ನವದೆಹಲಿ(ಆ.31):  ಚೀನಾ-ಪಾಕಿಸ್ತಾನ ಎಕಾನಮಿ ಕಾರಿಡಾರ್ ಯೊಜನೆ  ಹಾಗೂ ಮುಂಬರು ದಿನಗಳಲ್ಲಿ ಚೀನಾದ ಹಲವು ಕಾರಿಡಾರ್ ಯೋಡನೆಗಳಿಗೆ  ಭಾರತ ಜೊತೆಗಿನ ಗಡಿ ನಿಯಂತ್ರಣ ರೇಖೆಯ ಒಪ್ಪಂದಗಳು ಅಡ್ಡಿಯಾಗಿದೆ. ಇದಕ್ಕಾಗಿ ನಿಯಂತ್ರಣ ರೇಖೆಯನ್ನು ಬದಲಿಸಲು ಚೀನಾ ಮುಂದಾಗಿದೆ. ಇದೇ ಕಾರಣಕ್ಕ ಲಡಾಖ್ ಪ್ರಾಂತ್ಯದ ಗಲ್ವಾಣ್ ಕಣಿವೆ, ಪ್ಯಾಂಗಾಂಗ್ ಸರೋವರ ಸೇರಿದಂತೆ ಹಲವು ಭಾಗಗಳಲ್ಲಿ ಚೀನಾ ಕಿರಿಕ್ ಮಾಡುತ್ತಲೇ ಇದೆ. ಇದೀಗ  ಭಾರತದ ತೀವ್ರ ವಿರೋಧದ ನಡುವೆ ಕೈಲಾಸ-ಮಾನಸ ಸರೋವರ ಬಳಿ ಚೀನಾ ಕ್ಷಿಪಣಿ ನೆಲೆ ನಿರ್ಮಾಣ ಮಾಡಿದೆ.

ಚೀನಾ ಅಪ್ರಚೋದಿತ ದಾಳಿ ಯತ್ನ ವಿಫಲಗೊಳಿಸಿದ ಭಾರತೀಯ ಸೇನೆ!.

ಭಾರತ, ನೇಪಾಳ ಹಾಗೂ ಚೀನಾ ಗಡಿಯಲ್ಲಿ ಪವಿತ್ರ ಕ್ಷೇತ್ರ ಕೈಲಾಸ -ಮಾನಸ ಸರೋವರವಿದೆ. ಹಿಂದೂ, ಬುದ್ಧ, ಜೈನ ಸೇರಿದಂತೆ ನಾಲ್ಕು ಧರ್ಮಗಳ ಪವಿತ್ರ ಕ್ಷೇತ್ರವಾಗಿದೆ. ಈ ಸ್ಥಳವನ್ನು ಚೀನಾ ಆಕ್ರಮಿಸಿಕೊಂಡಿದೆ. ಪ್ರತಿ ವರ್ಷ ಭಾರತದಿಂದ ಹಲವರು ಈ ಕೈಲಾಸ ಮಾನಸ ಸರೋವರ ಸಂದರ್ಶಿಸುತ್ತಾರೆ. ಇದೀಗ ಪವಿತ್ರ ಕ್ಷೇತ್ರವನ್ನು ಚೀನಾ ಸೇನಾ ಕ್ಷಿಪಣಿ ನೆಲೆಯಾಗಿ ಪರಿವರ್ತಿಸಿದೆ. ಇದು ಒಪ್ಪಂದಕ್ಕೆ ವಿರುದ್ಧವಾಗಿದೆ.

ದಕ್ಷಿಣ ಚೀನಾ ಸಮುದ್ರಕ್ಕೆ ನೌಕೆ ಕಳಿಸಿ ಭಾರತ ಟಾಂಗ್‌

ಭಾರತದ ವಿರೋಧದ ನಡುವೆಯೂ ಚೀನಾ ಮಾನಸ ಸರೋವರ ಕ್ಷಿಪಣಿ ನೆಲೆಯನ್ನು ಪೂರ್ಣಗೊಳಿಸಿದೆ. ಇನ್ನು ಭಕ್ತರು ಮಾನಸ ಸರೋವರ ಸಂದರ್ಶಿಸಲು ಸಾಧ್ಯವಿಲ್ಲ. ಕಾರಣ ಇನ್ಮುಂದೆ ಮಾನಸ ಸರೋವರ ಪವಿತ್ರ ಕ್ಷೇತ್ರವನ್ನು ಸೇನೆ ಕಾರ್ಯಚಟುವಟಿಕೆಗಳ ತಾಣವಾಗಿದೆ. ಹೀಗಾಗಿ ಈ ಪ್ರದೇಶಕ್ಕೆ ಇತರ ಪ್ರವೇಶಕ್ಕೆ ಸಹಜವಾಗಿ ನಿರ್ಬಂಧ ಹೇರಲಾಗುತ್ತದೆ.

ಲಡಾಖ್ ಪ್ರಾಂತ್ಯದಲ್ಲಿ ಗಡಿ ಖ್ಯಾತೆ ತೆಗೆದ ಚೀನಾ ಇದೇ ಸಮಯದಲ್ಲಿ ಮಾನಸ ಸರೋವರ ಬಳಿ ಕ್ಷಿಪಣಿ ನೆಲೆ ನಿರ್ಮಾಣಕ್ಕೆ ಮುಂದಾಗಿತ್ತು. ಭಾರತ ತನ್ನ ಗಮನವನ್ನು ಗಲ್ವಾನ್, ಪ್ಯಾಂಗಾಂಗ್ ಸರೋವರ ಸೇರಿದಂತೆ ಲಡಾಖ್ ದಕ್ಷಿಣ ಪ್ರಾಂತ್ಯದತ್ತ ನೆಟ್ಟಿತ್ತು. ಆದರೆ ಚೀನಾ ಸದ್ದಿಲ್ಲದ ಮಾನಸ ಸರೋವರದಲ್ಲಿ ತನ್ನ ಕ್ಷಿಪಣಿ ನೆಲೆ ನಿರ್ಮಾಣ ಕಾರ್ಯ ಮುಗಿಸಿತ್ತು.

ಭಾರತವನ್ನು ಪದೆೇ ಪದೇ ಕೆಣಕುತ್ತಿರುವ ಚೀನಾ ತನ್ನಲ್ಲಿರುವ ಅತ್ಯಾಧುನಿಕ ಶಸ್ತ್ರಾಸ್ತ್ರ, ಯುದ್ಧವಿಮಾನ, ಬಂಕರ್‌ನಿಂದ ಯುದ್ದದ ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ. ಆದರೆ ಭಾರತೀಯ ಸೇನೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಿದೆ. ಚೀನಾ ಮಾತ್ರ ಯಾವುದಕ್ಕೂ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.