ತರಕಾರಿ ಖರೀದಿಸಲು ವಿಚಿತ್ರ ವೇಷದಲ್ಲಿ ಬಂದ ಚೀನಾ ದಂಪತಿ... ವಿಡಿಯೋ ವೈರಲ್

ಚೀನಾದಲ್ಲಿ ಇತ್ತೀಚೆಗೆ ಕೋವಿಡ್ ತೀವ್ರಗತಿಯಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಜನರೇ ಮನೆಯಿಂದ ಹೊರಬರಲು ಪರದಾಡುತ್ತಿದ್ದಾರೆ. ಈ ಮಧ್ಯೆ ಚೀನಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

china couple came to buy vegetables with unique umbrella watch viral video akb

ಚೀನಾ: ಜಗತ್ತಿಗೆಲ್ಲಾ ಕೋವಿಡ್ ಹಂಚಿದ ಚೀನಾ ತಾನೇ ಹೆಣೆದ ಬಲೆಯಲ್ಲಿ ತಾನೇ ಬಂಧಿಯಾಗಿದ್ದು, ಕೋವಿಡ್ ಪ್ರಕರಣಗಳು ಅಲ್ಲಿ ನಿರಂತರ ಏರಿಕೆಯಾಗಿವೆ. ಶೂನ್ಯ ಕೋವಿಡ್ ಗುರಿ ಸಾಧಿಸುವ ಗುರಿ ಹೊಂದಿದ್ದ ಚೀನಾಗೆ ಚಳಿಗಾಲ ಶಾಕ್ ನೀಡಿದ್ದು, ಅಲ್ಲಿನ ಆಸ್ಪತ್ರೆಗಳು ಐಸಿಯುಗಳು ಎಲ್ಲವೂ ಭರ್ತಿಯಾಗಿದ್ದು, ಜನ ಜೀವನ ಹದಗೆಟ್ಟಿದೆ. ಇಷ್ಟು ದಿನ ಸರ್ಕಾರವೇ ಶೂನ್ಯ ಕೋವಿಡ್ ಗುರಿಗಾಗಿ ಜನರನ್ನು ಮನೆಯಲ್ಲೇ ಬಂಧಿ ಮಾಡಿತ್ತು. ಆದರೆ ಇತ್ತೀಚೆಗೆ ಕೋವಿಡ್ ತೀವ್ರಗತಿಯಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಜನರೇ ಮನೆಯಿಂದ ಹೊರಬರಲು ಪರದಾಡುತ್ತಿದ್ದಾರೆ. ಈ ಮಧ್ಯೆ ಚೀನಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ವಿಡಿಯೋದಲ್ಲಿ ಕೋವಿಡ್‌ ನಿಂದ ಪಾರಾಗಲು ಸಾಮಾಜಿಕ ಅಂತರ (Social Distence) ಕಾಯ್ದುಕೊಳ್ಳಲು ಜೋಡಿಯೊಂದು ಛತ್ರಿಯಂತಹ ಆದರೆ ಕಾಲಿನಿಂದ ತಲೆಯವರೆಗೆ ಸಂಪೂರ್ಣವಾಗಿ ಆವರಿಸುವ ಸಾಧನವೊಂದನ್ನು ಹಿಡಿದುಕೊಂಡು ತರಕಾರಿ ಖರೀದಿಸಲು ಮಾರ್ಕೆಟ್‌ನ ಬೀದಿಯಲ್ಲಿ ಸಾಗುತ್ತಿದ್ದಾರೆ. ಟ್ವಿಟ್ಟರ್‌ನಲ್ಲಿ (Twitter) ಪೀಪಲ್ಸ್ ಡೈಲಿ ಚೀನಾ (china) ಎಂಬ ಟ್ವಿಟ್ಟರ್ ಪೇಜ್ (Twitter Page) ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಈ ಚೈನೀಸ್ ಜೋಡಿ ಸ್ವರಕ್ಷಣೆಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ ಎಂದು ಬರೆದುಕೊಂಡಿದ್ದಾರೆ. 30 ಸೆಕೆಂಡ್‌ಗಳ ವಿಡಿಯೋದಲ್ಲಿ ಜೋಡಿ ಛತ್ರಿಯಂತೆ ತೆರೆಯಬಲ್ಲ. ಆದರೆ ಇಬ್ಬರು ನಿಂತರೂ ಸಂಪೂರ್ಣವಾಗಿ ಕವರ್ ಆಗಬಲ್ಲ. ಗೂಡಿನಂತಿರುವ ಸಾಧನವೊಂದರ ಒಳಗೆ ತಮ್ಮನ್ನು ತಾವೇ ಬಂದಿ ಮಾಡಿಕೊಂಡು ತರಕಾರಿ (vegetables) ಖರೀದಿ ಮಾಡಲು ಹೋಗಿದ್ದಾರೆ. ಛತ್ರಿಯಂತೆ ಬಿಡಿಸಬಲ್ಲ ಪಾರದರ್ಶಕ ಕವರ್ ಇದಾಗಿದ್ದು, ಒಳಗಿರುವವರನ್ನು ಹೊರಗಿನಿಂದ ನೋಡಬಹುದಾಗಿದೆ. 

