MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಭೂತ ಪ್ರೇತಗಳು ಯಾರನ್ನ ತುಂಬಾ ಕಾಡುತ್ತೆ? ಇಲ್ಲಿದೆ ಪ್ರೇತಾತ್ಮಗಳ ಕುರಿತು ಇಂಟ್ರೆಸ್ಟಿಂಗ್ ವಿಷ್ಯ

ಭೂತ ಪ್ರೇತಗಳು ಯಾರನ್ನ ತುಂಬಾ ಕಾಡುತ್ತೆ? ಇಲ್ಲಿದೆ ಪ್ರೇತಾತ್ಮಗಳ ಕುರಿತು ಇಂಟ್ರೆಸ್ಟಿಂಗ್ ವಿಷ್ಯ

ಪೌರಾಣಿಕ ಕಥೆಗಳು ಮತ್ತು ಧರ್ಮಗ್ರಂಥಗಳ ಪ್ರಕಾರ, ಅಕಾಲಿಕ ಮರಣ ಅಥವಾ ಬಯಕೆ ಈಡೇರದೇ ಸಾವನ್ನಪ್ಪಿದವರು ಅತೃಪ್ತ ಆತ್ಮಗಳಾಗಿ ಅಲೆಯುತ್ತಾರೆ. ಅದೇ ಸಮಯದಲ್ಲಿ, ಯಾರಿಗೆ ಸಾವಿನ ನಂತರ ತರ್ಪಣ ನೀಡೋದಿಲ್ವೋ? ಅಂತಹ ಆತ್ಮಗಳು ತುಂಬಾ ಕೋಪಗೊಂಡಾಗ ಅಥವಾ ದುಃಖಿತರಾದಾಗ, ಅವರೊಳಗಿನ ನಕಾರಾತ್ಮಕತೆ ಅವರನ್ನು ದುಷ್ಟ ಆತ್ಮಗಳನ್ನಾಗಿ ಮಾಡುತ್ತೆ. ಬನ್ನಿ ಆತ್ಮಗಳ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ.  

2 Min read
Pavna Das
Published : Aug 03 2024, 05:45 PM IST
Share this Photo Gallery
  • FB
  • TW
  • Linkdin
  • Whatsapp
18

ಸಾಮಾನ್ಯ ಜೀವನದಲ್ಲಿ, ನಾವು ಹೆಚ್ಚಾಗಿ ದೆವ್ವಗಳು (ghost), ಆತ್ಮಗಳು ಮತ್ತು ಶಕ್ತಿಗಳ ಬಗ್ಗೆ ಮಾತನಾಡುತ್ತೇವೆ. ಕೆಲವು ಜನರು ಈ ದುಷ್ಟ ಶಕ್ತಿಗಳ ಅಸ್ತಿತ್ವವನ್ನು ನಂಬುತ್ತಾರೆ, ಕೆಲವರು ಈ ವಿಷಯಗಳನ್ನು ನಂಬುವುದಿಲ್ಲ, ಆದರೆ ದುಷ್ಟ ಶಕ್ತಿಗಳು, ದೆವ್ವಗಳು ಇತ್ಯಾದಿಗಳ ಕುರಿತು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. 
 

28

ಧರ್ಮಗ್ರಂಥಗಳು ಮತ್ತು ಪೌರಾಣಿಕ ಕಥೆಗಳಲ್ಲಿ, ದುಷ್ಟ ಶಕ್ತಿಗಳಿಗೆ ಸಂಬಂಧಿಸಿದ ಹೆಚ್ಚಿನ ರಹಸ್ಯಗಳ ಬಗ್ಗೆ ತಿಳಿಸಿದೆ. ಯಾರು ಅತೃಪ್ತ ಅಥವಾ ದುಷ್ಟ ಆತ್ಮಗಳಾಗುತ್ತಾರೆ? ಯಾರನ್ನ ಈ ದುಷ್ಟ ಆತ್ಮಗಳು ಹೆಚ್ಚು ಕಾಡೋದಕ್ಕೆ ಶುರು ಮಾಡುತ್ತೆ? ಜೊತೆಗೆ ಆತ್ಮಗಳ ರಹಸ್ಯಗಳ ಕುರಿತಾಗಿಯೂ ಇಲ್ಲಿ ಮಾಹಿತಿ ನೀಡಲಾಗಿದೆ.  

