ಕರಾಚಿಯಲ್ಲಿ ಚೀನಾ ಯುದ್ಧನೌಕೆ, ಸಬ್‌ಮರೀನ್ ಲಂಗರು: ಪಾಕ್ ಜತೆ ಸೇರಿ ಜಂಟಿ ನೌಕಾ ತಾಲೀಮು
ಈಗಾಗಲೇ ಪೆಸಿಫಿಕ್ ಸಾಗರ, ಹಿಂದೂ ಮಹಾಸಾಗರದಲ್ಲಿ ತನ್ನ ಛಾಪು ಮೂಡಿಸಲು ಧಾವಂತದಲ್ಲಿರುವ ಚೀನಾ ನೌಕಾಪಡೆ, ಈಗ ಪಾಕಿಸ್ತಾನದಲ್ಲೂ ತನ್ನ ಉಪಸ್ಥಿತಿ ಮೂಲಕ ನೆರೆ ದೇಶ ಭಾರತಕ್ಕೆ ಸಂದೇಶ ರವಾನಿಸಲು ಯತ್ನಿಸಿದೆ. ಚೀನಾದ ಮುಂಚೂಣಿ ಯುದ್ಧನೌಕೆಗಳು, ಸಬ್‌ಮರೀನ್ ಹಾಗೂ ಇತರ ಕೆಲವು ನೌಕಾಪಡೆಯ ಹಡಗುಗಳು ಕರಾಚಿ ಬಂದರಿಗೆ ಆಗಮಿಸಿ ಲಂಗರು ಹಾಕಿವೆ.
ನವದೆಹಲಿ: ಈಗಾಗಲೇ ಪೆಸಿಫಿಕ್ ಸಾಗರ, ಹಿಂದೂ ಮಹಾಸಾಗರದಲ್ಲಿ ತನ್ನ ಛಾಪು ಮೂಡಿಸಲು ಧಾವಂತದಲ್ಲಿರುವ ಚೀನಾ ನೌಕಾಪಡೆ, ಈಗ ಪಾಕಿಸ್ತಾನದಲ್ಲೂ ತನ್ನ ಉಪಸ್ಥಿತಿ ಮೂಲಕ ನೆರೆ ದೇಶ ಭಾರತಕ್ಕೆ ಸಂದೇಶ ರವಾನಿಸಲು ಯತ್ನಿಸಿದೆ. ಚೀನಾದ ಮುಂಚೂಣಿ ಯುದ್ಧನೌಕೆಗಳು, ಸಬ್‌ಮರೀನ್ ಹಾಗೂ ಇತರ ಕೆಲವು ನೌಕಾಪಡೆಯ ಹಡಗುಗಳು ಕರಾಚಿ ಬಂದರಿಗೆ ಆಗಮಿಸಿ ಲಂಗರು ಹಾಕಿವೆ.
ಚೀನಾ ಹಾಗೂ ಪಾಕಿಸ್ತಾನ ಸೀ ಗಾರ್ಡಿಯನ್ -3 ಹೆಸರಿನ ಅತಿ ದೊಡ್ಡ ನೌಕಾ ತಾಲೀಮು ಆರಂಭಿಸಿರುವ ನಡುವೆಯೇ ಈ ವಿದ್ಯಮಾನ ನಡೆದಿದೆ. ಚೀನಾ ಯುದ್ಧನೌಕೆ, ಸಬ್‌ಮರೀನ್ ಹಾಗೂ ಇತರ ಹಡಗುಗಳ ಉಪಸ್ಥಿತಿಯು ಮ್ಯಾಕ್ಸರ್ ಟೆಕ್ನಾಲಜೀಸ್ (Maxer Technologies) ನೀಡಿರುವ ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಈ ಹಡಗುಗಳ ಸನಿಹ ಯಾರೂ ಸುಳಿಯದಂತೆ ತಡೆಗೋಡೆಗಳನ್ನು ನಿರ್ಮಿಸಲಾಗಿದೆ ಎಂದು ಎನ್‌ಡಿಟೀವಿ ವರದಿ ಮಾಡಿದೆ.
