Asianet Suvarna News Asianet Suvarna News

ರಸ್ತೆ ದಾಟುತ್ತಿರುವ 15 ಅಡಿ ಉದ್ದದ ಹೆಬ್ಬಾವು... ವಿಡಿಯೋ ವೈರಲ್

ಹತ್ ಗಾತ್ರದ ಹೆಬ್ಬಾವೊಂದು ರಸ್ತೆ ದಾಟುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  15 ಅಡಿಗಿಂತ ಅಧಿಕ ಉದ್ದದ ಬೃಹತ್ ಗಾತ್ರದ ಹಾವೊಂದು ರಾಷ್ಟ್ರೀಯ ಉದ್ಯಾನವನದ ರಸ್ತೆಯಲ್ಲಿ ಅಡ್ಡಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.

Burmese Python Crossing the road in Everglades National Park  Florida watch video akb
Author
First Published Jan 11, 2023, 8:16 PM IST

ಫ್ಲೋರಿಡಾ: ಬೃಹತ್ ಗಾತ್ರದ ಹೆಬ್ಬಾವೊಂದು ರಸ್ತೆ ದಾಟುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  15 ಅಡಿಗಿಂತ ಅಧಿಕ ಉದ್ದದ ಬೃಹತ್ ಗಾತ್ರದ ಹಾವೊಂದು ರಾಷ್ಟ್ರೀಯ ಉದ್ಯಾನವನದ ರಸ್ತೆಯಲ್ಲಿ ಅಡ್ಡಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಅಮೆರಿಕಾದ ಫ್ಲೋರಿಡಾದ ಎವರ್‌ಗ್ಲೇಡ್ಸ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ರಸ್ತೆಯಲ್ಲಿ ಈ ಬರ್ಮಿಸ್ ಹೆಬ್ಬಾವು ಕಾಣಿಸಿಕೊಂಡಿದೆ.  ಈ ಉದ್ಯಾನವನಕ್ಕೆ ಭೇಟಿ ನೀಡಿದ ಪ್ರವಾಸಿಗರಿಗೆ ಈ ಹಾವು ರಸ್ತೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಸರ್‌ಫ್ರೈಸ್ ನೀಡಿದೆ. 

ಹಾವನ್ನು ನೋಡಿದ ಸ್ನೇಹಿತರ ಬಳಗ ವಾಹನವನ್ನು ನಿಲ್ಲಿಸಿ ಹಾವು ರಸ್ತೆಯಿಂದ ಹಾದು ಹೋಗುವವರೆಗೂ ಕಾದಿದ್ದಾರೆ. ಅಲ್ಲದೇ ಈ ಅಪರೂಪದ ದೃಶ್ಯವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.  Kymberly Strempack Clark ಎಂಬುವವರು  ತಮ್ಮ ಸ್ನೇಹಿತರ ಜೊತೆ ಈ ಉದ್ಯಾನವನಕ್ಕೆ ಭೇಟಿ ನೀಡಿದಾಗ ಹಾವು ಕಾಣಿಸಿಕೊಂಡಿದ್ದು ಈ ದೃಶ್ಯವನ್ನು ಸೆರೆ ಹಿಡಿದ ಅವರು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ.  ಈ ಹಾವು 15 ಅಡಿಗಿಂತ ಉದ್ದವಾಗಿದೆ ಎಂದು ಅಂದಾಜಿಸಲಾಗಿದೆ.

ಹಾವಿನೊಂದಿಗೆ ಸಹೋದರಿಯರ ಸರಸ: ಟೇಬಲ್ ಮೇಲಿರಿಸಿಕೊಂಡು ಊಟ

ನನ್ನ ಸ್ನೇಹಿತರು ಮತ್ತು ನಾನು ಬಹಳ ಅಬ್ಬರದಿಂದ ಈ ವರ್ಷವನ್ನು ಪ್ರಾರಂಭಿಸಿದ್ದೇವೆ. ಎಷ್ಟೊಂದು ನಂಬಲಾಗದ ವನ್ಯಜೀವಿಗಳು ನಮಗೆ ಕಾಣ ಸಿಕ್ಕಿವೆ. ನಾನು ಅವುಗಳ ಚಿತ್ರಗಳನ್ನು ಇಲ್ಲಿ ಪೋಸ್ಟ್ ಮಾಡುತ್ತೇನೆ.  ಅವುಗಳಲ್ಲಿ ನನ್ನ ನೆಚ್ಚಿನದ್ದಾದ ಎವರ್ಗ್ಲೇಡ್ಸ್ ರಾಷ್ಟ್ರೀಯ ಉದ್ಯಾನವನದಲ್ಲಿ  (Everglades National Park in Florida) ಕಾಣಿಸಿಕೊಂಡ 15 ಅಡಿ ಉದ್ದದ ಬರ್ಮೀಸ್ ಹೆಬ್ಬಾವು ನಮ್ಮ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಅದು ರಸ್ತೆ ದಾಟುತ್ತಿದೆ.  ನಾವು ಅದು ಇರುವ ಸ್ಥಳವನ್ನು ವರದಿ ಮಾಡಿದ್ದೇವೆ. ಏಕೆಂದರೆ ಅವುಗಳು ನಮ್ಮ ಪರಿಸರಕ್ಕೆ ತುಂಬಾ ಅಪಾಯಕಾರಿ ಎಂದು ಅವರು ಬರೆದುಕೊಂಡಿದ್ದಾರೆ. 

