Asianet Suvarna News Asianet Suvarna News

ಚೀನಾದ ಕೋವಿಡ್ ನೈಜ ಪರಿಸ್ಥಿತಿ ಬಹಿರಂಗ, ಶವಗಳ ನಡುವೆ ಸೋಂಕಿತರಿಗೆ ಚಿಕಿತ್ಸೆ!

ಚೀನಾದಲ್ಲಿ ಕೋವಿಡ್ ಪರಿಸ್ಥಿತಿ ಕೈಮೀರಿದೆ. ಚೀನಾದ ಲಸಿಕೆ ಕಾರ್ಯನಿರ್ವಹಿಸುತ್ತಿಲ್ಲ. ಪ್ರತಿ ದಿನ ಪ್ರಕರಣಗಳು ಡಬಲ್ ಆಗುತ್ತಿದೆ. ಇತ್ತ ಸಾವಿನ ಸಂಖ್ಯೆಯೂ ಏರಿಕೆಯಾಗಿದೆ. ಇದರಿಂದ ಶವಗಳ ನಡುವೆಯೆ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚೀನಾದ ವಿಡಿಯೋಗಳು ನಿಜಕ್ಕೂ ಭಯಾನಕವಾಗಿದೆ.
 

China covid 19 situation exposed no bed for infected death count increased and shortage of medicines ckm
Author
First Published Dec 27, 2022, 9:41 PM IST

ಬೀಜಿಂಗ್(ಡಿ.27): ಚೀನಾಗೆ ಬೆಂಬಿಡದೆ ಕಾಡುತ್ತಿರುವ ಕೊರೋನಾ ಈ ಬಾರಿ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿದೆ. ಲಕ್ಷ ಲಕ್ಷ ಪ್ರಕರಣಗಳು ದಾಖಲಾಗುತ್ತಿದೆ. ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇದರ ಪರಿಣಾಮ ಆಸ್ಪತ್ರೆಗಳಲ್ಲಿ ಶವಗಳ ರಾಶಿ ಕಂಡು ಬರುತ್ತಿದೆ. ಇತ್ತ ಸೋಂಕಿತರಿಗೆ ಶವಗಳ ನಡುವೆಯೇ ಚಿಕಿತ್ಸೆ ನೀಡಲಾಗುತ್ತಿದೆ. ಅಂತ್ಯಸಂಸ್ಕಾರಕ್ಕೆ ಒಂದು ವಾರ  ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.  ಸೋಂಕಿತರಿಗೆ ಬೆಡ್ ಸಿಗದೇ ಪರದಾಡುತ್ತಿದ್ದಾರೆ. ಮಕ್ಕಳಲ್ಲೂ ಕೋವಿಡ್ ಪ್ರಕರಣ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇತ್ತ ಪೋಷಕರು ಆಸ್ಪತ್ರೆ ಸಿಬ್ಬಂದಿಗಳ ಬಳಿ ಮಂಡಿಯೂರಿ ಚಿಕಿತ್ಸೆಗಾಗಿ ಮನವಿ ಮಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ. ಇಷ್ಟೇ ಅಲ್ಲ ಚೀನಾದಲ್ಲಿ ಔಷಧಿ ಅಭಾವ ಹೆಚ್ಚಾಗಿದೆ. ಇಷ್ಟಾದರೂ ಚೀನಾ ಏನೂ ಆಗಿಲ್ಲ ಅನ್ನೋವಂತೆ ಬಿಂಬಿಸುತ್ತಿದೆ. ಆದರೆ ಚೀನಾದ ಆಸ್ಪತ್ರೆಗಳಲ್ಲಿನ ವಿಡಿಯೋಗಳು ಅಸಲಿ ಕತೆ ಬಹಿರಂಗಪಡಿಸಿದೆ.

ಚೀನಾ ಅಧಿಕೃತ ದಾಖಲೆ ಪ್ರಕಾರ ಸಾವಿನ ಸಂಖ್ಯೆ ಸಾವಿರದಲ್ಲಿದೆ. ಆದರೆ ಲಕ್ಷ ಮೀರಿದೆ. ಇದಕ್ಕೆ ವಿಡಿಯೋಗಳೇ ಸಾಕ್ಷಿ. ಶವಗಳನ್ನು ಕಂಟೈನರ್‌ನಲ್ಲಿ ತುಂಬಿ ಸರ್ಕಾರವೇ ಅಂತ್ಯಸಂಸ್ಕಾರ ಮಾಡುತ್ತಿದೆ. ಒಂದೊಂದು ವಿಡಿಯೋ ಬೆಚ್ಚಿ ಬೀಳಿಸುವಂತಿದೆ. 

ತರಕಾರಿ ಖರೀದಿಸಲು ವಿಚಿತ್ರ ವೇಷದಲ್ಲಿ ಬಂದ ಚೀನಾ ದಂಪತಿ... ವಿಡಿಯೋ ವೈರಲ್

ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ವಿಶ್ವದಲ್ಲೇ ಅತೀ ಕಡಿಮೆ ಎಂದು ಚೀನಾ ಒತ್ತಿ ಒತ್ತಿ ಹೇಳುತ್ತಿದೆ. ಆದರೆ ಅಸಲಿ ವಿಚಾರ ಬಹಿರಂಗೊಂಡಿದೆ. ಇದೀಗ ಎದ್ದಿರುವ ಕೋವಿಡ್ ಬಿಎಪ್.7 ವೇರಿಯೆಂಟ್‌ನಿಂದ ನಿಧನರಾಗುತ್ತಿರುವ ಸಂಖ್ಯೆ ಪ್ರತಿ ದಿನ ಲಕ್ಷದ ಸನಿಹದಲ್ಲಿದೆ ಎಂದು ಅನ್‌ಸೆನ್ಸಾರ್ ಚೀನಾ ಟ್ವಿಟರ್ ಖಾತೆಯಲ್ಲಿ ಹೇಳಿದೆ. ಚೀನಾದಲ್ಲಿ ಪ್ರತಿ ದಿನ 5 ಲಕ್ಷ ಕೊರೋನಾ ಪ್ರಕರಣ ದಾಖಲಾಗುತ್ತಿದೆ. 

