ಕೊಲಂಬಿಯಾದ ಖ್ಯಾತ ಗಾಯಕ ಯೀಸನ್ ಜಿಮೆನೆಜ್, ವಿಮಾನ ಅಪಘಾತದಲ್ಲಿ ಸಾವನ್ನಪ್ಪುವುದಕ್ಕೂ ಕೆಲ ವಾರಗಳ ಮೊದಲು, ತಮಗೆ ವಿಮಾನ ದುರಂತದಲ್ಲಿ ಸಾಯುವಂತೆ ಕನಸು ಬೀಳುತ್ತಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅವರ ಈ ಮಾತು ಈಗ ಕನಸುಗಳು ನಿಜವಾಗುತ್ತವೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ಕೆಲ ದಿನಗಳ ಹಿಂದಷ್ಟೇ ಕೊಲಂಬಿಯಾದ ಖ್ಯಾತ ಗಾಯಕನಾದ ಗೀತೆ ರಚನೆಕಾರ ಯೀಸನ್ ಜಿಮೆನೆಜ್ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಸಂಗೀತಾ ಕಾರ್ಯಕ್ರಮ ನೀಡುವುದಕ್ಕಾಗಿ ಅವರು ವಿಮಾನದಲ್ಲಿ ಹೋಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ಅವರು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದರು. ಜನವರಿ 10ರಂದು ಶನಿವಾರ ಈ ಘಟನೆ ನಡೆದಿತ್ತು. ಅವರಿಗೆ 34 ವರ್ಷ ವಯಸ್ಸಾಗಿತ್ತು. ಆದರೆ ಘಟನೆ ನಡೆಯುವುದಕ್ಕೂ ಎರಡು ವಾರಗಳ ಹಿಂದೆ ತನಗೆ ನಿರಂತರವಾಗಿ ಸಾವಿನ ಬಗ್ಗೆ ಕನಸು ಬೀಳುತ್ತಿತ್ತು. ವಿಮಾನ ಅಪಘಾತದಲ್ಲಿ ಸಾವಿಗೀಡಾದಂತೆ ಕನಸು ಬೀಳುತ್ತಿತ್ತು ಎಂದು ಅವರು ಹೇಳಿಕೊಂಡಿದ್ದಾರೆ ಎಂಬ ವಿಚಾರವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ಜನವರಿ 10ರಂದು ವಿಮಾನ ದುರಂತದಲ್ಲಿ ಸಾವಿಗೀಡಾಗುವುದಕ್ಕೂ ಕೆಲ ವಾರಗಳ ಮೊದಲು ಅಂದರೆ ಡಿಸೆಂಬರ್ 2025ರಲ್ಲಿ ಅವರು ನೀಡಿದ ಸಂದರ್ಶನದಲ್ಲಿ ಅವರು ತನಗೆ ಪದೇ ಪದೇ ಸಾವಿನ ಕನಸು ಬೀಳುತ್ತಿದೆ. ವಿಮಾನ ದುರಂತದಲ್ಲಿ ಮೃತಪಟ್ಟಂತೆ ಕನಸು ಬೀಳುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಅದರಂತೆ ಕೊನೆಗೂ ಅವರು ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದು, ಈಗ ಈ ವಿಚಾರ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ. ಕನಸುಗಳು ನಿಜವಾಗುತ್ತವೆಯೇ ಎಂಬ ಪ್ರಶ್ನೆ ಮೂಡಿದೆ.

ಡಿಸೆಂಬರ್ 2025ರ ಸಂದರ್ಶನದಲ್ಲಿ ಅವರು ನನಗೆ ಮೂರು ಬಾರಿ ಸಾವಿನ ಬಗ್ಗೆ ಕನಸು ಬಿದ್ದಿದೆ. ಅದನ್ನು ನಾನು ದೇವರ ಎಚ್ಚರಿಕೆ ಎಂದು ಭಾವಿಸುತ್ತೇನೆ ಎಂದು ಹೇಳಿಕೊಂಡಿದ್ದರು. ಆದರೆ ದೇವರ ಎಚ್ಚರಿಕೆಯನ್ನು ಅವರು ಗಂಭೀರವಾಗಿ ಪರಿಗಣಿಸಲಿಲ್ಲವೇ ಎಂಬುದು ಅವರ ಅಭಿಮಾನಿಗಳ ಪ್ರಶ್ನೆಯಾಗಿದೆ. ಯೀಸನ್ ಜಿಮೆನೆಜ್ ಅವರಿಗೆ ತಾವು ಹಾಗೂ ತಮ್ಮ ತಂಡ ವಿಮಾನ ಅಪಘಾತದಲ್ಲಿ ಸಿಲುಕಿ ನಂತರ ಸುದ್ದಿಯಲ್ಲಿರುವಂತೆ ಕನಸು ಬಿದ್ದಿತ್ತು. ಒಂದು ಬಾರಿ ಬಿದ್ದ ಕನಸಿನಲ್ಲಿ ಅವರಿಗೆ ವಿಮಾನವು ಅಲುಗಾಡುತ್ತಿರುವುದು, ನಿಯಂತ್ರಣ ಕಳೆದುಕೊಳ್ಳುತ್ತಿರುವುದು ಹಾಗೂ ವಿಮಾನದ ಒಂದು ರೆಕ್ಕೆ ಕಳಚಿ ಬೀಳುತ್ತಿರುವುದನ್ನು ನೋಡಿದಾಗಿ ಅವರು ಹೇಳಿದ್ದರು.

