ದುಬೈನ ಬುರ್ಜ್ ಖಲೀಫಾಗೆ ಸೆಡ್ಡು, ನಿರ್ಮಾಣವಾಗುತ್ತಿದೆ ವಿಶ್ವದ ಅತೀ ಎತ್ತರದ ಕಟ್ಟಡ!

ವಿಶ್ವದ ಅತೀ ಎತ್ತರದ ಗಗನ ಚುಂಬಿ ಕಟ್ಟಡ ಅನ್ನೋ ಹೆಗ್ಗಳಿಕೆಗೆ ದುಬೈನ ಬುರ್ಜ್ ಖಲೀಫಾ ಪಾತ್ರವಾಗಿದೆ. 828 ಮೀಟರ್ ಎತ್ತರದ ಬುರ್ಜ್ ಖಲೀಫಾ ಜನಪ್ರಿಯ ಪ್ರವಾಸಿ ತಾಣವಾಗಿಯೂ ಹೊರಹೊಮ್ಮಿದೆ. ಆದರೆ ಬುರ್ಜ್ ಖಲೀಫಾದ ನಂಬರ್.1 ಪಟ್ಟ ಶೀಘ್ರದಲ್ಲೇ ಕಳಚಲಿದೆ. ಬುರ್ಜ್ ಖಲೀಫಾಗೆ ಸೆಡ್ಡು ಹೊಡೆಯಲು ಅದಕ್ಕಿಂತ ಎತ್ತರದ ಜೆದ್ಹಾ ಟವರ್ ನಿರ್ಮಾಣವಾಗುತ್ತಿದೆ.

Burj khalifa soon lose status of world tallest building to jeddah tower saudi arabia ckm

ಸೌದಿ ಅರೇಬಿಯಾ(ಜ.10) ಅತೀ ಎತ್ತರದ ಕಟ್ಟಡಗಳು ಹೊಸದಲ್ಲ. ಆದರೆ ಗಗನಚುಂಬಿ ಕಟ್ಟಡಗಳು ಸಂಖ್ಯೆ ಹೆಚ್ಚಿಲ್ಲ. ಈ ಪೈಕಿ ವಿಶ್ವದ ಅತೀ ಎತ್ತರ ಕಟ್ಟಡ  ಅನ್ನೋ ಹೆಗ್ಗಳಿಗೆಗೆ ದುಬೈನ ಬುರ್ಜ್ ಖಲೀಫಾ ಪಾತ್ರವಾಗಿದೆ. 2010ರಲ್ಲಿ ಅರ್ಬನ್ ಹ್ಯಾಬಿಟ್ಯಾಟ್, ಬುರ್ಜ್ ಖಲೀಫಾ ವಿಶ್ವದ ಅತ್ಯಂತ ಎತ್ತರದ ಗಗನ ಚುಂಬಿ ಕಟ್ಟಡ ಅನ್ನೋ ಪ್ರಮಾಣ ಪತ್ರ ನೀಡಿದೆ. ಬರೋಬ್ಬರಿ 828 ಮೀಟರ್ ಎತ್ತರದ ಈ ಕಟ್ಟಡ ದುಬೈ ಆಕರ್ಷಣೆ ಹಾಗೂ ಜನಪ್ರಿಯತೆಯನ್ನು ಮತ್ತಷ್ಟು ಏರಿಸಿದ್ದು ಸುಳ್ಳಲ್ಲ. ಆದರೆ 14 ವರ್ಷದಲ್ಲಿ ಇದೀಗ ಬುರ್ಜ್ ಖಲೀಫಾ ನಂಬರ್ 1 ಸ್ಥಾನ ಕಳೆದುಕೊಳ್ಳುತ್ತಿದೆ. ಬುರ್ಜ್ ಖಲೀಫಾಗಿಂತ ಎತ್ತರದ ಕಟ್ಟಡ ನಿರ್ಮಾಣವಾಗುತ್ತಿದೆ. ಜೆದ್ಹಾ ಟವರ್ ಶೀಘ್ರದಲ್ಲೇ ವಿಶ್ವದ ಅತೀ ಎತ್ತರದ ಕಟ್ಟಡ ಅನ್ನೋ ದಾಖಲೆ ಬರೆಯಲಿದೆ.

