Asianet Suvarna News Asianet Suvarna News

ಗಲ್ವಾನ್ ಹೋರಾಟದ ಎಪಿಸೋಡ್ ಒಳಗೊಂಡ FAU-G ಗೇಮ್ ಟೀಸರ್ ಬಿಡುಗಡೆ!

ಚೀನಾ ಕಿರಿಕ್ ಬಳಿಕ ಚೀನಾದ ಮೂಲಕ ಆ್ಯಪ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ, ಪಬ್‌ಜಿ ಆ್ಯಪ್ ಕೂಡ ನಿಷೇಧ ಮಾಡಿದೆ. ಇದರ ಬೆನ್ನಲ್ಲೇ ಪಬ್‌ಜಿ ಆ್ಯಪ್‌ಗೆ ಸೆಡ್ಡು ಹೊಡೆಯಲು ಭಾರತದ ಫೌಜಿ ಗೇಮಿಂಗ್ ಆ್ಯಪ್ ಬಿಡುಗಡೆಗೆ ಸಜ್ಜಾಗಿದೆ. ದಸರಾ ಹಬ್ಬದ ಸಂದರ್ಭದಲ್ಲಿ  FAU-G ಗೇಮ್ ಆ್ಯಪ್ ಟೀಸರ್ ಬಿಡುಗಡೆ ಮಾಡಿದೆ. ಈ ಟೀಸರ್‌ನಲ್ಲಿ ಗಲ್ವಾಣ್ ಕಣಿವೆ ಹೋರಾಟದ ಎಪಿಸೋಡ್ ಚಿತ್ರಿಸಲಾಗಿದೆ.

Galwan valley clash based FAU G game app teaser launched in India ckm
Author
Bengaluru, First Published Oct 26, 2020, 7:13 PM IST

ಬೆಂಗಳೂರು(ಅ.26): ದಸರಾ ಹಬ್ಬಕ್ಕೆ ಭಾರತದ FAU-G ಗೇಮ್ ಆ್ಯಪ್ ಟೀಸರ್ ಬಿಡುಗಡೆಯಾಗಿದೆ. ಪಬ್‌ಜಿ ಗೇಮಿಂಗ್ ಆ್ಯಪ್‌ಗೆ ಸೆಡ್ಡು ಹೊಡೆಯಲು ಫೌಜಿ ಗೇಮಿಂಗ್ ಆ್ಯಪ್ ಸಜ್ಜಾಗಿದೆ. ಬೆಂಗಳೂರು ಮೂಲಕ ಎನ್‌ಕೋರ್ ಗೇಮ್ಸ್ ಕಂಪನಿ ನೂತನ ಗೇಮಿಂಗ್ ಆ್ಯಪ್ ಅಭಿವೃದ್ದಿ ಪಡಿಸಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ಫೌಜಿ ಗೇಮಿಂಗ್ ಆ್ಯಪ್‌ಗೆ ಬಂಡವಾಳ ಹೂಡಿಕೆ ಮಾಡಿದ್ದಾರೆ.

ಪಬ್‌ಜಿ ಅಕ್ಷಯ್‌ ಸಡ್ಡು: ಫೌ-ಜಿ ಆ್ಯಪ್‌ ಅಭಿವೃದ್ಧಿ!...

FAU-G ಗೇಮಿಂಗ್ ಆ್ಯಪ್ ಟೀಸರ್‌ನಲ್ಲಿ ಒಂದು ವಿಶೇಷತೆ ಇದೆ. ಈ ಟೀಸರ್ ಪ್ರಮುಖವಾಗಿ ಲಡಾಖ್‌ನ ಗಲ್ವಾಣ್ ಕಣಿವೆಯಲ್ಲಿ ನಡೆದ ಹೋರಾಟದ ದೃಶ್ಯವಿದೆ.  ಗಲ್ವಾಣ್ ಕಣಿವೆಯನ್ನು ಅತಿಕ್ರಮಣ ಮಾಡಿದ ಚೀನಾ ಸೇನೆಗೆ ತಕ್ಕ ತಿರುಗೇಟು ನೀಡಿದ ಭಾರತೀಯ ಸೇನೆಯ ವೀರಗಾಥೆಯ ಕತೆ ಇದೆ. 

