Asianet Suvarna News Asianet Suvarna News

ಹಾವಿಗೆ ಮುತ್ತಿಕ್ಕಿದ ಯುವಕನ ವೀಡಿಯೋ ವೈರಲ್: ಹಾವು ವಾಪಸ್ ಮುತ್ತಿಟ್ರೆ ಕತೆ ಏನು?

ಹಾವಿಗೆ ಯುವಕನೋರ್ವ ಮುತ್ತಿಕ್ಕುವ ಮತ್ತೊಂದು ವೀಡಿಯೋ ವೈರಲ್ ಆಗಿದ್ದು, ನೋಡುಗರಲ್ಲಿ ಸಂಚಲನ ಸೃಷ್ಟಿಸಿದೆ. 

Mike Holston kisses on snakes head video goes viral on social media people asked why akb
Author
First Published Aug 15, 2023, 11:57 AM IST

ಸಾಮಾಜಿಕ ಜಾಲತಾಣ ಒಂದು ಯಾವುದೇ ಬೇನೆ ಬೇಸರವಿಲ್ಲದೇ ನಿಮ್ಮ ಸಮಯವನ್ನು ವ್ಯರ್ಥವಾಗಿ ಕಳೆಯಲು ಇರುವ ಅಪೂರ್ವ ಅವಕಾಶ. ಕೈಲೊಂದು ಮೊಬೈಲ್ ಇಂಟರ್‌ನೆಟ್ ಪ್ಯಾಕ್ ಇದ್ರೆ ಸಾಕು ನೀವು ಯಾರಿಗೂ ಕ್ಯಾರೇ ಅನ್ನಲ್ಲ, ನಿಮ್ಮದೇ ಲೋಕದಲ್ಲಿ ಸುತ್ತಾಡ್ತಾ ಸ್ಕ್ರೀನ್ ನೋಡಿ ಸುಸ್ತಾದ ಕಣ್ಣು ನಿಮ್ಮನ್ನು ಹಾಗೆಯೇ ನಿದ್ದೆಗೆ ಜಾರಿಸಿ ಬಿಡುತ್ತದೆ ಈ ಮಾಯಾಜಾಲ. ಅನೇಕರ ಪಾಲಿಗೆ ಇದು ದುಡ್ಡು ಗಳಿಕೆಯ ವೃತ್ತಿಯಾಗಿಯೂ ಬದಲಾಗಿದ್ದು, ಇಲ್ಲಿ ನಮಗೆ ಸಿಗದಿರುವಂತಹ ಕಂಟೆಂಟ್‌ಗಳೇ ಇಲ್ಲ, ಅಡುಗೆಯಿಂದ ಅಂತರಿಕ್ಷದವರೆಗೆ ಇದೊಂದು ಸಮುದ್ರವೇ ಸರಿ ಇಲ್ಲಿ ವೈರಲ್ ಆಗುವ ವೀಡಿಯೋಗಳಿಗೆ ಲೆಕ್ಕವೇ ಇಲ್ಲ. ಅದೇ ರೀತಿ ಈಗ ಹಾವಿಗೆ ಯುವಕನೋರ್ವ ಮುತ್ತಿಕ್ಕುವ ಮತ್ತೊಂದು ವೀಡಿಯೋ ವೈರಲ್ ಆಗಿದ್ದು, ನೋಡುಗರಲ್ಲಿ ಸಂಚಲನ ಸೃಷ್ಟಿಸಿದೆ. 

ಹಾವು ಎಂದರೆ ದೂರ ಓಡುವವರೇ ಬಹುತೇಕರು, ಅತ್ಯಂತ ವಿಷಕಾರಿ ಎನಿಸಿದ ಈ ಹಾವುಗಳು ಒಂದೇ ಒಂದು ಕಡಿತ ನಿಮಗೆ ಬೇರೆಯದೇ ಲೋಕವನ್ನು ತೋರಿಸಬಲ್ಲದು..! ಹೀಗಿದ್ದರೂ ಸಹ ಕೆಲವರಿಗೆ ಹಾವು ಎಂದರೆ ಅದೇನು ಕುತೂಹಲ ಅದೇನೋ ಕೌತುಕ. ಪರಿಸರ ತಜ್ಞರು ಉರಗ ಪ್ರೇಮಿಗಳ (snake lovers) ಸಲಹೆಯ ನಂತರವೂ ಹಾವಿನ ಹಿಂದೆ ಓಡುವ ಅವುಗಳ ಹಿಡಿದು ಅವುಗಳ ಜೊತೆ ವೀಡಿಯೋ ತೆಗೆದುಕೊಂಡು, ತಮ್ಮಷ್ಟಕ್ಕೆ ತಾವಿರುವ ಮೂಕ ಸರೀಸೃಪಕ್ಕೂ ಹಾವಳಿ ನೀಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದೇ ರೀತಿ ಇಲ್ಲೊಂದು ಕಡೆ ಯುವಕನೋರ್ವ ಭಾರಿ ಗಾತ್ರದ ಕಿಂಗ್ ಕೋಬ್ರಾಗೆ ಮುತ್ತಿಕ್ಕಿದ್ದು, ಈ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ವೀಡಿಯೋ ನೋಡಿದ ಜನ ಭಯ ಹಾಗೂ ಅಚ್ಚರಿಯ ಜೊತೆ ಈ ಯುವಕನಿಗೆ ಯಾಕೆ ಈ ರೀತಿ ಮಾಡುತ್ತಿರುವೆ ಯಾಕೆ ಬ್ರೋ ಯಾಕೆ ಅಂತ ಪ್ರಶ್ನಿಸ್ತಿದ್ದಾರೆ. 

