ಬೋರ್ಡ್ ಮೇಲೆ ಪಾದರಸ ಚೆಲ್ಲಿ ಪ್ರತಿಸ್ಪರ್ಧಿಗೆ ವಿಷಪ್ರಾಸನ ಮಾಡಿದ ಚೆಸ್ ಪ್ಲೇಯರ್: ವೀಡಿಯೋ

ರಷ್ಯಾದ  ಮಹಿಳಾ ಚೆಸ್ ಆಟಗಾರ್ತಿಯೊಬ್ಬರು ತನ್ನ ಪ್ರತಿಸ್ಪರ್ಧಿಗೆ ವಿಷಪ್ರಾಸನ ಮಾಡಿದ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆ ಆಗಿದೆ. ಈ ಆಘಾತಕಾರಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Chess player of Russian republic of Dagestan poisons rival with mercury Shocking incident captured in cc camera akb

ರಷ್ಯಾದ  ಮಹಿಳಾ ಚೆಸ್ ಆಟಗಾರ್ತಿಯೊಬ್ಬರು ತನ್ನ ಪ್ರತಿಸ್ಪರ್ಧಿಗೆ ವಿಷಪ್ರಾಸನ ಮಾಡಿದ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆ ಆಗಿದೆ. ಈ ಆಘಾತಕಾರಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಪರ್ಧೆ ನಡೆಯುವುದಕ್ಕೆ ಮೊದಲೇ ಸ್ಪರ್ಧೆ ಆಯೋಜಿಸಿದ ಕೊಠಡಿಗೆ ಬರುವ ಆರೋಪಿ ಸ್ಪರ್ಧಿ ಅಲ್ಲಿ  ಚೆಸ್‌ ಆಟಗಾರರ ಸ್ಪರ್ಧೆಗೆ ಸೆಟ್ ಮಾಡಿ ಇರಿಸಿದ್ದ ಚೆಸ್‌ಬೋರ್ಡ್‌ಗಳಲ್ಲಿ  ತನ್ನ ಪ್ರತಿಸ್ಪರ್ಧಿ ಆಡಲಿದ್ದ ಚೆಸ್‌ಬೋರ್ಡ್‌ಗೆ ಪಾದರಸ ಹಾಕಿ ಕ್ಷಣಗಳಲ್ಲಿ ಅಲ್ಲಿಂದ ಹೊರಗೆ ಹೋಗುವುದನ್ನು ಕಾಣಬಹುದು. ಈ ಇಡೀ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.

ಹೀಗೆ ಚದುರಂಗದಲ್ಲಿ ಮೋಸದಾಟ ಮಾಡಲು ಬಯಸಿ ಪ್ರತಿಸ್ಪರ್ಧಿಯ ಜೀವಕ್ಕೆ ಎರವಾದ ಚೆಸ್ ಆಟಗಾರ್ತಿಯನ್ನು ಅಮಿನಾ ಅಬಕರೊವಾ (Amina Abakarova) ಎಂದು ಗುರುತಿಸಲಾಗಿದೆ. ಇನ್ನು ಹೀಗೆ ಈಕೆ ವಿಷಪ್ರಾಸನ ಮಾಡಿದ್ದು, ಆಕೆಯ ಬಾಲ್ಯದ ವಿರೋಧಿ ಉಮಯ್‌ಗನತ್ ಒಸ್ಮನೊವಾ (Umayganat Osmanova) ಎಂಬಾಕೆಗೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿ ಅಮಿನಾ ಅಬಕರೊವಾಳನ್ನು ಪೊಲೀಸರು ಬಂಧಿಸಿದ್ದಾರೆ.  ಈ ಪ್ರಕರಣದಲ್ಲಿ ಆರೋಪ ಸಾಬೀತಾದಲ್ಲಿ  ಅಮಿನಾ ಅಬಕರೊವಾಗೆ  ಮೂರು ವರ್ಷಗೂ ಅಧಿಕ ಶಿಕ್ಷೆಯಾಗಲಿದೆ. 

ಭೂತ ಪ್ರೇತಗಳು ಯಾರನ್ನ ತುಂಬಾ ಕಾಡುತ್ತೆ? ಇಲ್ಲಿದೆ ಪ್ರೇತಾತ್ಮಗಳ ಕುರಿತು ಇಂಟ್ರೆಸ್ಟಿಂಗ್ ವಿಷ್ಯ

ರಷ್ಯನ್ ರಿಪಬ್ಲಿಕ್ ಆದ ಡಗೇಸ್ತಾನ್‌ನಲ್ಲಿ ಈ ಚೆಸ್‌ ಪಂದ್ಯಾವಳಿ ಆಯೋಜಿಸಲಾಗಿತ್ತು. ಆದರೆ ಈ ಸ್ಪರ್ಧೆಯಲ್ಲಿ ಆಟಗಾರ್ತಿ ಅಮಿನಾ ಅಬಕರೊವಾ ಸ್ಪರ್ಧೆ ಆರಂಭವಾಗುವುದಕ್ಕೆ ಮೊದಲು  ತನ್ನ ಪ್ರತಿಸ್ಪರ್ಧಿಗೆ ನಿಗದಿಯಾಗಿದ್ದ  ಚೆಸ್ ಟೇಬಲ್ ಮೇಲೆ ಪಾದರಸ (mercury) ಹಾಕಿದ ನಂತರ ಅಲ್ಲಿನ ಸ್ಥಿತಿ ನಾಟಕೀಯ ತಿರುವು ಪಡೆಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ UNITED24 Media ಪೋಸ್ಟ್ ಮಾಡಿದೆ. 

