Asianet Suvarna News Asianet Suvarna News

ನೆಲಬಾಂಬ್‌ ಪತ್ತೆ ಮಾಡುತ್ತಿದ್ದ ಇಲಿ ಮಗಾವಾ ಇನ್ನಿಲ್ಲ..

  • ನೆಲಬಾಂಬ್ ಪತ್ತೆ ಮಾಡುತ್ತಿದ್ದ ಇಲಿ ನಿಧನ
  • ಐದು ವರ್ಷಗಳ ವೃತ್ತಿಜೀವನ ನಡೆಸಿದ ಮಗಾವಾ
  • ತನ್ನ ಸಾಧನೆಗೆ ಶೌರ್ಯ ಪದಕ ಪಡೆದಿತ್ತು
Cambodias landmine sniffing hero rat dies at 8 akb
Author
Bangalore, First Published Jan 13, 2022, 4:45 PM IST
  • Facebook
  • Twitter
  • Whatsapp

ಕಾಂಬೋಡಿಯಾ(ಜ.13): ನೆಲಬಾಂಬುಗಳನ್ನು ಪತ್ತೆ ಮಾಡುದಲ್ಲಿ ಖ್ಯಾತಿ ಗಳಿಸಿದ ಕಾಂಬೋಡಿಯಾದ ಇಲ್ಲಿ ಮಗಾವಾ (Magawa) ಸಾವಿಗೀಡಾಗಿದ್ದು, ಅದಕ್ಕೆ 8 ವರ್ಷ ವಯಸ್ಸಾಗಿತ್ತು. ಹೀರೋ ರಾಟ್‌ ಎಂದೇ ಇದನ್ನು ಕರೆಯಲಾಗುತ್ತಿತ್ತು. ಇದು ಕೇವಲ  20 ನಿಮಿಷದಲ್ಲಿ ಟೆನಿಸ್‌ ಕೋರ್ಟ್‌ನಷ್ಟು ದೊಡ್ಡ  ಸ್ಥಳವನ್ನು ಹುಡುಕಾಟ ನಡೆಸುವಲ್ಲಿ ಯಶಸ್ವಿಯಾಗಿತ್ತು. ಐದು ವರ್ಷಗಳ ಸುದೀರ್ಘ ವೃತ್ತಿಜೀವನದ ನಂತರ ಅದು ಕಳೆದ ವಾರ ಸಾವನ್ನಪ್ಪಿದೆ. ಆಗ್ನೇಯ ಏಷ್ಯಾದ ರಾಷ್ಟ್ರದಲ್ಲಿ ನೆಲಬಾಂಬ್‌ ಪತ್ತೆ ಮಾಡುವ ಮೂಲಕ ಅದು ಅನೇಕ ಜೀವಗಳನ್ನು ಉಳಿಸಿತ್ತು.

ರಾಯಿಟರ್ಸ್ ವರದಿ ಪ್ರಕಾರ, ಇಲಿ ತನ್ನ ಸಾಧನೆಗೆ ಶೌರ್ಯ ಪದಕವನ್ನು ಪಡೆದಿದೆ ಮತ್ತು 100 ಕ್ಕೂ ಹೆಚ್ಚು ನೆಲಬಾಂಬ್ ಮತ್ತು ಸ್ಫೋಟಕಗಳನ್ನು ಇದುವರೆಗೆ ಅದು ಪತ್ತೆ ಮಾಡಿತ್ತು.  ಬೆಲ್ಜಿಯಂ ಮೂಲದ ಚಾರಿಟಿ ಸಂಸ್ಥೆ APOPO ಮಗಾವಾಗೆ ತರಬೇತಿ ನೀಡಿತ್ತು. ಇದರ ಆರೋಗ್ಯ ಸ್ಥಿತಿ ಉತ್ತಮವಾಗಿತ್ತು ಹಾಗೂ ಸಾಯುವುದಕ್ಕೂ ಮೊದಲು ಕಳೆದ ವಾರದ ಹೆಚ್ಚಿನ ಸಮಯವನ್ನು ಅದು ತನ್ನ ಎಂದಿನ ಉತ್ಸಾಹದಿಂದ ಕಳೆದಿತ್ತು. ಆದರೆ ವಾರಾಂತ್ಯದ ಹೊತ್ತಿಗೆ ಅದರ ಚಟುವಟಿಕೆ ಕುಂದಿತ್ತು.  ಅದು ಹೆಚ್ಚು ನಿದ್ದೆ ಮಾಡುತ್ತಿತ್ತು ಹಾಗೂ ಆಹಾರದ ಬಗ್ಗೆ ನಿರಾಸಕ್ತಿ ತೋರಿತ್ತು ಎಂದು ಬಿಬಿಸಿ ವರದಿ ಮಾಡಿದೆ. 