ಮುಳ್ಳುಹಂದಿಯನ್ನು ತಿನ್ನಲು ಯತ್ನಿಸಿದ ಹಾವು, ಮುಂದಾಗಿದ್ದೇನು?

ಏನಿದೆ ವೀಡಿಯೋದಲ್ಲಿ? 

ತಿಳಿ ಹಳದಿ ಬಣ್ಣದ ಹಾವೊಂದು ಹೆಡೆ ಎತ್ತಿ ನಿಂತಿದ್ದು, ಯುವಕನೋರ್ವ ಅದರ ಹೆಡೆಗೆ ಹಿಂಬದಿಯಿಂದ ನಗುತ್ತಾ ಮುತ್ತಿಕ್ಕುತ್ತಿದ್ದಾನೆ. ಈ ವೇಳೆ ವಿಚಲಿತಗೊಂಡ ಹಾವು ಬಾಯ್ತೆರೆದು ನೋಡುತ್ತಿದೆ.  ಹೀಗೆ ಹಾವಿಗೆ ಮುತ್ತಿಕ್ಕಿದವನ ಹೆಸರು ಮೈಕ್ ಹಾಲ್ಸ್ಟನ್, ಇನ್ಸ್ಟಾಗ್ರಾಮ್‌ನಲ್ಲಿ ದ ರಿಯಲ್ ತರ್ಜಾನ್ (the real tarzan Mike Holston) ಎಂದು ಬರೆದುಕೊಂಡಿರುವ ಈತನ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ (Instagram) ವಿವಿಧ ರೀತಿಯ ಹಾವುಗಳ ಜೊತೆ ಈತ ಇರುವ ಹಲವು ವೀಡಿಯೋಗಳಿವೆ.  ಬರೀ ಹಾವುಗಳಷ್ಟೇ ಅಲ್ಲದೇ ಈತನಿಗೆ ಬೇರೆ ಬೇರೆ ಕಾಡುಪ್ರಾಣಿಗಳ ಜೊತೆ ಸಲೀಸಾದ ಒಡನಾಟ ಬೆಳೆಸಿಕೊಂಡಿದ್ದಾನೆ ಈ ಮೈಕ್ ಹಾಲ್ಸ್ಟನ್. 

ಕಿಸ್ ಆಫ್ ಡೆತ್ ಎಂದು ಬರೆದುಕೊಂಡಿರುವ ಈತ ನೀವು ನಾಗರಹಾವಿಗೆ (King cobra) ಚುಂಬಿಸುತ್ತೀರಾ ಅಥವಾ ಅದರಿಂದ ನೀವೇ ಮುತ್ತಿಕ್ಕಿಸಿಕೊಳ್ಳುತ್ತೀರಾ ಎಂದು ಅವರು ಈ ವೀಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ. ಅಲ್ಲದೇ ಇದೇ ಹಾವಿನೊಂದಿಗೆ ಮತ್ತೊಂದು ವೀಡಿಯೋ ಪೋಸ್ಟ್ ಮಾಡಿರುವ ಅವರು ನಾಲ್ಕು ಸಾವಿರದ ಐನೂರು ಕೆಜಿ ತೂಕದ ಆನೆಯನ್ನು ಕೇವಲ ಒಂದು ಕಡಿತದಿಂದ ಕೊಲ್ಲಬಲ್ಲಂತಹ ವಿಷವನ್ನು ಈ ಹಾವು ಹೊಂದಿದೆ ಎಂದು ಅವರು ಬರೆದುಕೊಂಡಿದ್ದಾರೆ. 

ನಾಗರ ಹಾವನ್ನು ನೆಕ್ಕುತ್ತಿರೋ ಹಸು; ವಿಡಿಯೋ ನೋಡಿ ಜನ ದಂಗು !

ವೀಡಿಯೋ ನೋಡಿದ ಅನೇಕ ವೀಕ್ಷಕರು ಹಾವಿಗೆ ಮುತ್ತಿಕ್ಕಿದ ಈತನ ಹುಚ್ಚು ಸಾಹಸಕ್ಕೆ ಅಚ್ಚರಿಯ ಜೊತೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಆತನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.  ನೀವು ನನಗೆ ಒಂದು ಮಿಲಿಯನ್ ಹಣ ಕೊಟ್ಟರೂ ನಾನು ಈ ಸಾಹಸ ಮಾಡಲಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಬ್ರದರ್ ಏಕೆ ಹೀಗೆ ಮಾಡ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ನೋಡುವುದಕ್ಕೆ ಒಂತರ ಕ್ರೇಜಿಯಾಗಿ ಕಾಣಿಸುತ್ತಿದೆ ಆದರೂ ಯಾಕೆ ಹೀಗೆ ಮಾಡ್ತಿದ್ದೀರಿ ಎಂದು ಮತ್ತೊಬ್ಬರು ಕೇಳಿದ್ದಾರೆ. 

 

 

Follow Us:
Download App:
  • android
  • ios