ಇದನ್ನೂ ಓದಿ: ಬಿಜ್ನೋರ್‌ನ ದೇವಾಲಯದಲ್ಲಿ ವಿಚಿತ್ರ ಘಟನೆ: ಕಳೆದ 48 ಗಂಟೆಗಳಿಂದ ಹನುಮನ ಪ್ರತಿಮೆಗೆ ನಿರಂತರ ಪ್ರದಕ್ಷಿಣೆ ಹಾಕುತ್ತಿರುವ ಶ್ವಾನ

ಆ ಕನಸುಗಳು ಯೀಸನ್ ಜಿಮೆನೆಜ್ ಅವರನ್ನು ಎಷ್ಟು ಭಯಭೀತಿಗೊಳಿಸಿದ್ದವೆಂದರೆ ಆ ಕನಸಿನಿಂದ ಹೊರ ಬರಲು ಅವರು ಮನಶಾಸ್ತ್ರಜ್ಞರ ಮೊರೆ ಹೋಗಿದ್ದಾಗಿಯೂ ಹೇಳಿಕೊಂಡಿದ್ದರು. ಅಲ್ಲದೇ ಕನಸಿನಲ್ಲಿ ಸಿಕ್ಕ ಈ ಮುನ್ಸೂಚನೆಯನ್ನು ಅವರು, ಅದೇ ವಿಮಾನವು ಮಾರಕ ಅಪಘಾತಕ್ಕೀಡಾಗಿ ಅವರನ್ನು ಹಾಗೂ ಅವರ ತಂಡವನ್ನು ಬಲಿಪಡೆಯುವುದಕ್ಕೂ ಕೆಲ ವಾರಗಳ ಹಿಂದೆ ಆದಂತಹ ತುರ್ತು ಲ್ಯಾಂಡಿಂಗ್‌ಗೆ ಹೋಲಿಸಿ ಸುಮ್ಮನಾಗಿದ್ದರು.

ಬಹುಶಃ ವಿಧಿ ಬರಹ ಕನಸಿನಲ್ಲೇ ಬಂದು ಅವರಿಗೆ ಮೊದಲೇ ಮುನ್ಸೂಚನೆ ನೀಡಿತ್ತೋ ಏನೋ ಇದಾಗಿ ಎರಡೇ ಎರಡು ವಾರಗಳಲ್ಲಿ ಗಾಯಕ ಯೀಸನ್ ಜಿಮೆನೆಜ್ ಹಾಗೂ ಅವರ ತಂಡ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದನ್ನು ವಿಧಿ ವಿಪರ್ಯಾಸ ಎನ್ನಬೇಕು ಕಾಕಾತಾಳೀಯ ಎನ್ನಬೇಕೋ ತಿಳಿಯುತ್ತಿಲ್ಲ.

ಇದನ್ನೂ ಓದಿ: ಆಕಸ್ಮಿಕವಾಗಿ ಅಕ್ಸಿಲರೇಟ್ ಒತ್ತಿದ ಬಾಲಕಿ : ಸೆಗಣಿ ರಾಶಿಯಿಂದಾಗಿ ತಪ್ಪಿತ್ತು ದೊಡ್ಡ ಅನಾಹುತ:ವೀಡಿಯೋ

ಜನವರಿ 10ರಂದು ಜಿಮೆನೆಜ್ ಮತ್ತು ಅವನ ಸಂಗೀತ ತಂಡ ಮತ್ತು ಪೈಲಟ್ ಸೇರಿದಂತೆ ಇತರ ಐದು ಜನರು, ಮಧ್ಯೆ ಕೊಲಂಬಿಯಾದ ಪೈಪಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ಪತನಗೊಂಡು ಅವರು ಸಾವನ್ನಪ್ಪಿದ್ದರು. ಇದು ಅವರ ಕನಸ್ಸನ್ನೇ ಪ್ರತಿಬಿಂಬಿಸಿದಂತಿದೆ. ಕೊಲಂಬಿಯಾದ ಬೊಯಾಕಾ ರಾಜ್ಯದಲ್ಲಿ ಘಟನೆ ನಡೆದಿತ್ತು. ಅವರ ಮ್ಯಾನೇಜರ್ ಜೆಫರ್ಸನ್ ಒಸೊರಿಯೊ ಸೇರಿದಂತೆ ಇತರ ಐದು ಜನರು ಈ ದುರಂತದಲ್ಲಿ ಸಾವನ್ನಪ್ಪಿದ್ದರು. ಘಟನೆ ನಡೆಯುವುದಕ್ಕೂ ಮೊದಲು ಯೀಸನ್ ಜಿಮೆನೆಜ್ ತಮ್ಮ ತಂಡದೊಂದಿಗೆ ಮರಿನಿಲ್ಲಾ ಬಳಿಯ ಮೆಡೆಲಿನ್‌ಗೆ ಸಂಗೀತ ಕಾರ್ಯಕ್ರಮಕ್ಕಾಗಿ ತೆರಳುತ್ತಿದ್ದರು.

ತಮ್ಮ ಜೀವಿತಾವಧಿಯ 32 ವರ್ಷದಲ್ಲಿ ಸಾಕಷ್ಟು ಸಾಧನೆ ಮಾಡಿದ ಜಿಮೆನೆಜ್ ಅವರು 8 ಆಲ್ಬಮ್‌ಗಳನ್ನು ಬಿಡುಗಡೆ ಮಾಡಿದರು ಮತ್ತು 70 ಹಾಡುಗಳನ್ನು ಬರೆದಿದ್ದಾರೆ. ಅದರಲ್ಲಿ ಅವರ 2023 ರ ಹಿಟ್‌ಗಳಾದ 'ವೆಟೆ' ಮತ್ತು 'ಅವೆಂಚುರೆರೊ' ಸೇರಿವೆ. ಅವರು ಯುಎಸ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಗೀತ ಪ್ರದರ್ಶನ ನೀಡಿದ್ದು, ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ.