ಗಡಿ ವಿಷಯವಾಗಿ ಭಾರತದ ಜೊತೆ ಪದೇಪದೇ ಕ್ಯಾತೆ ತೆಗೆಯುತ್ತಿರುವ ಚೀನಾ| ಡೋಕ್ಲಾಂ ಸಂಘರ್ಷ ಬಳಿಕ ದ್ವಿಗುಣ| ವಾಯು ರಕ್ಷಣಾ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಿಕೊಂಡಿದೆ
ನವದೆಹಲಿ(ಸೆ.23): ಗಡಿ ವಿಷಯವಾಗಿ ಭಾರತದ ಜೊತೆ ಪದೇಪದೇ ಕ್ಯಾತೆ ತೆಗೆಯುತ್ತಿರುವ ಚೀನಾ ಕಳೆದ ಮೂರು ವರ್ಷಗಳ ಅವಧಿಯಲ್ಲಿ ತನ್ನ ವಾಯು ನೆಲೆಗಳು, ಹೆಲಿಪೋರ್ಟ್‌ಗಳು ಹಾಗೂ ವಾಯು ರಕ್ಷಣಾ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಿಕೊಂಡಿದೆ ಎಂಬ ಸಂಗತಿ ಹೊರಬಿದ್ದಿದೆ.
'ಲಡಾಖ್ ಗಡಿಗೆ ಬರಲ್ಲ' ಪಾಪ ಚೀನಾ ಸೈನಿಕರ ಗೋಳಾಟ ಕೇಳೋರಿಲ್ಲ; ವಿಡಿಯೋ
ಜಾಗತಿಕ ಭೌಗೋಳಿಕ ರಾಜಕೀಯ ಗುಪ್ತಚರ ಮಾಹಿತಿ ಕಲೆಹಾಕುವ ಸ್ಟ್ರಾಟ್‌ಫೋರ್ ಸಂಸ್ಥೆಯ ಮಾಹಿತಿಯ ಪ್ರಕಾರ, ಭಾರತ ಗಡಿಗೆ ಹೊಂದಿಕೊಂಡಂತೆ ಚೀನಾ ಹೊಸದಾಗಿ 13 ಸೇನಾ ನೆಲೆಗಳನ್ನು ಸ್ಥಾಪಿಸಿದೆ. ಇದರಲ್ಲಿ 3 ವಾಯು ನೆಲೆಗಳು, 5 ವಾಯು ರಕ್ಷಣಾ ವ್ಯವಸ್ಥೆ ಮತ್ತು 5 ಹೆಲಿಪೋರ್ಟ್‌ಗಳು ಸೇರಿವೆ. ಮೇನಲ್ಲಿ ಉಂಟಾದ ಲಡಾಖ್ ಬಿಕ್ಕಟ್ಟಿನ ಬಳಿಕವೇ ಹೊಸದಾಗಿ 4 ಹೆಲಿಪೋರ್ಟ್‌ಗಳನ್ನು ಚೀನಾ ನಿರ್ಮಿಸಿದೆ.
ಚೀನಾ ಅಧ್ಯಕ್ಷನ ಟೀಕಿಸಿದ ಉದ್ಯಮಿಗೆ ಸ್ಪಾಟ್‌ನಲ್ಲೇ 18 ವರ್ಷ ಜೈಲು!
2017ರ ಡೋಕ್ಲಾಮ್ ಬಿಕ್ಕಟ್ಟಿಗೂ ಮುನ್ನ ಭಾರತದ ಗಡಿಯಲ್ಲಿ ಚೀನಾ ತಲಾ ಒಂದು ಹೆಲಿಪೋರ್ಟ್, ವಾಯು ರಕ್ಷಣಾ ವ್ಯವಸ್ಥೆ ಮತ್ತು ವಾಯು ನೆಲೆಯನ್ನು ಚೀನಾ ಹೊಂದಿತ್ತು. ಡೋಕ್ಲಾಮ್ ಬಿಕ್ಕಟ್ಟಿನ ಬಳಿಕ ಚೀನಾ ಗಡಿಯಲ್ಲಿ ಸೇನಾ ಮೂಲಸೌಕರ್ಯಗಳನ್ನು ತ್ವರಿತ ಗತಿಯಲ್ಲಿ ಹೆಚ್ಚಿಸಿಕೊಂಡಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಹಿಡಿತ ಸಾಧಿಸಲು ಹೊರಟಂತೆ ಲಡಾಖ್‌ನಲ್ಲೂ ಚೀನಾ ದೊಡ್ಡ ಮಟ್ಟದ ತಂತ್ರಗಾರಿಕೆಯನ್ನು ರೂಪಿಸಿದೆ ಎಂದು ವರದಿಗಳು ತಿಳಿಸಿವೆ.