ಇದಾದ ನಂತರ ಉಮೈಗನತ್ ಒಸ್ಮನೊವಾ ಚೆಸ್ ಪಂದ್ಯಾವಳಿಯ ಮಧ್ಯೆಯೇ ಅಸ್ವಸ್ಥಳಾಗಿದ್ದು, ಆಕೆಗೆ ಕೂಡಲೇ ವೈದ್ಯಕೀಯ ನೆರವು ನೀಡಲಾಗಿದೆ. ಇದಾಗಿ ಸ್ವಲ್ಪ ಹೊತ್ತಿನಲ್ಲಿ  ಸಿಸಿಟಿವಿಯಲ್ಲಿ ದೃಶ್ಯಾವಳಿ ಗಮನಿಸಿದ್ದು, ಆರೋಪಿ  ಅಮಿನಾ ಅಬಕರೊವಾಳನ್ನು ಬಂಧಿಸಲಾಗಿದೆ. ಈ ವಿಚಾರಡಾಗೇಸ್ತಾನ್‌ನ ಕ್ರೀಡಾ ಸಚಿವ ಸಜ್ಹಿದ್ ಸಜ್ಹಿದೊವಾ ಅವರ ಗಮನವನ್ನು ಕೂಡ ಸೆಳೆದಿದ್ದು,  ಇತರರಂತೆ ಈ ಘಟನೆಯನ್ನು ನೋಡಿ ನಾನು ಗಾಬರಿಗೊಂಡಿದ್ದೇನೆ. ಅಮೀನಾ ಅಬಕರೊವಾ ಅವರಂತಹ ಸ್ಪರ್ಧಿಗಳ ಉದ್ದೇಶವನ್ನು ಯಾರಿಗೂ ಗ್ರಹಿಸಲಾಗದು. ಈಕೆಯ ಇಂತಹ ಕೃತ್ಯಗಳು ದುರಂತಕ್ಕೆ ಆಹ್ವಾನ ನೀಡಬಲ್ಲದು . ಇದು ವಿಷಪ್ರಾಸನ ಮಾಡಿದ ಆಕೆಯೂ ಸೇರಿದಂತೆ ಅಲ್ಲಿದ್ದ ಎಲ್ಲರಿಗೂ ಅಪಾಯಕಾರಿ. ಆಕೆಯ ಕೃತ್ಯಕ್ಕೆ ಆಕೆ ನ್ಯಾಯಾಲಯದ ಮುಂದೆ ಉತ್ತರಿಸಲೇಬೇಕು ಎಂದು ಅವರು ಟ್ವಿಟ್ ಮಾಡಿದ್ದಾರೆ. 

ವರ್ಷಾಂತ್ಯಕ್ಕೆ ಮಿಲಿಯನ್‌ಗೂ ಅಧಿಕ ಭಾರತೀಯ ಕಾಗೆಗಳಿಗೆ ವಿಷಪ್ರಾಶನಕ್ಕೆ ಮುಂದಾದ ಕೀನ್ಯಾ ಸರ್ಕಾರ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಆರಂಭವಾಗಿದ್ದು,  ಅಮಿನಾ ಅಬಕರೊವಾ ವೈಯಕ್ತಿಕ ಹಗೆತನದಿಂದ ತಾನು ಈ ಕೃತ್ಯವೆಸಗಿದ್ದಾಗಿ ಬಾಯ್ಬಿಟ್ಟಿದ್ದಾಳೆ. ಉಮೈಗನತ್ ಒಸ್ಮನೊವಾ ಈ ಮೊದಲು ಪ್ರಾದೇಶಿಕ ಸ್ಪರ್ಧೆಯಲ್ಲಿ ತನ್ನನ್ನು ಸೋಲಿಸಿದ್ದಳು, ಇದೇ ದ್ವೇಷದಿಂದ ತಾನು ಈ ಕೃತ್ಯವೆಸಗಿರುವುದಾಗಿ ಆಕೆ ಹೇಳಿದ್ದಾಳೆ. 

ಪಾದರಸ ಹೇಗೆ ವಿಷಕಾರಿ?

ಪಾದರಸ ಅಥವಾ ಮರ್ಕ್ಯುರಿ ಬಹಳ ಸೂಕ್ಷ್ಮವಾದ ಲೋಹದ ಕಣವಾಗಿದೆ. ಇದನ್ನು ಧೀರ್ಘಕಾಲದವರೆಗೆ ಉಸಿರಾಡುವುದರಿಂದ ಆರೋಗ್ಯ ಹದಗೆಡುವುದು. ಗೊತ್ತಿಲ್ಲದೇ ತಿಂದರೆ ಅಥವಾ ಚರ್ಮಕ್ಕೆ ಸೋಕಿದರೆ ಕ್ರಮೇಣ ಅನಾರೋಗ್ಯ ಕಾಡಬಹುದು. ಇದು ತಕ್ಷಣವೇ ಆರೋಗ್ಯಕ್ಕೆ ಹಾನಿ ಮಾಡುವುದಿಲ್ಲ, ಕಾಲ ಕ್ರಮೇಣ ಇದರ ಅನುಭವವಾಗುವುದು, ರಕ್ತದ ಚಲನೆಯಲ್ಲಿ ಇದರ ಪ್ರಮಾಣ ಹೆಚ್ಚಾದರೆ ಇದು ಮೂತ್ರಪಿಂಡದ ವೈಫಲ್ಯ ಹಾಗೂ ಅತಿಸಾರ ಮುಂತಾದ ಅನಾರೋಗ್ಯ ಸಮಸ್ಯೆಗೆ ಕಾರಣವಾಗಬಹುದು. 


 

Latest Videos
Follow Us:
Download App:
  • android
  • ios