ಕುಟುಂಬ ಸಾಕಲು ದುಡಿಮೆಗಾಗಿ ಬಹರೇನ್‌ಗೆ ಹೋದ ಮಾಡೆಲ್ ನಾಪತ್ತೆ: ವರ್ಷದ ಬಳಿಕ ಶವಪತ್ತೆ
ವರ್ಷದ ಹಿಂದೆ ನಾಪತ್ತೆಯಾಗಿದ್ದ ಥೈಲ್ಯಾಂಡ್ ಮೂಲದ ಮಾಡೆಲ್ ಒಬ್ಬರು ಸೌದಿ ರಾಷ್ಟ್ರ ಬಹರೇನ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 31 ವರ್ಷ ಪ್ರಾಯದ ಕೈಕನ್ ಕೇನ್ನಕಮ್ ಎಂಬುವವರೇ ವರ್ಷದ ಹಿಂದೆ ನಾಪತ್ತೆಯಾಗಿದ್ದ ಥೈಲ್ಯಾಂಡ್‌ನ ಮಾಡೆಲ್,
ಬಹರೈನ್: ವರ್ಷದ ಹಿಂದೆ ನಾಪತ್ತೆಯಾಗಿದ್ದ ಥೈಲ್ಯಾಂಡ್ ಮೂಲದ ಮಾಡೆಲ್ ಒಬ್ಬರು ಸೌದಿ ರಾಷ್ಟ್ರ ಬಹರೇನ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 31 ವರ್ಷ ಪ್ರಾಯದ ಕೈಕನ್ ಕೇನ್ನಕಮ್ ಎಂಬುವವರೇ ವರ್ಷದ ಹಿಂದೆ ನಾಪತ್ತೆಯಾಗಿದ್ದ ಥೈಲ್ಯಾಂಡ್‌ನ ಮಾಡೆಲ್, ಈಕೆ ಬಹರೇನ್‌ನಲ್ಲಿದ್ದ ತನ್ನ ಗೆಳೆಯನ ಜೊತೆ ವಾಸ ಮಾಡುತ್ತಾ ಅಲ್ಲಿನ ರೆಸ್ಟೋರೆಂಟೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ವಿಚಾರವನ್ನು ಆಕೆ ನಾಪತ್ತೆಯಾಗುವುದಕ್ಕೂ ಮೊದಲು ಮನೆಯವರಿಗೂ ತಿಳಿಸಿದ್ದಳು.
ಚೀನಾ ಟೈಮ್ಸ್‌ನ ವರದಿ ಪ್ರಕಾರ ಈಕೆ ತನ್ನ ದೇಶದಲ್ಲಿ ಕೆಲಸವಿಲ್ಲದ ಹಿನ್ನೆಲೆಯಲ್ಲಿ ದೇಶದ ಹೊರಗೆ ಕೆಲಸಕ್ಕಾಗಿ ಪ್ರಯತ್ನ ಪಟ್ಟಿದ್ದಳು. ಇದಾದ ನಂತರ ಆಕೆಗೆ ಬಹರೇನ್‌ನ ಹೊಟೇಲೊಂದರಲ್ಲಿ ಕೆಲಸ ಸಿಕ್ಕಿತ್ತು. ಹೀಗಾಗಿ ತನ್ನ ಕುಟುಂಬವನ್ನು ಸಲಹುವ ಉದ್ದೇಶದಿಂದ ಆಕೆ ಮೂರು ವರ್ಷದ ಹಿಂದೆ ಥೈಲ್ಯಾಂಡ್ ತೊರೆದು ಸೌದಿ ರಾಷ್ಟ್ರ ಬಹರೇನ್‌ಗೆ ತೆರಳಿದ್ದಳು. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿದ್ದ ಆಕೆ ಬಹರೇನ್ ಮೂಲದ ಗೆಳೆಯನೊಂದಿಗೆ ತಾನು ಪ್ರಸ್ತುತ ವಾಸ ಮಾಡುತ್ತಿರುವುದಾಗಿ ಕುಟುಂಬಕ್ಕೆ ತಿಳಿಸಿದ್ದಳು. ಆದರೆ ಏಪ್ರಿಲ್ 2023 ರಿಂದ ಇದ್ದಕ್ಕಿದ್ದಂತೆ ಆಕೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದನ್ನು ನಿಲ್ಲಿಸಿದ್ದಳು. ಇದರಿಂದಾಗಿ ಕುಟುಂಬವು ಕಳವಳಗೊಂಡು ಆಕೆಯನ್ನು ಫೋನ್ ಮೂಲಕ ಸಂಪರ್ಕ ಮಾಡಲು ಯತ್ನಿಸಿದ್ದರು ಆಕೆಯನ್ನು ಫೋನ್‌ನಲ್ಲಿ ಸಂಪರ್ಕಿಸಲು ಸಾಧ್ಯವಾಗಲಿಲ್ಲ.