ಬಿಡುಗಡೆ ಮಾಡಿರುವ ಟೀಸರ್‌ನಲ್ಲಿ ಯಾವುದೇ ಶಸ್ತ್ರಾಸ್ತ್ರ ಬಳಕೆ, ಟೂಲ್ಸ್ ಬಳಕೆ ಮಾಹಿತಿ ಇಲ್ಲ. ಭಾರತ ವಿಶ್ವದ ಇತರ ಗೇಮಿಂಗ್ ಆ್ಯಪ್ ಕಂಪನಿಗಳಿಗೆ ಸೆಡ್ಡು ಹೊಡೆಯಬಲ್ಲ ಗೇಮಿಂಗ್ ಆ್ಯಪ್ ಅಭಿವೃದ್ಧಿ ಮಾಡಬಲ್ಲ ಸಾಮರ್ಥ್ಯ ಹೊಂದಿದೆ ಎಂಬುದನ್ನು ಫೌಜಿ ಆ್ಯಪ್ ತೋರಿಸಲಿದೆ ಎಂದು ಎನ್‌ಕೋರ್ ಗೇಮಿಂಗ್ ಆ್ಯಪ್ ಸಂಸ್ಥಾಪಕ ವಿಶಾಲ್ ಗೊಂಡಾಲ್ ಹೇಳಿದ್ದಾರೆ.

 

ಬ್ಯಾನ್ ಬಳಿಕ ಮೌನ ಮುರಿದ PUBG; ಚೀನಾ ಗೇಮಿಂಗ್ ಕಂಪನಿ ಜೊತೆ ಒಪ್ಪಂದ ರದ್ದು!.

ಪಬ್‌ಜಿ ಸೇರಿದಂತೆ ವಿಶ್ವದಲ್ಲಿರುವ ಗೇಮಿಂಗ್ ಆ್ಯಪ್‌ಗೆ ಸೆಡ್ಡು ಹೊಡೆಯಬಲ್ಲ ಗೇಮಿಂಗ್ ಆ್ಯಪ್ ಇದಾಗಿದ್ದು, ಅತ್ಯುತ್ತಮ ಗೇಮಿಂಗ್ ಅನುಭವ ನೀಡಲಿದೆ ಎಂದು ವಿಶಾಲ್ ಗೊಂಡಾಲ್ ಹೇಳಿದ್ದಾರೆ.

ಪಬ್ ಜಿ  ರೀತಿಯಲ್ಲೇ ಫೌಜಿ ಇಬ್ಬರಿಗಿಂತೆ ಹೆಚ್ಚಿನವರು ಪಾಲ್ಗೊಂಡು ಆಡುವ ಗೇಮ್ ಆಗಿದೆ. ವಿಶೇಷ ಅಂದರೆ ಭಾರತೀಯ ಸೇನೆಯ ಸಾಹಸಗಾಥೆಗಳ ನೈಜ ಘಟನೆ ಆಧರಿಸಿ ಗೇಮಿಂಗ್ ರೂಪಿಸಲಾಗಿದೆ. ಇದೀಗ ಗಲ್ವಾಣ್ ಕಣಿವೆಯ ಒಂದು ತುಣುಕನ್ನು ಇಲ್ಲಿ ನೀಡಲಾಗಿದೆ.

ಫೌಜಿ ಟೀಸರ್ ಕುರಿತು ಸಂತಸ ವ್ಯಕ್ತಪಡಿಸಿರುವ ನಟ ಹಾಗೂ ಫೌಜಿ ಗೇಮಿಂಗ್ ಆ್ಯಪ್ ರಾಯಭಾರಿ ಅಕ್ಷಯ್ ಕುಮಾರ್ ಟ್ವಿಟರ್ ಮೂಲಕ ಟೀಸರ್ ಹಂಚಿಕೊಂಡಿದ್ದಾರೆ.

Follow Us:
Download App:
  • android
  • ios