ಮೊಬೈಲ್ ನೋಡ್ತಾ ಕೂತಿದ್ದ, ದಪ್ಪನೆ ಕೆಳಗೆ ಬಿತ್ತು ದೊಡ್ಡ ಹಾವು

ಸಂಸ್ಥೆಯಲ್ಲಿ ಕೆಲಸ ಮಾಡುವ ನಾವೆಲ್ಲಾ ಮಗವಾ ಸಾವಿಗೆ ಶೋಕ ವ್ಯಕ್ತಪಡಿಸುತ್ತಿದ್ದೇವೆ. ಮತ್ತು ಅದು ಮಾಡಿದ ಸಾಹಸಿ ಕೆಲಸಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದು APOPO ಚಾರಿಟಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದು ವಾಸನೆಯ ಗುರುತು ಹಿಡಿಯುವಲ್ಲಿ ಅತ್ಯುತ್ತಮವಾದ ಸಾಮರ್ಥ್ಯವನ್ನು ಇದು ಹೊಂದಿತ್ತು. 
ಜೀವ ಅಥವಾ ಕೈ ಕಾಲುಗಳನ್ನು ಕಳೆದುಕೊಳ್ಳುವ ಭಯವಿಲ್ಲದೇ ಕಾಂಬೋಡಿಯಾದ ಜನ ಬದುಕಲು, ಕೆಲಸ ಮಾಡಲು ಹಾಗೂ ಆಟವಾಡಲು ಇದು ಅವಕಾಶ ಮಾಡಿಕೊಟ್ಟಿತ್ತು ಎಂದು ಬಿಬಿಸಿ ವರದಿ ಮಾಡಿದೆ.

ಗುಂಡಿನ ಮತ್ತೇ ಗಮ್ಮತ್ತು... ಲಾಕ್ ಡೌನ್‌ನಲ್ಲಿ ನಶೆ ಏರಿಸಿಕೊಂಡ ಮೂಷಿಕ ಪಡೆ!

APOPO ಸಂಸ್ಥೆಯೂ ಅಫ್ರಿಕನ್‌ ಮೂಲದ ಈ ದೊಡ್ಡ ಗಾತ್ರದ ಇಲಿಗೆ ನೆಲಬಾಂಬ್‌ಗಳನ್ನು ಪತ್ತೆ ಮಾಡಲು ತರಬೇತಿ ನೀಡಿತ್ತು. ಸ್ಫೋಟಕಗಳೊಳಗಿನ ರಾಸಾಯನಿಕ ಸಂಯುಕ್ತಗಳನ್ನು ಪತ್ತೆಹಚ್ಚಲು ಮಗವಾಗೆ ತರಬೇತಿ ನೀಡಲಾಗಿತ್ತು. ಈ ಮಗಾವಾ ಹೆಸರಿನ ಇಲಿ  1.2 ಕಿಲೋಗ್ರಾಂ ತೂಕವಿತ್ತು ಮತ್ತು 70 ಸೆಂಟಿಮೀಟರ್ ಉದ್ದವಿತ್ತು. ಮಗವಾ ಗಾತ್ರದಲ್ಲಿ ಚಿಕ್ಕದಾಗಿದ್ದು, ನೆಲಬಾಂಬ್‌ಗಳ ಮೇಲೆ ಹೋದಾಗ ಅದು ಸ್ಫೋಟಗೊಳ್ಳುವಷ್ಟು ದೊಡ್ಡದಾಗಿರಲಿಲ್ಲ.

ಇಲಿಯು ಕೇವಲ 20 ನಿಮಿಷಗಳಲ್ಲಿ ಟೆನಿಸ್ ಅಂಕಣದ ಗಾತ್ರದ ಮೈದಾನವನ್ನು ಹುಡುಕುವಷ್ಟು ಸಮರ್ಥವಾಗಿತ್ತು.ಮೆಟಲ್ ಡಿಟೆಕ್ಟರ್ ಹೊಂದಿರುವ ವ್ಯಕ್ತಿಯು ಈ ಕೆಲಸವನ್ನು ಪೂರ್ಣಗೊಳಿಸಲು  ನಾಲ್ಕು ದಿನಗಳನ್ನು ತೆಗೆದುಕೊಳ್ಳುತ್ತಾನೆ ಎಂದು  ಈ ಇಲಿಗೆ ತರಬೇತಿ ನೀಡಿದ  APOPO ಹೇಳಿದೆ. ಇಲಿ ಕಳೆದ ಜೂನ್‌ನಲ್ಲಿ ನಿವೃತ್ತಿ ಹೊಂದಿತ್ತು.

Follow Us:
Download App:
  • android
  • ios