5 ದಿನದಲ್ಲಿ 40000 ಬಾರಿ ಚೀನಾ ಸೈಬರ್‌ ದಾಳಿ ಯತ್ನ!

5 ದಿನದಲ್ಲಿ 40000 ಬಾರಿ ಚೀನಾ ಸೈಬರ್‌ ದಾಳಿ ಯತ್ನ!| ಐಟಿ, ಬ್ಯಾಂಕಿಂಗ್‌ ವಲಯಗಳೇ ಟಾರ್ಗೆಟ್‌

Chinese hackers attempted 40000 cyber attacks on Indian web banking sector in 5 days

ಮುಂಬೈ(ಜೂ.24): ಗಡಿ ಸಂಘರ್ಷಕ್ಕೆ ಕಾರಣವಾಗಿರುವ ಚೀನಾದಿಂದ ಭಾರತದ ಮೇಲೆ ಸೈಬರ್‌ ದಾಳಿ ನಡೆಯಬಹುದು ಎಂಬ ಎಚ್ಚರಿಕೆ ನಿಜವಾಗಿದೆ. ಕಳೆದ 5 ದಿನದಲ್ಲಿ ಚೀನಾ 40,000 ಬಾರಿ ಸೈಬರ್‌ ದಾಳಿಗೆ ಯತ್ನ ನಡೆಸಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಮಹಾರಾಷ್ಟ್ರ ಸೈಬರ್‌ ಭದ್ರತಾ ಇಲಾಖೆ ಬಹಿರಂಗಪಡಿಸಿದೆ.

ಚೀನಾ ಹಣಿಯಲು ಮೋದಿ ಸೂಕ್ತ: ನಮೋ ಮೇಲೆ ಶೇ. 89ರಷ್ಟು ಜನರಿಗೆ ನಂಬಿಕೆ!

‘ಕಳೆದ ನಾಲ್ಕೈದು ದಿನಗಳಲ್ಲಿ ಸೈಬರ್‌ ದಾಳಿ ಯತ್ನಗಳು ಏಕಾಏಕಿ ಏರಿಕೆಯಾಗಿವೆ. ಚೀನಾದ ಹ್ಯಾಕರ್‌ಗಳು ಮಾಹಿತಿ ತಂತ್ರಜ್ಞಾನ ಮೂಲ ಸೌಕರ‍್ಯ ಮತ್ತು ಬ್ಯಾಂಕಿಂಗ್‌ ವಲಯಗಳನ್ನು ಗುರಿಯಾಗಿಸಿಕೊಂಡು ದಾಳಿಗೆ ಯತ್ನಿಸಿದ್ದಾರೆ. ಈ ಅವಧಿಯಲ್ಲಿ ಕನಿಷ್ಠ 40,300 ಬಾರಿ ಸೈಬರ್‌ ದಾಳಿಗೆ ಯತ್ನಿಸಲಾಗಿದೆ. ಚೀನಾ ಸಿಚುವಾನ್‌ ಪ್ರಾಂತ್ಯದ ರಾಜಧಾನಿ ಚೆಂಗ್ಡುವಿನಿಂದ ಸೈಬರ್‌ ದಾಳಿ ಯತ್ನ ನಡೆದಿದೆ’ ಎಂದು ಮಹಾರಾಷ್ಟ್ರದ ಸೈಬರ್‌ ಭದ್ರತಾ ವಿಭಾಗವಾಗಿರುವ ‘ಮಹಾರಾಷ್ಟ್ರ ಸೈಬರ್‌’ನ ಐಜಿಪಿ ಯಶಸ್ವಿನಿ ಯಾದವ್‌ ತಿಳಿಸಿದ್ದಾರೆ.

ಮೋದಿಯನ್ನು ಚೀನಾ ಹೊಗಳೋದೇಕೆ?: ರಾಹುಲ್‌ ಪ್ರಶ್ನೆ!

ಸೇವೆಗಳು ಲಭ್ಯವಾಗದಿರುವಂತೆ ಮಾಡುವುದು, ಇಂಟರ್ನೆಟ್‌ ಪ್ರೋಟೋಕಾಲ್‌ ಹೈಜಾಕ್‌ ಮಾಡುವುದು ಹಾಗೂ ಫಿಶಿಂಗ್‌ ನಡೆಸುವ ಗುರಿಯೊಂದಿಗೆ ಚೀನಿ ಹ್ಯಾಕರ್‌ಗಳು ಯತ್ನಿಸಿದ್ದಾರೆ. ಹೀಗಾಗಿ ಬಲಿಷ್ಠವಾದ ಫೈರ್‌ವಾಲ್‌ಗಳನ್ನು ಇಂಟರ್ನೆಟ್‌ ಬಳಕೆದಾರರು ಸೃಷ್ಟಿಸಿಕೊಳ್ಳಬೇಕು. ಸೈಬರ್‌ ಭದ್ರತಾ ಆಡಿಟ್‌ ನಡೆಸಬೇಕು ಎಂದು ಸಲಹೆ ಮಾಡಿದ್ದಾರೆ.

Latest Videos
Follow Us:
Download App:
  • android
  • ios