38

ದುಷ್ಟಾತ್ಮ ಎಂದರೇನು?
ಆತ್ಮವನ್ನು ದುಷ್ಟಾತ್ಮ ಎಂದು ಏಕೆ ಕರೆಯಲಾಗುತ್ತದೆ ಮತ್ತು ಆತ್ಮಗಳು ಹೇಗೆ ದುಷ್ಟ ಆತ್ಮಗಳಾಗುತ್ತವೆ? ಅನ್ನೋ ಪ್ರಶ್ನೆ ಇದ್ದೆ ಇರುತ್ತೆ… ದೆವ್ವಗಳು ವಿಭಿನ್ನ ರೀತಿಯ ಅಲೌಕಿಕ ಜೀವಿಗಳು, ಅವು ಸತ್ತವರ ಆತ್ಮದಿಂದ ರೂಪುಗೊಳ್ಳುತ್ತವೆ ಅನ್ನೋದು ಗೊತ್ತೇ ಇದೆ. ಆದರೆ ಯಾರು ತಮ್ಮ ಆಸೆಗಳನ್ನ ಪೂರೈಸದೆ ಸಾವನ್ನಪ್ಪಿರುತ್ತಾರೋ ಅವರು ಅತೃಪ್ತ ಆತ್ಮಗಳಾಗಿ ಅಲೆದಾಡುತ್ತಾರೆ. ಪುನರ್ಜನ್ಮಕ್ಕಾಗಿ ಆ ಆತ್ಮಗಳು ಸ್ವರ್ಗ ಅಥವಾ ನರಕಕ್ಕೆ ಹೋಗುವುದಿಲ್ಲ, ಬದಲಾಗಿ ಭೂಮಿಯ ಮೇಲೆ ಅಲೆದಾಡುತ್ತಾರೆ ಎನ್ನುವ ನಂಬಿಕೆ ಇದೆ. 

48

ಆತ್ಮಗಳು ಯಾವಾಗ ಅಲೆದಾಡುತ್ತವೆ
ಜೀವನದ ಆಸೆಗಳಿಗೆ ಬದ್ಧನಾದ ವ್ಯಕ್ತಿ ಮರಣದ ನಂತರವೂ ಆತ್ಮವಾಗಿ ಅಲೆದಾಡಬೇಕಾಗುತ್ತದೆ. ಜೊತೆಗೆ, ತನ್ನ ಜೀವನದಲ್ಲಿ ಹಸಿವು, ಬಾಯಾರಿಕೆ, ರೋಗ, ಕೋಪ, ಕಾಮ ಮುಂತಾದ ಆಸೆಗಳನ್ನು ಪೂರೈಸದೇ ಸಾಯುವ ವ್ಯಕ್ತಿ ಸಾವಿನ ನಂತರ ಭೂಮಿಯಲ್ಲಿ ಭೂತದಂತೆ ಅಲೆದಾಡಬೇಕಾಗುತ್ತದೆ. ಅಂತಹ ಆತ್ಮಗಳು ತಮ್ಮ ಈಡೇರದ ಆಸೆಗಳ ಈಡೇರಿಕೆಗಾಗಿ ಅಲೆದಾಡುತ್ತವೆ. ಇದರೊಂದಿಗೆ, ಶ್ರಾದ್ಧ ಕರ್ಮ, ತರ್ಪಣ ಇತ್ಯಾದಿಗಳನ್ನು ಮಾಡದ ಆತ್ಮಗಳು ಸಹ ತಮಗೆ ತರ್ಪಣ ಬಿಡದಕ್ಕಾಗಿ ಭೂಮಿ ಮೇಲೆ ಅಲೆದಾಡುತ್ತಿರುತ್ತೆ. 

58

ಆತ್ಮಗಳಲ್ಲಿ ಅನೇಕ ವಿಧಗಳಿವೆ
ನಿಜವಾಗಿಯೂ ಆತ್ಮಗಳಿವೆಯೇ ಅಥವಾ ಇಲ್ಲವೇ ಎಂದು ತಿಳಿಯುವ ಮೊದಲು, ಎಷ್ಟು ರೀತಿಯ ಆತ್ಮಗಳಿವೆ ಎಂದು ತಿಳಿದುಕೊಳ್ಳಬೇಕು. ಧರ್ಮಗ್ರಂಥಗಳಲ್ಲಿ ಮೂರು ರೀತಿಯ ಆತ್ಮಗಳಿವೆ ಎಂದು ಹೇಳಲಾಗಿದೆ, ಒಂದು ಜೀವಂತ ಆತ್ಮ, ಇನ್ನೊಂದು ಭೂತ ಆತ್ಮ. 

