Asianet Suvarna News Asianet Suvarna News

ಶುರುವಾಯ್ತು ಅಮೆರಿಕ-ಚೀನಾ ನಡುವೆ ತಿಕ್ಕಾಟ, ಡ್ರ್ಯಾಗನ್ ರಾಷ್ಟ್ರಕ್ಕೆ ಎಚ್ಚರಿಕೆ ನೀಡಿದ ಟ್ರಂಪ್!

ಭಾರತದ ಜೊತೆ ಖ್ಯಾತೆ ತೆಗೆದು ಭಾರಿ ದಂಡ ತೆತ್ತ ಚೀನಾ ಮೇಲೆ ಅಮೆರಿಕ ಸಮರ ಸಾರಿದೆ. ದಕ್ಷಿಣ ಚೀನಾ ಸಮುದ್ರದಾಚೆಗಿನ ಸಂಪನ್ಮೂಲ ಬಳೆಕೆಯಲ್ಲಿ ಚೀನಾ ಕಾನೂನು ಉಲ್ಲಂಘಿಸಿದೆ ಎಂದು ಅಮೆರಿಕ ಸ್ಪಷ್ಟವಾಗಿ ಹೇಳಿದೆ. ಇಷ್ಟೇ ಅಲ್ಲ ಅಮೆರಿಕ ಚೀನಾ ಆತಂರಿಕ ವಿಚಾರದಲ್ಲಿ ಮೂಗು ತೂರಿಸುತ್ತಿದೆ ಹೇಳಿಕೆಯನ್ನು ಅಲ್ಲಗೆಳೆದಿದೆ. ಈ ಕುರಿತ ವರದಿ ಇಲ್ಲಿದೆ.

China offered no coherent legal basis for its ambitions in South Sea says America
Author
Bengaluru, First Published Jul 14, 2020, 7:10 PM IST

ವಾಶಿಂಗ್ಟನ್(ಜು.14):  ಚೀನಾ ಕಾನೂನು ಉಲ್ಲಂಘನೆ ಕುರಿತು ಅಮೆರಿಕ ಎಚ್ಚರಿಕೆ ನೀಡಿದೆ.  ದಕ್ಷಿಣ ಚೀನಾ ಸಮುದ್ರದಾಚಿಗನ ಸಂಪನ್ಮೂಲಗಳ ಮೇಲೆ ಚೀನಾ ಹಕ್ಕು ಸಾಧಿಸುತ್ತಿದೆ. ಏಷ್ಯಾದ ಕರಾವಳಿ ತೀರ ದೇಶಗಳನ್ನು ಬೆದರಿಸಿ ಚೀನಾ ತನ್ನ ಕಾರ್ಯಸಾಧಿಸುತ್ತಿದೆ. ಇದು ಗಡಿ ಕಾನೂನು ಉಲ್ಲಂಘನೆಯಾಗಿದೆ ಎಂದು ಅಮೆರಿಕ ಚೀನಾ ವಿರುದ್ದ ಆರೋಪ ಮಾಡಿದೆ. ಇಷ್ಟೇ ಅಲ್ಲ ಅಮೆರಿಕ ಆತಂಕ ವಾತಾವರಣ ಸಷ್ಟಿಸುತ್ತಿದೆ ಅನ್ನೋ ಚೀನಾ ಹೇಳಿಕೆಯನ್ನು ತಳ್ಳಿಹಾಕಿದೆ. 

ಭಾರತ, ಅಮೆರಿಕಾ ಸೇರಿ ಚೀನಾ ಬುಡಕ್ಕೆ 'D'ಬಾಂಬ್..!.

ದಕ್ಷಿಣ ಚೀನಾ ಸಮುದ್ರದಲ್ಲಿನ ತನ್ನ ಮಹತ್ವಾಕಾಂಕ್ಷೆಗಳಿಗೆ ಚೀನಾ ಯಾವುದೇ ಕಾನೂನು ಆಧಾರವನ್ನು ನೀಡಿಲ್ಲ. ಹಲವಾರು ವರ್ಷಗಳಿಂದ ಆಗ್ನೇಯ ಏಷ್ಯಾದ ಕರಾವಳಿ ದೇಶಗಳ ವಿರುದ್ಧ ಬೆದರಿಕೆ ಮೂಲಕ ಚೀನಾ ತನ್ನ ಕಾರ್ಯಸಾಧಿಸುತ್ತಿದೆ. ದಕ್ಷಿಣ ಚೀನಾ ಸಮುದ್ರದಾಚೆಗಿನ ಚೀನಾದ ಹಕ್ಕು ಸಂಪೂರ್ಣ ಕಾನೂನುಬಾಹಿರವಾಗಿದೆ. ಇಷ್ಟೇ ಚೀನಾ ಹಕ್ಕು ಸಾಧಿಸಲು ಬೆದರಿಕೆಯ ಅಸ್ತ್ರ ಪ್ರಯೋಗಿಸುತ್ತಿದೆ.  ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ.

