ಜಗತ್ತಿನ ಅತೀ ಉದ್ದದ ಜಿಪ್‌ಲೈನ್‌ನಲ್ಲಿ ಒಂಟೆಯ ಜಾಲಿರೈಡ್: ವೈರಲ್ ವೀಡಿಯೋ
ಅರಬ್ ರಾಷ್ಟ್ರ ಯುಎಇ ಒಂದು ಅದ್ಭುತ ದೇಶ, ವೈಭವಕ್ಕೆ ಹೆಸರುವಾಸಿಯಾಗಿರುವ ಈ ದೇಶ ಪ್ರವಾಸೋದ್ಯಮದಿಂದಲೇ ಕೋಟ್ಯಂತರ ರೂ. ಗಳಿಸುತ್ತದೆ. ಈಗ ಇಲ್ಲಿನ ಪ್ರವಾಸೋದ್ಯಮದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ದುಬೈ: ಅರಬ್ ರಾಷ್ಟ್ರ ಯುಎಇ ಒಂದು ಅದ್ಭುತ ದೇಶ, ವೈಭವಕ್ಕೆ ಹೆಸರುವಾಸಿಯಾಗಿರುವ ಈ ದೇಶ ಪ್ರವಾಸೋದ್ಯಮದಿಂದಲೇ ಕೋಟ್ಯಂತರ ರೂ. ಗಳಿಸುತ್ತದೆ. ಈಗ ಇಲ್ಲಿನ ಪ್ರವಾಸೋದ್ಯಮದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಒಂಟೆಯೊಂದು ಜಿಪ್‌ಲೈನ್‌ನಲ್ಲಿ ಹೋಗುತ್ತಿರುವ ದೃಶ್ಯವಿದೆ. ಏಐ ಆಧಾರಿತ ದೃಶ್ಯ ಇದಾದರೂ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ವೀಡಿಯೋವನ್ನು ರಾಸ್ ಅಲ್ ಖೈಮ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ (Ras Al Khaimah Tourism Development Authority) ಪ್ರಸ್ತುತಪಡಿಸಿದೆ. ಈ ವಿಡಿಯೋದಲ್ಲಿ ವಿಶ್ವದ ಅತ್ಯಂತ ಉದ್ದದ ಜಿಪ್‌ಲೈನ್‌ನಲ್ಲಿ ಒಂಟೆಯೊಂದು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸಾಗುತ್ತಿರುವ ದೃಶ್ಯವಿದೆ.
ಕಂಪ್ಯೂಟರ್ ಜನರೇಟೆಡ್ ದೃಶ್ಯ ಇದಾದರೂ ನೈಜತೆ ಕಾಣುತ್ತಿದ್ದು, ಎಲ್ಲರನ್ನು ಸೆಳೆಯುತ್ತಿದೆ. ಪ್ರವಾಸೋದ್ಯಮಕ್ಕೆ ಅತೀ ಹೆಚ್ಚು ಒತ್ತು ನೀಡುವ ದುಬೈ ಸೇರಿದಂತೆ ಅರಬ್ ರಾಷ್ಟ್ರಕ್ಕೆ ವರ್ಷವೂ ಲಕ್ಷಾಂತರ ಜನ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿಗರನ್ನು ಗಮನದಲ್ಲಿರಿಸಿಯೇ ಇಲ್ಲಿ ವಿಶ್ವದ ಅತ್ಯಂತ ಉದ್ದದ ಜಿಪ್‌ಲೈನ್‌ನ್ನು ನಿರ್ಮಿಸಲಾಗಿದೆ. ಇದಕ್ಕೆ ಪ್ರಚಾರ ನೀಡುವ ಉದ್ದೇಶದಿಂದಲೇ ಈ ವೀಡಿಯೋ ಮಾಡಲಾಗಿದ್ದು, ಗಮನ ಸೆಳೆಯುತ್ತಿದೆ.
ಹಾವಿಗೆ ಮುತ್ತಿಕ್ಕಿದ ಯುವಕನ ವೀಡಿಯೋ ವೈರಲ್: ಹಾವು ವಾಪಸ್ ಮುತ್ತಿಟ್ರೆ ಕತೆ ಏನು?