Omicron BF.7: ಮತ್ತೆ ಹರಡ್ತಿದೆ ಕೋವಿಡ್, ರೂಪಾಂತರಿ ವೈರಸ್‌ನ ರೋಗಲಕ್ಷಣಳು ಹೀಗಿವೆ

ಹೀಗೆ ಇದನ್ನೇರಿಸಿಕೊಂಡು ತರಕಾರಿ ಖರೀದಿ ಮಾಡಲು ಬಂದ ಈ ಜೋಡಿ ತರಕಾರಿ ಖರೀದಿಸಿ ಬೀದಿಯಲ್ಲಿ ಮುಂದೆ ಸಾಗುತ್ತಿದ್ದು, ಇವರನ್ನು ಉಳಿದವರು ವಿಚಿತ್ರವಾಗಿ ನೋಡುತ್ತಾ ಸಾಗುತ್ತಿದ್ದಾರೆ. 30 ಸೆಕೆಂಡ್‌ಗಳ ಈ ವಿಡಿಯೋವನ್ನು 83 ಸಾವಿರಕ್ಕೂ ಹೆಚ್ಚು ಜನರು ನೋಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಹಲವು ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಚೀನಾದಲ್ಲಿ ಕಟ್ಟುನಿಟ್ಟಿನ ಕೋವಿಡ್ ನಿಯಮಗಳ ನಡುವೆಯೂ ಕೋವಿಡ್ ನಿರಂತರ ಏರಿಕೆಯಾಗಿದೆ. ಇದು ಜನರನ್ನು ಹೈರಾಣಾಗಿಸುತ್ತಿದೆ. ಪ್ರಪಂಚದಾದ್ಯಂತ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿರುವಾಗ, ಚೀನಾದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ ಅನೇಕ ನಗರಗಳಲ್ಲಿ ಲಾಕ್‌ಡೌನ್ ಹೇರಲಾಗಿದೆ. ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಚೀನಾದಲ್ಲಿ ಹೊಸ ಪ್ರಕರಣಗಳ ವೇಗವನ್ನು ಗಮನದಲ್ಲಿಟ್ಟುಕೊಂಡು, ಕೊರೋನಾ ನಾಲ್ಕನೇ ಅಲೆಯ ಸಾಧ್ಯತೆಯನ್ನು ವ್ಯಕ್ತಪಡಿಸಲಾಗುತ್ತಿದೆ. ಅಮೆರಿಕದ ಆರೋಗ್ಯ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ ಸಂಸ್ಥೆ ಚೀನಾದ ಅನೇಕ ನಗರಗಳಲ್ಲಿ ಲಾಕ್‌ಡೌನ್ ತೆಗೆದುಹಾಕುವುದರಿಂದ, ಪ್ರಕರಣಗಳ ತ್ವರಿತ ಹೆಚ್ಚಳದಿಂದಾಗಿ, ದೇಶದ ಜನಸಂಖ್ಯೆಯ (Population) ಮೂರನೇ ಒಂದು ಭಾಗದಷ್ಟು ಜನರು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಮತ್ತು ಏಪ್ರಿಲ್‌ನಲ್ಲಿ ದೇಶವು ರೋಗದ ಉತ್ತುಂಗವನ್ನು ತಲುಪಬಹುದು. 2023 ರ ವೇಳೆಗೆ 322,000 ಕ್ಕಿಂತ ಹೆಚ್ಚು ಸಾವು (Death) ಸಂಭವಿಸಬಹುದು ಎಂದು ಅಂದಾಜಿಸಿದೆ. 

5 ದೇಶಗಳಲ್ಲಿ ಕೋವಿಡ್‌ ಏರಿಕೆ: ಅಮೆರಿಕದಲ್ಲಿ 10 ಕೋಟಿ ದಾಟಿದ ಸೋಂಕಿತರು

ಚೀನಾವನ್ನು ಹೊರತುಪಡಿಸಿ, BF.7 ವೈರಾಣು ಭಾರತ, USA, UK ಮತ್ತು ಬೆಲ್ಜಿಯಂ, ಜರ್ಮನಿಯಂತಹ ಅನೇಕ ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಪ್ರಪಂಚದಾದ್ಯಂತ ಇತರ ದೇಶಗಳಲ್ಲಿ ಕಂಡುಬಂದಿದೆ. ಫ್ರಾನ್ಸ್ ಮತ್ತು ಡೆನ್ಮಾರ್ಕ್‌ನಲ್ಲಿ ವೈರಸ್ ಹರಡುತ್ತಿದೆ. ಹೀಗಿರುವಾಗ ಈ ವೈರಸ್‌ನ ಬಗ್ಗೆ ಹೆಚ್ಚು ಜಾಗರೂಕರಾಗಿರುವುದು ಅಗತ್ಯ. Omicron BF.7 ರೂಪಾಂತರವು ಚೀನಾದಲ್ಲಿ ಹೊಸ ಪ್ರಕರಣಗಳ ಹೆಚ್ಚಳಕ್ಕೆ ಕಾರಣವೆಂದು ನಂಬಲಾಗಿದೆ. ಈ ಸಬ್‌ವೇರಿಯಂಟ್ ಅನ್ನು ಇತ್ತೀಚೆಗೆ ಬೀಜಿಂಗ್‌ನಲ್ಲಿ ಗುರುತಿಸಲಾಗಿದೆ. ಈ ಹೊಸ ರೂಪಾಂತರವನ್ನು (Variant) ಇತ್ತೀಚೆಗೆ ಗುರುತಿಸಲಾಗಿದೆ. ಇದು ಹಲವು ದೇಶಗಳಿಗೆ ಹರಡಿದೆ ಆದರೆ ಇದರ ಲಕ್ಷಣಗಳು (Symptoms) ಗಂಭೀರವಾಗಿಲ್ಲ ಎಂದು ಹೇಳಲಾಗಿದೆ. 
 

Latest Videos
Follow Us:
Download App:
  • android
  • ios