ಜನಸಂಖ್ಯೆ ಏರಿಕೆ ಪ್ರಮಾಣ ಕುಸಿತದ ಬೆನ್ನಲ್ಲೇ ಚೀನಾಗೆ ಇನ್ನೊಂದು ಕಹಿ ಸುದ್ದಿ. ಕಳೆದ ವರ್ಷ ಚೀನಾದಲ್ಲಿ ಕೇವಲ 76.4 ಲಕ್ಷ ಜೋಡಿಗಳು ವಿವಾಹವಾಗಿದ್ದು, ಇದು 36 ವರ್ಷಗಳ ಕನಿಷ್ಠ. 1986ರ ಬಳಿಕ 80 ಲಕ್ಷಕ್ಕಿಂತ ಕೆಳಗೆ ಇಳಿದಿದ್ದು ಇದೇ ಮೊದಲು ಎಂದು ಇತ್ತೀಚಿನ ವರದಿ ಬಹಿರಂಗ ಪಡಿಸಿದೆ.

ಬೀಜಿಂಗ್‌ (ಸೆ.02): ಜನಸಂಖ್ಯೆ ಏರಿಕೆ ಪ್ರಮಾಣ ಕುಸಿತದ ಬೆನ್ನಲ್ಲೇ ಚೀನಾಗೆ ಇನ್ನೊಂದು ಕಹಿ ಸುದ್ದಿ. ಕಳೆದ ವರ್ಷ ಚೀನಾದಲ್ಲಿ ಕೇವಲ 76.4 ಲಕ್ಷ ಜೋಡಿಗಳು ವಿವಾಹವಾಗಿದ್ದು, ಇದು 36 ವರ್ಷಗಳ ಕನಿಷ್ಠ. 1986ರ ಬಳಿಕ 80 ಲಕ್ಷಕ್ಕಿಂತ ಕೆಳಗೆ ಇಳಿದಿದ್ದು ಇದೇ ಮೊದಲು ಎಂದು ಇತ್ತೀಚಿನ ವರದಿ ಬಹಿರಂಗ ಪಡಿಸಿದೆ. ಇದರಿಂದಾಗಿ ದೇಶದ ಜನನ ದರ ಕೂಡಾ ಇಳಿಕೆಯಾಗಲಿದ್ದು, 2025ರವರೆಗೆ ಜನಸಂಖ್ಯೆಯು ಋುಣಾತ್ಮಕ ಬೆಳವಣಿಗೆ ದಾಖಲಿಸಲಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಇರುವ ದೇಶ ಚೀನಾದಲ್ಲಿ 2020ಕ್ಕೆ ಹೋಲಿಸಿದರೆ 2021ರಲ್ಲಿ ವಿವಾಹವಾಗುವ ಪ್ರಮಾಣ ಶೇ. 6.1ಕ್ಕೆ ಇಳಿಕೆಯಾಗಿದೆ. 1986ರ ಬಳಿಕ ಇದು ಅತಿ ಕನಿಷ್ಠವಾಗಿದೆ. ಕಳೆದ ಸತತ 8 ವರ್ಷಗಳಿಂದಲೂ ವಿವಾಹವಾಗುವ ಜೋಡಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ. 25-29 ವರ್ಷದ ಒಳಗಿನ ಜೋಡಿಗಳು ವಿವಾಹವಾಗುತ್ತಿರುವ ಪ್ರಮಾಣ ಶೇ. 35.3ರಷ್ಟಿದೆ.

ಜನಸಂಖ್ಯೆ ಹೆಚ್ಚಳಕ್ಕೆ ಪುಟಿನ್‌ ತಂತ್ರ, 10 ಮಕ್ಕಳನ್ನು ಹೆತ್ತರೆ ಹೆಂಗಸರಿಗೆ ಲಕ್ಷ ಲಕ್ಷ ಹಣ

ಕಾರಣ ಏನು?: ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ ತಡವಾಗಿ ವಿವಾಹವಾಗುವ ಟ್ರೆಂಡ್‌ ಚೀನಾದಲ್ಲಿ ಆರಂಭವಾಗಿದ್ದು, ದೇಶದ ಜನಸಂಖ್ಯೆ ಇಳಿಕೆಗೆ ಕಾರಣವಾಗುತ್ತಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. 2020ರ ಗಣತಿ ಬಳಿಕ ಸರ್ಕಾರ 3ನೇ ಮಗು ಪಡೆಯಲು ಅನುಮತಿ ನೀಡಿದ್ದರೂ ಚೀನಾದ ಜನಸಂಖ್ಯೆ ಬೆಳವಣಿಗೆ ದರ ಅತಿ ಕಡಿಮೆಯಾಗಿದೆ. ಇಳಿಕೆಯಾಗುತ್ತಿರುವ ವಿವಾಹದ ಪ್ರಮಾಣ ಹಾಗೂ ತಡವಾದ ವಿವಾಹ ಇದಕ್ಕೆ ಕಾರಣವಾಗಿದೆ. ಪ್ರಸ್ತುತ ಚೀನಾ ಜನಸಂಖ್ಯೆ 141 ಕೋಟಿಯಷ್ಟಿದೆ.

ಚೀನಾ ಪರ ಕಾರ‍್ಯಕ್ರಮದಲ್ಲಿ ಭಾಗಿ ಆಹ್ವಾನ ತಿರಸ್ಕರಿಸಿದ ಸಿದ್ದು: ಭಾರತ ಹಾಗೂ ಚೀನಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಮುಂದುವರೆದಿರುವ ಹೊತ್ತಿನಲ್ಲೇ ಬೆಂಗಳೂರಿನಲ್ಲಿ ಚೀನಾ ಪರ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಯೋಜಕರು ನೀಡಿರುವ ಆಹ್ವಾನವನ್ನು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಿರಸ್ಕರಿಸಿದ್ದಾರೆ. ಅಲ್ಲದೆ, ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಕಾರ್ಯಕ್ರಮವು ನನ್ನ ಹಾಗೂ ಪಕ್ಷದ ನಿಲುವುಗಳಿಗೆ ವಿರುದ್ಧವಾಗಿದೆ. 

ಹೀಗಾಗಿ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವುದಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಮತ್ತೊಮ್ಮೆ ಬಹಿರಂಗ ಸ್ಪಷ್ಟನೆ ನೀಡಿದ್ದಾರೆ. ಇನ್ನು ಡಾ.ಎಚ್‌.ಸಿ. ಮಹದೇವಪ್ಪ ಅವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಮೂಲಗಳು ತಿಳಿಸಿವೆ. ಇಂಡಿಯಾ- ಚೀನಾ ಫ್ರೆಂಡ್‌ಶಿಪ್‌ ಅಸೋಸಿಯೇಷನ್‌ ವತಿಯಿಂದ ಭಾನುವಾರ ಬೆಳಗ್ಗೆ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ‘ಚೀನಾ ಆಂತರಿಕ ವಿಚಾರಗಳಲ್ಲಿ ಅಮೆರಿಕ ಹಸ್ತಕ್ಷೇಪ’ ವಿಷಯದ ಕುರಿತು ಕಾರ್ಯಕ್ರಮ ಹಮ್ಮಿಕೊಂಡಿದೆ. ತನ್ಮೂಲಕ ಭಾರತದ ಮೇಲೆ ಪದೇ ಪದೇ ಕಾಲು ಕೆರೆಯುತ್ತಿರುವ ಚೀನಾ ಪರವಾಗಿ ಹಾಗೂ ಅಮೆರಿಕ ವಿರುದ್ಧವಾಗಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದೇ ವೇಳೆ ಚೀನಾ ಛಾಯಾಚಿತ್ರಗಳ ಪ್ರದರ್ಶನವೂ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. 

ಬರೀ ಮನುಷ್ಯರಲ್ಲ, ಮೀನು - ಏಡಿಗೂ ಚೀನಾದಲ್ಲಿ ಕೋವಿಡ್‌ ಟೆಸ್ಟ್‌ ಕಡ್ಡಾಯ!

ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಎಚ್‌.ಸಿ. ಮಹದೇವಪ್ಪ ಅವರು ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮುದ್ರಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ‘ಇಂಡಿಯಾ-ಚೀನಾ ಫ್ರೆಂಡ್‌ಶಿಪ್‌ ಅಸೋಸಿಯೇಷನ್‌ ಭಾನುವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ನಿರಾಕರಿಸಿದ್ದರೂ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಕಂಡು ಆಶ್ಚರ್ಯವಾಯಿತು. ಸೈದ್ಧಾಂತಿಕವಾಗಿ ನನ್ನ ಮತ್ತು ನಮ್ಮ ಪಕ್ಷದ ನಿಲುವು ಕಾರ್ಯಕ್ರಮದ ಉದ್ದೇಶಕ್ಕೆ ವಿರುದ್ಧವಾಗಿರುವ ಕಾರಣ ಅದರಲ್ಲಿ ನಾನು ಭಾಗವಹಿಸುತ್ತಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.