ಚೀನಾ ಹತ್ತಿಕ್ಕಲು ಅಮೆರಿಕಾ ಜೊತೆ ಸೇರಿ ಜಂಟಿಯಾಗಿ ಸೇನಾ ಸ್ಟ್ರೈಕರ್ ನಿರ್ಮಾಣಕ್ಕೆ ಭಾರತ ನಿರ್ಧಾರ
ಬಹು ವಿಧದ ಬಳಕೆಗೆ ಬರುವ ಸೇನಾ ವಾಹನ ಸ್ಟ್ರೈಕರ್ ಅನ್ನು ಜಂಟಿಯಾಗಿ ತಯಾರಿಸಲು ಭಾರತ ಹಾಗೂ ಅಮೆರಿಕ ಒಪ್ಪಂದ ಮಾಡಿಕೊಂಡಿವೆ. ಇದು ಏಷ್ಯಾ ಖಂಡದಲ್ಲಿ ಚೀನಾದ ಸೇನಾ ಪ್ರಾಬಲ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಎಂದು ಬಣ್ಣಿಸಲಾಗಿದೆ.
ನವದೆಹಲಿ: ಬಹು ವಿಧದ ಬಳಕೆಗೆ ಬರುವ ಸೇನಾ ವಾಹನ ಸ್ಟ್ರೈಕರ್ ಅನ್ನು ಜಂಟಿಯಾಗಿ ತಯಾರಿಸಲು ಭಾರತ ಹಾಗೂ ಅಮೆರಿಕ ಒಪ್ಪಂದ ಮಾಡಿಕೊಂಡಿವೆ. ಇದು ಏಷ್ಯಾ ಖಂಡದಲ್ಲಿ ಚೀನಾದ ಸೇನಾ ಪ್ರಾಬಲ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಎಂದು ಬಣ್ಣಿಸಲಾಗಿದೆ. ಉಭಯ ದೇಶಗಳ ಸೇನಾ ಹಾಗೂ ವಿದೇಶಾಂಗ ಸಚಿವಾಲಯಗಳ ನಡುವೆ ನಡೆದ 2+2 ಮಾತುಕತೆಯ ನಂತರ ಮಾತನಾಡಿದ ಅಮೆರಿಕ ಸೇನಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು 'ಈ ಒಪ್ಪಂದವು ಎರಡೂ ದೇಶಗಳ ಸೇನೆಗಳಿಗೆ ಸಹಕಾರವನ್ನು ನೀಡುವ ಮೂಲಕ ನಮ್ಮ ಬಲವನ್ನು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ.
ಮುಂಬೈ, ಪಠಾಣ್‌ಕೋಟ್ ದಾಳಿಕೋರರಿಗೆ ಶಿಕ್ಷೆ ಆಗಲಿ
26/11 ಮುಂಬೈ ದಾಳಿ ಮತ್ತು ಪಠಾಣ್‌ಕೋಟ್ (Pathankot) ಮೇಲೆ ದಾಳಿ ಮಾಡಿದ ಉಗ್ರರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಭಾರತ ಮತ್ತು ಅಮೆರಿಕ, ಭಯೋತ್ಪಾದನೆಗೆ ಮೂಲ ವಾಗಿರುವ ಪಾಕಿಸ್ತಾನಕ್ಕೆ ಇದೇ 2+2 ಸಚಿವರ ಮಟ್ಟದ ಮಾತುಕತೆ ವೇಳೆ ತಾಕೀತು ಮಾಡಿವೆ. ಶುಕ್ರವಾರ ಇಲ್ಲಿ ನಡೆದ ಉಭಯ ದೇಶಗಳ ನಡುವಿನ ವಿದೇಶಾಂಗ ಮತ್ತು ರಕ್ಷಣಾ ಸಚಿವರ ಮಟ್ಟದ 2+2 ಸಭೆಯಲ್ಲಿ (Defense Minister level meeting) ಉಭಯ ದೇಶಗಳು ಭಯೋತ್ಪಾದನೆಯನ್ನು ಖಂಡಿಸಿವೆ. ಸಭೆಯ ವೇಳೆ ಉಭಯ ದೇಶಗಳು ಭಯೋತ್ಪಾದನೆ, ಹಿಂಸಾತ್ಮಕ ವಿಧ್ವಂಸಕತೆ ಮತ್ತು ಉಗ್ರರಿಗೆ ಹಣಕಾಸಿನ ಮತ್ತು ಮಿಲಿಟರಿ ಸಹಾಯ ಒದಗಿಸುವುದಕ್ಕೆ ಉಭಯ ದೇಶಗಳು ವಿರೋಧ ವ್ಯಕ್ತಪಡಿಸಿದವು.
ಭಾರತದಿಂದ ಬರುವ ಚಂದ್ರಯಾನ-3 ಮಾಹಿತಿಗಾಗಿ ರಷ್ಯಾ, ಅಮೆರಿಕ ಕಾಯುತ್ತಿದೆ: ಜೀತೇಂದ್ರ ಸಿಂಗ್!
ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಮಾನವ ಹಕ್ಕುಗಳನ್ನು ಗೌರವಿಸಬೇಕು. ಅಲ್ ಖೈದಾ, ಐಸಿಸ್, ಲಷ್ಕರ್ ಎ ತೊಯ್ದಾ, ಜೈಶ್ ಎ ಮೊಹಮ್ಮದ್ ಸಂಘಟನೆಗಳಿಗೆ ಬೆಂಬಲ ನೀಡಬಾರದು. ಅಂತಾರಾಷ್ಟ್ರೀಯವಾಗಿ ನಡೆಯುವ ಅಕ್ರಮ ಹಣ ವರ್ಗಾವಣೆಯನ್ನು ತಡೆಯಬೇಕು ಎಂದು ನಾಲ್ವರು ಸಚಿವರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.
ಅಯೋಧ್ಯೆ ರಾಮಮಂದಿರದ 3 ಮಹಡಿಯ ಎಲ್ಲಾ 18 ಬಾಗಿಲಿಗೆ ಸ್ವರ್ಣ ಲೇಪನ
ಕೆನಡಾ ಬಗ್ಗೆ ಭಾರತ ಕಳವಳ
ನವದೆಹಲಿ: ಕೆನಡಾದಲ್ಲಿ ಖಲಿಸ್ತಾನಿ ಪರ ಭಾರತ ವಿರೋಧಿ ಚಟುವಟಿಕೆ ಹೆಚ್ಚುತ್ತಿರುವ ಕುರಿತು ಅಮೆರಿಕದ ಬಳಿ ಭಾರತ ಕಳವಳ ವ್ಯಕ್ತಪಡಿಸಿದೆ. ಇತ್ತೀಚಿನ ಏರಿಂಡಿಯಾ ಬೆದರಿಕೆ ಕುರಿತು ದೂರಿದೆ. ಇತ್ತೀಚಿನ ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ದೂರಿದ್ದ ವೇಳೆ ಭಾರತಕ್ಕೆ ತನಿಖೆಗೆ ಸಹಕರಿಸಲು ಅಮೆರಿಕ ಹೇಳಿತ್ತು.
ಪಂಜಾಬ್ ಗೌರ್ನರ್‌ಗೆ ಸುಪ್ರೀಂ ಚಾಟಿ: ಮಸೂದೆಗೆ ಸಹಿ ಹಾಕದ್ದಕ್ಕೆ ರಾಜ್ಯಪಾಲರಿಗೆ ತೀವ್ರ ತರಾಟೆ