ಕೊರೋನಾ ಕಂಡುಹಿಡಿಯುವ ಮೂರು ವಿಧಾನಗಳು, ಅಗತ್ಯವಾಗಿ ತಿಳ್ಕೊಳ್ಳಿ
ಕೊರೋನಾ ಬಗ್ಗೆ ಎಷ್ಟು ತಿಳಿದುಕೊಂಡರೂ ಕಡಿಮೆಯೇ/ ಕೊರೋನಾ ಕಂಡುಹಿಡಿಯುವ ಮೂರು ವಿಧಗಳು ಯಾವವು/ ಭಾರತದಲ್ಲಿ ಯಾವ ವಿಧ ಬಳಕೆ ಮಾಡಲಾಗುತ್ತಿದೆ?
ದನವದೆಹಲಿ(ಜು. 10) ಕೊರೋನಾ ವೈರಸ್ ಆರಂಭಿಕ ಲಕ್ಷಣಗಳು ಈಗಿಲ್ಲ, ವ್ಯಕ್ತಿಯಲ್ಲಿ ಕಾಣುವ ರೋಗ ಲಕ್ಷಣ ಬದಲಾಗುತ್ತಲೇ ಇದೆ ಎಂಬುದು ಹಲವು ಸಾರಿ ದಾಖಲಾಗಿದೆ. ಕೆಮ್ಮು, ಉಸಿರಾಟ ತೊಂದರೆ, ತೀವ್ರ ಜ್ವರ ಇಲ್ಲದ ವ್ಯಕ್ತಿಗೂ ಕೊರೋನಾ ಪಾಸಿಟಿವ್ ಬಂದಿರುವ ಸಾವಿರಾರು ಉದಾಹರಣೆಗಳು ಇವೆ.
ಕೊರೋನಾ ವೈರಸ್ ಪಾಸಿಟಿವ್ ಬಂದ ವ್ಯಕ್ತಿಯಲ್ಲಿ ಲಕ್ಷಣಗಳು ಇರಲಿ, ಬಿಡಲಿ ಆ ವ್ಯಕ್ತಿ ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತು ನಿರ್ದಿಷ್ಟ ಔಷಧಿಯನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ಇದಕ್ಕೆ ಇನ್ನೊಂದು ಮುಖವು ಇದೆ, ಕೊರೋನಾ ವೈರಸ್ ತಾಗಿದ್ದರೂ ವ್ಯಕ್ತಿಯ ರಿಪೋರ್ಟ್ ಮಾತ್ರ ನೆಗೆಟಿವ್ ಬರುತ್ತಿದೆ!
ಹ್ಯಾಪಿ ಹಾರ್ಮೋನ್ಸ್ ಹೆಚ್ಚಿಸಿಕೊಳ್ಳಿ, ಖುಷಿಯಾಗಿರಿ
ಮೇಲು ನೋಟಕ್ಕೆ ಈ ಮೆಡಿಕಲ್ ಟರ್ಮ್ ಗಳು ಅರ್ಥವಾಗದೇ ಹೋಗಬಹುದು. ಸರಳವಾಗಿ ಹೇಳಬೇಕು ಎಂದರೆ ಕೊರೋನಾ ಸೋಂಕಿತ ವ್ಯಕ್ತಿ ಮುನ್ನೆಚ್ಚರಿಕೆ ಮತ್ತು ವೈದ್ಯ ಸೇವೆ ಪಡೆದುಕೊಳ್ಳಲೇಬೇಕು, ಪಾಸಿಟಿವ್ ಬಾರದೇ ಇದ್ದರೂ ರೋಗ ಲಕ್ಷಣ ತೋರಿಸುತ್ತಿರುವ ವ್ಯಕ್ತಿ ಸಹ ಮುನ್ನೆಚ್ಚರಿಕೆ ಮತ್ತು ವೈದ್ಯ ಸೇವೆ ಪಡೆದುಕೊಳ್ಳಲೇಬೇಕು.
ಈ ರೀತಿಯ ಪ್ರಕರಣಕ್ಕೆ ಸಂಬಂಧಿಸಿ ತಜ್ಞರು ದೆಹಲಿಯ ವೃದ್ಧರೊಬ್ಬರ ಉದಾಹರಣೆ ಕೊಡುತ್ತಾರೆ. ಕೆಮ್ಮು, ಕಫದಿಂದ ಬಳಲುತ್ತಿದ್ದ 80 ವರ್ಷದ ವ್ಯಕ್ತಿಗೆ ಮೇಲಿಂದ ಮೇಲೆ ಕೊರೋನಾ ಟೆಸ್ಟ್ ಮಾಡಿಸಲಾಗಿದೆ. ಆದರೆ ಒಮ್ಮೆಯೂ ಪಾಸಿಟಿವ್ ಬಂದಿಲ್ಲ. ಇದಾದ ಮೇಲೆ ಎದೆಯ ಎಕ್ಸರೇ ಮತ್ತು ಸ್ಕಾನ್ ಮಾಡಲಾಗಿದೆ ಅಲ್ಲಿಯೂ ರೋಗ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ. ರೋಗ ಲಕ್ಷಣಗಳ ಆಧಾರದಲ್ಲಿ ಆಂಟಿಬಾಡಿ ಟೆಸ್ಟ್ ಮಾಡಿಸಿದಾಗ ಕೊರೋನಾ ಇರುವುದು ಪತ್ತೆಯಾಗಿದೆ. ಈ ರೀತಿಯ ವಿಚಿತ್ರಗಳು ವೈದ್ಯ ಲೋಕವನ್ನೇ ಮತ್ತಷ್ಟು ಸಂಕಷ್ಟಕ್ಕೆ ಗುರಿ ಮಾಡಿಬಿಡುತ್ತವೆ.