ಯುಎಇಯ ಟ್ರಾವೆಲ್ ಏಜೆನ್ಸಿ ರಾಯ್ನಾ ಟೂರ್ಸ್ ಈ ವೀಡಿಯೋವನ್ನು ಆಗಸ್ಟ್ 10 ರಂದು ಇನ್ಸ್ಟಾಗ್ರಾಮ್‌ನಲ್ಲಿ (Instagram Post) ಪೋಸ್ಟ್ ಮಾಡಿದ್ದು, ಜಿಪ್‌ಲೈನ್‌ನಲ್ಲಿ ಸಾಗುತ್ತಿರುವ ಒಂಟೆ ನಿಜವಾದುದಲ್ಲ ಎಂದು ಸ್ಪಷ್ಟನೆ ನೀಡಿದೆ. ಆದರೂ ಈ ವೀಡಿಯೋ ಜನರನ್ನು ಸೆಳೆಯುತ್ತಿದ್ದು, 4 ಲಕ್ಷಕ್ಕೂ ಅಧಿಕ ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಇದು ಯುಎಇನಲ್ಲಿ ಮಾತ್ರ ಸಾಧ್ಯ ಎಂದು ವೀಡಿಯೋದ ಮೇಲೆ ಕ್ಯಾಪ್ಷನ್ ನೀಡಲಾಗಿದೆ.
ಮರಳುಗಾಡಿನಲ್ಲಿ ಒಂಟೆಗಳನ್ನು ಸರಕು ಸಾಗಣೆಗೆ ಬಳಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ವೀಡಿಯೋ ನೋಡಿದ ಒಬ್ಬರು ಸಾರಕು ಸಾಗಣೆದಾರನನ್ನೇ ಸಾಗಣೆ ಮಾಡುತ್ತಿರುವ ವೈಲ್ಡ್ ಮ್ಯಾನ್ ಎಂದು ಕಾಮೆಂಟ್ ಮಾಡಿದ್ದಾರೆ. ಚಂದ್ರನ ಮೇಲೆ ಜಿಗಿದ ಹಸುವಿನಷ್ಟೇ ನಿಜವಾಗಿ ಕಾಣಿಸುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಅಬುಧಾಬಿಯ ರಾಸ್ ಅಲ್ ಖೈಮಾದ ಪ್ರವಾಸೋದ್ಯಮ ವೆಬ್‌ಸೈಟ್ ಪ್ರಕಾರ, ಈ ಪ್ರಸಿದ್ಧ ಜೈಸ್ ಫ್ಲೈಟ್ ಜಿಪ್‌ಲೈನ್ ರಾಸ್ ಅಲ್ ಖೈಮಾದ ಜೆಬೆಲ್ ಜೈಸ್ ಪರ್ವತದ ತುದಿಯಲ್ಲಿದೆ. ಅಲ್ಲದೇ ಇದು ಗಂಟೆಗೆ 120 ರಿಂದ 150 ಕಿಲೋಮೀಟರ್ ವೇಗದಲ್ಲಿ ಸಾಗುತ್ತದೆ. ಹಾದಿಯ ಮಧ್ಯೆ ಆಳವಾದ ಕಂದಕ ಕಣಿವೆಗಳು ಇರುವುದರಿಂದ ಇಲ್ಲಿನ ಈ ಜಿಪ್‌ಲೈನ್ ಸಾಹಸ ಮಾಡುವವರಿಗೆ ಡಬ್ಬಲ್ ಗುಂಡಿಗೆ ಬೇಕು . 2018ರಲ್ಲಿ ಈ ಜಿಪ್‌ಲೈನ್ ಪ್ರಾರಂಭವಾಗಿದ್ದು ಸಮುದ್ರ ಮಟ್ಟದಿಂದ 1680 ಮೀಟರ್ ಎತ್ತರದಲ್ಲಿದೆ. ಇದುವರೆಗೆ 70 ಸಾವಿರಕ್ಕೂ ಹೆಚ್ಚು ಜನರು ಈ ಜೈಸ್ ಜಿಪ್‌ಲೈನ್‌ನಲ್ಲಿ ಪ್ರಯಾಣಿಸಿ ಎಂಜಾಯ್ ಮಾಡಿದ್ದಾರೆ.
ಮುಳ್ಳುಹಂದಿಯನ್ನು ತಿನ್ನಲು ಯತ್ನಿಸಿದ ಹಾವು, ಮುಂದಾಗಿದ್ದೇನು?
ಒಟ್ಟಿನಲ್ಲಿ ಈ ಜಗತ್ತಿನ ಎಲ್ಲಾ ಖುಷಿಗಳನ್ನ ಈ ಮನುಷ್ಯರು ಮಾತ್ರ ಏಕೆ ಎಂಜಾಯ್ ಮಾಡ್ಬೇಕು, ನಂಗೂ ಈ ಜಿಪ್‌ಲೈನ್‌ನಲ್ಲಿ ಹೋಗ್ಬೇಕು ಅಂತ ದುಬೈನ ಒಂಟೆಯೊಂದು ಹೇಳುವಂತಿದೆ ಈ ವೀಡಿಯೋ.