ವಾಷಿಂಗ್ಟನ್(ಡಿ.02): ಅಮೆರಿಕದ ಪ್ರಮುಖ ಆಯೋಗವೊಂದು ತನ್ನ ವರದಿಯಲ್ಲಿ ಭಾರತ ಹಾಗೂ ಚೀನಾ ನಡುವೆ LACಯಲ್ಲಿ ನಡೆದಿದ್ದ ಗಲ್ವಾನ್ ಘಟನೆಗೆ ಸಂಬಂಧಿಸಿದ ಮಹತ್ವದ ವಿಚಾರ ಉಲ್ಲೇಖಿಸಿದೆ. ಈ ವರದಿಯಲ್ಲಿ ಕೆಲ ಸಂಗತಿಗಳನ್ನು ಗಮನಿಸಿದಂತೆ ಚೀನಾ ಇಲ್ಲಿ ನಡೆದಿದ್ದ ಸಂಘರ್ಷದ ಯೋಜನೆ ಮೊದಲೇ ರೂಪಿಸಿದ್ದು, ಇದರಲ್ಲಿ ಯೋಧರು ಹುತಾತ್ಮರಾಗುವ ಸಾಧ್ಯತೆಗಳೂ ಇದ್ದವು ಎಂದು ಉಲ್ಲೇಖಿಸಿದೆ. ಅಮೆರಿಕ- ಚೀನಾ ಆರ್ಥಿಕ ಭದ್ರತಾ ಆಯೋಗದ ವರದಿಯಲ್ಲಿ ಈ ವಿಚಾರ ಉಲ್ಲೇಖಿಸಲಾಗಿದ್ದು, ಇದನ್ನು ಅಮೆರಿಕದ ಸಂಸತ್ತಿಗಾಗಿ ತಯಾರಿಸಲಾಗಿದೆ.

ಗಲ್ವಾನ್ ಹೋರಾಟದ ಎಪಿಸೋಡ್ ಒಳಗೊಂಡ FAU-G ಗೇಮ್ ಟೀಸರ್ ಬಿಡುಗಡೆ!

ಆಯೋಗದ ವರದಿಯನ್ವಯ ಈ ಸಂಘರ್ಷ ನಡೆಯುವ ಕೆಲ ವಾರದ ಹಿಂದೆ ಚೀನಾ ರಕ್ಷಣಾ ಸಚಿವ ಮಿಲಿಟರಿ ಪಡೆ ಬಳಸಿಕೊಳ್ಳುವ ಬಗ್ಗೆ ಉಲ್ಲೇಖಿಸಿದ್ದರು. ಇದಾದ ಬಳಿಕವೇ ಭಾರತ ಹಾಗೂ ಚೀನಾ ಗಡಿಯಲ್ಲಿ ಹಿಂಸಾತ್ಮಕ ಘರ್ಷಣೆ ನಡೆದಿದ್ದು, ಇದರಲ್ಲಿ 1975ರ ಬಳಿಕ ಮೊದಲ ಬಾರಿ ಯೀಧರು ಹುತಾತ್ಮರಾಗಿದ್ದರು. ಇದನ್ನು ಹೊರತುಪಡಿಸಿ ಗಲ್ವಾನ್ ಹಿಂಸಾತ್ಮಕ ಘರ್ಷಣೆಗೂ ಮೊದಲಿನ ಸ್ಯಾಟಲೈಟ್ ಚಿತ್ರಗಳಲ್ಲಿ ಗಲ್ವಾನ್ ಕಣಿವೆಡಯಲ್ಲಿ ಚೀನಾ ಪಡೆ ಕಟ್ಟಡಗಳನ್ನು ನಿರ್ಮಿಸುತ್ತಿರುವುದು ಪತ್ತೆಯಾಗಿತ್ತು. ಅಲ್ಲದೇ 1000 ಕ್ಕೂ ಅಧಿಕ ಚೀನಾ ಸೈನಿಕರಿರುವುದೂ ಕಂಡಿತ್ತು.

ಭಾರತದ ವಿರೋಧದ ನಡುವೆ ಕೈಲಾಸ-ಮಾನಸ ಸರೋವರ ಬಳಿ ಚೀನಾ ಕ್ಷಿಪಣಿ ನೆಲೆ ನಿರ್ಮಾಣ!

ಅಮೆರಿಕದ ಆಯೋಗದ ವರದಿಯನ್ವಯ ಚೀನಾ ತನ್ನ ನೆರೆ ರಾಷ್ಟ್ರದ ವಿರುದ್ಧ ಅನೇಕ ವರ್ಷದ ತನ್ನ ಕಾರ್ಯಾಚರಣೆಯಲ್ಲಿ ವೇಗ ಹೆಚ್ಚಿಸಿತು. ಈ ಮೂಲಕ ಜಪಾನ್, ಭಾರತ ಸೇರಿ ಆಗ್ನೇಯ ಏಷ್ಯಾ ದೇಶಗಳು ಯುದ್ಧ ಪರಿಸ್ಥಿತಿಗೆ ಸಜ್ಜಾಗುವಂತೆ ಪ್ರಚೋದಿಸಿತು. ಒಂದು ವೇಳೆ ಚೀನಾ ಭಾರತಕ್ಕೆ ತನ್ನ ಗಡಿಯೊಳಗೆ ಕಟ್ಟಡ ನಿರ್ಮಿಸುವುದನ್ನು ತಡೆಯುವ ಅಥವಾ ಅಮೆರಿಕ ಪರ ಹೆಚ್ಚಿನ ಒಲವು ತೋರಿರುವುದಕ್ಕೆ ಎಚ್ಚರಿಕೆ ನೀಡಲು ಇಂತಹ ನಡೆ ಅನುಸರಿಸಿದ್ದರೆ ಅದು ಸಂಪೂರ್ಣವಾಗಿ ವಿಫಲಗೊಂಡಿದೆ ಎಂದೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

2000 ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಈ ಸಮಿತಿ ಅಮೆರಿಕ ಹಾಗೂ ಚೀನಾ ನಡುವಿನ ರಾಷ್ಟ್ರೀಯ ಭದ್ರತೆ ಹಾಗೂ ವಹಿವಾಟು ವಿಚಾರಗಳ ಮಾನಿಟರಿಂಗ್ ನಡೆಸುತ್ತದೆ.