ಏಮ್ಸ್ ನ ಡಾಕ್ಟರ್ ಗುಜಾರ್ ಹೇಳುವಂತೆ, ವೈದ್ಯರು ಆತ ಎದುರಿಸುತ್ತಿರುವ ರೋಗ ಲಕ್ಷಣಗಳ ಆಧಾರದಲ್ಲಿ ಟ್ರೀಟ್ ಮೆಂಟ್ ನೀಡಬೇಕೇ ವಿನಾ ರಿಪೋರ್ಟ್ ಗಳ ಆಧಾರದಲ್ಲಿ ಅಲ್ಲ. ವಯೋವೃದ್ಧರ ಕೇಸ್ ಆಗಿದ್ದರೆ ಒಮ್ಮೆಯೇ ವಿಕೋಪಕ್ಕೆ ಹೋಗುವ ಸಾಧ್ಯತೆ ಇರುತ್ತದೆ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ.
ಬೆಂಗಳೂರಲ್ಲಿ ಕೊರೋನಾ ಹೆಚ್ಚಾಗಲು ಅಸಲಿ ಕಾರಣ ಏನು?
ಕೊರೋನಾ ಇದ್ದರೂ ನೆಗೆಟಿವ್ ರಿಪೋರ್ಟ್ ಬರಲು ಕಾರಣಗಳು ಏನು?
ಈ ಅಂಶ ಸಹ ಬಹಳ ಪ್ರಮುಖವಾಗುತ್ತದೆ. ವ್ಯಕ್ತಿಗೆ ಕೊರೋನಾ ಇದ್ದರೂ ಸಹ ರಿಪೋರ್ಟ್ ನೆಗೆಟಿವ್ ಬರುತ್ತಲಿರುತ್ತದೆ. ಇದು ನಿಜಕ್ಕೂ ದೊಡ್ಡ ಆತಂಕಕಾರಿ ಸಂಗತಿ.
ಗಂಟಲು ದ್ರವ ಸಂಗ್ರಹಣೆಯಲ್ಲಿ ಲೋಪ, ಕೆಲವು ಬಯಾಲಾಜಿಕಲ್ ಕಾರಣಗಳು ವೈರಸ್ ಇರುವಿಕೆಯನ್ನು ಕಾಣಿಸದೇ ಇರಬಹುದು. ನ್ಯಾಶನಲ್ ಫೌಂಡೇಶನ್ ಫಾರ್ ಇನ್ ಫೆಕ್ಷನ್ ಡೀಸಿಸ್ ಮೂರು ಬಗೆಯ ಕೊರೋನಾ ಟೆಸ್ಟ್ ಗಳ ಉಲ್ಲೇಖ ಮಾಡಿದೆ.
* ಮೊಲ್ಯಾಕ್ಯುಲರ್ ಟೆಸ್ಟ್: ಅನುವಂಶಿಕವಾಗಿ ವೈರಸ್ ಹರಡುವಿಕೆ ಟೆಸ್ಟ್
* ಆಂಟಿ ಜೆನ್ ಟೆಸ್ಟ್; ಮೂಗಿನ ಸಿಂಬಳದ ಮೂಲಕ ವೈರಸ್ ಇರುವಿಕೆ ಗುರುತಿಸುವುದು
* ಆಂಟಿಬಾಡಿ ಟೆಸ್ಟ್; ಈ ಮೊದಲು ವೈರಸ್ ತಾಗಿದ್ದರೆ ಗುರುತು ಮಾಡುವ ಪರೀಕ್ಷೆ
RT-PCR ಮತ್ತು ಆಂಟಿ ಬಾಡಿ ಪರೀಕ್ಷೆ ಮೂಲಕ ಭಾರತದಲ್ಲಿ ಕೊರೋನಾ ಪತ್ತೆ ಮಾಡಲಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವೈದ್ಯಕೀಯ ಸಲಹೆ ಇಲ್ಲದೆಯೇ ಖಾಸಗಿ ಲ್ಯಾಬ್ ಗಳು ಆಂಟಿ ಬಾಡಿ ಟೆಸ್ಟ್ ಮಾಡಲು ಅವಕಾಶ ನೀಡಲಾಗಿದೆ.