ಸೌದಿ ಅರೇಬಿಯಾದ ಉತ್ತರ ಭಾಗದಲ್ಲಿರು ಒಭುರ್ ಪ್ರೇದಶದಲ್ಲಿ ಜೆದ್ಹಾ ಟವರ್ ನಿರ್ಮಾಣವಾಗುತ್ತಿದೆ. ಕೆಂಪು ಸಮುದ್ರದ ಕರಾವಳಿ ತೀರದಲ್ಲಿರುವ ಈ ಜೆದ್ಹಾ ಟವರ್, ಮುಸ್ಲಿಮರ ಪವಿತ್ರ ಮೆಕ್ಕಾ ಹಾಗೂ ಮದೀನಾ ನಡುವಿದೆ. ಬುರ್ಜ್ ಖಲೀಫಾ ಕಟ್ಟಡ ನಿರ್ಮಾಣ ಹಾಗೂ ವಿನ್ಯಾಸ ಮಾಡಿದ ವಾಸ್ತುಶಿಲ್ಪಿ ಆ್ಯಡ್ರಿನ್ ಸ್ಮಿತ್ ಇದೀಗ ಜೆದ್ಹಾ ಟವರ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಯುಎಇಗೆ ಪ್ರಧಾನಿ ಮೋದಿ ಭೇಟಿ: ಬುರ್ಜ್ ಖಲೀಫಾದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ, ಮೋದಿ ಫೋಟೋ

ಜೆದ್ಹಾ ಟವರ್ ಎತ್ತರ 1,000 ಮೀಟರ್. ಅಂದರೆ ಬರೋಬ್ಬರಿ 3,280 ಅಡಿ ಎತ್ತರವಿದೆ. ಈ ಕಟ್ಟಡ ಒಟ್ಟು 5.30 ಲಕ್ಷ ಚದರ ಅಡಿ ವಿಸ್ತೀರ್ಣ ಪ್ರದೇಶದಲ್ಲಿ ಐತಿಹಾಸಿಕ ಕಟ್ಟಡ ನಿರ್ಮಾಣವಾಗುತ್ತಿದೆ. ಈ ಕಟ್ಟದ ಅಂದಾಜು ವೆಚ್ಚ 20 ಬಿಲಿಯನ್ ಅಮೆರಿಕನ್ ಡಾಲರ್. ಜೆದ್ಹಾ ಟವರ್ 170 ಮಹಡಿಗಳನ್ನು ಹೊಂದಿರಲಿದೆ. 200 ಕೊಠಡಿಗಳ ಫೋರ್ ಸೀಸನ್ ಐಷಾರಾಮಿ ಹೊಟೆಲ್, 121 ಐಷಾರಾಮಿ ಸರ್ವೀಸ್ ಅಪಾರ್ಟ್‌ಮೆಂಟ್ ಸೇರಿದಂತೆ ಹಲವು ಕೊಠಡಿ, ಜಿಮ್, ಸ್ವಿಮ್ಮಿಂಗ್ ಪೂಲ್, ಕೆಫೆ, ರೆಸ್ಟೋರೆಂಟ್ ಸೌಲಭ್ಯ ಹೊಂದಿರಲಿದೆ.

2023ರಲ್ಲಿ ಜೆದ್ಹಾ ಟವರ್ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ 2 ವರ್ಷ ಕೋವಿಡ್ ಕಾರಣ ನಿರ್ಮಾಣ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ತ್ವರಿತಗತಿಯಲ್ಲಿ ಕಾಮಗಾರಿಗಳು ನಡೆಯತ್ತಿದೆ. ಶೀಘ್ರದಲ್ಲೇ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ನಡೆಯಲಿದೆ. ಈ ಮೂಲಕ ಜೆದ್ಹಾ ಟವರ್ ವಿಶ್ವದ ಅತೀ ಎತ್ತರದ ಕಟ್ಟಡ ಅನ್ನೋ ದಾಖಳೆ ಬರೆಯಲಿದೆ. ಇತ್ತ ಬುರ್ಜ್ ಖಲೀಫಾ ಮೊದಲ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿಯಲಿದೆ.

ಎದೆಬಡಿತ ಹೆಚ್ಚಿಸುವ ಈ ಜಾಹೀರಾತು ನಿಜಕ್ಕೂ ಬುರ್ಜ್ ಖಲೀಫಾ ಮೇಲೆ ಚಿತ್ರೀಕರಿಸಲ್ಪಟ್ಟಿದೆಯಾ?

Latest Videos
Follow Us:
Download App:
  • android
  • ios