ಭಾರತದ ಓಲೈಕೆ ಬೇಡ: ಇದು ಅಮೆರಿಕ ಪಾಲಿಗೆ ದುರಂತ: ಚೀನಾ

ಶುಕ್ರವಾರ ನವದೆಹಲಿಯಲ್ಲಿ ನಡೆದ ಭಾರತ ಮತ್ತು ಅಮೆರಿಕದ ವಿದೇಶಾಂಗ ಮತ್ತು ರಕ್ಷಣಾ ಸಚಿವರ ಮಟ್ಟದ 2+2 ಮಟ್ಟದ ಸಭೆ ಮತ್ತು ಅದರ ಫಲಶ್ರುತಿ ಬಗ್ಗೆ ಚೀನಾ ಕಳವಳ ವ್ಯಕ್ತಪಡಿಸಿದೆ.

Do not favor India This is a disaster for America China concern over the outcome of the 2+2 level meeting of India and the US akb

ಬೀಜಿಂಗ್‌: ಶುಕ್ರವಾರ ನವದೆಹಲಿಯಲ್ಲಿ ನಡೆದ ಭಾರತ ಮತ್ತು ಅಮೆರಿಕದ ವಿದೇಶಾಂಗ ಮತ್ತು ರಕ್ಷಣಾ ಸಚಿವರ ಮಟ್ಟದ 2+2 ಮಟ್ಟದ ಸಭೆ ಮತ್ತು ಅದರ ಫಲಶ್ರುತಿ ಬಗ್ಗೆ ಚೀನಾ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ ನಾವು ಭಾರತವನ್ನು ವೈರಿ ಎಂಬುದಾಗಿ ಪರಿಗಣಿಸಿಲ್ಲ. ನಾವು ಅವರನ್ನು ನೆರೆಹೊರೆಯ ಅತ್ಯಂತ ಮಹತ್ವದ ಪಾಲುದಾರ ಎಂದು ಪರಿಗಣಿಸಿದ್ದೇವೆ. ಹೀಗಾಗಿ ಭಾರತ ಅಮೆರಿಕದ ಬಲೆಗೆ ಬೀಳಬಾರದು ಎಂದು ಚೀನಾ ಸರ್ಕಾರದ ಮುಖವಾಣಿಯಾಗಿರುವ ‘ಗ್ಲೋಬಲ್‌ ಟೈಮ್ಸ್‌’ ಪತ್ರಿಕೆ ಲೇಖನವೊಂದನ್ನು ಪ್ರಕಟಿಸಿದೆ.

ಭಾರತವನ್ನು ತನ್ನ ಗುಂಪಿಗೆ ಸೇರಿಸಿಕೊಳ್ಳಲು ಆಮಿಷ ಒಡ್ಡುವ ಮೂಲಕ ಅಮೆರಿಕಾ(USA) , ಚೀನಾವನ್ನು ಕಟ್ಟಿಹಾಕುವ ಯತ್ನ ಮಾಡುತ್ತಿದೆ. ಎಲ್ಲಿಯವರೆಗೆ ಭಾರತ ಮತ್ತು ಅಮೆರಿಕದ ಸಹಕಾರವು ಮೂರನೇ ದೇಶವೊಂದರ ನ್ಯಾಯಬದ್ಧ ಹಕ್ಕುಗಳಿಗೆ ಬೆದರಿಕೆ ಹಾಕುವುದಿಲ್ಲವೋ ಅಲ್ಲಿಯವರೆಗೂ ಈ ಒಪ್ಪಂದ ಯಾವುದೇ ಆತಂಕದ ವಿಷಯವಾಗಲಾರದು. ಆದರೆ ಭಾರತ ಮತ್ತು ಅಮೆರಿಕ ಸಹಕಾರ ಅದರಲ್ಲೂ ವಿಶೇಷವಾಗಿ ಮಿಲಿಟರಿ (Military) ಮತ್ತು ಭದ್ರತಾ ವಿಷಯದಲ್ಲಿನ ಸಹಕಾರವು ಚೀನಾದಂಥ ಮೂರನೇ ದೇಶವೊಂದರ ನ್ಯಾಯಬದ್ಧ ಹಕ್ಕುಗಳಿಗೆ ಬೆದರಿಕೆ ಒಡ್ಡುತ್ತದೆ. ಆಗ ಅದು ಗಂಭೀರ ವಿಷಯವಾಗುತ್ತದೆ. ಎಂದು ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ.

ಚೀನಾ ಹತ್ತಿಕ್ಕಲು ಅಮೆರಿಕಾ ಜೊತೆ ಸೇರಿ ಜಂಟಿಯಾಗಿ ಸೇನಾ ಸ್ಟ್ರೈಕರ್ ನಿರ್ಮಾಣಕ್ಕೆ ಭಾರತ ನಿರ್ಧಾರ

ಜೊತೆಗೆ, ವಾಷಿಂಗ್ಟನ್‌ನಲ್ಲಿ (Washington) ಯಾರಾದರೂ ಭಾರತದ ಮನವೊಲಿಸಿ ಆ ದೇಶವನ್ನು ಅಮೆರಿಕದ ಪಾಲುದಾರನನ್ನಾಗಿ ಮಾಡುತ್ತದೆ ಎಂದು ಯಾರಾದರೂ ನಂಬಿದ್ದರೆ ಅವರ ನಂಬಿಕೆಗಳು ಛಿದ್ರವಾಗಬಹುದು ಮತ್ತು ಅದು ದುರಂತಕ್ಕೆ ಕಾರಣವಾಗಬಹುದು ಎಂದು ನೇರವಾಗಿ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ. ಇದೇ ವೇಳೆ ಭಾರತ ಮತ್ತು ಚೀನಾ ನಡುವೆ ಇನ್ನಷ್ಟು ಉತ್ತಮ ಸಂಬಂಧ ರೂಪುಗೊಳ್ಳಬೇಕು. ಭಾರತವನ್ನು ಚೀನಾ ನೆರೆಯ ಮಹತ್ವದ ಪಾಲುದಾರ ಎಂದು ನಂಬಿದೆ. ಇದು ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯ ಇತ್ಯರ್ಥಕ್ಕೆ ಸೂಕ್ತ ಮಾರ್ಗ ಎಂದು ಲೇಖನದಲ್ಲಿ ಹೇಳಲಾಗಿದೆ.

ಇಸ್ರೇಲ್ ಬಳಿಕ ತೈವಾನ್‌ನಿಂದಲೂ ಭಾರತದ ಕಾರ್ಮಿಕರಿಗೆ ಬೇಡಿಕೆ: 1 ಲಕ್ಷ ಕೆಲಸಗಾರರ ನೇಮಕಕ್ಕೆ ನಿರ್ಧಾರ

Latest Videos
Follow Us:
Download App:
  • android
  • ios