ಈ ಟ್ರಾವೆಲ್ ಮಾಡೆಲ್ ಅಂದಕ್ಕೆ ಲಕ್ಷಾಂತರ ಜನ ಫಿದಾ! ಈಕೆಯ ತಿಂಗಳ ಸಂಪಾದನೆಯೇ 7 ಲಕ್ಷ ! ಆದ್ರೊಂದು ಟ್ವಿಸ್ಟ್
ಇದಾದ ನಂತರ ಮಾಡೆಲ್ ಕೈಕನ್ ಅವರ ಕುಟುಂಬವು ಈ ವರ್ಷದ ಜನವರಿಯಲ್ಲಿ ಥಾಯ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಕೈಕನ್ ಅವರ ಪತ್ತೆಗೆ ನೆರವಾಗುವಂತೆ ಕೋರಿತು. ಆದರೆ ರಾಯಭಾರ ಕಚೇರಿಗೂ ಮಾಡೆಲ್ ಕೈಕನ್ ಪತ್ತೆ ಸಾಧ್ಯವಾಗಿರಲಿಲ್ಲ. ಇದಾದ ನಂತರ ಏಪ್ರಿಲ್ 18 ರಂದು, ಥಾಯ್ ರಾಯಭಾರ ಕಚೇರಿಯು ಆಗ್ನೇಯ ಏಷ್ಯಾ ಮೂಲದ ಅಪರಿಚಿತ ಮಹಿಳೆಯ ಶವವೊಂದು ಸಲ್ಮಾನಿಯಾ ವೈದ್ಯಕೀಯ ಸಂಕೀರ್ಣದ ಶವಾಗಾರದಲ್ಲಿ ಇದೆ ಎಂದು ಕುಟುಂಬಕ್ಕೆ ತಿಳಿಸಿತ್ತು. ಈ ವೇಳೆ ಆಕೆಯ ಕಾಲಿನ ಮೇಲೆ ಹಾಕಿದ್ದ ಹಚ್ಚೆಯಿಂದಾಗಿ ಆಕೆ ತಮ್ಮದೇ ಮಗಳು ಎಂದು ಗುರುತಿಸಲು ಆಕೆಯ ಕುಟುಂಬದವರಿಗೆ ಸಹಾಯ ಮಾಡಿತ್ತು ಎಂದು ಚೀನಾ ಟೈಮ್ಸ್ ಹೇಳಿದೆ.
ಮದ್ಯದ(ಆಲ್ಕೋಹಾಲ್)ಲ್ಲಿನ ವಿಷ ಪ್ರಾಶನದಿಂದ ಹೃದಯದ ರಕ್ತನಾಳದ ವೈಫಲ್ಯವಾಗಿ ಈ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ. ಈಗ ಮಾಡೆಲ್ ಕುಟುಂಬವೂ ಆಕೆಯ ಶವವನ್ನು ಥೈಲ್ಯಾಂಡ್‌ಗೆ ತರಲು ನೆರವು ಯಾಚಿಸುತ್ತಿದ್ದು, ಆಕೆಯ ಸಾವು ಅನುಮಾನಸ್ಪದವಾಗಿದೆ ಎಂದು ಹೇಳಿದ್ದಾರೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.
ಮಗ ಪ್ರೀತಿಸಿದ್ದ ಮಾಡೆಲ್ ಮನೇಕಾರನ್ನ ಸಂಜಯ್ ಗಾಂಧಿ ಸತ್ತ ಬಳಿಕ ಮಧ್ಯರಾತ್ರಿ ಹೊರದಬ್ಬಿದ ಇಂದಿರಾಗಾಂಧಿ!
ಕೈಕನ್ ಅವರ ಸಹೋದರಿ ಸುತಿದಾ ನ್ಗೆರ್ನ್ಥಾವರ್ನ್ (Suthida Ngernthaworn) ಏಪ್ರಿಲ್ 19 ರಂದು ಆನ್‌ಲೈನ್ ಮಾಡಿದ ಪೋಸ್ಟ್‌ನಲ್ಲಿ, ನನ್ನ ಸಹೋದರಿ ಸುಮಾರು ಎರಡು ಅಥವಾ ಮೂರು ವರ್ಷಗಳ ಹಿಂದೆ ಬಹ್ರೇನ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಅಲ್ಲಿ ಆಕೆಗೆ ಅರಬ್ ಮೂಲದ ಬಾಯ್‌ಫ್ರೆಂಡ್ ಸಿಕ್ಕಿದ್ದ. ಆದರೆ ಕಳೆದ ವರ್ಷ ಏಪ್ರಿಲ್‌ನಿಂದ ನಮಗೆ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ, ಹೀಗಾಗಿ ನಮ್ಮ ಕುಟುಂಬವು ಬಹ್ರೇನ್‌ನಲ್ಲಿರುವ ಥಾಯ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿದಾಗ ಈ ತಿಂಗಳು 18 ರಂದು ಅವರು ನಿಧನರಾದರು ಎಂದು ತಿಳಿಯಿತು ಎಂದು ಬರೆದುಕೊಂಡಿದ್ದಾರೆ.