ಭಾರತದ ಹೋರಾಟಕ್ಕೆ ಜಪಾನ್ ನೆರವು, ಆಕ್ಸಿಜನ್, ವೆಂಟಿಲೇಟರ್ ಹೆಲ್ಪ್
ಕೊರೋನಾ ಎರಡನೇ ಅಲೆ ವಿರುದ್ಧ ಭಾರತದ ಹೋರಾಟ/ ಭಾರತದ ಬೆಂಬಲಕ್ಕೆ ನಿಂತ ಜಪಾನ್/ 300 ಆಕ್ಸಿಜನ್ ಜನರೇಟರ್ ಮತ್ತು 300 ವೆಂಟಿಲೇಟರ್ / ಇಂಗ್ಲೆಂಡ್ ನಿಂದಲೂ ನೆರವು
ನವದೆಹಲಿ (ಏ. 30) ಕೊರೋನಾ ಹೋರಾಟದಲ್ಲಿರುವ ಭಾರತದ ನೆರವಿಗೆ ಜಪಾನ್ ನಿಂತಿದೆ. 300 ಜನರೇಟರ್ ಜತೆ ವೆಂಟಿಲೇಟರ್ ಗಳನ್ನು ನೀಡಲು ಮುಂದಾಗಿದೆ. ಜಪಾನ್ ರಾಯಭಾರಿ ಸಯೋಶಿ ಸುಜುಕಿ ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಮುಖೇನ ತಿಳಿಸಿದ್ದಾರೆ. ಭಾರತದಕ್ಕೆ ಇದು ಅಗತ್ಯವಿದ್ದು ನಾವು ಕೊಡಲಿದ್ದೇವೆ ಎಂದಿದ್ದಾರೆ.
ಭಾರತ ಕೊರೋನಾ ಎರಡನೇ ಅಲೆ ವಿರುದ್ಧ ಹೋರಾಟ ಮಾಡುತ್ತಿದ್ದು ನಾವು ಕೈಜೋಡಿಸುತ್ತಿದ್ದೇವೆ 300 ಆಕ್ಸಿಜನ್ ಜನರೇಟರ್ ಮತ್ತು 300 ವೆಂಟಿಲೇಟರ್ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ್ ಶ್ರೀಂಗ್ಲಾ ಜಪಾನ್ ಸಹ ಭಾರತದ ಅತಿ ಹತ್ತಿರದ ಗೆಳೆಯ ಎಂದು ಹೇಳಿದ್ದರು. ಅಂತಾರಾಷ್ಟ್ರೀಯ ಸಂಬಂಧಗಳ ವಿಚಾರದಲ್ಲಿ ನೆರವಿನ ಬಗ್ಗೆ ಮಾತನಾಡಿದ್ದರು. ಜಪಾನ್ ವೆಂಟಿಲೇಟರ್ ಮತ್ತು ಫಾರ್ಮಾ ಉಪಕರಣಗಳನ್ನು ನೀಡುತ್ತಾ ಬಂದಿದೆ ಎಂಬುದನ್ನು ತಿಳಿಸಿದ್ದರು.
ರುಮೇನಿಯಾ ಮತ್ತು ಇಂಗ್ಲೆಂಡ್ ಸಹ ಭಾರತಕ್ಕೆ ಕೊರೋನಾ ವಿರುದ್ಧ ಹೋರಾಡುವ ಅಸ್ತ್ರಗಳನ್ನು ನೀಡಿವೆ. ರುಮೇನಿಯಾ 80 ಆಕ್ಸಿಜನ್ ಸಾಂದ್ರಕಗಳನ್ನು (concentrators) ಮತ್ತು 75 ಆಕ್ಸಿಜನ್ ಸಿಲಿಂಡರ್ ನೀಡಿದ್ದರೆ ಇಂಗ್ಲೆಂಡ್ 280 ಆಕ್ಸಿಜನ್ ಸಾಂದ್ರಕಗಳನ್ನುಗಳನ್ನು ನೀಡಿದೆ. ಭಾರತದಲ್ಲಿ ಕೊರೋನಾ ಎರಡನೇ ಅಲೆ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದ್ದು ಹಲವು ರಾಜ್ಯಗಳು ಟಫ್ ರೂಲ್ಸ್ ಮೊರೆ ಹೋಗಿವೆ.
"