ಭಾರತದ ಓಲೈಕೆ ಬೇಡ: ಇದು ಅಮೆರಿಕ ಪಾಲಿಗೆ ದುರಂತ: ಚೀನಾ
2013ರ ನಂತರ ಹಿಂದೂ ಮಹಾಸಾಗರದಲ್ಲಿ (Indian Ocean) ಚೀನಾ ನೌಕಾಪಡೆ 8ನೇ ಬಾರಿ ಈ ರೀತಿ ತನ್ನ ಯುದ್ಧನೌಕೆಗಳನ್ನು ನಿಯೋಜಿಸಿದೆ ಎಂದು ವರದಿಗಳು ಹೇಳಿವೆ. ಚೀನಾ ಕಳೆದ ವರ್ಷ ತನ್ನ ಯುದ್ಧನೌಕೆಯನ್ನು ಶ್ರೀಲಂಕಾ ಕಡಲ ತೀರದಲ್ಲಿ ಲಂಗರು ಹಾಕಿತ್ತು ಹಾಗೂ ಆ ನೌಕೆ ಭಾರತ ಹಾಗೂ ಅಂಡಮಾನ್ ಕರಾವಳಿ ತೀರಗಳ ಸನಿಹದಲ್ಲಿ ಹಾದು ಹೋಗಿತ್ತು. ಇದು ಬೇಹುಗಾರಿಕಾ ನೌಕೆಯಾಗಿದೆ ಎಂಬ ಗುಲ್ಲು ಹರಡಿ, ಭಾರತದ ಆತಂಕಕ್ಕೆ ಕಾರಣವಾಗಿತ್ತು. ಅಲ್ಲದೆ, ಆಫ್ರಿಕಾದ ಜಿಬೌತಿಯಲ್ಲಿ ಪ್ರಮುಖ ನೆಲೆಯನ್ನು ಚೀನಾ ನಿರ್ಮಿಸಿದ್ದು, ಅಲ್ಲಿ ಕೂಡ ತನ್ನ ಪ್ರಾಬಲ್ಯ ಮೆರೆಯಲು ಯತ್ನಿಸಿತ್ತು.
ಚೀನಾ ಹತ್ತಿಕ್ಕಲು ಅಮೆರಿಕಾ ಜೊತೆ ಸೇರಿ ಜಂಟಿಯಾಗಿ ಸೇನಾ ಸ್ಟ್ರೈಕರ್ ನಿರ್ಮಾಣಕ್ಕೆ ಭಾರತ ನಿರ್ಧಾರ
ಕರಾಚಿಯಲ್ಲಿ ಈಗ ಟೈಪ್ 039 ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆಯನ್ನು ನಿಯೋಜಿಸಿದೆ. ಆದರೆ ತನ್ನ ಪರಮಾಣು ಜಲಾಂತರ್ಗಾಮಿ ನೌಕೆಯನ್ನು ಸಹ ನಿಯೋಜಿಸಲಾಗಿದೆಯೇ ಎಂಬುದು ಅಸ್ಪಷ್ಟವಾಗಿದೆ. ಆದರೂ ತನ್ನ ತವರು ಬಂದರುಗಳಿಂದ ಹಲವಾರು ಸಾವಿರ ಕಿ.ಮೀ. ದೂರದಲ್ಲಿ ನೌಕಾ ಆಸ್ತಿಗಳನ್ನು ನಿಯೋಜಿಸಲು ಬೀಜಿಂಗ್ ಆತ್ಮವಿಶ್ವಾಸ ಪ್ರದರ್ಶಿಸಿರುವುದು ಇಲ್ಲಿ ಗಮನಾರ್ಹ ಎಂದು ರಕ್ಷಣಾ ತಜ್ಞರು ಹೇಳಿದ್ದಾರೆ.
ಚೀನಾ (china) ಈಗಾಗಲೆ ಪಾಕಿಸ್ತಾನಕ್ಕೆ ರಕ್ಷಣಾ ವಲಯ ಹಾಗೂ ಮೂಲಸೌಕರ್ಯ ವಲಯದಲ್ಲಿ ಸಾಕಷ್ಟು ಸಹಾಯ ಮಾಡಿದೆ. ಈ ಮೂಲಕ ಭಾರತದ ಸಮಾನ ಶತ್ರುಗಳಾದ ಚೀನಾ ಹಾಗೂ ಪಾಕಿಸ್ತಾನಗಳು ಭಾರತಕ್ಕೆ ಜಂಟಿಯಾಗಿ ಸಡ್ಡು ಹೊಡೆಯಲು ಯತ್ನಿಸುತ್ತಿವೆ.
ಇಸ್ರೇಲ್ ಬಳಿಕ ತೈವಾನ್‌ನಿಂದಲೂ ಭಾರತದ ಕಾರ್ಮಿಕರಿಗೆ ಬೇಡಿಕೆ: 1 ಲಕ್ಷ ಕೆಲಸಗಾರರ ನೇಮಕಕ್ಕೆ ನಿರ್ಧಾರ