ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಸೈಫರ್‌ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಇಸ್ಲಾಮಾಬಾದ್‌ (ಜನವರಿ 30, 2024): ಸೈಫರ್ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇವರ ಜತೆಗೆ ನಿಕಟವರ್ತಿ ಶಾ ಮಹಮೂದ್ ಖುರೇಷಿಗೆ ಸಹ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಪಾಕಿಸ್ತಾನಿ ಮಾಧ್ಯಮ ವರದಿಗಳು ತಿಳಿಸಿವೆ. 

ಅಧಿಕೃತ ರಹಸ್ಯ ಕಾಯಿದೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಬುಲ್ ಹಸ್ನಾತ್ ಜುಲ್ಕರ್ನೈನ್ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ವಿಚಾರಣೆ ನಡೆಸಿದ ನಂತರ ಈ ಪ್ರಕರಣದಲ್ಲಿ ಪಾಕ್‌ ಮಾಜಿ ಪ್ರಧಾನಿ ವಿರುದ್ಧ ಈ ತೀರ್ಪು ನೀಡಿದರು. ಈಗಾಗಲೇ ಇಮ್ರಾನ್‌ ಖಾನ್‌ ಬೇರೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ.

ಇದನ್ನು ಓದಿ: ಭಾರತ ಚಂದ್ರನ ತಲುಪಿದ್ರೆ ನಾವಿನ್ನೂ ನೆಲದಿಂದ್ಲೇ ಎದ್ದಿಲ್ಲ: ಮತ್ತೆ ಭಾರತ ಹೊಗಳಿದ ಪಾಕ್ ಮಾಜಿ ಪ್ರಧಾನಿ

ಏನಿದು ಸೈಫರ್‌ ಕೇಸ್‌?

ಇಮ್ರಾನ್ ಖಾನ್ ಸೈಫರ್ ಎಂಬ ರಹಸ್ಯ ರಾಜತಾಂತ್ರಿಕ ಕೇಬಲ್ ಮಾಹಿತಿಯನ್ನು ಬಹಿರಂಗಪಡಿಸಿದಾಗ ಅಧಿಕೃತ ರಹಸ್ಯ ಕಾಯಿದೆ ಉಲ್ಲಂಘಿಸಿದ್ದಾರೆ ಎಂಬ ಆರೋಪವನ್ನು ಎದುರಿಸಿದರು. ಕಳೆದ ವರ್ಷ ಮಾರ್ಚ್‌ನಲ್ಲಿ ವಾಷಿಂಗ್ಟನ್‌ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ಇದನ್ನು ಕಳುಹಿಸಿತ್ತು. ಇಮ್ರಾನ್‌ ಖಾನ್ ನಂತರ ರಾಜತಾಂತ್ರಿಕ ಕೇಬಲ್ ಅನ್ನು ಕಳೆದುಕೊಂಡರು ಎಂದು ವರದಿಯಾಗಿದೆ.

ಉಡುಗೊರೆ ಪ್ರಕರಣದಲ್ಲಿ ಇಮ್ರಾನ್ ಖಾನ್ ಜೈಲಿಂದ ರಿಲೀಸ್‌, ತಕ್ಷಣವೇ ಮತ್ತೊಂದು ಕೇಸಲ್ಲಿ ಬಂಧನ!

ಪಾಕಿಸ್ತಾನದಲ್ಲಿ ಆಗ ಅಧಿಕಾರದಲ್ಲಿದ್ದ ಪಿಟಿಐ ಸರ್ಕಾರವನ್ನು ಉರುಳಿಸಲು ಅಮೆರಿಕದಿಂದ ಕೇಬಲ್‌ಗೆ ಬೆದರಿಕೆ ಇದೆ ಎಂದು ಇಮ್ರಾನ್‌ ಖಾನ್ ಮತ್ತು ಶಾ ಮಹಮೂದ್‌ ಖುರೇಷಿ ಇಬ್ಬರೂ ಹೇಳಿಕೊಂಡಿದ್ದರು.

2022ರ ಏಪ್ರಿಲ್‌ನಲ್ಲಿ ಅವಿಶ್ವಾಸ ಮತದ ನಂತರ ಇಮ್ರಾನ್‌ ಖಾನ್ ರನ್ನು ಪ್ರಧಾನಿ ಕಚೇರಿಯಿಂದ ಹೊರಹಾಕಲಾಯಿತು. ಪಾಕಿಸ್ತಾನ ಪ್ರಧಾನಿ ಹುದ್ದೆಯಿಂದ ಬಿಡುಗಡೆಯಾದ ನಂತರ ಅವರ ವಿರುದ್ಧ 150ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆ ಇವರು ಮ್ತತೆ ರಾಜಕೀಯ ಜೀವನಕ್ಕೆ ಬರ್ತಾರಾ ಅನ್ನೋದೇ ಯಕ್ಷಪ್ರಶ್ನೆಯಾಗಿದೆ. 

ಇಮ್ರಾನ್‌ ಖಾನ್‌ಗೆ ಅಧಿಕಾರ ನಿರಾಕರಿಸಿದರೆ, ಸೇನಾಧಿಕಾರ ಪಾಕಿಸ್ತಾನಕ್ಕೆ ಅನಿವಾರ್ಯ!

ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ತೋಷಖಾನಾ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತಪ್ಪಿತಸ್ಥ ಎಂದು ಸಾಬೀತಾಗಿತ್ತು. ಅಲ್ಲದೆ, ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು. ಹಾಗೂ ಪಿಟಿಐ ಅಧ್ಯಕ್ಷರನ್ನು ಅನರ್ಹಗೊಳಿಸಲಾಗಿದ್ದು, ಅವರು ಐದು ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದೂ ಹೇಳಿತ್ತು. ಜತೆಗೆ, 1 ಲಕ್ಷ ಪಾಕಿಸ್ತಾನಿ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಇನ್ನು, ಕೋರ್ಟ್‌ ತೀರ್ಪು ಬೆನ್ನಲ್ಲೇ ಅವರನ್ನು ಬಂಧಿಸಲಾಗಿತ್ತು.