Asianet Suvarna News Asianet Suvarna News

ಅಮೆರಿಕ ವೈರಸ್‌ ತಂಡಕ್ಕೆ ವುಹಾನ್‌ ಭೇಟಿ ಅವಕಾಶಕ್ಕೆ ಚೀನಾ ನಕಾರ!

ತಾನು ಸಹ ಕೊರೋನಾ ಸೃಷ್ಟಿಸಿದ ಸಾವು-ನೋವು ಅನುಭವಿಸುತ್ತಿರುವ ಸಂತ್ರಸ್ತನೇ ಹೊರತು, ಕೊರೋನಾ ಸೃಷ್ಟಿಸಿದ ಅಪರಾಧಿಯಲ್ಲ| ಅಮೆರಿಕ ವೈರಸ್‌ ತಂಡಕ್ಕೆ ವುಹಾನ್‌ ಭೇಟಿ ಅವಕಾಶಕ್ಕೆ ಚೀನಾ ನಕಾರ| 

China rejects Trump call to send US team to Wuhan to probe Coronavirus emergence
Author
Bangalore, First Published Apr 21, 2020, 12:45 PM IST

ಬೀಜಿಂಗ್‌(ಏ.21): ಕೊರೋನಾ ವೈರಸ್‌ ಉದ್ಭವದ ಕುರಿತಾದ ತನಿಖೆಗೆ ಅಮೆರಿಕದ ಅಧ್ಯಯನ ತಂಡಕ್ಕೆ ವುಹಾನ್‌ ಭೇಟಿಗೆ ಅವಕಾಶ ಕಲ್ಪಿಸಬೇಕೆಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೋರಿಕೆಯನ್ನು ಚೀನಾ ನಿರಾಕರಿಸಿದೆ. ಅಲ್ಲದೆ, ತಾನು ಸಹ ಕೊರೋನಾ ಸೃಷ್ಟಿಸಿದ ಸಾವು-ನೋವು ಅನುಭವಿಸುತ್ತಿರುವ ಸಂತ್ರಸ್ತನೇ ಹೊರತು, ಕೊರೋನಾ ಸೃಷ್ಟಿಸಿದ ಅಪರಾಧಿಯಲ್ಲ ಎಂದು ಚೀನಾ ಪ್ರತಿಪಾದಿಸಿದೆ.

"

ಅಮೆರಿಕ ತೈಲ ಮಾರುಕಟ್ಟೆಯಲ್ಲಿ ಕೇಳರಿಯದ ಕುಸಿತ: ಬೆಲೆ ಶೂನ್ಯಕ್ಕಿಂತ ಕೆಳಗೆ!

ಕೊರೋನಾ ವೈರಸ್‌ ವುಹಾನ್‌ ವೈರಾಣು ಸಂಸ್ಥೆಯಿಂದ ಪರಾರಿಯಾಗಿರಬಹುದು ಎಂಬ ಟ್ರಂಪ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಜೆಂಗ್‌ ಶಾಂಗ್‌, ಕೊರೋನಾ ಸೋಂಕು ಎಲ್ಲ ಮಾನವ ಜೀವಿಗಳಿಗೆ ಸಾಮಾನ್ಯ ಶತ್ರು. ಅಲ್ಲದೆ, ಚೀನಾ ಸಹ ಈ ವೈರಸ್‌ನ ಸಂತ್ರಸ್ತ ರಾಷ್ಟ್ರವಾಗಿದೆ.

ಆದರೆ, ಈ ವೈರಸ್‌ ಅನ್ನು ಚೀನಾ ಸೃಷ್ಟಿಸಿದ್ದಲ್ಲ ಎಂದು ಹೇಳಿದ್ದಾರೆ. ಈ ಮೂಲಕ ವೈರಸ್‌ ಸೃಷ್ಟಿಯ ಅಧ್ಯಯನಕ್ಕೆ ತಂಡವನ್ನು ವುಹಾನ್‌ಗೆ ರವಾನಿಸುವ ಟ್ರಂಪ್‌ ಅವರ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios