ಕ್ಯಾನ್‌ಬೆರಾ[ಅ.26]: ಕೆಲ ದಿನಗಳ ಹಿಂದಷ್ಟೇ ಚಿರತೆ ಫೋಟೋ ಒಂದು ವೈರಲ್ ಆಗುತ್ತಿದ್ದು, ಫೋಟೋದಲ್ಲಿರುವ ಚಿರತೆ ಹುಡುಕುವಂತೆ ಸವಾಲೆಸೆಯಲಾಗಿತ್ತು/ ಸದ್ಯ ಇದರ ಬೆನ್ನಲ್ಲೇ ಮತ್ತೊಂದು ಫೋಟೋ ಕೂಡಾ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸೌಂಡ್ ಮಾಡುತ್ತಿದೆ. ಆದರೆ ಈ ಬಾರಿ ಚಿರತೆಯಲ್ಿ, ಫೋಟೋದಲ್ಲಿರುವ ಹಾವು ಹುಡುಕುವಂತೆ ಸವಾಲೆಸೆಯಲಾಗಿದೆ.

ಹೌದು ಇಬ್ಬರು ಪುಟ್ಟ ಮಕ್ಕಳು ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿರುವ ಫೋಟೋ ಇದಾಗಿದ್ದು, ಇದರಲ್ಲಿ ಒಂದು ಹಾವು ಕೂಡಾ ಸದ್ದಿಲ್ಲದೆ ಫೋಸ್ ನೀಡಿದೆ. ಅದನ್ನು ಹುಡುಕಬಲ್ಲಿರಾ ಎಂಬ ಸವಾಲು ಎಲ್ಲರ ತಲೆ ಕೆಡಿಸಿದೆ. ಹಲವರು ಫೋಟೋದಲ್ಲಿರುವ ಹುಡುಕಿ ಸಿಗದೇ ನಿರಾಶರಾಗಿದ್ದಾರೆ. ಆದರೆ ಇನ್ನು ಕೆಲವರು ಇದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. 

'ಸ್ನೇಕ್ ಕ್ಯಾಚರ್ ವಿಕ್ಟೋರಿಯಾ ಆಸ್ಟ್ರೇಲಿಯಾ' ಎಮಬ ಫೇಸ್ ಬುಕ್ ಪೇಜ್ನಲ್ಲಿ ಈ ಫೋಟೋ ಶೇರ್ ಮಾಡಲಾಗಿದೆ. ಫೋಟೋ ಜೊತೆಗೆ 'ಮಾರ್ಕ್ ಈ ಫೋಟೋ ನನಗೆ ಕಳುಹಿಸಿಕೊಟ್ಟರು. ಇದರಲ್ಲಿ ಅವರ ಮಗಳು ಹಾಗೂ ಆಕೆಯ ಗೆಳೆಯನೊಂದಿಗೆ ಈಶಾನ್ಯ ವಿಕ್ಟೋರಿಯಾದಲ್ಲಿರುವ ಜಮೀನಿನಲ್ಲಿ ತಿರುಗಾಡುತ್ತಿದ್ದಳು. ಆದರೆ ಹೀಗಿರುವಾಗ ಅವರು ತಮ್ಮ ಬಳಿ ಇದ್ದ ಹಾವನ್ನು ಗಮನಿಸಿರಲಿಲ್ಲ. ಆದರೆ ಫೋಟೋ ಗಮನಿಸಿದಾಗ ಅವರಿಗೆ ಈ ವಿಚಾರ ತಿಳಿದು ಬಂತು. ಹಾವು ಕೂಡಾ ಮಕ್ಕಳಿಗೆ ಏನೂ ಮಾಡಲಿಲ್ಲ. ಉಯಾಕೆಂದರೆ ಮಕ್ಕಳು ತಮ್ಮದೇ ಲೋಕದಲ್ಲಿ ಕಳೆದು ಹೋಗಿದ್ದರು. ಹಾವಿಗೆ ಕೊಂಚವೂ ನೋವನ್ನುಂಟು ಮಾಡದೇ ನಡೆದುಕೊಂಡು ಹೋಗುತ್ತಿದ್ದರು' ಎಂದಿದ್ದಾರೆ.

ಕಣ್ಣೆದುರೇ ಇದ್ರು ಕಾಣ್ಸಲ್ಲ....! ವೈರಲ್ ಆಗ್ತಿರೋ ಈ ಫೋಟೋದಲ್ಲಿ ಚಿರತೆ ಹುಡುಕ್ಬಹುದಾ?

ಹಾಗಾದ್ರೆ ಎಲ್ಲಿದೆ ಹಾವು?

ಪೋಸ್ಟ್ ನಲ್ಲಿ ನೀಡಿರುವ ಮಾಹಿತಿ ಅನ್ವಯ ಈ ಹಾವು ಬಹಳ ವಿಷಕಾರಿ ಎಂದು ತಿಳಿದು ಬಂದಿದೆ. ಅಲ್ಲದೇ ಟ್ರೆಕ್ಕಿಂಗ್ ವೇಳೆ ಸುತ್ತಮುತ್ತಲೂ ಗಮನಿಸಿ ಚಹೆಜ್ಜೆ ಇಡಿ ಎಂದೂ ಇಲ್ಲಿ ಎಚ್ಚರಿಸಲಾಗಿದೆ. ಇನ್ನು ಹಾವು ಹುಡುಕಿಸಿ ಸುಸ್ತಾದವರಿಗೆ ಇಲ್ಲಿದೆ ಉತ್ತರ.