Asianet Suvarna News Asianet Suvarna News

ಜನಸಂಖ್ಯೆ ಹೆಚ್ಚಳಕ್ಕೆ ಪುಟಿನ್‌ ತಂತ್ರ, 10 ಮಕ್ಕಳನ್ನು ಹೆತ್ತರೆ ಹೆಂಗಸರಿಗೆ ಲಕ್ಷ ಲಕ್ಷ ಹಣ

ರಷ್ಯಾ ಅಧ್ಯಕ್ಷ Vladimir Putin ಹತ್ತು ಮಕ್ಕಳನ್ನು ಹೆತ್ತ ಮಹಿಳೆಯರಿಗೆ ರೂ. 13 ಲಕ್ಷ ಹಣವನ್ನು ಘೋಷಿಸಿದ್ದಾರೆ. ಕೊರೋನಾವೈರಸ್ ಮತ್ತು ಉಕ್ರೇನ್‌ ಯುದ್ಧದಿಂದ ರಷ್ಯಾ ಜನಸಂಖ್ಯೆ ವ್ಯಾಪಕವಾಗಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ. 

putin announces lakhs to women who give birth to ten or more children to repopularise russia
Author
Bengaluru, First Published Aug 18, 2022, 11:24 AM IST

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೊಸ ಆದೇಶವೊಂದನ್ನು ಹೊರಡಿಸಿದ್ದಾರೆ. ರಷ್ಯಾದಲ್ಲಿ ಜನಸಂಖ್ಯೆ ಹೆಚ್ಚಳ ಮಾಡಲು ಮಹಿಳೆಯರಿಗೆ ರಿವಾರ್ಡ್‌ ಘೋಷಿಸಿದ್ದಾರೆ. ರಷ್ಯಾ ಜನಸಂಖ್ಯೆ ಸಮತೋಲನಕ್ಕಾಗಿ ಮಹಿಳೆಯರು 10 ಮಕ್ಕಳನ್ನು ಹೆತ್ತರೆ 13 ಲಕ್ಷ ಹಣ ನೀಡುವುದಾಗಿ ಪುಟಿನ್‌ ಘೋಷಿಸಿದ್ದಾರೆ. ಕೊರೋನಾವೈರಸ್‌ ಮತ್ತು ಉಕ್ರೇನ್‌ ವಿರುದ್ಧದ ಯುದ್ಧದಿಂದ ರಷ್ಯಾದ ಜನಸಂಖ್ಯೆ ಕಡಿಮೆಯಾಗಿದ್ದು, ಯುವ ಸಮೂಹ ಮುಂಬರುವ ವರ್ಷಗಳಲ್ಲಿ ಕಡಿಮೆಯಾಗಲಿದೆ. ಇದೇ ಕಾರಣಕ್ಕೆ ಮಕ್ಕಳನ್ನು ಹೆತ್ತು ರಿವಾರ್ಡ್‌ ಗಳಿಸುವಂತೆ ಪುಟಿನ್‌ ಸೂಚಿಸಿದ್ದಾರೆ. ಇದು ಪುಟಿನ್‌ರ ಹತಾಶ ಪ್ರಯತ್ನ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. 

ರಷ್ಯಾ ರಾಜಕೀಯ ಮತ್ತು ಭದ್ರತಾ ತಜ್ಞೆ ಡಾ ಜೆನ್ನಿ ಮಾಥರ್ಸ್‌ ಅವರು ಟೈಮ್ಸ್‌ ರೇಡಿಯೋ ಜೊತೆ ಮಾತನಾಡಿದ್ದು, ರಷ್ಯಾದ ಹೊಸ ಘೋಷಣೆ 'ಮದರ್‌ ಹೀರೊಯಿನ್‌' ಇಳಿಕೆ ಕಂಡಿರುವ ಜನಸಂಖ್ಯೆಯನ್ನು ಮೇಲೆತ್ತಲು ಮಾಡುತ್ತಿರುವ ಯತ್ನ ಎಂದು ವಿಶ್ಲೇಷಿಸಿದ್ಧಾರೆ. 

ಪುಟಿನ್‌ ಈ ನಿರ್ಧಾರ ಮಾಡಲು ಮುಖ್ಯ ಕಾರಣವೆಂದರೆ ಕೋವಿಡ್‌ 19 ಸಾಂಕ್ರಾಮಿಕ ರೋಗದಿಂದ ಉಂಟಾದ ಸಾವು ಮತ್ತು ಈ ಮಾರ್ಚ್‌ ತಿಂಗಳಿಂದ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು. ಅದರ ಜೊತೆಗೆ ಉಕ್ರೇನ್‌ ಯುದ್ಧದಲ್ಲಿ ಸುಮಾರು 50,000 ಕ್ಕೂ ಅಧಿಕ ರಷ್ಯಾ ಸೈನಿಕರು ಮೃತಪಟ್ಟಿದ್ದಾರೆ. ಈ ಕಾರಣಗಳಿಂದ ಪುಟಿನ್‌ ಮಕ್ಕಳನ್ನು ಹೆರಲು ಮಹಿಳೆಯರಿಗೆ ರಿವಾರ್ಡ್‌ ಘೋಷಿಸಿದ್ದಾರೆ. 