ಉತ್ತರದಲ್ಲಿ ಮೋದಿ, ದಕ್ಷಿಣದಲ್ಲಿ ಟ್ರಂಪ್, ಚೀನಾ ಲಾಕ್..!...

ದಕ್ಷಿಣ ಚೀನಾ ಸಮುದ್ರದ ಗಡಿ ಮೀರಿ ಮೇಲೆ ಚೀನಾ ನೌಕಾಪಡೆಯ ಯುದ್ದ ನೌಕೆಗಳ ಪ್ರದರ್ಶನ ಹಾಗೂ ಜಲ ಮಾರ್ಗವನ್ನು ಬಳಸಿಕೊಳ್ಳುತ್ತಿದೆ. ಇದನ್ನು ಅಮರಿಕ ಹಿಂದಿನಿಂದಲೂ ವಿರೋಧಿಸುತ್ತಿದೆ. ಚೀನಾ ತನ್ನ ಗಡಿಯೊಳಗೆ ಸಮರಭ್ಯಾಸ ನಡೆಸುವುದಕ್ಕೆ ಯಾವುದೇ ತಕರಾರಿಲ್ಲ. ಆದರೆ ಗಡಿ ದಾಡಿ ಇತರ ದೇಶದ ಮೇಲೆ ಹಕ್ಕು ಸಾಧಿಸುವುದು ಸುತಾರಾಂ ಅಮೆರಿಕ ಒಪ್ಪುವುದಿಲ್ಲ.  ದಕ್ಷಿಣ ಚೀನಾ ಸಮುದ್ರವನ್ನು ತನ್ನ ಸಮುದ್ರ ಸಾಮ್ರಾಜ್ಯವೆಂದು ಪರಿಗಣಿಸುತ್ತಿರುವ ಬೀಜಿಂಗ್  ಕುತಂತ್ರವನ್ನು ಅಮೆರಿಕ ಒಪ್ಪುವುದಿಲ್ಲ ಎಂದು ಪೊಂಪಿಯೋ ಹೇಳಿದ್ದಾರೆ.

ದಕ್ಷಿಣ ಚೀನಾ ಸಮದ್ರದಾಚೆ ಹಕ್ಕು ಸಾಧಿಸುವ ಚೀನಾ ನಿರ್ಧಾರವನ್ನು ನಾಲ್ಕು ವರ್ಷಗಳ ಹಿಂದೆ UN ಕನ್ವೆನ್ಶನ್ ಲಾ ಆಫ್ ದಿ ಸಿ(UNCLOS)ತೀರ್ಪು ನೀಡಿದೆ. ಈ ತೀರ್ಪನ್ನು ಅಮೆರಿಕ ಬೆಂಬಲಿಸುತ್ತದೆ  ಎಂದ ಅಮೆರಿಕ ಹೇಳಿದೆ.  

ಚೀನಾದ ಹಕ್ಕನ್ನು ಅಮೆರಿಕ ನಿರಾಕರಿಸುತ್ತಿರುವುದು ಸರಿಯಲ್ಲ. ಇದು ಉದ್ದೇಶಪೂರ್ವಕವಾಗಿ ಕಡಲ ಸಾರ್ವಭೌಮತ್ವದ ಹಕ್ಕುಗಳ ವಿವಾದವನ್ನು ಹುಟ್ಟುಹಾಕುತ್ತದೆ, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ನಾಶಪಡಿಸುತ್ತದೆ. ಅಮೆರಿಕದ ಬೇಜವಾಬ್ದಾರಿಯುತ ಕಾರ್ಯವಾಗಿದೆ  ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝಾಹೋ ಲಿಜಾನ್ ಹೇಳಿದ್ದಾರೆ.

Follow Us:
Download App:
  • android
  • ios