ಬೀಜಿಂಗ್(ಸೆ. 22) ಭಾರತ ಮತ್ತು ಚೀನಾ ಗಡಿಯಲ್ಲಿನ ವಾತಾವರಣದ ಅರಿವು ಎಲ್ಲರಿಗೂ ಇದ್ದೆ ಇದೆ. ಎರಡು ರಾಷ್ಟ್ರಗಳು ಗಡಿಯಲ್ಲಿ ಸೈನಿಕರ ಜಮಾವಣೆ ರಹಸ್ಯವಾಗಿಯೇನೂ ಉಳಿದಿಲ್ಲ.

ಆದರೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು ಚೀನಿ ಸೈನಿಕರ ಆಕ್ರಂದನ ಮುಗಿಲು ಮುಟ್ಟಿದೆ. 

ಪಾಕಿಸ್ತಾನದ ಹಾಸ್ಯ ನಟ ಜಿಯಾದ್ ಹಮೀದ್ ಚೀನಿ ಸೈನಿಕರಿಗೆ ಸಂಬಂಧಿಸಿದ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದಾರೆ.  ಲಡಾಕ್ ಗಡಿಗೆ ನಿಯೋಜನೆ ಮಾಡಿದ್ದಕ್ಕೆ ಚೀನಾ ಸೈನಿಕರು ಬಸ್ ನಲ್ಲಿಯೇ ಗೋಳಿಡುತ್ತಿರುವ ದೃಶ್ಯ ಅದರಲ್ಲಿದ್ದು ವೈರಲ್ ಆಗಿದೆ.

ಚೀನಾಕ್ಕೆ ಗಡಿಯಲ್ಲಿ ಭಾರತದ ಡಬಲ್ ಶಾಕ್

ಮುಂದುವರಿದು ಬರೆದಿರುವ ಹಾಸ್ಯ ನಟ ಪಾಕಿಸ್ತಾನಿಗಳು ಚೀನಾಕ್ಕೆ ಬೆಂಬಲ ನೀಡುತ್ತಿದ್ದು, ಧೈರ್ಯಗುಂದದಿರಿ ಎಂದಿದ್ದಾರೆ! ವಿಚಾಟ್ ನ ಪುಯಾಂಗ್ ಸಿಟಿ ವೀಕ್ಲಿಯಲ್ಲಿ ಮೊದಲು ಈ ವಿಡಿಯೋ ಅಪ್ ಲೋಡ್ ಆಗಿತ್ತು. ನಂತರ ಡಿಲೀಟ್ ಮಾಡಲಾಗಿದೆ.   ಒಟ್ಟಿನಲ್ಲಿ ಚೀನಾ ಸೈನಿಕರ ಆಕ್ರಂದನ ಮಾತ್ರ  ನೋಡಲು ಅಸಾಧ್ಯ.