Asianet Suvarna News Asianet Suvarna News

ಹಾವಿನೊಂದಿಗೆ ಸಹೋದರಿಯರ ಸರಸ: ಟೇಬಲ್ ಮೇಲಿರಿಸಿಕೊಂಡು ಊಟ

ಹಾವು ಎಂದರೆ ಹೌಹಾರಿ ಓಡಿ ಹೋಗೋರೆ ಜಾಸ್ತಿ. ಆದರೆ ಇಲ್ಲೊಂದು ಕಡೆ ಸಹೋದರಿಯರಿಬ್ಬರು ಹಾವೊಂದನ್ನು ಡೈನಿಂಗ್ ಟೇಬಲ್ ಮೇಲೆ ಕೂರಿಸಿಕೊಂಡು ಅದರೊಂದಿಗೆ ಊಟ ಮಾಡುತ್ತಿದ್ದಾರೆ.

two sisters eating dinner with Python watch viral video akb
Author
First Published Jan 10, 2023, 8:52 PM IST

ಹಾವು ಎಂದರೆ ಹೌಹಾರಿ ಓಡಿ ಹೋಗೋರೆ ಜಾಸ್ತಿ. ಆದರೆ ಇಲ್ಲೊಂದು ಕಡೆ ಸಹೋದರಿಯರಿಬ್ಬರು ಹಾವೊಂದನ್ನು ಡೈನಿಂಗ್ ಟೇಬಲ್ ಮೇಲೆ ಕೂರಿಸಿಕೊಂಡು ಅದರೊಂದಿಗೆ ಊಟ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಭಯಭೀತರಾಗಿದ್ದಾರೆ.  ilhan atalay ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.  ಆದರೆ ಎಲ್ಲಿ ಈ ವಿಡಿಯೋ ಸೆರೆ ಹಿಡಿಯಲಾಗಿದೆ ಎಂಬ ಬಗ್ಗೆ ಉಲ್ಲೇಖವಿಲ್ಲ. 

ಈ ವಿಡಿಯೋವನ್ನು ರೆಸ್ಟೋರೆಂಟ್ (restaurant) ಒಂದರಲ್ಲಿ ಸೆರೆ ಹಿಡಿಯಲಾಗಿದೆ ಎನ್ನಲಾಗುತ್ತಿದೆ.  ಆದರೆ ಇಲ್ಲೊಂದು ಟ್ವಿಸ್ಟ್ ಇದೆ ಇದೊಂದು ಕಂಪ್ಯೂಟರ್ ಆನಿಮೇಷನ್ ಆಗಿದೆ. ಏಕೆಂದರೆ ಅಷ್ಟೊಂದು ಭಾರಿ ತೂಕದ ಹಾವು ಸೂಕ್ಷ್ಮವಾಗಿ ಗಮನಿಸಿದರೆ ಬೆಲೂನಿಗೆ ಗಾಳಿ ತುಂಬಿಸಿದಂತೆ ಗಾಳಿಯಲ್ಲಿ ತೇಲುವಂತೆ ಕಾಣಿಸುತ್ತಿದೆ. ಜೊತೆಗೆ ಅಷ್ಟು ಬೃಹತ್ ಗಾತ್ರದ ಹಾವು (Snake) ಟೇಬಲ್ ಮೇಲೆ ಇರುವ ಪ್ಲೇಟ್‌ಗಳ ಮೇಲೆ ಸುರುಳಿ ಸುತ್ತಿದ್ದಂತೆ ಕಾಣಿಸುತ್ತಿದ್ದೆ.  ಆದರೆ ಭಾರ ಬಿದ್ದಾಗ ಪ್ಲೇಟ್‌ಗಳು ಮಗುಚಿ ಬೀಳುವುದು ಅಲುಗಾಡುವುದೋ ಆಗಬೇಕು. ಆದರೆ ಇಲ್ಲಿ ಅದ್ಯಾವುದು ಆಗುತ್ತಿಲ್ಲ. ಅಲ್ಲದೇ ಹಾವಿನ ಮೇಲ್ಮೈಯೂ ಇಲ್ಲಿ ಬಲೂನ್‌ನಂತೆ ಕಾಣಿಸುತ್ತಿದೆ.  ಹೀಗಾಗಿ ಸೋಶಿಯಲ್ ಮೀಡಿಯಾ ಆಪ್‌ಗಳಲ್ಲಿರುವ ಕೆಲವು ಫಿಲ್ಟರ್‌ಗಳನ್ನು ಬಳಸಿ ಈ ಆನಿಮೇಷನ್ (Animation)ಹಾವನ್ನು ನಿರ್ಮಿಸಲಾಗಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯಬಹುದಾಗಿದೆ. 

Viral Video ನದಿಯಲ್ಲಿ ಯುವತಿಯ ವಿಡಿಯೋ ಶೂಟ್, ಡ್ಯಾನ್ಸ್ ಮಾಡಿ ಹಿಂತಿರುಗಿದಾಗ ಶಾಕ್!

ಅಲ್ಲದೇ ಇಷ್ಟೊಂದು ದೊಡ್ಡ ಗಾತ್ರದ ಹಾವಿನ ಮುಂದೆ ಕುಳಿತು ಭೋಜನ ಸವಿಯುತ್ತಿರುವ ಯುವತಿಯರ ಮೊಗದಲ್ಲೂ ಯಾವುದೇ ಭಯ, ಆತಂಕ ಕಾಣಿಸುತ್ತಿಲ್ಲ.  ಅಲ್ಲದೇ ಅವರ ಹಿಂದೆ ಇರುವ ಟೇಬಲ್‌ಗಳಲ್ಲಿ ಕುಳಿತಿರುವವರು ಕೂಡ ಇಲ್ಲೊಂದು ದೊಡ್ಡ ಗಾತ್ರದ ಹಾವಿದೆ ಎಂಬುದನ್ನು ಗಮನಿಸುತ್ತಿರುವಂತೆ ಕಾಣಿಸುವುದಿಲ್ಲ.  ಒಂದು ಟೇಬಲ್ ಮೇಲೆ ಹಾವಿದೆ ಎಂದಾಗ ಕನಿಷ್ಟ ಪಕ್ಷ ಕುತೂಹಲಕ್ಕಾದರೂ ಜನ ಅದನ್ನು ಗಮನಿಸುತ್ತಾರೆ. ಅಥವಾ ಭಯವಾದರೂ ಪಡುತ್ತಾರೆ. ಆದರೆ ಇಲ್ಲಿ ಆ ಯಾವ ಕುರುಹುಗಳು ಇಲ್ಲ. ಇದೇ ಕಾರಣಕ್ಕೆ ಇದೊಂದು ಆನಿಮೇಟೆಡ್ ಹಾವು ಎಂಬುದು ಬಹುತೇಕರಿಗೆ ಖಚಿತವಾಗುತ್ತದೆ. 

ಇನ್ನು ಈ ವಿಡಿಯೋದಲ್ಲಿ ಕಾಣಿಸುವಂತೆ ಆಹಾರದ ತಟ್ಟೆಯ ಬಳಿ ಹಾವು ತನ್ನ ಹೆಡೆಯನ್ನು ಕೊಂಡೊಯ್ಯುತ್ತದೆ. ಅಲ್ಲದೇ ಪಕ್ಕದಲ್ಲಿ ಕುಳಿತ ಯುವತಿಯ ಮುಖದವರೆಗೂ ಅದು ತನ್ನ ತಲೆಯನ್ನು ಕೊಂಡೊಯ್ಯುತ್ತದೆ. ಆದರೆ ಯುವತಿ ಮಾತ್ರ ಏನು ಆಗದಂತೆ ಕುಳಿತಿದ್ದಾಳೆ.  ಅದೇನೆ ಇರಲಿ ಈ ವಿಡಿಯೋ ನಕಲಿ ಎಂಬುದು ತಿಳಿದಿದ್ದರೂ ಕೂಡ 10 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.  74 ಸಾವಿರಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 8 ರಂದು ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, ಹಾವಿನೊಂದಿಗೆ ರಾತ್ರಿಯ ಊಟ,  ಅವನಿಗೂ ಆಹಾರ ಕೊಡುವುದರಿಂದ ಅವನಿಗೆ ಹಸಿವಾಗದು ಎಂದು ಬರೆದುಕೊಂಡಿದ್ದಾರೆ.

ಭಾರತದಲ್ಲಿ ಹಾಲು ತಯಾರಾಗೋದು ಹೀಗಂತೆ: ವೈರಲ್ ವಿಡಿಯೋ!

ಈ ವಿಡಿಯೋ ನೋಡಿದ ಅನೇಕರು ಇದನ್ನು ನಿಜವೆಂದು ಭಾವಿಸಿದ್ದು,  ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಆದರೆ ಮತ್ತೆ ಕೆಲವರು ಮಹಿಳೆ ಈ ಫೈಥಾನ್ ಫಿಲ್ಟರ್ ಬಳಸಿ ಇತರರನ್ನು ಹೆದರಿಸಲು ನೋಡುತ್ತಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ.  ಇದು ಹುಚ್ಚುತನ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದೊಂದು ಕಂಪ್ಯೂಟರ್ ಆನಿಮೇಷನ್, ಇದು ನಿಜವಾದ ಹಾವು ಅಲ್ಲ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ. 

 

Follow Us:
Download App:
  • android
  • ios