ಡಾ. ಮಾಥರ್ಸ್‌ ಹೇಳಿರುವ ಪ್ರಕಾರ ಪುಟಿನ್‌ ಈ ಹಿಂದಿನಿಂದಲೂ ದೊಡ್ಡ ಕುಟುಂಬವನ್ನು ಹೊಂದಿದವರು ಹೆಚ್ಚು ದೇಶಭಕ್ತಿ ಹೊಂದಿರುತ್ತಾರೆ ಎಂದು ಹೇಳುತ್ತಿದ್ದರು. 
ಟೈಮ್ಸ್‌ ರೇಡಿಯೋದ ಬೋನ್ಸು ಅವರು ಸಂದರ್ಶನದ ವೇಳೆ, "ಹತ್ತನೇ ಮಗುವಿಗೆ ಒಂದು ವರ್ಷ ತುಂಬಿದ ದಿನ 13 ಲಕ್ಷ ಹಣವನ್ನು ಕೊಡಲಾಗುವುದು ಎಂದು ಘೋಷಿಸಲಾಗಿದೆ. ಅದೂ ಉಳಿದ ಒಂಭತ್ತು ಮಕ್ಕಳು ಬದುಕಿದ್ದರೆ ಮಾತ್ರ. ಇದು ಪುಟಿನ್‌ ಅವರು ಮಾಡುತ್ತಿರುವ ಶಥ ಪ್ರಯತ್ನದಂತೆ ಕಾಣುತ್ತಿದೆ," ಎಂದು ಡಾ ಮಾಥರ್ಸ್‌ ಅವರನ್ನು ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ: ಮತ್ತೊಮ್ಮೆ ತಂದೆಯಾಗ್ತಿದ್ದಾರೆ 69 ವರ್ಷದ ಪುಟಿನ್‌, ಗರ್ಲ್‌ಫ್ರೆಂಡ್‌ ಕಬೇವಾ ಪ್ರಗ್ನೆಂಟ್‌!

ಇದಕ್ಕೆ ಉತ್ತರಿಸಿದ ಮಾಥರ್ಸ್‌, "ಹೌದು ಇದು ಶಥ ಪ್ರಯತ್ನವೇ ಹೌದು. 1990ನೇ ಇಸವಿಯಿಂದಲೂ ರಷ್ಯಾದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆ. ಜನಸಂಖ್ಯೆ ಹೆಚ್ಚಿಸಲು ಸರ್ಕಾರ ಆಗಿನಿಂದಲೂ ಪ್ರಯತ್ನಿಸುತ್ತಿದೆ. ಆದರೆ ಪ್ರಯತ್ನ ಸಫಲವಾಗಿಲ್ಲ. ಇದೇ ಕಾರಣಕ್ಕಾಗಿ ಈಗ ರಿವಾರ್ಡ್‌ ಘೋಷಣೆ ಮಾಡಲಾಗಿದೆ," ಎಂದಿದ್ದಾರೆ. 

ಮುಂದುವರೆದ ಅವರು, "ಉಕ್ರೇನ್‌ ವಿರುದ್ಧದ ಯುದ್ಧ ಮತ್ತು ಕೊರೋನಾವೈರಸ್‌ ಸಾಂಕ್ರಾಮಿಕ ರೋಗ ಜನಸಂಖ್ಯೆ ಇನ್ನಷ್ಟು ಕಡಿಮೆಯಾಗುವಂತೆ ಮಾಡಿದೆ. ಈ ಘೋಷಣೆ ಮಹಿಳೆಯರನ್ನು ಹೆಚ್ಚು ಮಕ್ಕಳನ್ನು ಹೆರಲು ಉತ್ತೇಜನ ನೀಡಲು ಮತ್ತು ಸ್ಪೂರ್ತಿ ನೀಡಲು ಮಾಡಿರುವ ಘೋಷಣೆ," ಎಂದರು. 

ಇದನ್ನೂ ಓದಿ: Putin Health ರಷ್ಯಾ ಅಧ್ಯಕ್ಷ ಪುಟಿನ್ ಬದುಕುಳಿಯುವುದು 3 ವರ್ಷ ಮಾತ್ರ, ಗುಪ್ತಚರ ಅಧಿಕಾರಿ ಸ್ಫೋಟಕ ಮಾಹಿತಿ!

"ಆದರೂ ಹತ್ತು ಮಕ್ಕಳನ್ನು 13 ಲಕ್ಷ ಹಣದಲ್ಲಿ ಬೆಳೆಸುವುದು ಹೇಗೆ ಸಾಧ್ಯ. ಜತೆಗೆ ಸಾಮಾಜಿಕ, ಆರ್ಥಿಕ ಮತ್ತು ರಾಜತಾಂತ್ರಿಕ ಸಮಸ್ಯೆಗಳು ಕೂಡ ಆಗಾಗ ಕಾಡುತ್ತವೆ. ಇವೆಲ್ಲದರ ನಡುವೆ ಹತ್ತು ಮಕ್ಕಳನ್ನು ಬೆಳೆಸುವುದು ಹೇಗೆ," ಎಂದೂ ಅವರು ಪ್ರಶ್ನಿಸಿದ್ದಾರೆ.

Follow Us:
Download App:
  • android
  • ios