲ್ಲ

Follow Us:
Download App:
  • android
  • ios