 

 

9 ವಾರಗಳ ಇಳಿಕೆ ಕಳೆದ ವಾರ ಹೊಸ ಕೇಸಲ್ಲಿ ಶೇ.11 ಏರಿ​ಕೆ
 ಜಾಗ​ತಿ​ಕ​ವಾಗಿ ಕೋವಿಡ್‌ ಉಲ್ಬ​ಣ​ವಾ​ದರೂ ಭಾರ​ತ​ದಲ್ಲಿ ಕೋವಿಡ್‌ ಪ್ರಕ​ರಣಗಳ ಸಂಖ್ಯೆ ಬಹು​ತೇಕ ಸ್ಥಿರ​ವಾ​ಗಿದೆ. ಆದ​ರೂ ಸತತ ಕಳೆದ 9 ವಾರ​ಗ​ಳಲ್ಲಿ ಕಂಡು​ಬ​ರು​ತ್ತಿದ್ದ ಕೋವಿಡ್‌ ಇಳಿ​ಕೆಯ ಪ್ರವೃತ್ತಿ ಬದ​ಲಾ​ಗಿ ಭಾನು​ವಾರ ಅಂತ್ಯ​ಗೊಂಡ ವಾರ​ದಲ್ಲಿ ಕೋವಿಡ್‌ ಪ್ರಕ​ರ​ಣ​ಗ​ಳಲ್ಲಿ ಅಲ್ಪ ಏರಿಕೆ ದಾಖ​ಲಾ​ಗಿ​ದೆ.

ಕಳೆದ ವಾರ 1,103ರಷ್ಟಿದ್ದ ಕೋವಿಡ್‌ ಕೇಸು​ಗಳ ಪ್ರಮಾಣ ಈ ವಾರ 1,219ಕ್ಕೆ ಏರಿ​ಕೆ​ಯಾ​ಗಿದ್ದು, ಪ್ರಕ​ರ​ಣ​ಗಳ ಪ್ರಮಾ​ಣ​ದಲ್ಲಿ ಶೇ.11ರಷ್ಟುಏರಿಕೆ ದಾಖ​ಲಾ​ಗಿದೆ. ಮಹಾ​ರಾಷ್ಟ್ರ, ರಾಜ​ಸ್ಥಾನ, ಪಂಜಾ​ಬ್‌, ದೆಹಲಿ, ಹಿಮಾ​ಚಲ ಪ್ರದೇಶ, ತೆಲಂಗಾಣ ಹಾಗೂ ಪಶ್ಚಿಮ ಬಂಗಾ​ಳ​ದಲ್ಲಿ ಪ್ರಮು​ಖ​ವಾಗಿ ಹೆಚ್ಚು ಕೇಸು​ಗಳು ದಾಖ​ಲಾ​ಗಿ​ವೆ. ಕೇಸು​ಗಳ ಸಂಖ್ಯೆ​ಯನ್ನು ಆಧ​ರಿಸಿ ಚೀನಾ​ದಲ್ಲಿ ಕೋವಿಡ್‌ ಸ್ಫೋಟಕ್ಕೆ ಕಾರ​ಣ​ವಾದ ಹೊಸ ರೂಪಾಂತರಿ ಬಿಎ​ಫ್‌.7ನಿಂದಾ​ಗಿಯೇ ಭಾರ​ತ​ದಲ್ಲಿ ಕೇಸು​ಗಳು ಹೆಚ್ಚಾ​ಗು​ತ್ತಿ​ರುವ ಆರಂಭಿಕ ಸಂಕೇ​ತವೇ ಎಂಬು​ದನ್ನು ನಿರ್ಧರಿಸು​ವುದು ಸದ್ಯಕ್ಕೆ ಕಷ್ಟಎಂದು ತಜ್ಞರು ಅಭಿ​ಪ್ರಾಯ ಪಟ್ಟಿ​ದ್ದಾರೆ.

Covid 19: ಮಲ್ಲೇಶ್ವರಂ ಶಾಲೆಯಲ್ಲಿ ಕೊರೋನಾ ಹರಡದಂತೆ ಕಟ್ಟೆಚ್ಚರ

ಇನ್ನೊಂದೆಡೆ ಕೇಸು​ಗಳು ಹೆಚ್ಚಿ​ದರೂ ಸಾವಿನ ಪ್ರಮಾ​ಣ​ದಲ್ಲಿ ಕಳೆದ ವಾರ​ಕ್ಕಿಂತ ಇಳಿಕೆ ಕಂಡು​ಬಂದಿದೆ. ಕಳೆದ ವಾರ​ದಲ್ಲಿ 20 ಸೋಂಕಿ​ತರು ಬಲಿ​ಯಾ​ಗಿದ್ದು, ಈ ವಾರ ಬಲಿ​ಯಾ​ದ​ವರ ಸಂಖ್ಯೆ 12ಕ್ಕೆ ಇಳಿ​ದಿ​ದೆ.

 

;

 

Follow Us:
Download App:
  • android
  • ios