ಈ ವಿಡಿಯೋಗೆ ಅನೇಕರು ಭಯಾನಕವಾಗಿ ಪ್ರತಿಕ್ರಿಯಿಸಿದ್ದಾರೆ.  ಓಹ್ ದೇವರೇ ಎಂತಹ ಭಯಾನಕ ಸ್ಥಿತಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  ನನ್ನ ಹೃದಯವೇ ನಿಂತು ಹೋಯ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಮತ್ತೆ ಕೆಲವರು ಈ ಹಾವುಗಳು ರಾಜ್ಯದ ಪರಿಸರಕ್ಕೆ ಹಾನಿ ಮಾಡುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಬರ್ಮಿಸ್ ಹೆಬ್ಬಾವುಗಳು ಆಕ್ರಮಣಕಾರಿಗಳಾಗಿದ್ದು, ಅವುಗಳಿಂದ ಪರಿಸರಕ್ಕೆ ಎಷ್ಟು ಹಾನಿ ಇದೆ ಎಂದರೆ, ಅವುಗಳನ್ನು ತೊಡೆದು ಹಾಕಲು ಪ್ರತಿ ವರ್ಷ ಫ್ಲೋರಿಡಾದಲ್ಲಿ ಸ್ಪರ್ಧೆ ಏರ್ಪಡಿಸಲಾಗುತ್ತದೆ.  2022ರಲ್ಲಿ ಫ್ಲೋರಿಡಾದಲ್ಲಿ  230ಕ್ಕೂ ಹೆಚ್ಚು ಬರ್ಮಿಸ್ ಹಾವುಗಳನ್ನು ಹತ್ಯೆ ಮಾಡಲಾಗಿದೆ ಎಂದು ಎನ್‌ಬಿಸಿ ಮಿಯಾಮಿ ವರದಿ ಮಾಡಿದೆ. 

ಆನೇಕಲ್‌ನಲ್ಲೊಂದು ವಿಸ್ಮಯ: ಒಂದೇ ಕೊಂಬೆಗೆ ಸರತಿಯಲ್ಲಿ ಬರುವ ನಾಗರ ಹಾವುಗಳು!

ನ್ಯಾಷನಲ್ ಜಿಯಾಗ್ರಫಿಕ್ (National Geographic) ಪ್ರಕಾರ, ಬರ್ಮೀಸ್ ಹೆಬ್ಬಾವುಗಳು (Burmese pythons) ಭೂಮಿಯ ಮೇಲಿನ ಅತಿದೊಡ್ಡ ಹಾವುಗಳಲ್ಲಿ ಒಂದಾಗಿವೆ.   ಆಗ್ನೇಯ ಏಷ್ಯಾದ (Southeast Asia) ಕಾಡುಗಳು ಮತ್ತು ಹುಲ್ಲಿನ ಜವುಗು ಪ್ರದೇಶಗಳು ಇವುಗಳ ವಾಸಸ್ಥಾನವಾಗಿವೆ. ಇವುಗಳು ಅಂದಾಜು 23 ಅಡಿ ಅಥವಾ ಅದಕ್ಕಿಂತ ಹೆಚ್ಚು ಉದ್ದ ಬೆಳೆಯುತ್ತವೆ.  ಅಲ್ಲದೇ  200 ಪೌಂಡ್‌ಗಳವರೆಗೆ ತೂಕ ಹೊಂದಿರುತ್ತವೆ. ಈ ಬರ್ಮೀಸ್ ಹೆಬ್ಬಾವುಗಳು ಮಾಂಸಾಹಾರಿಗಳಾಗಿದ್ದು,  ಪ್ರಾಥಮಿಕವಾಗಿ ಸಣ್ಣ ಪ್ರಾಣಿಗಳು ಮತ್ತು ಪಕ್ಷಿಗಳನ್ನು ತಮ್ಮ ಆಹಾರವಾಗಿಸಿಕೊಳ್ಳುತ್ತವೆ. 

<

p> 

 

Follow Us:
Download App:
  • android
  • ios