ಚೀನಾ ಮತ್ತು ಅಮೆರಿಕದ ನಡುವಿನ ತೆರಿಗೆ ಯುದ್ಧ ಇದೀಗ ಮತ್ತಷ್ಟು ಬಿಗಡಾಯಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಚೀನಾದ ಮೇಲಿನ ಪ್ರತಿ ತೆರಿಗೆಯನ್ನು ಶೇ.145ಕ್ಕೇರಿಸಿದ ಬೆನ್ನಲ್ಲೇ ಚೀನಾ ಕೂಡ ಅಮೆರಿಕದ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೇ.125ಕ್ಕೆ ಹೆಚ್ಚಿಸಿದೆ. 

ವಾಷಿಂಗ್ಟನ್‌/ಬೀಜಿಂಗ್‌ (ಏ.12): ಚೀನಾ ಮತ್ತು ಅಮೆರಿಕದ ನಡುವಿನ ತೆರಿಗೆ ಯುದ್ಧ ಇದೀಗ ಮತ್ತಷ್ಟು ಬಿಗಡಾಯಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಚೀನಾದ ಮೇಲಿನ ಪ್ರತಿ ತೆರಿಗೆಯನ್ನು ಶೇ.145ಕ್ಕೇರಿಸಿದ ಬೆನ್ನಲ್ಲೇ ಚೀನಾ ಕೂಡ ಅಮೆರಿಕದ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೇ.125ಕ್ಕೆ ಹೆಚ್ಚಿಸಿದೆ. ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ ಚೀನಾ ಶೇ.84 ತೆರಿಗೆ ಹೇರಿತ್ತು. ಆದರೆ ಟ್ರಂಪ್‌ ತಾವು ಚೀನಾ ಮೇಲೆ ಹೇರಿದ್ದ ತೆರಿಗೆಯನ್ನು ಶೇ.125ರಿಂದ 146ಕ್ಕೆ ಹೆಚ್ಚಿಸಿದ ಬೆನ್ನಲ್ಲೇ ಚೀನಾ ತನ್ನ ತೆರಿಗೆಯನ್ನು ಶೇ.125ಕ್ಕೆ ಏರಿಸಿದೆ. ಈ ನಡುವೆ, ಅಮೆರಿಕದ ಏಕಪಕ್ಷೀಯ ಬೆದರಿಕೆ ತಂತ್ರವನ್ನು ಎದುರಿಸಲು ತಮ್ಮ ಜತೆ ಕೈಜೋಡಿಸುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಯುರೋಪ್‌ ಒಕ್ಕೂಟಕ್ಕೆ (ಇಯು) ಆಗ್ರಹಿಸಿದ್ದಾರೆ.

ಇನ್ನಷ್ಟು ತೆರಿಗೆ ಇಲ್ಲ- ಚೀನಾ: ಆದರೆ, ಅಮೆರಿಕದ ಉತ್ಪನ್ನಗಳ ಮೇಲೆ ಮತ್ತಷ್ಟು ತೆರಿಗೆ ಹೇರುವುದಿಲ್ಲ ಎಂದು ಇದೇ ವೇಳೆ ಚೀನಾದ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಏಕೆಂದರೆ ಈಗ ಹೇರಿರುವ ತೆರಿಗೆಯಿಂದಾಗಿ ಅಮೆರಿಕದ ಯಾವುದೇ ವಸ್ತುಗಳನ್ನು ಚೀನಾದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ. ಅಮೆರಿಕವು ಚೀನಾದ ಮೇಲೆ ಹೇರುತ್ತಿರುವ ತೆರಿಗೆಯು ಅಂಕಿ-ಅಂಶಗಳ ಆಟವಷ್ಟೇ ಆಗಿದೆ. ಅದೊಂದು ಜೋಕ್‌. ಅದಕ್ಕೆ ಅರ್ಥಶಾಸ್ತ್ರದಲ್ಲಿ ಪ್ರಾಯೋಗಿಕ ಮಹತ್ವವಿಲ್ಲ’ಎಂದು ಅಭಿಪ್ರಾಯಪಟ್ಟಿದೆ.