68

ನಮ್ಮ ದೇಹದಲ್ಲಿ ವಾಸಿಸುವ ಸೂಕ್ಷ್ಮ ಆತ್ಮವನ್ನು ಜೀವಂತ ಆತ್ಮ ಎಂದು ಕರೆಯಲಾಗುತ್ತದೆ. ಆದರೆ ಕಾಮ ಅಥವಾ ಆಸೆಗಳು ಜೀವಂತ ಆತ್ಮದಲ್ಲಿ ನೆಲೆಸಿದಾಗ, ಅದನ್ನು ಆತ್ಮ ಎಂದು ಕರೆಯಲಾಗುತ್ತದೆ. ಅದೇ ಸಮಯದಲ್ಲಿ, ಈ ಆತ್ಮಗಳು ಸೂಕ್ಷ್ಮ ದೇಹದಲ್ಲಿ ವಾಸಿಸುತ್ತಿದ್ದರೆ, ಅದನ್ನು ಸೂಕ್ಷ್ಮ ಆತ್ಮ ಎಂದು ಕರೆಯಲಾಗುತ್ತದೆ.
 

78

ಆತ್ಮಗಳು ಯಾವ ಜನರನ್ನು ಕಾಡುತ್ತವೆ?
ಪೌರಾಣಿಕ ನಂಬಿಕೆಗಳ ಪ್ರಕಾರ, ಆತ್ಮಗಳು ದುರ್ಬಲ ದೇಹಗಳನ್ನು (weak body) ಮತ್ತು ಮಾನಸಿಕವಾಗಿ ಮತ್ತು ದೈಹಿಕವಾಗಿ ದುರ್ಬಲರಾಗಿರುವವರನ್ನು ಹುಡುಕುತ್ತವೆ. ಅಲ್ಲದೆ, ಯಾವಾಗಲೂ ಹೆದರುವ ಜನರ ಮೇಲೆ ದೆವ್ವ, ಆತ್ಮಗಳ ಪ್ರಭಾವ ಬೀರಬಹುದು. ಜಾತಕದಲ್ಲಿ ಗ್ರಹಗಳು ದುರ್ವಲವಾಗಿದ್ದರೂ ಸಹ ಆತ್ಮಗಳು ಅಂತಹ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತದೆ. 

88

ಆತ್ಮಗಳು ಅಥವಾ ದುಷ್ಟ ಶಕ್ತಿಗಳಿಂದ ದೂರವಿರಲು ಏನು ಮಾಡಬೇಕು
ಮೊದಲನೆಯದಾಗಿ, ಯಾವಾಗಲೂ ದೇವರನ್ನು ನೆನಪಿಸಿಕೊಳ್ಳಿ ಮತ್ತು ದುಷ್ಟ ಶಕ್ತಿಗಳಿಂದ ದೂರವಿರಲು ದೇವರನ್ನು ಧ್ಯಾನಿಸಿ. ದೇವರನ್ನು ಯಾವಾಗಲೂ ಧ್ಯಾನಿಸೋದರಿಂದ, ನಮ್ಮಲ್ಲಿ ಸಕಾರಾತ್ಮಕ ಶಕ್ತಿ (positive energy) ತುಂಬುತ್ತದೆ. ನೀವು ನಿಮ್ಮ ಕರ್ಮವನ್ನು ಸರಿಯಾಗಿ ಇಟ್ಟುಕೊಂಡಾಗ, ಅದು ಸಕಾರಾತ್ಮಕ ಶಕ್ತಿಯ ರೂಪದಲ್ಲಿ (Form of Positive Energy) ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ಎಲ್ಲಾ ರೀತಿಯ ತೊಂದರೆಗಳು, ಭಯದಿಂದ ದೂರವಿರಲು ಯಾವಾಗಲೂ ಹನುಮಂತನ ಧ್ಯಾನ ಮಾಡಿ. ಹನುಮಂತ ಯಾವಾಗ್ಲೂ ತನ್ನ ಭಕ್ತರಿಗೆ ರಕ್ಷೆ ನೀಡುತ್ತಾನೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಭೂತ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved