ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಈ ಫೋಟೋ| ಫೋಟೋದಲ್ಲಿರುವ ಚಿರತೆ ಹುಡುಕಬಲ್ಲಿರಾ?| ಕಣ್ಣೆದುರಿಗಿದ್ರೂ ಚಿರತೆ ಹುಡುಕೋದು ಬಲು ಕಷ್ಟ| ಹುಡುಕಿ ಸುಸ್ತಾದ್ರೆ ನಿರಾಸೆ ಬೇಡ, ಇಲ್ಲಿದೆ ಉತ್ತರ

ನವದೆಹಲಿ[ಸೆ.30]: ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ಭಾರೀ ವೈರಲ್ ಆಗುತ್ತಿದೆ. ವಾಟ್ಸಾಪ್ ಸ್ಟೇಟಸ್, ಫೇಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಂ ಹೀಗೆ ಎಲ್ಲೆಲ್ಲೂ ಈ ಫೋಟೋದ್ದೇ ಕಾರುಬಾರು. ವ್ಯಾಪಕವಾಗಿ ಶೇರ್ ಆಗುತ್ತಿರುವ ಈ ಫೋಟೋದಲ್ಲಿ ಚಿರತೆ ಎಲ್ಲಿದೆ ಎಂದು ಹುಡುಕಾಡಿ ಎಂಬ ಚಾಲೆಂಜ್ ಎಸೆಯಲಾಗಿದೆ.

Scroll to load tweet…

Bella Lack ಹೆಸರಿನ ಟ್ವಿಟರ್ ಬಳಕೆದಾರರೊಬ್ಬರು ಈ ಫೋಟೋ ಶೇರ್ ಮಾಡಿಕೊಳ್ಳುತ್ತಾ 'ಯಾರೋ ಒಬ್ಬರು ಈ ಫೋಟೋ ನನಗೆ ಕಳುಹಿಸಿ, ಇದರಲ್ಲಿರುವ ಚಿರತೆ ಹುಡುಕಿ ಎಂದು ಸವಾಲೆಸೆದರು. ಆರಂಭದಲ್ಲಿ ನಾನಿದೊಂದು ಜೋಕ್ ಅಂತ ಭಾವಿಸಿದ್ದೆ. ಆದರೆ ಅದನ್ನು ಪತ್ತೆ ಹಚ್ಚಿದ ಬಳಿಕ ಇದು ತಮಾಷೆಯಲ್ಲ ಅಂತ ಗೊತ್ತಾಯ್ತು. ನೀವೂ ಪತ್ತೆ ಹಚ್ಚಬಲ್ಲಿರಾ?' ಎಂದು ಕೇಳಿದ್ದಾರೆ.

Scroll to load tweet…

ಈ ಚಾಲೆಂಜ್ ವೈರಲ್ ಆಗುತ್ತಿದ್ದಂತೆಯೇ ಜನರು ಚಿರತೆ ಹುಡುಕಲಾರಂಭಿಸಿದ್ದಾರೆ. ಆದರೆ ಎಷ್ಟೇ ಹುಡುಕಿದರೂ ಸಿಗದಾಗ ಪೆಚ್ಚು ಮೋರೆ ಹಾಕಿದ್ದಾರೆ. ನಿಮಗೇನಾದ್ರೂ ಕಾಣಿಸುತ್ತಾ ನೋಡಿ....

Scroll to load tweet…

ನಿಮಗೂ ಕಾಣಿಸಿಲ್ಲ ಎಂದರೆ, ಈ ಕೆಳಗಿನ ಫೋಟೋ ನೋಡಿ. ಈ ಚಾಲೆಂಜ್ ಸ್ವೀಕರಿಸಿದ ಟ್ವಿಟರ್ ಬಳಕೆದಾರನೊಬ್ಬ ಕೊನೆಗೂ ಫೋಟೋದಲ್ಲಿರುವ ಚಿರತೆಯನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.

Scroll to load tweet…

ನಿಮ್ಮ ಗೆಳೆಯರೊಂದಿಗೂ ಈ ಚಾಲೆಂಜ್ ಹಂಚಿಕೊಳ್ಳಿ, ಅವರು ಹುಡುಕುವಲ್ಲಿ ಯಶಸ್ವಿಯಾಗ್ತಾರಾ ನೋಡಿ