ಅಮೆರಿಕದ ಮೇಲೆ ಚೀನಾ, ಯುರೋಪ್‌ ಒಕ್ಕೂಟ ಜಂಟಿ ತೆರಿಗೆ ದಾಳಿ

ಒಂದು ವೇಳೆ ಅಮೆರಿಕವು ತೆರಿಗೆ ಆಟವನ್ನು ಇನ್ನೂ ಮುಂದುವರಿಸಿದರೆ ಚೀನಾ ಅದನ್ನು ಕಡೆಗಣಿಸಲಿದೆ ಎಂದಿರುವ ಚೀನಾ ಹಣಕಾಸು ಸಚಿವಾಲಯ, ವಿಶ್ವಾದ್ಯಂತ ಸೃಷ್ಟಿಯಾಗಿರುವ ಆರ್ಥಿಕ ತಲ್ಲಣಕ್ಕೆ ಅಮೆರಿಕ ಸಂಪೂರ್ಣ ಹೊಣೆ ಹೊರಬೇಕು ಎಂದೂ ಹೇಳಿದೆ. ಜತೆಗೆ, ಟ್ರಂಪ್‌ ಅವರು ಉಳಿದ ದೇಶಗಳ ಮೇಲೆ ಹೇರಿರುವ ಪ್ರತಿ ತೆರಿಗೆಯನ್ನು 90 ದಿನಗಳ ಕಾಲ ಮುಂದೂಡಲು ಚೀನಾದಿಂದ ಎದುರಾದ ಒತ್ತಡವೇ ಕಾರಣ ಎಂದೂ ಚೀನಾ ಹೇಳಿಕೊಂಡಿದೆ.

ಟ್ರಂಪ್‌ ಟಾನಿಕ್‌: 1310 ಅಂಕಜಿಗಿದ ಸೆನ್ಸೆಕ್ಸ್‌- ಸಂಪತ್ತು ₹7.8 ಲಕ್ಷ ಕೋಟಿ ಏರಿಕೆಮುಂಬೈ: ಪ್ರತಿ ಸುಂಕ ಜಾರಿಯನ್ನು ಮೂರು ತಿಂಗಳ ಕಾಲ ಮುಂದೂಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಘೋಷಣೆ ಬೆನ್ನಲ್ಲೇ ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರ ಒಂದೇ ದಿನ 1310 ಅಂಕ ಏರಿಕೆ ಕಂಡಿದೆ. ಹೂಡಿಕೆದಾರರ ಸಂಪತ್ತು 7.8 ಲಕ್ಷ ಕೋಟಿ ರು.ನಷ್ಟು ವೃದ್ಧಿಯಾಗಿದೆ.

ಸುಂಕ ಸಮರ ತಡೆಗೆ 90 ದಿನದಲ್ಲಿ ಭಾರತ: ಅಮೆರಿಕ ಮತ್ತು ಭಾರತದ ನಡುವಿನ ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕೆಲವು ಭಾಗಗಳು 90 ದಿನದೊಳಗೆ ಅಂತಿಮಗೊಳ್ಳುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಎರಡೂ ದೇಶಗಳ ನಡುವಿನ ತೆರಿಗೆ ಕದನ ಅಂತ್ಯಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.--

ರಕ್ತಪಿಪಾಸು ತಹಾವುರ್‌ ರಾಣಾ ಭಾರತಕ್ಕೆ: ಅಮೆರಿಕದಿಂದ ಗಡೀಪಾರು

ಅಮೆರಿಕಕ್ಕೆ ರವಾನೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಪ್ರತಿ ತೆರಿಗೆಗೆ ಹೆದರಿ ಕಳೆದ ವಾರ ಭಾರತದಿಂದ 6 ವಿಮಾನಗಳಲ್ಲಿ ಅಮೆರಿಕಕ್ಕೆ ಹೋಗಿದ್ದ ಐಫೋನ್‌ ತೂಕ ಬರೋಬ್ಬರಿ 600 ಟನ್‌ ಎಂಬುದು ಗೊತ್ತಾಗಿದೆ. 6 ವಿಮಾನಗಳಲ್ಲಿ 600 ಟನ್‌ ತೂಕದ ಒಟ್ಟು 15 ಲಕ್ಷ ಐಫೋನ್‌ಗಳನ್ನು ಆ್ಯಪಲ್‌ ಕಂಪನಿ ಚೆನ್ನೈ ವಿಮಾನ ನಿಲ್ದಾಣದಿಂದ ಅಮೆರಿಕಕ್ಕೆ ಸಾಗಿಸಿತ್ತು ಎಂದು ಮೂಲಗಳು ತಿಳಿಸಿವೆ.